AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಮಂತಾಗೆ ವಿಡಿಯೋ ಕಾಲ್ ಮಾಡಿದ ವಿಜಯ್ ದೇವರಕೊಂಡ, ಹೇಳಿದ ಜೋಕ್ ಯಾವುದು?

Vijay Deverakonda and Samantha: ವಿಜಯ್ ದೇವರಕೊಂಡ, ನಟಿ ಸಮಂತಾಗೆ ಅರ್ಧ ರಾತ್ರಿ ವಿಡಿಯೋ ಕಾಲ್ ಮಾಡಿ ರೊಮ್ಯಾಂಟಿಕ್ ಆಗಿ ಹಾಡು ಹಾಡಿದ್ದಾರೆ.

ಸಮಂತಾಗೆ ವಿಡಿಯೋ ಕಾಲ್ ಮಾಡಿದ ವಿಜಯ್ ದೇವರಕೊಂಡ, ಹೇಳಿದ ಜೋಕ್ ಯಾವುದು?
ಸಮಂತಾ-ವಿಜಯ್ ದೇವರಕೊಂಡ
ಮಂಜುನಾಥ ಸಿ.
|

Updated on: Aug 27, 2023 | 11:09 PM

Share

ನಟಿ ಸಮಂತಾ (Samantha) ಹಾಗೂ ವಿಜಯ್ ದೇವರಕೊಂಡ (Vijay Deverakonda) ನಡುವೆ ಆತ್ಮೀಯತೆ ಇತ್ತೀಚೆಗೆ ತುಸು ಹೆಚ್ಚಾಗಿದೆ. ಇಬ್ಬರೂ ಖುಷಿ ಸಿನಿಮಾದಲ್ಲಿ ಒಟ್ಟಿಗೆ ನಟಿಸಲು ಪ್ರಾರಂಭಿಸಿದ ಬಳಿಕವಂತೂ ಇವರ ನಡುವೆ ಹೆಚ್ಚಿನ ಸಲುಗೆ ಏರ್ಪಟ್ಟಿದೆ. ‘ಖುಷಿ’ ಸಿನಿಮಾದ ಪ್ರಚಾರ ಕಾರ್ಯಕ್ರಮಗಳಲ್ಲಿ ಈ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದು, ಇಬ್ಬರ ನಡುವೆ ಬಹಳ ಒಳ್ಳೆಯ ಕೆಮಿಸ್ಟ್ರಿ ಇದೆಯೆಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೆ ವಿಜಯ್ ಹಾಗೂ ಸಮಂತಾ ನಡುವೆ ‘ಏನೋ ಇದೆ’ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.

ವಿಜಯ್ ಹಾಗೂ ಸಮಂತಾ ತೀರಾ ಆತ್ಮೀಯರಾಗಿದ್ದಾರೆ, ಇಬ್ಬರ ನಡುವೆ ಏನೋ ಇರಬಹುದಾದ ಸುಳಿವುಗಳನ್ನು ಇವರ ಬಾಡಿಲಾಂಗ್ವೇಜ್ ನೀಡುತ್ತಿದೆ ಎಂಬ ಮಾತುಗಳು ಹರಿದಾಡುತ್ತಿರುವ ಬೆನ್ನಲ್ಲೆ ಇದೀಗ ನಟ ವಿಜಯ್ ದೇವರಕೊಂಡ, ಸಮಂತಾಗೆ ಸರಿ ಹೊತ್ತಿನಲ್ಲಿ ವಿಡಿಯೋ ಕಾಲ್ ಮಾಡಿದ್ದಾರೆ. ಇಬ್ಬರು ಪರಸ್ಪರ ಮಾಡಿಕೊಂಡಿರುವ ವಿಡಿಯೋ ಕಾಲ್ ಇದೀಗ ಸಾರ್ವಜನಿಕವಾಗಿದ್ದು, ವಿಜಯ್ ದೇವರಕೊಂಡ, ಕೆಲವು ಜೋಕ್​ಗಳನ್ನು ಹೇಳಿ ಸಮಂತಾರನ್ನು ನಗಿಸುವ ಪ್ರಯತ್ನ ಮಾಡಿದ್ದಾರೆ ವಿಡಿಯೋ ಕಾಲ್​ನಲ್ಲಿ.

