ವಿಜಯ್ ದೇವರಕೊಂಡ ಹಿಡಿದುಕೊಂಡಿರೋ ಕೈ ಯಾರದ್ದು? ರಶ್ಮಿಕಾ ಮಂದಣ್ಣ ಬಗ್ಗೆ ಮೂಡಿದೆ ಅನುಮಾನ

ವಿಜಯ್ ದೇವರಕೊಂಡ ಅವರು ಸದ್ಯ ‘ಖುಷಿ’ ಸಿನಿಮಾದ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ. ಈ ಸಂದರ್ಭದಲ್ಲಿ ಹೊಸ ಸಿನಿಮಾ ಘೋಷಿಸಿದರೆ ಎಲ್ಲರ ಗಮನ ಅತ್ತ ನಡೆಯುತ್ತದೆ. ಈ ಕಾರಣದಿಂದಲೇ ‘ಖುಷಿ’ ಸಿನಿಮಾ ರಿಲೀಸ್ ಬಳಿಕವೇ ಈ ಬಗ್ಗೆ ವಿಜಯ್ ದೇವರಕೊಂಡ ಘೋಷಣೆ ಮಾಡುವ ಸಾಧ್ಯತೆ ಇದೆ.

ವಿಜಯ್ ದೇವರಕೊಂಡ ಹಿಡಿದುಕೊಂಡಿರೋ ಕೈ ಯಾರದ್ದು? ರಶ್ಮಿಕಾ ಮಂದಣ್ಣ ಬಗ್ಗೆ ಮೂಡಿದೆ ಅನುಮಾನ
ವಿಜಯ್

Updated on: Aug 30, 2023 | 7:39 AM

ವಿಜಯ್ ದೇವರಕೊಂಡ (Vijay Devarakonda) ಹಿಡಿದುಕೊಂಡಿರೋ ಕೈ ಯಾರದ್ದು? ರಶ್ಮಿಕಾ ಮಂದಣ್ಣ ಬಗ್ಗೆ ಮೂಡಿದೆ ಅನುಮಾನವಿಜಯ್ ದೇವರಕೊಂಡ ಅವರು ಬ್ಯಾಚುಲರ್ ಲೈಫ್​ನ ಎಂಜಾಯ್ ಮಾಡುತ್ತಿದ್ದಾರೆ. ಸಾಲು ಸಾಲು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ಈಗ ಅವರು ‘ಖುಷಿ’ ಸಿನಿಮಾ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಹೀಗಿರುವಾಗಲೇ ಅವರು ಹಾಕಿರೋ ಹೊಸ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ಹುಡುಗಿಯ ಕೈ ಹಿಡಿದುಕೊಂಡಿದ್ದಾರೆ ವಿಜಯ್. ಅಲ್ಲದೆ ಶೀಘ್ರದಲ್ಲೇ ಹೊಸ ಅಪ್​ಡೇಟ್ ಕೊಡುವುದಾಗಿಯೂ ಹೇಳಿಕೊಂಡಿದ್ದಾರೆ. ಇದು ಸಾಕಷ್ಟು ಅಚ್ಚರಿ ಮೂಡಿಸಿದೆ. ವಿಜಯ್ ದೇವರಕೊಂಡ ಶೀಘ್ರವೇ ಮದುವೆ ಆಗುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ. ಕೆಲವರು ಇದು ಸಿನಿಮಾ ಪ್ರಚಾರದ ಗಿಮಿಕ್ ಎಂದಿದ್ದಾರೆ.

