ಡಿಕೆ ಶಿವಕುಮಾರ್ ಬಗ್ಗೆ ಆಗಲೇ ಭವಿಷ್ಯ ನುಡಿದಿದ್ದರು ಸೆಲೆಬ್ರಿಟಿ ಜ್ಯೋತಿಷಿ ವೇಣುಸ್ವಾಮಿ

Astrologer Venu Swamy: ಆಂಧ್ರ-ತೆಲಂಗಾಣದ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ಡಿ.ಕೆ.ಶಿವಕುಮಾರ್ ಅವರೊಟ್ಟಿಗಿನ ವಿಡಿಯೋ ಒಂದನ್ನು ಹಂಚಿಕೊಂಡು, ಡಿಕೆಶಿ ಬಗ್ಗೆ ಮಾತೊಂದು ಹೇಳಿದ್ದಾರೆ.

ಡಿಕೆ ಶಿವಕುಮಾರ್ ಬಗ್ಗೆ ಆಗಲೇ ಭವಿಷ್ಯ ನುಡಿದಿದ್ದರು ಸೆಲೆಬ್ರಿಟಿ ಜ್ಯೋತಿಷಿ ವೇಣುಸ್ವಾಮಿ
ಡಿಕೆಶಿ-ವೇಣು ಸ್ವಾಮಿ
Follow us
ಮಂಜುನಾಥ ಸಿ.
|

Updated on: May 16, 2023 | 9:22 PM

ವೇಣುಸ್ವಾಮಿ (Venu Swamy), ತೆಲುಗು ಚಿತ್ರರಂಗ ಹಾಗೂ ರಾಜಕೀಯ ರಂಗದ ಸೆಲೆಬ್ರಿಟಿ ಜ್ಯೋತಿಷಿ (celebrity astrologer). ತೆಲುಗು ಚಿತ್ರರಂಗ ಹಾಗೂ ರಾಜಕೀಯ ರಂಗದೊಟ್ಟಿಗೆ ಸುಮಾರು ಮೂರು ದಶಕಗಳಿಗೂ ಹೆಚ್ಚು ಸಮಯದಿಂದ ಸಂಪರ್ಕದಲ್ಲಿರುವ ವೇಣುಸ್ವಾಮಿಯನ್ನು ಹಲವು ಸಿನಿಮಾ ತಾರೆಯರು, ರಾಜಕಾರಣಿಗಳು ನಂಬುತ್ತಾರೆ. ಹಲವು ಸಿನಿಮಾ ನಟರ ಜಾತಕವನ್ನು ವಿಶ್ಲೇಷಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಳ್ಳುತ್ತಾರೆ ವೇಣುಸ್ವಾಮಿ, ಬಹುತೇಕ ಸಂದರ್ಭಗಳಲ್ಲಿ ಅವರ ಭವಿಷ್ಯ ನಿಜವಾಗಿದೆ. ರಶ್ಮಿಕಾ ಮಂದಣ್ಣ ಸ್ಟಾರ್ ಆಗುವ ಮುನ್ನ ವಿಶೇಷ ಪೂಜೆ ಮಾಡಿಸಿದ್ದು ಇವರ ಬಳಿಯೇ. ಈಗ ಇದೇ ವೇಣುಸ್ವಾಮಿ ಡಿಕೆ.ಶಿವಕುಮಾರ್ (DK Shivakumar) ಜೊತೆಗಿನ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ವಿಡಿಯೋದಲ್ಲಿ ಬಹಳ ಹಿಂದೆಯೇ ಡಿಕೆಶಿ ಬಗ್ಗೆ ಮಾತೊಂದನ್ನು ಆಡಿದ್ದಾರೆ. ಅದು ಈಗ ನಿಜವಾಗಿದೆ.

ಡಿಕೆ ಶಿವಕುಮಾರ್ ಅವರೊಟ್ಟಿಗೆ ಸೆಲ್ಫಿ ವಿಡಿಯೋ ಮಾಡಿರುವ ವೇಣುಸ್ವಾಮಿ, ”ಡಿಕೆ ಶಿವಕುಮಾರ್ ಅವರು ಕರ್ನಾಟಕದಲ್ಲಿ ಸರ್ಕಾರ ತರಲು ಪೂರ್ಣಶಕ್ತಿ ತೊಡಗಿಸಿ ಪ್ರಯತ್ನ ಮಾಡುತ್ತಿದ್ದಾರೆ. ಮುಂದಿನ ಕಿಂಗ್ ಮೇಕರ್ ಡಿಕೆ ಶಿವಕುಮಾರ್” ಎಂದಿದ್ದಾರೆ. ವಿಡಿಯೋದಲ್ಲಿ ಡಿ.ಕೆ.ಶಿವಕುಮಾರ್ ಸಹ ಇದ್ದಾರೆ. ಈ ಕೆಲವೇ ಸೆಕೆಂಡ್​ಗಳ ವಿಡಿಯೋವನ್ನು ವೇಣು ಸ್ವಾಮಿ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವೇಣುಸ್ವಾಮಿ ಹಂಚಿಕೊಂಡಿರುವುದು ಹಳೆಯ ವಿಡಿಯೋ ಆಗಿದೆ. ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಅವಧಿಯ ವಿಡಿಯೋ ಇದಾಗಿದೆ ಎಂಬುದನ್ನು ಅವರ ಮುಖ ಚಹರೆ ನೋಡಿ ಊಹಿಸಬಹುದಾಗಿದೆ. ಆದರೆ ಅಂದು ವೇಣುಸ್ವಾಮಿ ನುಡಿದಿದ್ದ ಭವಿಷ್ಯ ಈಗ ನಿಜವಾಗಿದೆ. ಆದರೆ ವಿಡಿಯೋನಲ್ಲಿ ವೇಣುಸ್ವಾಮಿ, ಡಿಕೆಶಿಯನ್ನು ಕಿಂಗ್ ಎಂದಿಲ್ಲ, ಬದಲಗೆ ಕಿಂಗ್ ಮೇಕರ್ ಎಂದಿದ್ದಾರೆ. ಡಿಕೆ ಶಿವಕುಮಾರ್ ಸಿಎಂ ಆಗುವುದಿಲ್ಲವೇ ಎಂಬ ಅನುಮಾನ ಮೂಡಿಸುತ್ತಿದೆ ವೇಣುಸ್ವಾಮಿಯ ಆ ಕೊನೆಯ ಕೆಲ ಪದಗಳು.

ಡಿಕೆ.ಶಿವಕುಮಾರ್ ಅವರೊಟ್ಟಿಗಿನ ವಿಡಿಯೋ ಮಾತ್ರವೇ ಅಲ್ಲದೆ ಕೆಲವು ಹಳೆಯ ಫೋಟೊಗಳನ್ನು ಸಹ ವೇಣುಸ್ವಾಮಿ ಹಂಚಿಕೊಂಡಿದ್ದಾರೆ. ಡಿ.ಕೆ.ಶಿವಕುಮಾರ್ ಜೊತೆ ಆರಾಮ ಕುರ್ಚಿಯಲ್ಲಿ ಕುಳಿತು ಮಾತನಾಡುತ್ತಿರುವ ಚಿತ್ರ, ಅವರೊಟ್ಟಿಗೆ ವಾಕಿಂಗ್ ಮಾಡುತ್ತಿರುವ ಚಿತ್ರಗಳನ್ನು ವೇಣುಸ್ವಾಮಿ ಶೇರ್ ಮಾಡಿದ್ದಾರೆ. ಇದರ ಜೊತೆಗೆ ರಾಹುಲ್ ಗಾಂಧಿ ತಲೆ ಮೇಲೆ ಅಕ್ಷತೆ ಹಾಕುತ್ತಿರುವ ಫೋಟೊವನ್ನು ಸಹ ವೇಣುಸ್ವಾಮಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಮುಖ್ಯಮಂತ್ರಿ ಸ್ಥಾನ; ಪಟ್ಟುಬಿಡದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಬೆಂಬಲಿಗರು ಹೇಳೋದೇನು ನೋಡಿ