ಸಮಂತಾ ಸದ್ಯಕ್ಕೆ ಅಮೆರಿಕದ ಲಾಸ್ ಏಂಜಲ್ಸ್​ನಲ್ಲಿದ್ದು ಹೈದರಾಬಾದ್​ನಲ್ಲಿರುವ ವಿಜಯ್ ದೇವರಕೊಂಡ, ಸಮಂತಾಗೆ ವಿಡಿಯೋ ಕಾಲ್ ಮಾಡಿ ರೊಮ್ಯಾಂಟಿಕ್ ಆಗಿ ತೆಲುಗು ಹಾಡು ಹಾಡಿದ್ದಾರೆ. ಅದೂ ತಮ್ಮದೇ ಸಿನಿಮಾದ ಹಾಡು. ವಿಡಿಯೋ ಕಾಲ್ ಮಾಡಿ ನನ್ನ ಬಳಿ ಒಂದು ‘ನಾಕ್ ನಾಕ್’ ಜೋಕ್ ಇದೆ ಎಂದಿದ್ದಾರೆ ವಿಜಯ್, ಅಮೆರಿಕದಲ್ಲಿ ಈಗ ಎಷ್ಟು ಸಮಯ ಗೊತ್ತೆ? ನಿನ್ನ ಜೋಕ್ ಅದೇನೋ ಬೇಗ ಹೇಳು ಎಂದಿದ್ದಾರೆ. ವಿಜಯ್ ದೇವರಕೊಂಡ ನಾಕ್ ನಾಕ್ ಎಂದಾಗ ನಿಯಮದಂತೆ ಸಮಂತಾ, ‘ಯಾರದು?’ ಅಥವಾ ಹೂ? ಎನ್ನುತ್ತಾರೆ. ವಿಜಯ್ ನಾನು ‘ನಾ’ ಎನ್ನುತ್ತಾರೆ, ನಾ ಎಂದರೆ ಯಾರು ಎಂದು ಸಮಂತಾ ಕೇಳಿದಾಗ, ‘ನಾ ರೋಜಾ ನುವ್ವೆ’ ಹಾಡು ಹಾಡಿದ್ದಾರೆ ವಿಜಯ್.

ಇದನ್ನೂ ಓದಿ:ರಜನಿ ಬಗ್ಗೆ ತಪ್ಪಾಗಿ ಹೇಳಿ ವಿವಾದ ಸೃಷ್ಟಿಸಿದ ವಿಜಯ್ ದೇವರಕೊಂಡ; ‘ನಿಮ್ಮ ಅಭಿಪ್ರಾಯ ಬೇಕಿಲ್ಲ’ ಎಂದ ಫ್ಯಾನ್ಸ್ 

ನಾಕ್ ನಾಕ್ ಎಂಬುದು ಜೋಕ್​ನ ಒಂದು ಮಾದರಿ. ಬಾಗಿಲಲ್ಲಿ ಯಾರೋ ಬಂದು, ಅವರನ್ನು ಯಾರದು ಎಂದು ಕೇಳಿದಾಗ, ಕೇಳಿದಾತನಿಗೆ ಶಾಕ್ ನೀಡುವ ರೀತಿ ಭಿನ್ನವಾಗಿ ಪರಿಚಯ ಹೇಳುವ ಅಥವಾ ನಗು ಉಕ್ಕಿಸುವ ಮಾದರಿಯಲ್ಲಿ ಪೆದ್ದಾಗಿ ಏನೋ ಹೇಳುವ ಜೋಕಿನ ಮಾದರಿಗೆ ನಾಕ್ ನಾಕ್ ಜೋಕ್ ಎನ್ನಲಾಗುತ್ತದೆ. ಬಾಲಿವುಡ್ ನಟಿ ಸಾರಾ ಅಲಿ ಖಾನ್, ಈ ರೀತಿಯ ಪೆದ್ದು ಪೆದ್ದು ನಾಕ್ ನಾಕ್ ಜೋಕಿಗೆ ಖ್ಯಾತರು.

ವಿಜಯ್ ದೇವರಕೊಂಡ ಹಾಗೂ ಸಮಂತಾ ಒಟ್ಟಿಗೆ ‘ಖುಷಿ’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಪ್ರೇಮಕತೆಯುಳ್ಳ ಈ ಸಿನಿಮಾವನ್ನು ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಸಿನಿಮಾದಲ್ಲಿ ವಿಜಯ್ ಎದುರು ನಾಯಕಿಯಾಗಿ ಸಮಂತಾ ನಟಿಸಿದ್ದಾರೆ. ಸಿನಿಮಾದ ಟ್ರೈಲರ್, ಹಾಡುಗಳು ಈಗಾಗಲೇ ಬಿಡುಗಡೆ ಆಗಿದ್ದು, ಸಖತ್ ಹಿಟ್ ಎನಿಸಿಕೊಂಡಿವೆ.