‘ವಿಜು ಮತ್ತು ನಾನು ಒಟ್ಟಿಗೆ ಬೆಳೆದವರು’: ದೇವರಕೊಂಡ ಬಗ್ಗೆ ರಶ್ಮಿಕಾ ಓಪನ್​ ಮಾತು

|

Updated on: Feb 01, 2024 | 11:46 AM

‘ಗೀತ ಗೋವಿಂದಂ’ ಮತ್ತು ‘ಡಿಯರ್​ ಕಾಮ್ರೇಡ್​’ ಚಿತ್ರಗಳಲ್ಲಿ ಜೋಡಿಯಾಗಿ ನಟಿಸಿದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ರಿಯಲ್​ ಲೈಫ್​ನಲ್ಲಿಯೂ ಬಹಳ ಆಪ್ತವಾಗಿದ್ದಾರೆ. ಆ ಕುರಿತು ರಶ್ಮಿಕಾ ಮಾತನಾಡಿದ್ದಾರೆ. ‘ನನ್ನ ಬದುಕಿನಲ್ಲಿ ವಿಜಯ್​ ದೇವರಕೊಂಡ ಅವರು ಎಲ್ಲರಿಗಿಂತ ಹೆಚ್ಚಾಗಿ ಬೆಂಬಲ ನೀಡಿದ್ದಾರೆ. ಹಾಗಾಗಿ ನಾನು ಅವರನ್ನು ನಿಜವಾಗಿಯೂ ಗೌರವಿಸುತ್ತೇನೆ’ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

‘ವಿಜು ಮತ್ತು ನಾನು ಒಟ್ಟಿಗೆ ಬೆಳೆದವರು’: ದೇವರಕೊಂಡ ಬಗ್ಗೆ ರಶ್ಮಿಕಾ ಓಪನ್​ ಮಾತು
ವಿಜಯ್​ ದೇವರಕೊಂಡ, ರಶ್ಮಿಕಾ ಮಂದಣ್ಣ
Follow us on

ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್​ ದೇವರಕೊಂಡ (Vijay Deverakonda) ಅವರು ಚಿತ್ರರಂಗದಲ್ಲಿ ಬೆಸ್ಟ್​ ಜೋಡಿಯಾಗಿ ಗುರುತಿಸಿಕೊಂಡಿದ್ದಾರೆ. ಅವರಿಬ್ಬರನ್ನು ತೆರೆಮೇಲೆ ಜೊತೆಯಾಗಿ ನೋಡಲು ಫ್ಯಾನ್ಸ್​ ಇಷ್ಟಪಡುತ್ತಾರೆ. ಅಲ್ಲದೇ ರಿಯಲ್​ ಲೈಫ್​ನಲ್ಲಿ ಕೂಡ ಅವರು ಮದುವೆ ಆಗಲಿ ಎಂಬುದು ಅಭಿಮಾನಿಗಳ ಆಸೆ. ತಾವಿಬ್ಬರು ಪರಸ್ಪರ ಪ್ರೀತಿಸುತ್ತಿದ್ದೇವೆ ಎಂದು ವಿಜಯ್​ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಅವರು ಎಲ್ಲಿಯೂ ಹೇಳಿಕೊಂಡಿಲ್ಲ. ಹಾಗಿದ್ದರೂ ಕೂಡ ತಮ್ಮ ಬದುಕಿನಲ್ಲಿ ವಿಜಯ್​ ದೇವರಕೊಂಡ ಓರ್ವ ಸ್ಪೆಷಲ್​ ವ್ಯಕ್ತಿ ಎಂದು ರಶ್ಮಿಕಾ ಹೇಳಿದ್ದಾರೆ. ಅಲ್ಲದೇ, ಅವರನ್ನು ವಿಜು ಎಂದು ಕೂಡ ಪ್ರೀತಿಯಿಂದ ಕರೆದಿದ್ದಾರೆ.

