AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಲ್ಲಿ ‘ತಮಿಳರಸನ್’ ಸಿನಿಮಾ ಹಕ್ಕು ನೀಡುವುದಾಗಿ 16 ಲಕ್ಷ ಪಡೆದು ಮೋಸ; ದೂರು ದಾಖಲು

38 ಲಕ್ಷ ರೂಪಾಯಿಗೆ ‘ತಮಿಳರಸನ್’ ಚಿತ್ರದ ತಮಿಳು ಹಾಗು ತೆಲುಗು ವರ್ಷನ್ ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಅಗ್ರಿಮೆಂಟ್ ಆಗಿತ್ತು. ಅಡ್ವಾನ್ಸ್ ರೂಪದಲ್ಲಿ 16 ಲಕ್ಷ ರೂಪಾಯಿ ಹಣವನ್ನು ಧೀರಜ್ ಪೈ ಅವರು ಕೌಸಲ್ಯ ರಾಣಿಗೆ ನೀಡಿದ್ದರು. ಉಳಿದ ಹಣ ಚಿತ್ರ ಬಿಡುಗಡೆ ಬಳಿಕ ನೀಡುವುದಾಗಿ ಒಪ್ಪಂದ ಆಗಿತ್ತು.

ಕರ್ನಾಟಕದಲ್ಲಿ ‘ತಮಿಳರಸನ್’ ಸಿನಿಮಾ ಹಕ್ಕು ನೀಡುವುದಾಗಿ 16 ಲಕ್ಷ ಪಡೆದು ಮೋಸ; ದೂರು ದಾಖಲು
ತಮಿಳರಸನ್
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on: Sep 17, 2023 | 11:09 AM

Share

ತಮಿಳು ಸಿನಿಮಾ ‘ತಮಿಳರಸನ್’ (Tamilarasan Movie)) ನಿರ್ಮಾಪಕಿಯಿಂದ ವಂಚನೆ ನಡೆದಿದೆ. ವಿಜಯ್ ಆ್ಯಂಟನಿ ನಟನೆಯ ಈ ಸಿನಿಮಾ ಹಂಚಿಕೆ ಹಕ್ಕನ್ನು ನೀಡುವುದಾಗಿ ನಂಬಿಸಿ ಮೋಸ ಮಾಡಲಾಗಿದೆ ಎಂದು ನಿರ್ಮಾಪಕಿ ಕೌಸಲ್ಯ ರಾಣಿ ವಿರುದ್ಧ ಧೀರಜ್ ಎಂಟರ್ ಪ್ರೈಸಸ್​ನ ವಿತರಕ ಮೋಹನ್ ದಾಸ್ ಪೈ ದೂರು ನೀಡಿದ್ದಾರೆ. ಈ ದೂರನ್ನು ಆಧರಿಸಿ ಕೇಸ್ ದಾಖಲು ಮಾಡಿಕೊಳ್ಳಲಾಗಿದೆ. ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

‘ತಮಿಳರಸನ್’ ಸಿನಿಮಾ ಏಪ್ರಿಲ್ 22ರಂದು ಥಿಯೇಟರ್​ನಲ್ಲಿ ರಿಲೀಸ್ ಆಗಿದೆ. ಕರ್ನಾಟಕದಲ್ಲಿ ಚಿತ್ರದ ತಮಿಳು ಹಾಗೂ ತೆಲುಗು ವರ್ಷನ್​ನ ಪ್ರದರ್ಶನದ ಹಕ್ಕನ್ನು ನೀಡುವುದಾಗಿ ಕೌಸಲ್ಯ ರಾಣಿ ಅವರು ಮೋಹನ್ ದಾಸ್ ಪೈಗೆ ಹೇಳಿದ್ದರು. 38 ಲಕ್ಷ ರೂಪಾಯಿಗೆ ತಮಿಳು ಹಾಗು ತೆಲುಗು ವರ್ಷನ್ ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಅಗ್ರಿಮೆಂಟ್ ಆಗಿತ್ತು. ಅಡ್ವಾನ್ಸ್ ರೂಪದಲ್ಲಿ 16 ಲಕ್ಷ ರೂಪಾಯಿ ಹಣವನ್ನು ಧೀರಜ್ ಪೈ ಅವರು ಕೌಸಲ್ಯ ರಾಣಿಗೆ ನೀಡಿದ್ದರು. ಉಳಿದ ಹಣ ಚಿತ್ರ ಬಿಡುಗಡೆ ಬಳಿಕ ನೀಡುವುದಾಗಿ ಒಪ್ಪಂದ ಆಗಿತ್ತು.

‘ಚಿತ್ರ ಬಿಡುಗಡೆಯನ್ನ ನಾನಾ ಕಾರಣದಿಂದ ಮುಂದೂಡಿದ್ದಾರೆ. ಇತ್ತ ಹಣ ಕೂಡ ನೀಡದೆ ಸತಾಯಿಸಿದ್ದಾರೆ. ಕೌಸಲ್ಯ ರಾಣಿ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಧೀರಜ್ ಪೈ ದೂರು ನೀಡಿದ್ದರು. ನ್ಯಾಯಾಲಯದ ಆದೇಶ ಹಿನ್ನಲೆ ಕೇಸ್ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ಹನ್ಸಿಕಾ ಅವರಿಂದ ನಯನತಾರಾವರೆಗೆ; ಖಾಸಗಿ ಫೋಟೋ ಲೀಕ್ ಆಗಿ ಸಂಕಷ್ಟ ಅನುಭವಿಸಿದ್ದ ದಕ್ಷಿಣದ ನಟಿಯರಿವರು

‘ತಮಿಳರಸನ್’ ಸಿನಿಮಾದಲ್ಲಿ ವಿಜಯ್ ಆ್ಯಂಟನಿ ಅವರು ಇನ್ಸ್​ಪೆಕ್ಟರ್ ತಮಿಳರಸನ್ ಪಾತ್ರದಲ್ಲಿ ನಟಿಸಿದ್ದರು. ಸುರೇಶ್ ಗೋಪಿ, ಸಂಗೀತಾ, ಯೋಗಿ ಬಾಬು, ಕಸ್ತೂರಿ ಶಂಕರ್ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು