AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆದಿಪುರುಷ್ ಬಗ್ಗೆ ಭವಿಷ್ಯ ನುಡಿದ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ

Venu Swamy: ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾ ಬಿಡುಗಡೆ ಬಗ್ಗೆ ತೆಲುಗು ರಾಜ್ಯಗಳ ಜನಪ್ರಿಯ ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ ನುಡಿದಿದ್ದಾರೆ.

ಆದಿಪುರುಷ್ ಬಗ್ಗೆ ಭವಿಷ್ಯ ನುಡಿದ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ
ವೇಣುಸ್ವಾಮಿ
ಮಂಜುನಾಥ ಸಿ.
|

Updated on: Jun 11, 2023 | 6:41 PM

Share

ತೆಲುಗು ರಾಜ್ಯಗಳ (Telugu States) ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ (Astrologer Venu Swamy) ಮತ್ತೆ ಸುದ್ದಿಗೆ ಬಂದಿದ್ದಾರೆ. ಈ ಹಿಂದೆ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಸೇರಿದಂತೆ ತೆಲುಗು ಚಿತ್ರರಂಗದ ಹಲವು ತಾರೆಯರಿಗೆ ಭವಿಷ್ಯ ಹೇಳಿ ವಿಶೇಷ ಪೂಜೆಗಳನ್ನು ಮಾಡಿಸಿರುವ ವೇಣು ಸ್ವಾಮಿ ಯೂಟ್ಯೂಬ್ ಚಾನೆಲ್ ಮೂಲಕ ಚಿತ್ರರಂಗದ ಹಲವು ತಾರೆಯರ ಭವಿಷ್ಯ ಹೇಳಿದ್ದಾರೆ. ಅವುಗಳಲ್ಲಿ ಹಲವರ ಬಗೆಗಿನ ಭವಿಷ್ಯ ನಿಜವಾಗಿದ್ದೂ ಇದೆ. ಇದೀಗ ವೇಣು ಸ್ವಾಮಿ ಅವರು ಪ್ರಭಾಸ್ ನಟನೆಯ ಆದಿಪುರುಷ್ (Adipurush) ಸಿನಿಮಾದ ಬಗ್ಗೆ ಭವಿಷ್ಯ ನುಡಿದಿದ್ದಾರೆ.

ಪ್ರಭಾಸ್ ನಟನೆಯ ಆದಿಪುರುಷ್ ಪ್ಯಾನ್ ಇಂಡಿಯಾ ಸಿನಿಮಾವು ಜೂನ್ 16 ರಂದು ವಿಶ್ವದಾದ್ಯಂತ ಸುಮಾರು 12,000 ಸ್ಕ್ರೀನ್​ಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದ ಮೇಲೆ ಭಾರಿ ಬಜೆಟ್ ವಿನಿಯೋಗಿಸಲಾಗಿದ್ದು ಭಾರತದ ಈವರೆಗಿನ ಅತಿ ಹೆಚ್ಚು ಬಜೆಟ್​ನ ಸಿನಿಮಾ ಇದಾಗಿದೆ. ಸಿನಿಮಾಕ್ಕೆ ಭರಪೂರ ಪ್ರಚಾರವನ್ನೂ ಚಿತ್ರತಂಡ ಮಾಡಿದೆ. ಸಿನಿಮಾ ಪಕ್ಕಾ ಬ್ಲಾಕ್ ಬಸ್ಟರ್ ಆಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಜ್ಯೋತಿಷಿ ವೇಣು ಸ್ವಾಮಿ ಬೇರೆಯದ್ದೇ ರೀತಿಯ ಭವಿಷ್ಯ ನುಡಿದಿದ್ದಾರೆ.

”ಆದಿಪುರುಷ್ ಸಿನಿಮಾ ಹಿಂದೂಪರ, ಶ್ರೀರಾಮನ ಕುರಿತಾದ ಸಿನಿಮಾ ಆಗಿದ್ದರೂ ಸಹ ಜನ ತುಂಬಾ ಆಸಕ್ತಿಯನ್ನು ಈ ಸಿನಿಮಾ ಬಗ್ಗೆ ತೋರಿಸುವುದಿಲ್ಲ. ಕಂಟೆಂಟ್ ಇಲ್ಲದ ಸಿನಿಮಾಗಳನ್ನು, ಗುಣಮಟ್ಟ ಇಲ್ಲದ ಸಿನಿಮಾಗಳನ್ನು ಜನ ನೋಡುವುದಿಲ್ಲ. ಅದು ಮಾತ್ರವೇ ಅಲ್ಲದೆ ಪ್ರಭಾಸ್ ಗ್ರಹಗತಿಗಳು ಸಹ ಸರಿಯಿಲ್ಲ. ಇದೇ ಕಾರಣದಿಂದ ಅವರ ಸಿನಿಮಾಗಳು ಸತತವಾಗಿ ಸೋಲುತ್ತಿವೆ. ಆದಿಪುರುಷ್ ಸಿನಿಮಾ ಬಾಹುಬಲಿಯಂತೆ ದೊಡ್ಡ ಯಶಸ್ಸು ಪಡೆಯುವುದಿಲ್ಲ” ಎಂದಿದ್ದಾರೆ.