‘ವಿ ಆರ್​ ಯುವ’ ನಡೆಸಿದ ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ ಅವರು ವಿಜಯ್​ ದೇವರಕೊಂಡ ಬಗ್ಗೆ ಮಾತನಾಡಿದ್ದಾರೆ. ‘ನಾನು ಮತ್ತು ವಿಜು ಒಂದು ರೀತಿಯಲ್ಲಿ ಒಟ್ಟಿಗೆ ಬೆಳೆದವರು. ಈಗ ನಾನು ಮಾಡುತ್ತಿರುವ ಎಲ್ಲದರಲ್ಲೂ ಅವರ ಕೊಡುಗೆ ಇದೆ. ಎಲ್ಲ ಕೆಲಸದಲ್ಲೂ ನಾನು ಅವರ ಸಲಹೆ ಪಡೆಯುತ್ತೇನೆ. ಅವರ ಅಭಿಪ್ರಾಯ ನನಗೆ ಬೇಕು. ಎಲ್ಲದಕ್ಕೂ ಯೆಸ್​ ಎನ್ನುವ ವ್ಯಕ್ತಿ ಅವರಲ್ಲ. ಇದು ಒಳ್ಳೆಯದು, ಇದು ಕೆಟ್ಟದು, ಇದರ ಬಗ್ಗೆ ನನಗೆ ಹೀಗೆ ಅನಿಸುತ್ತಿದೆ ಅಂತ ಅವರು ತಮ್ಮ ಅಭಿಪ್ರಾಯ ತಿಳಿಸುತ್ತಾರೆ’ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

ಇದನ್ನೂ ಓದಿ: ಡೀಪ್​ಫೇಕ್ ವಿಡಿಯೋ ಬಗ್ಗೆ ರಶ್ಮಿಕಾ ಮಂದಣ್ಣ ಧ್ವನಿ ಎತ್ತಿದ್ದೇಕೆ? ನಟಿಯೇ ಕೊಟ್ಟರು ಉತ್ತರ

‘ನನ್ನ ಬದುಕಿನಲ್ಲಿ ವಿಜಯ್​ ದೇವರಕೊಂಡ ಅವರು ಎಲ್ಲರಿಗಿಂತ ಹೆಚ್ಚಾಗಿ ಬೆಂಬಲ ನೀಡಿದ್ದಾರೆ. ಹಾಗಾಗಿ ನಾನು ಅವರನ್ನು ನಿಜವಾಗಿಯೂ ಗೌರವಿಸುತ್ತೇನೆ’ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ‘ಗೀತ ಗೋವಿಂದಂ’, ‘ಡಿಯರ್​ ಕಾಮ್ರೇಡ್​’ ಸಿನಿಮಾದಲ್ಲಿ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಜೊತೆಯಾಗಿ ನಟಿಸಿದರು. ಅಲ್ಲಿಂದ ಅವರಿಬ್ಬರ ನಡುವೆ ಉತ್ತಮ ಬಾಂಧವ್ಯ ಬೆಳೆಯಿತು. ಇಬ್ಬರೂ ಕೂಡ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಹಲವು ಪ್ರಾಜೆಕ್ಟ್​ಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ.

ಇದನ್ನೂ ಓದಿ: ಡೀಪ್​ಫೇಕ್​ ಆರೋಪಿ ಅರೆಸ್ಟ್​; ಪೊಲೀಸರಿಗೆ ರಶ್ಮಿಕಾ ಧನ್ಯವಾದ

ಈ ವರ್ಷ ಫೆಬ್ರವರಿಯಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್​ ದೇವರಕೊಂಡ ಎಂಗೇಜ್​ಮೆಂಟ್​ ಮಾಡಿಕೊಳ್ಳಲಿದ್ದಾರೆ ಎಂದು ಸುದ್ದಿ ಹಬ್ಬಿತ್ತು. ಆದರೆ ಅದನ್ನು ಅವರು ತಳ್ಳಿಹಾಕಿದ್ದಾರೆ. ‘ನಾನು ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಅಥವಾ ಮದುವೆ ಮಾಡಿಕೊಳ್ಳುತ್ತಿಲ್ಲ. ಪ್ರತಿ ಎರಡು ವರ್ಷಕ್ಕೊಮ್ಮೆ ನಾನು ಮದುವೆ ಆಗಬೇಕು ಅಂತ ಮಾಧ್ಯಮದವರು ಬಯಸಿರಬಹುದು. ಪ್ರತಿ ವರ್ಷ ನನಗೆ ಇಂಥ ಗಾಸಿಪ್​ ಕೇಳಿಸುತ್ತದೆ’ ಎನ್ನುವ ಮೂಲಕ ವಿಜಯ್​ ದೇವರಕೊಂಡ ಅವರು ಎಂಗೇಜ್​ಮೆಂಟ್​ ಕುರಿತ ಗಾಳಿಸುದ್ದಿಗೆ ಫುಲ್​ಸ್ಟಾಪ್​ ಹಾಕಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