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಕೆಲವು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ಇವರ ಮಧ್ಯೆ ಪ್ರೀತಿ ಮೂಡಿದೆ ಎಂಬುದು ಈ ಮೊದಲಿನಿಂದಲೂ ಇರುವ ಸುದ್ದಿ. ಆದರೆ, ಇದನ್ನು ಅವರು ಒಪ್ಪಿಕೊಂಡಿಲ್ಲ. ಹೀಗಿದ್ದರೂ ಇವರ ಮಧ್ಯೆ ಸಂಬಂಧ ಕಟ್ಟುವ ಕೆಲಸವನ್ನು ಅಭಿಮಾನಿಗಳು ನಿಲ್ಲಿಸಿಲ್ಲ. ಹೀಗಿರುವಾಗಲೇ ವಿಜಯ್ ದೇವರಕೊಂಡ ಅವರು ಇನ್​ಸ್ಟಾಗ್ರಾಮ್​ನಲ್ಲಿ ಸ್ಟೋರಿ ಇದನ್ನು ಹಂಚಿಕೊಂಡಿದ್ದಾರೆ. ಅವರು ಕೈ ಹಿಡಿದಿರುವ ಹುಡುಗಿ ಯಾರು ಎಂಬ ಪ್ರಶ್ನೆ ಮೂಡಿದೆ.

‘ಬಹಳಷ್ಟು ವಿಚಾರಗಳು ನಡೆಯುತ್ತಿವೆ. ಆದರೆ ಇದು ನಿಜವಾಗಿಯೂ ವಿಶೇಷ- ಶೀಘ್ರದಲ್ಲೇ ಘೋಷಿಸುತ್ತೇನೆ’ ಎಂದಿದ್ದಾರೆ ವಿಜಯ್ ದೇವರಕೊಂಡ. ವಿಜಯ್ ದೇವರಕೊಂಡ ಹಿಡಿದುಕೊಂಡಿರುವ ಕೈ ರಶ್ಮಿಕಾ ಮಂದಣ್ಣ ಅವರದ್ದಿರಬಹುದೇ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿದೆ.

ಇನ್ನೂ ಕೆಲವರು ಇದು ಸಿನಿಮಾ ಪ್ರಚಾರದ ಗಿಮಿಕ್ ಎನ್ನುತ್ತಿದ್ದಾರೆ. ಸಾಮಾನ್ಯವಾಗಿ ಹೊಸ ಸಿನಿಮಾ ಘೋಷಿಸುವಾಗ ಈ ರೀತಿಯ ಟ್ರಿಕ್​​ಗಳನ್ನು ಹೀರೋಗಳು ಮಾಡುತ್ತಾರೆ. ಈಗ ವಿಜಯ್ ಅವರು ಪರಶುರಾಮ್ ಜೊತೆ ಹೊಸ ಸಿನಿಮಾ ಮಾಡುತ್ತಿದ್ದಾರೆ. ಇದರ ಟೈಟಲ್ ರಿಲೀಸ್​ಗೆ ಈ ಗಿಮಿಕ್ ಮಾಡಿರಬಹುದು ಎಂಬುದು ಕೆಲವರ ಅಭಿಪ್ರಾಯ. ಈ ಸಿನಿಮಾ ಮುಂದಿನ ಸಂಕ್ರಾಂತಿಗೆ ರಿಲೀಸ್ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಸಮಂತಾಗೆ ವಿಡಿಯೋ ಕಾಲ್ ಮಾಡಿದ ವಿಜಯ್ ದೇವರಕೊಂಡ, ಹೇಳಿದ ಜೋಕ್ ಯಾವುದು?

ವಿಜಯ್ ದೇವರಕೊಂಡ ಅವರು ಸದ್ಯ ‘ಖುಷಿ’ ಸಿನಿಮಾದ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ. ಈ ಸಂದರ್ಭದಲ್ಲಿ ಹೊಸ ಸಿನಿಮಾ ಘೋಷಿಸಿದರೆ ಎಲ್ಲರ ಗಮನ ಅತ್ತ ನಡೆಯುತ್ತದೆ. ಈ ಕಾರಣದಿಂದಲೇ ‘ಖುಷಿ’ ಸಿನಿಮಾ ರಿಲೀಸ್ ಬಳಿಕವೇ ಈ ಬಗ್ಗೆ ವಿಜಯ್ ದೇವರಕೊಂಡ ಘೋಷಣೆ ಮಾಡುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:15 am, Wed, 30 August 23

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us