AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಲ್ಟಿಪ್ಲೆಕ್ಸ್​ನಲ್ಲಿ ಸಿನಿಮಾ ಟಿಕೆಟ್​ ಬೆಲೆ ಕೇವಲ 99 ರೂಪಾಯಿ; ಯಾವಾಗ ಸಿಗಲಿದೆ ಈ ಆಫರ್​?

ದೊಡ್ಡ ಪರದೆಯಲ್ಲಿ ಸಿನಿಮಾ ನೋಡುವ ಅನುಭವವೇ ಬೇರೆ. ಆದರೆ ದುಬಾರಿ ಬೆಲೆ ಎಂಬ ಕಾರಣಕ್ಕೆ ಅನೇಕರು ಮಲ್ಟಿಪ್ಲೆಕ್ಸ್​ಗೆ ಬರಲು ಹಿಂದೇಟು ಹಾಕುವುದುಂಟು. ಈಗ ‘ನ್ಯಾಷನಲ್​ ಸಿನಿಮಾ ಡೇ’ ಪ್ರಯುಕ್ತ 99 ರೂಪಾಯಿಗೆ ಎಲ್ಲ ಸಿನಿಮಾಗಳ ಟಿಕೆಟ್​ ಸಿಗುವುದರಿಂದ ಅಂದು ಬಹುತೇಕ ಕಡೆಗಳಲ್ಲಿ ಹೌಸ್​ ಫುಲ್​ ಆಗುವ ಸಾಧ್ಯತೆ ಇದೆ.

ಮಲ್ಟಿಪ್ಲೆಕ್ಸ್​ನಲ್ಲಿ ಸಿನಿಮಾ ಟಿಕೆಟ್​ ಬೆಲೆ ಕೇವಲ 99 ರೂಪಾಯಿ; ಯಾವಾಗ ಸಿಗಲಿದೆ ಈ ಆಫರ್​?
ನ್ಯಾಷನಲ್​ ಸಿನಿಮಾ ಡೇ
ಮದನ್​ ಕುಮಾರ್​
| Updated By: ರಾಜೇಶ್ ದುಗ್ಗುಮನೆ|

Updated on:Oct 12, 2023 | 11:19 AM

Share

2023ನೇ ವರ್ಷದಲ್ಲಿ ಭಾರತೀಯ ಚಿತ್ರರಂಗ (Indian Film Industry) ಅನೇಕ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದೆ. ಬಾಕ್ಸ್​ ಆಫೀಸ್​ನಲ್ಲಿ ಹಲವು ಚಿತ್ರಗಳು ಅಬ್ಬರಿಸಿವೆ. ಶಾರುಖ್​ ಖಾನ್​, ಸನ್ನಿ ಡಿಯೋಲ್​, ಅಕ್ಷಯ್​ ಕುಮಾರ್​, ರಣವೀರ್​ ಸಿಂಗ್​, ಸಾಯಿ ಧರಂ ತೇಜ್​, ಟೊವಿನೋ ಥಾಮಸ್​ ಮುಂತಾದ ನಟರ ಸಿನಿಮಾಗಳು ನೂರಾರು ಕೋಟಿ ರೂಪಾಯಿ ಬಿಸ್ನೆಸ್​ ಮಾಡಿವೆ. ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳು ತೆರೆಕಂಡಾಗ ಎಲ್ಲವನ್ನೂ ಚಿತ್ರಮಂದಿರಕ್ಕೆ ಹೋಗಿ ನೋಡುವುದು ಕಷ್ಟ. ಯಾಕೆಂದರೆ ಟಿಕೆಟ್​ ದರ (Movie Tickets Price) ದುಬಾರಿ ಆಗಿರುತ್ತದೆ. ಅದರಲ್ಲೂ ಮಲ್ಟಿಪ್ಲೆಕ್ಸ್​ನಲ್ಲಿ ಸಿನಿಮಾ ನೋಡುವುದರಿಂದ ಜೇಬಿಗೆ ದೊಡ್ಡ ಕತ್ತರಿಯೇ ಬೀಳುತ್ತದೆ ಎಂದು ಕೊರಗುವವರಿಗಾಗಿ ಇಲ್ಲೊಂದು ಬಂಪರ್​ ಆಫರ್​ ನೀಡಲಾಗಿದೆ. ‘ನ್ಯಾಷನಲ್​ ಸಿನಿಮಾ ಡೇ’ (National Cinema Day) ಆಚರಣೆಯ ಪ್ರಯುಕ್ತ ಕೇವಲ 99 ರೂಪಾಯಿಗೆ ಸಿನಿಮಾ ಟಿಕೆಟ್​ ಮಾರಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಇಲ್ಲಿದೆ ವಿವರ..