ವೇಣುಸ್ವಾಮಿ, ತೆಲುಗಿನ ಜನಪ್ರಿಯ ಜ್ಯೋತಿಷಿಗಳಲ್ಲಿ ಒಬ್ಬರು. ಸಾಮಾಜಿಕ ಜಾಲತಾಣದಲ್ಲಿ ಬಹಳ ಮಂದಿ ಫಾಲೋವರ್​ಗಳು ವೇಣುಸ್ವಾಮಿಗೆ ಇದ್ದಾರೆ. ಬಹಳ ಸಣ್ಣ ವಯಸ್ಸಿನಿಂದಲೂ ಪೂಜೆ, ಪುನಸ್ಕಾರಗಳಲ್ಲಿ ತೊಡಗಿಕೊಂಡಿರುವ ವೇಣುಸ್ವಾಮಿ ಬಹಳ ಹಿಂದೆಯೇ ಸಿನಿಮಾ ಮುಹೂರ್ತಗಳಲ್ಲಿ ಪೂಜೆಗಳನ್ನು ಮಾಡುತ್ತಿದ್ದವರು. ಮಹೇಶ್ ಬಾಬು ತಂದೆ ಕೃಷ್ಣ, ಸೀನಿಯರ್ ಎನ್​ಟಿಆರ್, ಚಿರಂಜೀವಿಯವರ ಆರಂಭದ ಸಿನಿಮಾಗಳ ಮುಹೂರ್ತ ಪೂಜೆಗಳನ್ನು ವೇಣುಸ್ವಾಮಿ ಮಾಡಿದ್ದಾರೆ. ಆ ಅಪರೂಪದ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಾತ್ರವಲ್ಲದೆ, ಸರ್ಕಾರದ ದೊಡ್ಡ ಕಾಮಗಾರಿಗಳ ಶಂಕುಸ್ಥಾಪನೆ ಪೂಜೆಯನ್ನು ವೇಣುಸ್ವಾಮಿ ಮಾಡಿದ್ದಾರೆ. ಅವುಗಳ ಚಿತ್ರಗಳೂ ಸಹ ವೇಣುಸ್ವಾಮಿಯ ಇನ್​ಸ್ಟಾಗ್ರಾಂ ಖಾತೆಯಲ್ಲಿವೆ.

ರಾಜಮೌಳಿ ಚಿತ್ರರಂಗದಲ್ಲಿ ದೊಡ್ಡ ಹಂತಕ್ಕೆ ಬೆಳೆಯುವ ಬಗ್ಗೆ, ಸಮಂತಾ ಹಾಗೂ ನಾಗ ಚೈತನ್ಯ ವಿಚ್ಛೇದನದ ಬಗ್ಗೆ, ಜೂ ಎನ್​ಟಿಆರ್ ದೊಡ್ಡ ಸ್ಟಾರ್ ಆಗುವ ಬಗ್ಗೆ ಇನ್ನೂ ಕೆಲವರ ಬಗ್ಗೆ ವೇಣುಸ್ವಾಮಿ ಭವಿಷ್ಯ ನುಡಿದಿದ್ದಾರೆ. ಆ ವಿಡಿಯೋಗಳನ್ನು ಯೂಟ್ಯೂಬ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಬಗ್ಗೆಯೂ ವೇಣುಸ್ವಾಮಿ ಭವಿಷ್ಯ ನುಡಿದಿದ್ದು, ಡಿಕೆ ಶಿವಕುಮಾರ್ ಕಿಂಗ್ ಆಗುತ್ತಾರೋ ಕಿಂಗ್ ಮೇಕರ್ ಆಗುತ್ತಾರೋ ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