‘ಪುಷ್ಪ 3’ ಪಕ್ಕಾ, ವಿಲನ್ ಪಾತ್ರದಲ್ಲಿ ಸ್ಟಾರ್ ನಟ?
Pushpa 3: ‘ಪುಷ್ಪ 2’ ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇದೆ. ಇದೀಗ ‘ಪುಷ್ಪ 3’ ಬಗ್ಗೆ ಚರ್ಚೆ ಪ್ರಾರಂಭವಾಗಿದೆ. ‘ಪುಷ್ಪ 3’ ಸಿನಿಮಾನಲ್ಲಿ ತೆಲುಗಿನ ಖ್ಯಾತ ನಾಯಕ ನಟರೊಬ್ಬರು ವಿಲನ್ ಆಗಿ ನಟಿಸಲಿದ್ದಾರಂತೆ. ಯಾರದು?
‘ಪುಷ್ಪ 2’ ಸಿನಿಮಾ ಕೆಲವೇ ದಿನಗಳಲ್ಲಿ ತೆರೆಗೆ ಬರಲಿದೆ. ಸಿನಿಮಾದ ಪ್ರಚಾರವನ್ನು ಚಿತ್ರತಂಡ ಜೋರಾಗಿ ಮಾಡತ್ತಿದೆ. ಸಿನಿಮಾ ಡಿಸೆಂಬರ್ 05 ಕ್ಕೆ ಬಿಡುಗಡೆ ಆಗಲಿದ್ದು, ಸಿನಿಮಾ ಬಿಡುಗಡೆಗೆ ಮುಂಚೆಯೇ ಸುಮಾರು 1000 ಕೋಟಿ ಹಣ ಬಾಚಿಕೊಂಡಾಗಿದೆ. 2021 ರಲ್ಲಿ ಬಿಡುಗಡೆ ಆಗಿದ್ದ ‘ಪುಷ್ಪ’ ಸಿನಿಮಾದ ಮುಂದುವರೆದ ಭಾಗ ಇದಾಗಿದೆ. ಅಂದಹಾಗೆ ‘ಪುಷ್ಪ 2’ ಸಿನಿಮಾದ ಬಳಿಕ ಮುಂದಿನ ಭಾಗ ‘ಪುಷ್ಪ 3’ ಸಿನಿಮಾ ಸಹ ಬರಲಿದೆ ಎಂಬ ಸುದ್ದಿ ಹಬ್ಬಿದೆ. ಚಿತ್ರರಂಗದ ಕೆಲವರು ಹಾಕಿರುವ ಪೋಸ್ಟ್ಗಳು ಈ ಅನುಮಾನಕ್ಕೆ ಪುಷ್ಠಿ ಒದಗಿಸಿವೆ.
ಇದೀಗ ‘ಪುಷ್ಪ 3’ ಸಿನಿಮಾ ಬಗ್ಗೆ ಕ್ರೇಜಿ ಅಪ್ಡೇಟ್ ಒಂದು ಕೇಳಿ ಬಂದಿದೆ. ‘ಪಷ್ಪ 3’ ಸಿನಿಮಾದಲ್ಲಿ ತೆಲುಗು ಚಿತ್ರರಂಗದ ಸ್ಟಾರ್ ಹೀರೋ ಒಬ್ಬರು ವಿಲನ್ ಪಾತ್ರದಲ್ಲಿ ಮಿಂಚಲಿದ್ದಾರಂತೆ. ‘ಪುಷ್ಪ 2’ ಸಿನಿಮಾದಲ್ಲಿ ಅಲ್ಲು ಅರ್ಜುನ್ ಎದುರು ಖ್ಯಾತ ನಟ ಫಹಾದ್ ಫಾಸಿಲ್ ವಿಲನ್ ಆಗಿದ್ದಾರೆ. ಇದೀಗ ‘ಪುಷ್ಪ 3’ ಸಿನಿಮಾಕ್ಕೆ ಖ್ಯಾತ ನಟ ವಿಜಯ್ ದೇವರಕೊಂಡ ವಿಲನ್ ಆಗಲಿದ್ದಾರೆ. ತಮ್ಮ ಸಿನಿಮಾಗಳಲ್ಲಿ ಪವರ್ಫುಲ್ ಪಾತ್ರಗಳನ್ನು ಸೃಷ್ಟಿಸಿ ಅದಕ್ಕೆ ಪವರ್ಫುಲ್ ನಟರನ್ನು ಆಯ್ಕೆ ಮಾಡಿಕೊಳ್ಳುವುದು ನಿರ್ದೇಶಕ ಸುಕುಮಾರ್ ಶೈಲಿ. ಹಾಗಾಗಿ ಈಗ ‘ಪುಷ್ಪ 3’ ಸಿನಿಮಾಕ್ಕೆ ವಿಜಯ್ ದೇವರಕೊಂಡ ಅವರನ್ನು ವಿಲನ್ ಆಗಿ ಆರಿಸಿಕೊಂಡಿದ್ದಾರೆ.
‘ಪುಷ್ಪ 2’ ಸಿನಿಮಾದ ಬಳಿಕ ಸುಕುಮಾರ್ ನಿರ್ದೇಶನದ ಸಿನಿಮಾದಲ್ಲಿ ವಿಜಯ್ ದೇವರಕೊಂಡ ನಟಿಸಲಿದ್ದಾರೆ ಎನ್ನಲಾಗಿತ್ತು. ಸುಕುಮಾರ್ ಸಹ ಸಂದರ್ಶನವೊಂದರಲ್ಲಿ ವಿಷಯ ಹೇಳಿಕೊಂಡಿದ್ದರು. ಆದರೆ ಈಗ ವಿಜಯ್ ದೇವರಕೊಂಡ ಜೊತೆಗೆ ಪ್ರತ್ಯೇಕ ಸಿನಿಮಾ ಮಾಡುವ ಬದಲಿಗೆ, ಅವರನ್ನೂ ‘ಪುಷ್ಪ’ ಯೂನಿವರ್ಸ್ಗೆ ಸೇರಿಸಿಕೊಳ್ಳುತ್ತಿದ್ದಾರೆ ಸುಕುಮಾರ್.
ಇದನ್ನೂ ಓದಿ:‘ಪುಷ್ಪ 2’ ಚಿತ್ರದ 10 ಸಾವಿರ ಟಿಕೆಟ್ ಗಿವ್ಅವೇ ಕೊಟ್ಟ ಎಬಿ ಡಿವಿಲಿಯರ್ಸ್
ವಿಜಯ್ ದೇವರಕೊಂಡಗೆ ವಿಲನ್ ಪಾತ್ರಗಳು ಹೊಸದಲ್ಲ. ಚಿತ್ರರಂಗಕ್ಕೆ ಕಾಲಿಟ್ಟಾಗ ‘ಲೈಫ್ ಈಸ್ ಬ್ಯೂಟಿಫುಲ್’ ಸಿನಿಮಾನಲ್ಲಿ ವಿಲನ್ ರೀತಿಯ ಪಾತ್ರವೊಂದರಲ್ಲಿ ವಿಜಯ್ ದೇವರಕೊಂಡ ನಟಿಸಿದ್ದರು. ಆ ನಂತರ ಹೀರೋ ಆದ ವಿಜಯ್, ಇದೀಗ ‘ಪುಷ್ಪ 3’ ಮೂಲಕ ಮತ್ತೊಮ್ಮೆ ವಿಲನ್ ಆಗುತ್ತಿದ್ದಾರೆ. ಕೆಲ ಮೂಲಗಳ ಪ್ರಕಾರ, ವಿಜಯ್ ದೇವರಕೊಂಡ ಅವರದ್ದು ಔಟ್ ಆಂಟ್ ವಿಲನ್ ಪಾತ್ರದ ರೀತಿಯಲ್ಲಿ ಇರುವುದಿಲ್ಲವಂತೆ. ವಿಜಯ್ಗೆ ನಾಯಕಿ ಇರಲಿದ್ದಾರೆ, ಹಾಡುಗಳು ಸಹ ಇರಲಿವೆಯಂತೆ. ‘ಪುಷ್ಪ 3’ ಸಿನಿಮಾನಲ್ಲಿ ಇಬ್ಬರು ನಾಯಕರ ನಡುವೆ ಸ್ಪರ್ಧೆ-ಪ್ರತಿಸ್ಪರ್ಧೆ ನಡೆಯಲಿದೆಯಂತೆ.
ವಿಜಯ್ ದೇವರಕೊಂಡ ಹಾಗೂ ಅಲ್ಲು ಅರ್ಜುನ್ ಆತ್ಮೀಯ ಗೆಳೆಯರು. ವಿಜಯ್ ದೇವರಕೊಂಡ ನಾಯಕನಾದಾಗ ಅವರಿಗೆ ಅವರಿಗೆ ಬೆಂಬಲ ಕೊಟ್ಟ ನಟ ಅಲ್ಲು ಅರ್ಜುನ್. ವಿಜಯ್ ದೇವರಕೊಂಡ ಅವರ ‘ರೌಡಿ’ ಫ್ಯಾಷನ್ ಬ್ರ್ಯಾಂಡ್ನ ಪ್ರಚಾರವನ್ನೂ ಸಹ ಅಲ್ಲು ಅರ್ಜುನ್ ಮಾಡಿದ್ದರು. ಇದೀಗ ಈ ಇಬ್ಬರು ಒಟ್ಟಿಗೆ ನಟಿಸಲು ಸಜ್ಜಾಗಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:29 pm, Tue, 3 December 24