AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಚ್ಛೇದನದ ಬಗ್ಗೆ ಭವಿಷ್ಯ ನುಡಿದಿದ್ದ ಜ್ಯೋತಿಷಿ, ಸಮಂತಾ ಎರಡನೇ ಮದುವೆ ಬಗ್ಗೆಯೂ ಭವಿಷ್ಯ

Samantha: ಟಾಲಿವುಡ್​ನ ಸೆಲೆಬ್ರಿಟಿ ಜ್ಯೋತಿಷಿಯಾಗಿಯೇ ಗುರುತಿಸಿಕೊಂಡಿರುವ ವೇಣು ಸ್ವಾಮಿ, ಈ ಹಿಂದೆ ಸಮಂತಾ ಹಾಗೂ ನಾಗ ಚೈತನ್ಯರ ವಿಚ್ಚೇದನದ ಬಗ್ಗೆ ಭವಿಷ್ಯ ನುಡಿದಿದ್ದರು. ಇದೀಗ ಸಮಂತಾರ ಎರಡನೇ ಮದುವೆ ಬಗ್ಗೆ ಮಾತನಾಡಿರುವ ಹಳೆಯ ವಿಡಿಯೋ ವೈರಲ್ ಆಗಿದೆ.

ವಿಚ್ಛೇದನದ ಬಗ್ಗೆ ಭವಿಷ್ಯ ನುಡಿದಿದ್ದ ಜ್ಯೋತಿಷಿ, ಸಮಂತಾ ಎರಡನೇ ಮದುವೆ ಬಗ್ಗೆಯೂ ಭವಿಷ್ಯ
ಸಮಂತಾ-ವೇಣು ಸ್ವಾಮಿ
ಮಂಜುನಾಥ ಸಿ.
|

Updated on: Aug 26, 2023 | 4:17 PM

Share

ತೆಲುಗು ಚಿತ್ರರಂಗದಲ್ಲಿ (Tollywood) ಸ್ಟಾರ್ ನಟ-ನಟಿಯರು ಇರುವಂತೆಯೇ ವೇಣು ಸ್ವಾಮಿ (Venu Swamy) ಟಾಲಿವುಡ್​ನ ಸೆಲೆಬ್ರಿಟಿ ಜ್ಯೋತಿಷಿ ಎನಿಸಿಕೊಂಡಿದ್ದಾರೆ. ಹಲವು ದಶಕಗಳಿಂದಲೂ ತೆಲುಗು ಸಿನಿಮಾಗಳ ಮುಹೂರ್ತ ಪೂಜೆ, ಬಿಡುಗಡೆ ದಿನಾಂಕ ನಿಗದಿ ಇತ್ಯಾದಿಗಳನ್ನು ಮಾಡುತ್ತಾ ಬಂದಿರುವ ವೇಣು ಸ್ವಾಮಿ ಕಳೆದ ಕೆಲ ವರ್ಷಗಳಿಂದ ಯೂಟ್ಯೂಬ್​ನಲ್ಲಿ (YouTube) ತೆಲುಗು ಸೆಲೆಬ್ರಿಟಿಗಳ ಭವಿಷ್ಯ, ಅವರ ವೃತ್ತಿಯ ಏರಿಳಿತ, ಮದುವೆ, ಪ್ರೇಮ ಇನ್ನಿತರೆಗಳ ಬಗ್ಗೆ ಮಾತನಾಡುತ್ತಿದ್ದಾರೆ. ಸಮಂತಾ (Samantha) ಹಾಗೂ ನಾಗ ಚೈತನ್ಯ ವಿಚ್ಚೇದನದ ಬಗ್ಗೆ ಮುಂಚಿತವಾಗಿಯೇ ಭವಿಷ್ಯ ನುಡಿದಿದ್ದ ವೇಣು ಸ್ವಾಮಿ ಸಮಂತಾರ ಎರಡನೇ ಮದುವೆ ಬಗ್ಗೆಯೂ ಮಾತನಾಡಿರುವ ಹಳೆಯ ವಿಡಿಯೋ ಇದೀಗ ವೈರಲ್ ಆಗಿದೆ.