ಇದನ್ನೂ ಓದಿ:Prabhas: ‘ಆದಿಪುರುಷ್​’ ಬಿಡುಗಡೆ ದಿನ ಪ್ರಭಾಸ್​ ಭಾರತದಲ್ಲಿ ಇರಲ್ಲ? ಅಮೆರಿಕಕ್ಕೆ ತೆರಳಿದ ಪ್ಯಾನ್​ ಇಂಡಿಯಾ ಸ್ಟಾರ್​

ಮಕ್ಕಳು ಸಿನಿಮಾ ನೋಡಿಬಿಟ್ಟರೆ ಸಿನಿಮಾ ದೊಡ್ಡ ಹಿಟ್ ಆಗಿಬಿಡುತ್ತದೆ ಎಂಬುದೆಲ್ಲ ಕೇವಲ ಊಹಾಪೋಹವಷ್ಟೆ. ಸಿನಿಮಾದ ಯಶಸ್ಸು ಸಹ ನಕ್ಷತ್ರಗಳು, ಗ್ರಹಗತಿಯನ್ನು ಆಧರಿಸಿರುತ್ತವೆ. ಸದ್ಯದ ಪರಿಸ್ಥಿತಿಯಲ್ಲಿ ಪ್ರಭಾಸ್ ಗ್ರಹಗತಿ ಸರಿಯಿಲ್ಲ. ಪ್ರಭಾಸ್ ಇದ್ದಾರೆಂಬ ಕಾರಣಕ್ಕೆ ಆದಿಪುರುಷ್ ಸಿನಿಮಾ ಹಿಟ್ ಆಗುವುದಿಲ್ಲ. ಈ ಹಿಂದೆ ಪ್ರಭಾಸ್ ನಟಿಸಿದ್ದ ರಾಧೆ-ಶ್ಯಾಮ್ ಹಾಗೂ ಸಾಹೋ ಸಿನಿಮಾಗಳ ಗತಿ ಏನಾಯ್ತೆಂಬುದನ್ನು ನಾವು ನೋಡಿದ್ದೇನೆ” ಎಂದಿದ್ದಾರೆ ವೇಣು ಸ್ವಾಮಿ.

ಜ್ಯೋತಿಷಿ ವೇಣು ಸ್ವಾಮಿ ತೆಲುಗು ರಾಜ್ಯಗಳ ಸೆಲೆಬ್ರಿಟಿ ಜ್ಯೋತಿಷಿ. ಹಲವು ದಶಕಗಳಿಂದಲೂ ಚಿತ್ರರಂಗದೊಟ್ಟಿಗೆ ವೇಣುಸ್ವಾಮಿ ಗುರುತಿಸಿಕೊಂಡಿದ್ದಾರೆ. ಸಿನಿಮಾಗಳಿಗೆ ಮುಹೂರ್ತ ಇಟ್ಟುಕೊಡುವುದು, ನಟ-ನಟಿಯರ ಭವಿಷ್ಯ ಹೇಳುವುದು ಇತ್ಯಾದಿಗಳನ್ನು ಮಾಡುತ್ತಾ ಬಂದಿದ್ದಾರೆ. ಆಂಧ್ರ-ತೆಲಂಗಾಣದ ಹಲವು ರಾಜಕಾರಣಿಗಳು, ಚಿತ್ರರಂಗದ ಸೆಲೆಬ್ರಿಟಿಗಳು ವೇಣುಸ್ವಾಮಿಯ ಭಕ್ತರ ಪಟ್ಟಿಯಲ್ಲಿದ್ದಾರೆ. ಸಮಂತಾ-ನಾಗ ಚೈತನ್ಯ ವಿಚ್ಛೇದನದ ಕುರಿತಾಗಿ ವೇಣುಸ್ವಾಮಿ ಭವಿಷ್ಯ ಹೇಳಿದ್ದರು. ಅಖಿಲ್ ಸಿನಿಮಾಗಳು ಸತತವಾಗಿ ಸೋಲುತ್ತವೆಂದೂ ಭವಿಷ್ಯ ಹೇಳಿದ್ದರು. ರಶ್ಮಿಕಾ ಮಂದಣ್ಣ ಇದೇ ವೇಣುಸ್ವಾಮಿ ಬಳಿ ವಿಶೇಷ ಪೂಜೆ ಮಾಡಿಸಿದ ಬಳಿಕ ಬೇಡಿಕೆಯ ನಟಿಯಾದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?