ವಿಜಯ್​ ಆ್ಯಂಟನಿ ಪುತ್ರಿ ಮೀರಾ ಮೃತದೇಹ ಪತ್ತೆ ಆದಾಗಿಂದ ಡೆತ್​ ನೋಟ್​ ಸಿಗುವವರೆಗೆ ಏನೆಲ್ಲ ಆಯ್ತು? ಇಲ್ಲಿದೆ ವಿವರ..

|

Updated on: Sep 21, 2023 | 11:44 AM

ಮೀರಾ ಸಾವಿಗೆ ಸಂಬಂಧಿಸಿದಂತೆ ಪೊಲೀಸರು ಕೇಸ್​ ದಾಖಲು ಮಾಡಿಕೊಂಡಿದ್ದಾರೆ. ವಿಜಯ್ ಆ್ಯಂಟನಿ ಮತ್ತು ಫಾತಿಮಾ ಅವರು ಸುಧಾರಿಸಿಕೊಂಡ ಬಳಿಕ ಪೊಲೀಸರು ವಿಚಾರಣೆಯನ್ನು ತೀವ್ರಗೊಳಿಸಲಿದ್ದಾರೆ. ಕ್ರಿಶ್ಚಿಯನ್​ ಸಂಪ್ರದಾಯದ ಪ್ರಕಾರ ಮೀರಾ ಅವರ ಅಂತ್ಯಕ್ರಿಯೆ ಮಾಡಲಾಯಿತು. ಕುಟುಂಬದವರು, ಸ್ನೇಹಿತರು ಅಂತಿಮ ನಮನ ಸಲ್ಲಿಸಿದ್ದಾರೆ.

ವಿಜಯ್​ ಆ್ಯಂಟನಿ ಪುತ್ರಿ ಮೀರಾ ಮೃತದೇಹ ಪತ್ತೆ ಆದಾಗಿಂದ ಡೆತ್​ ನೋಟ್​ ಸಿಗುವವರೆಗೆ ಏನೆಲ್ಲ ಆಯ್ತು? ಇಲ್ಲಿದೆ ವಿವರ..
ವಿಜಯ್ ಆ್ಯಂಟನಿ, ಮೀರಾ
Follow us on

ತಮಿಳಿನ ನಟ ಮತ್ತು ಸಂಗೀತ ನಿರ್ದೇಶಕ ವಿಜಯ್​ ಆ್ಯಂಟನಿ (Vijay Antony) ಅವರ ಮನೆಯಲ್ಲಿ ಶೋಕದ ವಾತಾವರಣ ನಿರ್ಮಾಣ ಆಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಭವಿಷ್ಯ ಕಟ್ಟಿಕೊಳ್ಳಬೇಕು ಎಂದು ಕನಸು ಕಂಡಿದ್ದ ಅವರ ಪುತ್ರಿ (Vijay Antony Daughter) ಮೀರಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 16ನೇ ವಯಸ್ಸಿನಲ್ಲಿ ಅವರು ಇಹಲೋಕ ತ್ಯಜಿಸಿದ್ದಾರೆ. ಈ ಘಟನೆಯಿಂದ ಇಡೀ ಕಾಲಿವುಡ್​ಗೆ ನೋವು ಉಂಟಾಗಿದೆ. ವಿಜಯ್​ ಆ್ಯಂಟನಿ ಮತ್ತು ಅವರ ಪತ್ನಿ ಫಾತಿಮಾ ಅವರನ್ನು ಸಂತೈಸುವ ಕೆಲಸ ಆಗುತ್ತಿದೆ. ಆದರೂ ಕೂಡ ಮಗಳನ್ನು ಕಳೆದುಕೊಂಡ ನೋವವನ್ನು ಮರೆಯಲು ಸಾಧ್ಯವೇ ಇಲ್ಲ. ಮೀರಾ ಮೃತದೇಹ ಪತ್ತೆ ಆದಾಗಿನಿಂದ ಡೆತ್​ ನೋಟ್​ (Meera Death Note) ಸಿಗುವವರೆಗೆ ಏನೆಲ್ಲ ಆಯ್ತು ಎಂಬುದರ ಬಗ್ಗೆ ವಿವರ ಇಲ್ಲಿದೆ..

