‘ಖುಷಿ’ ಚಿತ್ರಕ್ಕೆ ವಿಜಯ್​ ದೇವರಕೊಂಡ-ಸಮಂತಾ ಪಡೆದ ಸಂಭಾವನೆ ಎಷ್ಟು? ಇಬ್ಬರ ಸಂಬಳದ ನಡುವೆ ಇದೆ ದೊಡ್ಡ ಅಂತರ

|

Updated on: Sep 03, 2023 | 12:34 PM

ಚಿತ್ರರಂಗದಲ್ಲಿ ಹೀರೋ ಮತ್ತು ಹೀರೋಯಿನ್​ ಸಂಭಾವನೆ ನಡುವೆ ದೊಡ್ಡ ಅಂತರ ಇರುವುದು ಗೊತ್ತೇ ಇದೆ. ಈ ಬಗ್ಗೆ ಮೊದಲಿನಿಂದಲೂ ಚರ್ಚೆ ಆಗುತ್ತಿದೆ. ‘ಖುಷಿ’ ಸಿನಿಮಾ ವಿಚಾರದಲ್ಲೂ ಅದು ಮುಂದುವರಿದಿದೆ. ಸಮಂತಾ ರುತ್​ ಪ್ರಭು ಮತ್ತು ವಿಜಯ್​ ದೇವರಕೊಂಡ ಪಡೆದುಕೊಂಡ ಸಂಭಾವನೆ ಎಷ್ಟು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

‘ಖುಷಿ’ ಚಿತ್ರಕ್ಕೆ ವಿಜಯ್​ ದೇವರಕೊಂಡ-ಸಮಂತಾ ಪಡೆದ ಸಂಭಾವನೆ ಎಷ್ಟು? ಇಬ್ಬರ ಸಂಬಳದ ನಡುವೆ ಇದೆ ದೊಡ್ಡ ಅಂತರ
ವಿಜಯ್​ ದೇವರಕೊಂಡ, ಸಮಂತಾ ರುತ್​ ಪ್ರಭು
Follow us on

ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಿರುವ ‘ಖುಷಿ’ ಸಿನಿಮಾ (Kushi Movie) ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಸಿನಿಮಾದಲ್ಲಿ ವಿಜಯ್​ ದೇವರಕೊಂಡ ಮತ್ತು ಸಮಂತಾ ರುತ್​ ಪ್ರಭು (Samantha Ruth Prabhu) ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಶಿವ ನಿರ್ವಾಣ ನಿರ್ದೇಶನದ ಈ ಸಿನಿಮಾದಲ್ಲಿ ಒಂದು ಡಿಫರೆಂಟ್​ ಆದ ಲವ್​ ಸ್ಟೋರಿ ಇದೆ. ಫ್ಯಾಮಿಲಿ ಪ್ರೇಕ್ಷಕರಿಗೆ ಈ ಸಿನಿಮಾ ಇಷ್ಟ ಆಗುತ್ತಿದೆ. ಇಂಥ ಕೌಟುಂಬಿಕ ಕಥಾಹಂದರದ ಸಿನಿಮಾವನ್ನು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ನಿರ್ಮಿಸಿ, ರಿಲೀಸ್​ ಮಾಡಿರುವುದು ‘ಮೈತ್ರಿ ಮೂವೀ ಮೇಕರ್ಸ್​’ ಸಂಸ್ಥೆಯ ಹೆಚ್ಚುಗಾರಿಕೆ. ಅದ್ದೂರಿ ಬಜೆಟ್​ನಲ್ಲಿ ‘ಖುಷಿ’ ಚಿತ್ರ ಸಿದ್ಧವಾಗಿದೆ. ಕಲಾವಿದರ ಸಂಭಾವನೆಗೆ ಬಹುಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಈ ಸಿನಿಮಾದಲ್ಲಿ ನಟಿಸಲು ವಿಜಯ್​ ದೇವರಕೊಂಡ (Vijay Devarakonda) ಅವರು ಬರೋಬ್ಬರಿ 21ರಿಂದ 23 ಕೋಟಿ ರೂಪಾಯಿ ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಸಮಂತಾ ಪಡೆದ ಸಂಭಾವನೆ ಎಷ್ಟು? ಆ ಬಗ್ಗೆ ಇಲ್ಲಿದೆ ಮಾಹಿತಿ..

