AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀಲೀಲಾ ಭವಿಷ್ಯ ಹೇಳಿದ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ: ಆ ನಟಿಯೊಟ್ಟಿಗೆ ಹೋಲಿಕೆ

Venu Swamy: ಕನ್ನಡದ ನಟಿ ಶ್ರೀಲೀಲಾ ಬಗ್ಗೆ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ ನುಡಿದಿದ್ದಾರೆ.

ಶ್ರೀಲೀಲಾ ಭವಿಷ್ಯ ಹೇಳಿದ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ: ಆ ನಟಿಯೊಟ್ಟಿಗೆ ಹೋಲಿಕೆ
ವೇಣು ಸ್ವಾಮಿ
ಮಂಜುನಾಥ ಸಿ.
|

Updated on: Jul 29, 2023 | 5:05 PM

Share

ತೆಲುಗು ಚಿತ್ರರಂಗದಲ್ಲಿ (Tollywood) ನಟ-ನಟಿಯರು ಸೆಲೆಬ್ರಿಟಿಗಳಾಗಿರುವಂತೆಯೇ ಜ್ಯೋತಿಷಿ ವೇಣು ಸ್ವಾಮಿ (Venu Swamy) ಸಹ ಚಿತ್ರರಂಗದ ಸೆಲೆಬ್ರಿಟಿ ಜ್ಯೋತಿಷಿ. ದಶಗಳಿಂದಲೂ ಸಿನಿಮಾಗಳ ಮುಹೂರ್ತ ಪೂಜೆ, ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿಪಡಿಸುವುದು ಇತರೆಗಳನ್ನು ಹೇಳುತ್ತಾ ಬಂದಿರುವ ವೇಣು ಸ್ವಾಮಿ ಈಗ ಸೆಲೆಬ್ರಿಟಿ ದರ್ಜೆಗೆ ಏರಿದ್ದಾರೆ. ತೆಲುಗು ಮಾತ್ರವೇ ಅಲ್ಲದೆ ಹಲವಾರು ನಟ-ನಟಿಯರು, ರಾಜಕಾರಣಿಗಳು ವೇಣುಸ್ವಾಮಿ ಬಳಿ ವಿಶೇಷ ಪೂಜೆಗಳನ್ನು ಮಾಡಿಸಿಕೊಂಡಿದ್ದಾರೆ. ನಟಿ ರಶ್ಮಿಕಾ ಮಂದಣ್ಣ (Rashmika Mandanna) ಸಹ, ವೇಣುಸ್ವಾಮಿ ಬಳಿ ಪೂಜೆ ಮಾಡಿಸಿಕೊಂಡ ಬಳಿಕವೇ ಸ್ಟಾರ್ ನಟಿಯಾಗಿದ್ದು.

ಇದೀಗ ತೆಲುಗು ಚಿತ್ರರಂಗದಲ್ಲಿ ನಟಿ ಶ್ರೀಲೀಲಾ ಹೆಸರು ಬಲು ಜೋರಾಗಿ ಕೇಳಿ ಬರುತ್ತಿದೆ. ಹಾಗಾಗಿಯೇ ಜ್ಯೋತಿಷಿ ವೇಣುಸ್ವಾಮಿ, ಶ್ರೀಲೀಲಾ ಕುಂಡಲಿ ಪರಿಶೀಲಿಸಿ ಶ್ರೀಲೀಲಾ ಭವಿಷ್ಯ ಏನಾಗಿರಲಿದೆ ಎಂಬ ಊಹೆಯನ್ನು ಹೇಳಿದ್ದಾರೆ. ಯೂಟ್ಯೂಬ್ ಚಾನೆಲ್ ಒಂದರಲ್ಲಿ ಈ ಬಗ್ಗೆ ಮಾತನಾಡಿರುವ ವೇಣುಸ್ವಾಮಿ, ಶ್ರೀಲೀಲಾಗೆ ಈಗ ಯಾವ ಭುಕ್ತಿ ನಡೆಯುತ್ತಿದೆ ಇತ್ಯಾದಿಗಳನ್ನು ವಿವರಿಸಿದ್ದಾರೆ. ಜೊತೆಗೆ ಬರುವ ಕೆಲ ವರ್ಷಗಳು ಶ್ರೀಲೀಲಾ ಪಾಲಿಗೆ ಕೇವಲ ಅದೃಷ್ಟವನ್ನೇ ತರಲಿವೆ ಎಂದಿದ್ದಾರೆ.

”ಶ್ರೀಲೀಲಾ ಜಾತಕ ಸಾಮಾನ್ಯವಾದ ಜಾತಕವಲ್ಲ ಬಹಳ ಒಳ್ಳೆಯ ಅಪರೂಪದ ಜಾತಕ. ವಿದ್ಯೆ, ಹಣ, ಆಸ್ತಿ, ಹೆಸರು ಎಲ್ಲವನ್ನೂ ಪಡೆಯುವ ಜಾತಕ. ಶ್ರೀಲೀಲಾಗೆ ಮುಂದಿನ ಆರೇಳು ವರ್ಷಗಳು ಬಹಳ ಅದ್ಭುತವಾಗಿವೆ. ಮುಂದಿನ ಆರೇಳು ವರ್ಷಗಳಲ್ಲಿ ಶ್ರೀಲೀಲಾ ಕೇವಲ ಯಶಸ್ಸನ್ನಷ್ಟೆ ಗಳಿಸುತ್ತಾರೆ. ದಕ್ಷಿಣ ಭಾರತ ಚಿತ್ರರಂಗದಲ್ಲಿ ಏಕಮೇವಾಧಿಪತ್ಯವನ್ನು ಶ್ರೀಲೀಲಾ ಸಾಧಿಸುವ ಸಾಧ್ಯತೆಯೂ ಇದೆ” ಎಂದಿದ್ದಾರೆ ವೇಣು ಸ್ವಾಮಿ.

