ಹೊಸ ‘ಕಿಂಗ್​ಡಮ್’ ಕಟ್ಟಲು ಸಜ್ಜಾದ ವಿಜಯ್ ದೇವರಕೊಂಡ; ಟೀಸರ್ ನೋಡಿ..

‘ಕಿಂಗ್​ಡಮ್’ ಸಿನಿಮಾದ ಟೀಸರ್​ಗೆ ಜೂನಿಯರ್​ ಎನ್​ಟಿಆರ್​, ರಣಬೀರ್ ಕಪೂರ್​ ಹಾಗೂ ಸೂರ್ಯ ಅವರು ಧ್ವನಿ ನೀಡಿದ್ದಾರೆ. ಅವರೆಲ್ಲರಿಗೂ ವಿಜಯ್ ದೇವರಕೊಂಡ ಧನ್ಯವಾದ ತಿಳಿಸಿದ್ದಾರೆ. 3 ಭಾಷೆಯಲ್ಲಿ ಟೀಸರ್​ ರಿಲೀಸ್ ಆಗಿದೆ. ಮೇ 30ಕ್ಕೆ ‘ಕಿಂಗ್​ಡಮ್’ ಚಿತ್ರ ಬಿಡುಗಡೆ ಆಗಲಿದೆ. ಯುದ್ಧಗಳ ಕಥೆ ಈ ಸಿನಿಮಾದಲ್ಲಿ ಇದೆ.

ಹೊಸ ‘ಕಿಂಗ್​ಡಮ್’ ಕಟ್ಟಲು ಸಜ್ಜಾದ ವಿಜಯ್ ದೇವರಕೊಂಡ; ಟೀಸರ್ ನೋಡಿ..
Vijay Devarakonda

Updated on: Feb 12, 2025 | 5:16 PM

ವಿಜಯ್ ದೇವರಕೊಂಡ ನಟನೆಯ 12ನೇ ಸಿನಿಮಾದ ಟೈಟಲ್ ಏನು ಎಂಬ ಬಗ್ಗೆ ಅಭಿಮಾನಿಗಳಿಗೆ ಸಖತ್ ಕುತೂಹಲ ಇತ್ತು. ಇಷ್ಟು ದಿನಗಳ ಕಾಲ ಈ ಸಿನಿಮಾವನ್ನು ತಾತ್ಕಾಲಿಕವಾಗಿ ‘VD12’ ಎಂದು ಕರೆಯಲಾಗುತ್ತಿತ್ತು. ಈಗ ಈ ಚಿತ್ರದ ಶೀರ್ಷಿಕೆ ಅನಾವರಣ ಆಗಿದೆ. ಅಲ್ಲದೇ ಟೀಸರ್​ ಕೂಡ ಬಿಡುಗಡೆ ಆಗಿದೆ. ಹೌದು, ಈ ಸಿನಿಮಾಗೆ ‘ಕಿಂಗ್​ಡಮ್’ ಎಂದು ಹೆಸರು ಇಡಲಾಗಿದೆ. ಸಿಕ್ಕಾಪಟ್ಟೆ ಮಾಸ್ ಆದಂತಹ ಕಥೆಯನ್ನು ಈ ಸಿನಿಮಾದ ಮೂಲಕ ಹೇಳಲಾಗುತ್ತದೆ ಎಂಬುದಕ್ಕೆ ಟೀಸರ್​ನಲ್ಲಿ ಸುಳಿವು ಸಿಕ್ಕಿದೆ.

ವಿಜಯ್ ದೇವರಕೊಂಡ ಅವರಿಗೆ ದೇಶಾದ್ಯಂತ ಅಭಿಮಾನಿಗಳು ಇದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅವರಿಗೆ ಖ್ಯಾತಿ ಇದೆ. ‘ಕಿಂಗ್​ಡಮ್​’ ಸಿನಿಮಾದ ಟೀಸರ್​ ಅನ್ನು ತೆಲುಗು ಮಾತ್ರವಲ್ಲದೇ ತಮಿಳು ಮತ್ತು ಹಿಂದಿಯಲ್ಲೂ ಬಿಡುಗಡೆ ಮಾಡಲಾಗಿದೆ. ತೆಲುಗಿನಲ್ಲಿ ಜೂನಿಯರ್​ ಎನ್​ಟಿಆರ್​, ಹಿಂದಿಯಲ್ಲಿ ರಣಬೀರ್​ ಕಪೂರ್​ ಹಾಗೂ ತಮಿಳಿನಲ್ಲಿ ಸೂರ್ಯ ಅವರು ‘ಕಿಂಡ್​ಕಮ್’ ಟೀಸರ್​ಗೆ ಧ್ವನಿ ನೀಡಿದ್ದಾರೆ.

ತುಂಬ ಖ್ಯಾತಿ ಇದ್ದರೂ ಕೂಡ ವಿಜಯ್ ದೇವರಕೊಂಡ ಅವರಿಗೆ ಒಂದು ದೊಡ್ಡ ಗೆಲುವು ಸಿಗದೇ ಬಹಳ ಕಾಲ ಆಗಿದೆ. ಕಳೆದ ಕೆಲವು ವರ್ಷಗಳಿಂದ ಅವರು ನಟಿಸಿದ ಯಾವ ಸಿನಿಮಾ ಕೂಡ ಗೆದ್ದಿಲ್ಲ. ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ‘ಲೈಗರ್’ ಸಿನಿಮಾ ಸೋಲು ಕಂಡಿತು. ಆ ಬಳಿಕ ಬಂದ ‘ಖುಷಿ’ ಮತ್ತು ‘ದಿ ಫ್ಯಾಮಿಲಿ ಸ್ಟಾರ್’ ಸಿನಿಮಾಗಳು ಕೂಡ ಗೆಲ್ಲಲಿಲ್ಲ. ಈಗ ಅವರು ‘ಕಿಂಗ್​ಡಮ್’ ಸಿನಿಮಾ ಮೂಲಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಸಿನಿಮಾಗೆ ಸೋಲಿನ ಭಯ? ‘ಛಾವ’ ಚಿತ್ರಕ್ಕೆ ಇದೆಂಥ ಪರಿಸ್ಥಿತಿ

ಗೌತಮ್ ತಿನ್ನನೂರಿ ಅವರು ‘ಕಿಂಗ್​ಡಮ್’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ನಾಗ ವಂಶಿ, ಸಾಯಿ ಸೌಜನ್ಯ ಅವರು ನಿರ್ಮಾಣ ಮಾಡಿದ್ದಾರೆ. ಅನಿರುದ್ಧ್ ರವಿಚಂದರ್ ಅವರು ಸಂಗೀತ ನೀಡಿದ್ದಾರೆ. ಮೇ 30ರಂದು ಈ ಸಿನಿಮಾ ತೆರೆಕಾಣಲಿದೆ. ಟೀಸರ್​ ಅದ್ದೂರಿಯಾಗಿ ಮೂಡಿಬಂದಿದೆ. ಆದ್ದರಿಂದ ಹೈಪ್ ಸೃಷ್ಟಿ ಆಗಿದೆ. ನಟಿ ರಶ್ಮಿಕಾ ಮಂದಣ್ಣ ಅವರು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ‘ಕಿಂಗ್​ಡಮ್’ ಸಿನಿಮಾ ಟೀಸರ್​ ಹಂಚಿಕೊಂಡು ವಿಜಯ್ ದೇವರಕೊಂಡಗೆ ಶುಭ ಕೋರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.