  1. ವಿಜಯ್​ ಆ್ಯಂಟನಿ ಮತ್ತು ಮೀರಾ ದಂಪತಿಯ ಮೊದಲ ಮಗಳು ಮೀರಾ. ಅವರು 2007ರಲ್ಲಿ ಜನಿಸಿದ್ದರು. 16 ವರ್ಷ ವಯಸ್ಸಿನ ಅವರು ಚೆನ್ನೈನ ಖಾಸಗಿ ಶಾಲೆಯಲ್ಲಿ 12ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು.
  2. ವೈದ್ಯಕೀಯ ಕ್ಷೇತ್ರದಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂಬದು ಮೀರಾ ಕನಸಾಗಿತ್ತು. ವಿದ್ಯಾಭ್ಯಾಸದಲ್ಲಿ ಅವರು ಚುರುಕಾಗಿದ್ದರು. ಇತ್ತೀಚೆಗೆ ಶಾಲೆಯ ವಿಭಾಗವೊಂದಕ್ಕೆ ಅವರು ಕಾರ್ಯದರ್ಶಿ ಆಗಿ ಆಯ್ಕೆ ಆಗಿದ್ದರು.
  3. ಮೀರಾ ಅವರು ಮಾನಸಿಕವಾಗಿ ಯಾವುದೋ ಒತ್ತಡದಲ್ಲಿ ಇದ್ದರು. ಕಳೆದ ಕೆಲವು ತಿಂಗಳಿಂದ ಅವರು ಅದಕ್ಕೆ ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ಸೆಪ್ಟೆಂಬರ್​ 19ರಂದು ಅವರು ಮನೆಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡರು.
  4. ಕುಟುಂಬದವರು ಮೀರಾ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದರು. ಅವರು ಮೃತರಾಗಿದ್ದಾರೆ ಎಂದು ಚೆನ್ನೈನ ಖಾಸಗಿ ಆಸ್ಪತ್ರೆಯ ವೈದ್ಯರು ಖಚಿತಪಡಿಸಿದರು. ಆಸ್ಪತ್ರೆಗೆ ಬರುವುದಕ್ಕೂ ಮುನ್ನವೇ ಮೀರಾ ಪ್ರಾಣ ಹೋಗಿತ್ತು.
  5. ಬಳಿಕ ಮೀರಾ ಮೃತದೇಹವನ್ನು ಒಮಂದೂರು ಸರ್ಕಾರಿ ಆಸ್ಪತ್ರೆಗೆ ಶಿಫ್ಟ್​ ಮಾಡಲಾಯಿತು. ಅಲ್ಲಿ ಮರಣೋತ್ತರ ಪರೀಕ್ಷೆ ನಡೆಯಿತು. ಆತ್ಮಹತ್ಯೆಯಿಂದಲೇ ಮೀರಾ ಮೃತಪಟ್ಟರು ಎಂಬುದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಖಚಿತವಾಗಿದೆ.
  6. ಚೆನ್ನೈನ ಅಲ್ವರ್​ಪೇಟ್​ನಲ್ಲಿ ಇರುವ ವಿಜಯ್​ ಆ್ಯಂಟನಿ ಅವರ ನಿವಾಸಕ್ಕೆ ಮೀರಾ ಮೃತದೇಹವನ್ನು ತರಲಾಯಿತು. ಚಿತ್ರರಂಗದವರು, ಮಾಧ್ಯಮದವರು, ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಮನೆ ಎದುರು ಜಮಾಯಿಸಿದ್ದರು.
  7. ಸೆಪ್ಟೆಂಬರ್​ 20ರಂದು ಬೆಳಗ್ಗೆ ಕ್ರಿಶ್ಚಿಯನ್​ ಸಂಪ್ರದಾಯದ ಪ್ರಕಾರ ಮೀರಾ ಅವರ ಅಂತ್ಯಕ್ರಿಯೆ ಮಾಡಲಾಯಿತು. ಕುಟುಂಬದವರು, ಸ್ನೇಹಿತರು ಬಂದು ಮೀರಾಗೆ ಅಂತಿಮ ನಮನ ಸಲ್ಲಿಸಿ, ಕಂಬನಿ ಮಿಡಿದರು.
  8. ವಿಜಯ್​ ಆ್ಯಂಟನಿ ಅವರ ಮನೆಯಲ್ಲಿ ಮೀರಾ ಅವರ ಸೂಸೈಡ್​ ನೋಟ್​ ಪತ್ತೆ ಆಗಿದೆ. ಈ ಪತ್ರ ಭಾವನಾತ್ಮಕವಾಗಿದ್ದು, ‘ಎಲ್ಲರನ್ನೂ ಪ್ರೀತಿಸುತ್ತೇನೆ, ಎಲ್ಲರನ್ನೂ ಮಿಸ್​ ಮಾಡಿಕೊಳ್ಳುತ್ತೇನೆ’ ಎಂಬ ಸಾಲಿನಿಂದ ಶುರುವಾಗಿದೆ.
  9. ಮೀರಾ ಬರೆದಿರುವ ಡೆತ್​ ನೋಟ್​ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ. ಅದರಲ್ಲಿ ಪ್ರಸ್ತಾಪ ಆಗಿರುವ ವಿಷಯಗಳನ್ನು ಆಧರಿಸಿ ತನಿಖೆ ನಡೆಸಿದರೆ ಮೀರಾ ಆತ್ಮಹತ್ಯೆಗೆ ಕಾರಣ ಏನೆಂಬುದು ಗೊತ್ತಾಗಲಿದೆ.
  10. ಮೀರಾ ಸಾವಿಗೆ ಸಂಬಂಧಿಸಿದಂತೆ ಪೊಲೀಸರು ಕೇಸ್​ ದಾಖಲು ಮಾಡಿಕೊಂಡಿದ್ದಾರೆ. ವಿಜಯ್ ಆ್ಯಂಟನಿ ಮತ್ತು ಫಾತಿಮಾ ಅವರು ಸುಧಾರಿಸಿಕೊಂಡ ಬಳಿಕ ಪೊಲೀಸರು ವಿಚಾರಣೆಯನ್ನು ತೀವ್ರಗೊಳಿಸಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.