ಹಳೆಯ ವಿಡಿಯೋ ಒಂದರಲ್ಲಿ ಸಮಂತಾ, ಪವನ್ ಕಲ್ಯಾಣ್, ಚಿರಂಜೀವಿ ಪುತ್ರಿಯ ಮರು ಮದುವೆ, ನಾಗ ಚೈತನ್ಯ ಸಹೋದರ ಅಖಿಲ್ ಮದುವೆ ಇನ್ನಿತರೆ ವಿಷಯಗಳ ಬಗ್ಗೆ ಮಾತನಾಡಿದ್ದರು. ಸಮಂತಾ ಹಾಗೂ ನಾಗ ಚೈತನ್ಯ ವಿಚ್ಛೇದನದ ಬಗ್ಗೆ ಭವಿಷ್ಯ ನುಡಿದಾಗ ಹಲವರು ನನ್ನ ವಿಪರೀತವಾಗಿ ಟೀಕಿಸಿದ್ದರು, ಆದರೆ ನಾನು ಭವಿಷ್ಯ ನುಡಿದಂತೆಯೇ ಆಯಿತು ಎಂದಿರುವ ವೇಣು ಸ್ವಾಮಿ, ಇಬ್ಬರೂ ಎರಡನೇ ಮದುವೆ ಆಗಲಿದ್ದಾರೆ ಎಂದೂ ಸಹ ಹೇಳಿದ್ದಾರೆ.

ವೈವಾಹಿಕ ಜೀವನ ಸರಿಯಿಲ್ಲದೇ ಹೋಗುವುದಕ್ಕೆ ಗುರುವಿನ ಸ್ಥಾನವೇ ಪ್ರಮುಖ ಕಾರಣ ಎಂದಿರುವ ವೇಣು ಸ್ವಾಮಿ, ತೆಲುಗು ನಟ ಪವನ್ ಕಲ್ಯಾಣ್ ಮೂರು ಮದುವೆಗಳಾಗಿರುವುದು ಇದೇ ಕಾರಣಕ್ಕೆ, ಅವರ ಜಾತಕದಲ್ಲಿ ಸುಮಾರು ಮೂರು-ನಾಲ್ಕು ಮದುವೆಗಳ ಯೋಗವಿದೆ ಎಂದಿದ್ದಾರೆ. ಇನ್ನು ಚಿರಂಜೀವಿ ಪುತ್ರಿ ಶ್ರಿಜಾ ಜಾತಕದ ಬಗ್ಗೆ ಮಾತನಾಡಿ, ಆಕೆಯ ಜಾತಕದಲ್ಲಿಯೂ ಬಹು ವಿವಾಹ ಬರೆದಿದ್ದು, ಎರಡು ಮದುವೆ ಆಗಿರುವ ಆಕೆ ಇನ್ನೂ ಎರಡು ಮದುವೆ ಆಗುತ್ತಾರೆ ಎಂದಿದ್ದಾರೆ.

ಇದನ್ನೂ ಓದಿ:ನ್ಯೂಯಾರ್ಕ್ ನಗರದಲ್ಲಿ ಸೀರೆ ಉಟ್ಟು ಸುತ್ತಾಡಿದ ಸಮಂತಾ; ಇಲ್ಲಿವೆ ಫೋಟೋಸ್

ಇನ್ನು ನಾಗಾರ್ಜುನ ಕುಟುಂಬದಲ್ಲಿ ವಿಚ್ಛೇದನ ಎಂಬುದು ಅವರ ಕುಟುಂಬ ಜಾತಕದಲ್ಲಿಯೇ ಇದೆ. ಇನ್ನೂ ಮದುವೆ ಆಗದಿರುವ ಅಖಿಲ್ ಸಹ ಮುಂದೆ ಮದುವೆ ಆದಾಗ ವಿಚ್ಚೇದನಕ್ಕೆ ಒಳಗಾಗುತ್ತಾರೆ. ನಾಗಾರ್ಜುನ ಸಹ ವಿಚ್ಛೇದನ ಪಡೆದುಕೊಂಡಿದ್ದರು. ಅಖಿಲ್ ಜಾತಕ ಸಹ ಬಹಳ ಚೆನ್ನಾಗಿಯೇನೂ ಇಲ್ಲ. ಅವರೂ ಸಹ ವೈಯಕ್ತಿಕ ಹಾಗೂ ವೃತ್ತಿ ಜೀವನದಲ್ಲಿ ಅಭಿವೃದ್ಧಿ ಹೊಂದುವುದು ಕಷ್ಟವೆಂದು ವೇಣು ಸ್ವಾಮಿ ಹಳೆಯ ಸಂದರ್ಶನದಲ್ಲಿ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್
ಡಿಕೆಶಿ ಪ್ರಮಾಣವಚನ ಕಾರ್ಯಕ್ರಮದ ಬಗ್ಗೆ ನೊಣವಿನಕೆರೆ ಶ್ರೀಗಳು ಹೇಳಿದ್ದಿಷ್ಟು
ಡಿಕೆಶಿ ಪ್ರಮಾಣವಚನ ಕಾರ್ಯಕ್ರಮದ ಬಗ್ಗೆ ನೊಣವಿನಕೆರೆ ಶ್ರೀಗಳು ಹೇಳಿದ್ದಿಷ್ಟು