ಚಿತ್ರರಂಗದಲ್ಲಿ ಹೀರೋ ಮತ್ತು ಹೀರೋಯಿನ್​ ಸಂಭಾವನೆ ನಡುವೆ ದೊಡ್ಡ ಅಂತರ ಇರುವುದು ಗೊತ್ತೇ ಇದೆ. ಈ ಬಗ್ಗೆ ಮೊದಲಿನಿಂದಲೂ ಚರ್ಚೆ ಆಗುತ್ತಿದೆ. ‘ಖುಷಿ’ ಸಿನಿಮಾ ವಿಚಾರದಲ್ಲೂ ಅದು ಮುಂದುವರಿದಿದೆ. ಸಮಂತಾ ರುತ್​ ಪ್ರಭು ಮತ್ತು ವಿಜಯ್​ ದೇವರಕೊಂಡ ಪಡೆದುಕೊಂಡ ಸಂಭಾವನೆಯಲ್ಲಿ ಅಜಗಜಾಂತರ ವ್ಯತ್ಯಾಸ ಇದೆ. ಮೂಲಗಳ ಪ್ರಕಾರ ಸಮಂತಾ ಅವರು ಈ ಸಿನಿಮಾದಲ್ಲಿ ನಟಿಸಲು 4.5 ಕೋಟಿ ರೂಪಾಯಿ ಪಡೆದಿದ್ದಾರೆ. ಅವರು ಬಹುಬೇಡಿಕೆಯ ನಟಿ ಆಗಿದ್ದರೂ ಕೂಡ ಹೀರೋಗಳ ಸಂಭಾವನೆಗೆ ಹೋಲಿಕೆ ಮಾಡಿದರೆ ಅವರ ಸಂಭಾವನೆ ಕಡಿಮೆ ಇದೆ.

ಇದನ್ನೂ ಓದಿ: ಖುಷಿ; ಸಿನಿಮಾ ಹಿಟ್: ಮದುವೆ​ಗೂ ವಿಜಯ್ ದೇವರಕೊಂಡಗೂ ಲಿಂಕ್ ಏನು?

ಸಮಂತಾ ಅವರು ‘ಖುಷಿ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಹೆಚ್ಚಾಗಿ ಭಾಗಿ ಆಗಿಲ್ಲ. ಈ ಸಿನಿಮಾದ ಮ್ಯೂಸಿಕಲ್​ ನೈಟ್​ ಕಾರ್ಯಕ್ರಮಕ್ಕೆ ಅವರು ಹಾಜರಿ ಹಾಕಿದ್ದು ಬಿಟ್ಟರೆ ಬೇರೆ ಯಾವುದೇ ಇವೆಂಟ್​ನಲ್ಲೂ ಅವರು ಭಾಗಿ ಆಗಿಲ್ಲ. ಈ ಚಿತ್ರ ಬಿಡುಗಡೆ ಆಗುವಾಗ ಅವರು ಅಮೆರಿಕಕ್ಕೆ ತೆರಳಿದರು. ಈಗಲೂ ಅಲ್ಲಿಯೇ ಇದ್ದಾರೆ. ಪ್ರಚಾರದ ಸಂಪೂರ್ಣ ಜವಾಬ್ದಾರಿಯನ್ನು ವಿಜಯ್​ ದೇವರಕೊಂಡ ಅವರು ನಿಭಾಯಿಸಿದ್ದಾರೆ. ಹಲವು ಕಾರಣಗಳಿಂದಾಗಿ ಈ ಚಿತ್ರ ಗಮನ ಸೆಳೆದಿದೆ. ‘ಖುಷಿ’ ಚಿತ್ರದ ಹಾಡುಗಳು ಸೂಪರ್​ ಹಿಟ್​ ಆಗಿವೆ. ಹೇಷಮ್​ ಅಬ್ದುಲ್​ ವಹಾಬ್​ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಇದನ್ನೂ ಓದಿ: ಖುಷಿ; ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು? ವಿಜಯ್ ದೇವರಕೊಂಡಗೆ ಸಿಕ್ಕಿತಾ ಯಶಸ್ಸು?

ವಿಜಯ್​ ದೇವರಕೊಂಡ ಅವರಿಗೆ ‘ಅರ್ಜುನ್​ ರೆಡ್ಡಿ’ ಸಿನಿಮಾದಿಂದ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿತ್ತು. ಅವರು ನಟಿಸಿದ ‘ಲೈಗರ್​’ ಚಿತ್ರವನ್ನು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರಿಲೀಸ್​ ಮಾಡಲಾಗಿತ್ತು. ಆದರೆ ಆ ಸಿನಿಮಾ ನಿರೀಕ್ಷಿತ ಪ್ರಮಾಣದಲ್ಲಿ ಕಲೆಕ್ಷನ್​ ಮಾಡಲಿಲ್ಲ. ಹಾಗಿದ್ದರೂ ಕೂಡ ವಿಜಯ್​ ದೇವರಕೊಂಡ ಅವರ ಡಿಮ್ಯಾಂಡ್​ ಕಡಿಮೆ ಆಗಿಲ್ಲ. ‘ಖುಷಿ’ ಸಿನಿಮಾಗೆ ಅವರು 21 ಕೋಟಿ ರೂಪಾಯಿಗೂ ಅಧಿಕ ಸಂಭಾವನೆ ಪಡೆದಿರುವುದೇ ಅವರ ಬೇಡಿಕೆಗೆ ಸಾಕ್ಷಿ. ತೆಲುಗಿನ ಈ ಸಿನಿಮಾ ಕನ್ನಡ, ಮಲಯಾಳಂ, ಹಿಂದಿ ಮತ್ತು ತಮಿಳು ಭಾಷೆಗೆ ಡಬ್​ ಆಗಿ ತೆರೆಕಂಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.