ಇದನ್ನೂ ಓದಿ:ಡಿಕೆ ಶಿವಕುಮಾರ್ ಬಗ್ಗೆ ಆಗಲೇ ಭವಿಷ್ಯ ನುಡಿದಿದ್ದರು ಸೆಲೆಬ್ರಿಟಿ ಜ್ಯೋತಿಷಿ ವೇಣುಸ್ವಾಮಿ

ಸೂಪರ್ ಸ್ಟಾರ್ ನಟಿ ನಯನತಾರಾ ಜಾತಕದಂತೆಯೇ ಶ್ರೀಲೀಲಾ ಜಾತಕವೂ ಇದೆ. ತೆಲುಗು ಚಿತ್ರರಂಗದಲ್ಲಿ ಕೆಲವು ನಟಿಯರು ಮಾತ್ರವೇ ಬಹಳ ವರ್ಷ ಉಳಿಯಲು ಸಾಧ್ಯವಾಗಿದೆ. ಅನುಷ್ಕಾ ಶೆಟ್ಟಿ, ಸಮಂತಾ, ನಯನತಾರಾ, ಕಾಜಲ್ ಅಗರ್ವಾಲ್ ಅವರುಗಳು ಮಾತ್ರವೇ ಹೆಚ್ಚು ಸಮಯ ತೆಲುಗು ಚಿತ್ರರಂಗದಲ್ಲಿ ಉಳಿದುಕೊಂಡಿದ್ದಾರೆ. ಅದೇ ಮಾದರಿಯಲ್ಲಿ ಶ್ರೀಲೀಲಾ ಸಹ ಹೆಚ್ಚು ಸಮಯ ತೆಲುಗು ಚಿತ್ರರಂಗದಲ್ಲಿ ಉಳಿದುಕೊಳ್ಳಲಿದ್ದಾರೆ ಮಾತ್ರವಲ್ಲದೆ ನೆರೆ ಹೊರೆಯ ಭಾಷೆಗಳ ಸಿನಿಮಾ ರಂಗದಲ್ಲಿಯೂ ಹೆಸರು ಗಳಿಸಲಿದ್ದಾರೆ ಎಂದಿದ್ದಾರೆ.

ವೇಣು ಸ್ವಾಮಿ, ತೆಲುಗು ಚಿತ್ರರಂಗದ ಹಲವು ಸೆಲೆಬ್ರಿಟಿಗಳ ಭವಿಷ್ಯ ನುಡಿದಿದ್ದಾರೆ. ಸಮಂತಾ-ನಾಗಚೈತನ್ಯ ವಿಚ್ಛೇದನ ಆಗಲಿದೆ ಎಂದು ಹಲವು ವರ್ಷಗಳ ಮುಂಚೆಯೇ ಹೇಳಿದ್ದರು. ರಶ್ಮಿಕಾ ಸ್ಟಾರ್ ಆಗುವ ಬಗ್ಗೆಯೂ ಹೇಳಿದ್ದರಲ್ಲದೆ ಅವರಿಗಾಗಿ ವಿಶೇಷ ಪೂಜೆ ಮಾಡಿದ್ದರು. ಪ್ರಭಾಸ್​ರ ಕೆಲ ಸಿನಿಮಾಗಳು ಫ್ಲಾಪ್ ಆಗುತ್ತವೆಂದು ಹೇಳಿದ್ದರು. ಇನ್ನೂ ಕೆಲವು ನಟ-ನಟಿಯರ ಬಗ್ಗೆ ಭವಿಷ್ಯವನ್ನು ವೇಣು ಸ್ವಾಮಿ ಈ ಹಿಂದೆ ಹೇಳಿದ್ದರು.

ಇನ್ನು ನಟಿ ಶ್ರೀಲೀಲಾ, ತೆಲುಗಿನ ಹೊಸ ಹಾಟ್ ಕೇಕ್ ಆಗಿದ್ದಾರೆ. ಒಬ್ಬರಾದ ಮೇಲೆ ಒಬ್ಬ ಸೂಪರ್ ಸ್ಟಾರ್​ ನಟರ ಸಿನಿಮಾಗಳಲ್ಲಿ ಶ್ರೀಲೀಲಾ ನಟಿಸುತ್ತಿದ್ದಾರೆ. ರವಿತೇಜ, ನಂದಮೂರಿ ಬಾಲಕೃಷ್ಣ ಇದೀಗ ಮಹೇಶ್ ಬಾಬು ಸಿನಿಮಾದಲ್ಲಿ ಶ್ರೀಲೀಲಾ ನಟಿಸುತ್ತಿದ್ದು, ಜೂ ಎನ್​ಟಿಆರ್ ಸಿನಿಮಾದಲ್ಲಿ ನಟಿಸಲು ಶ್ರೀಲೀಲಾಗೆ ಬುಲಾವ್ ಬಂದಿದೆ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