AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vijay Antony: ಖ್ಯಾತ ನಟ ವಿಜಯ್ ಆ್ಯಂಟನಿ ಮಗಳು ಮೀರಾ ಆತ್ಮಹತ್ಯೆ; ಕಾರಣ ಏನು?

Vijay Antony Daughter: ಮೀರಾ ಅವರು ಇಂದು ಮುಂಜಾನೆ ತಾವು ಇದ್ದ ರೂಂನಲ್ಲೇ ನೇಣು ಬಿಗಿದುಕೊಂಡಿದ್ದಾರೆ. ಅವರು ಖಾಸಗಿ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದರು. ಹಲವು ಸಮಯದಿಂದ ಅವರು ಖಿನ್ನತೆಗೆ ಒಳಗಾಗಿದ್ದರು. ಈ ಸಾವಿನ ಕುರಿತು ತನಿಖೆ ಕೂಡ ನಡೆಯುತ್ತಿದೆ. ವಿಜಯ್ ಕುಟುಂಬದವರಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಅಭಿಮಾನಿಗಳು ಕೋರಿಕೊಳ್ಳುತ್ತಿದ್ದಾರೆ.

Vijay Antony: ಖ್ಯಾತ ನಟ ವಿಜಯ್ ಆ್ಯಂಟನಿ ಮಗಳು ಮೀರಾ ಆತ್ಮಹತ್ಯೆ; ಕಾರಣ ಏನು?
ವಿಜಯ್-ವಿಜಯ್ ಮಗಳು ಮೀರಾ
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Sep 19, 2023 | 10:13 AM

Share

ತಮಿಳಿನ ಖ್ಯಾತ ನಟ ವಿಜಯ್ ಆ್ಯಂಟನಿ (Vijay Antony) ಕುಟುಂಬದಲ್ಲಿ ಕಹಿ ಘಟನೆ ಒಂದು ನಡೆದಿದೆ. ಅವರ ಮಗಳು ಮೀರಾ (Meera) ಇಂದು (ಸೆಪ್ಟೆಂಬರ್ 19) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ 16 ವರ್ಷ ವಯಸ್ಸಾಗಿತ್ತು. ಅವರನ್ನು ಚೆನ್ನೈನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಯಾವುದೇ ಪ್ರಯೋಜನ ಆಗಿಲ್ಲ. ಈ ಘಟನೆ ವಿಜಯ್ ಕುಟುಂಬಕ್ಕೆ ಆಘಾತ ತಂದಿದೆ. ವಿಜಯ್ ಅವರಿಗೆ ಧೈರ್ಯ ತುಂಬುವ ಕೆಲಸವನ್ನು ಎಲ್ಲರೂ ಮಾಡುತ್ತಿದ್ದಾರೆ.

ಮೀರಾ ಅವರು ಇಂದು ಮುಂಜಾನೆ ತಾವು ಇದ್ದ ರೂಂನಲ್ಲೇ ನೇಣು ಬಿಗಿದುಕೊಂಡಿದ್ದಾರೆ. ಅವರು ಖಾಸಗಿ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದರು. ಹಲವು ಸಮಯದಿಂದ ಅವರು ಖಿನ್ನತೆಗೆ ಒಳಗಾಗಿದ್ದರು. ಈ ಸಾವಿನ ಕುರಿತು ತನಿಖೆ ಕೂಡ ನಡೆಯುತ್ತಿದೆ. ವಿಜಯ್ ಕುಟುಂಬದವರಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಅಭಿಮಾನಿಗಳು ಕೋರಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ‘ತಮಿಳರಸನ್’ ಸಿನಿಮಾ ಹಕ್ಕು ನೀಡುವುದಾಗಿ 16 ಲಕ್ಷ ಪಡೆದು ಮೋಸ; ದೂರು ದಾಖಲು

ವಿಜಯ್ ಅವರು ಫಾತಿಮಾ ಅವರನ್ನು ಮದುವೆ ಆದರು. ಇವರಿಗೆ ಮೀರಾ ಹಾಗೂ ಲಾರಾ ಹೆಸರಿನ ಇಬ್ಬರು ಹೆಣ್ಣುಮಕ್ಕಳು ಇದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಕುಟುಂಬದ ಫೋಟೋ ಒಂದು ವೈರಲ್ ಆಗಿದೆ. ವಿಜಯ್ ಆ್ಯಂಟನಿ ಅವರು ಕಾಲಿವುಡ್​ನಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ನಟನೆಯ ಜೊತೆಗೆ ಮ್ಯೂಸಿಕ್ ಕಂಪೋಸರ್ ಆಗಿಯೂ ಗುರುತಿಸಿಕೊಂಡಿದ್ದಾರೆ. ಮೊದಲು ಸಂಗೀತ ಸಂಯೋಜನೆ ಮಾಡಿದ ಅವರು ಬಳಿಕ ಹೀರೋ ಆದರು. ಅವರು ಸಿನಿಮಾ ನಿರ್ದೇಶನ ಹಾಗೂ ನಿರ್ಮಾಣ ಕೂಡ ಮಾಡಿದ್ದಾರೆ. ಫಾತಿಮಾ ಅವರು ನಿರ್ಮಾಣ ಸಂಸ್ಥೆಯನ್ನು ನೋಡಿಕೊಂಡು ಹೋಗುತ್ತಿದ್ದಾರೆ.

ಇತ್ತೀಚೆಗೆ ಅವರ ನಟನೆಯ ‘ತಮಿಳರಸನ್’ ಸಿನಿಮಾ ವಿವಾದ ಸೃಷ್ಟಿ ಮಾಡಿತ್ತು. ಈ ಚಿತ್ರದ ಕರ್ನಾಟಕದ ಹಂಚಿಕೆ ಹಕನ್ನು ಧೀರಜ್ ಎಂಟರ್ ಪ್ರೈಸಸ್​ನ ವಿತರಕ ಮೋಹನ್ ದಾಸ್ ಪೈ  ಪಡೆದುಕೊಂಡಿದ್ದರು. ಆದರೆ, ಆ ಬಳಿಕ ಸಿನಿಮಾ ರಿಲೀಸ್ ದಿನಾಂಕ ವಿಳಂಬ ಮಾಡಲಾಗಿತ್ತು. ಈ ಸಂಬಂಧ ವಂಚನೆ ಪ್ರಕರಣ ದಾಖಲು ಮಾಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