ಕೊವಿಡ್​ ಬಂದ ಬಳಿಕ ಚಿತ್ರರಂಗ ಸೊರಗಿತ್ತು. ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರಲು ಕೆಲವು ಪ್ಲ್ಯಾನ್​ ಮಾಡಲಾಗಿತ್ತು. ಅದರಲ್ಲಿ ‘ನ್ಯಾಷನಲ್​ ಸಿನಿಮಾ ಡೇ’ ಆಚರಣೆ ಕೂಡ ಪ್ರಮುಖವಾದದ್ದು. ಒಂದು ನಿರ್ದಿಷ್ಟ ದಿನದಂದು ದೇಶಾದ್ಯಂತ ಬಹುತೇಕ ಮಲ್ಟಿಪ್ಲೆಕ್ಸ್​ ಮತ್ತು ಆಯ್ದ ಚಿತ್ರಮಂದಿರಗಳಲ್ಲಿ ಎಲ್ಲ ಸಿನಿಮಾಗಳ ಟಿಕೆಟ್​ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದು ಇದರ ಉದ್ದೇಶ. ಈ ಪ್ರಯತ್ನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಹಾಗಾಗಿ ಈ ವರ್ಷ ಕೂಡ ‘ನ್ಯಾಷನಲ್​ ಸಿನಿಮಾ ಡೇ’ ಆಚರಿಸಲು ಮಲ್ಟಿಪ್ಲೆಕ್ಸ್​ ಮತ್ತು ಚಿತ್ರಮಂದಿರಗಳ ಮಾಲೀಕರು ತೀರ್ಮಾನಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ 2 ಸಾವಿರ ರೂಪಾಯಿಗೆ ಸೇಲ್​ ಆಗ್ತಿದೆ ‘ಆಪನ್​ಹೈಮರ್​’ ಚಿತ್ರದ ಟಿಕೆಟ್​; ಅಂಥ ವಿಶೇಷ ಇದರಲ್ಲಿ ಏನಿದೆ?

ಈ ವರ್ಷ ಅಕ್ಟೋಬರ್​ 13ರಂದು ‘ನ್ಯಾಷನಲ್​ ಸಿನಿಮಾ ಡೇ’ ಆಚರಿಸಲಾಗುತ್ತದೆ. ಅದರಲ್ಲಿ ಪಿವಿಆರ್​, ಐನಾಕ್ಸ್​, ಸಿನಿಪೊಲಿಸ್​, ಮಿರಾಜ್​, ಸಿಟಿಪ್ರೈಡ್​, ಏಷ್ಯನ್​, ಮೂವೀ ಟೈಮ್​ ಮುಂತಾದ ಮಲ್ಟಿಪ್ಲೆಕ್ಸ್​ಗಳು ಇದರಲ್ಲಿ ಭಾಗವಹಿಸುತ್ತಿವೆ. ಅ.13ರಂದು ದೇಶಾದ್ಯಂತ ಎಲ್ಲ ಸಿನಿಮಾಗಳ ಟಿಕೆಟ್​ಗಳು ಕೇವಲ 99 ರೂಪಾಯಿಗೆ ಸಿಗಲಿವೆ. ಅಂದು ತಿಂಡಿ ಮತ್ತು ಪಾನೀಯಗಳ ಬೆಲೆಯಲ್ಲೂ ಇಳಿಕೆ ಮಾಡಲಾಗುತ್ತದೆ. ಇದರಿಂದ ಸಿನಿಪ್ರಿಯರಿಗೆ ಅನುಕೂಲ ಆಗಲಿದೆ. ಅಂದು ಅಪಾರ ಸಂಖ್ಯೆಯ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುವ ನಿರೀಕ್ಷೆ ಇದೆ.

ಕೊರೊನಾ ಹಾವಳಿಯಿಂದ ಉಂಟಾದ ಲಾಕ್​ಡೌನ್​ ಬಳಿಕ ಜನರು ಒಟಿಟಿಗೆ ಹೆಚ್ಚು ಒಗ್ಗಿಕೊಂಡರು. ಮನೆಯಲ್ಲೇ ಕುಳಿತು ಹೊಸ ಸಿನಿಮಾಗಳನ್ನು ನೋಡಲು ಬಯಸುವವರ ಸಂಖ್ಯೆ ಹೆಚ್ಚಿತು. ಅದರ ನಡುವೆಯೂ ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್​ಗಳಲ್ಲಿ ಹೊಸ ಸಿನಿಮಾ ರಿಲೀಸ್​ ಆಗುವುದು ನಿಂತಿಲ್ಲ. ಎಂದಿನಂತೆ ಸ್ಟಾರ್ ನಟರ ಸಿನಿಮಾಗಳು ಅಬ್ಬರಿಸುತ್ತಿವೆ. ಆದರೆ ದುಬಾರಿ ಬೆಲೆ ಎಂಬ ಕಾರಣಕ್ಕೆ ಅನೇಕರು ಮಲ್ಟಿಪ್ಲೆಕ್ಸ್​ಗೆ ಬರಲು ಹಿಂದೇಟು ಹಾಕುವುದುಂಟು. ಈಗ ‘ನ್ಯಾಷನಲ್​ ಸಿನಿಮಾ ಡೇ’ ಪ್ರಯುಕ್ತ 99 ರೂಪಾಯಿಗೆ ಟಿಕೆಟ್​ ಸಿಗುವುದರಿಂದ ಅಂದು ಬಹುತೇಕ ಕಡೆಗಳಲ್ಲಿ ಹೌಸ್​ ಫುಲ್​ ಆಗುವ ಸಾಧ್ಯತೆ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:55 pm, Thu, 21 September 23