AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kannada Serials TRP: ಕಿಚ್ಚನ ಕೊನೆಯ ಪಂಚಾಯ್ತಿಗೆ ಸಿಕ್ಕ ಟಿಆರ್​ಪಿ ಎಷ್ಟು? ಇಲ್ಲಿದೆ ವಿವರ..

ಕಿಚ್ಚನ ಕೊನೆಯ ಪಂಚಾಯ್ತಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಶನಿವಾರದ ಎಪಿಸೋಡ್​ಗೆ 8.8 ರೇಟಿಂಗ್ ಹಾಗೂ ಭಾನುವಾರ ಎಪಿಸೋಡ್​ಗೆ 8.7 ರೇಟಿಂಗ್ ಸಿಕ್ಕಿದೆ ಎಂಬುದು ವಿಶೇಷ. ಫಿನಾಲೆ ವಾರಗಳಲ್ಲಿ ಬಿಗ್ ಬಾಸ್ 7.4  ರೇಟಿಂಗ್ ಪಡೆದಿದೆ. ಈ ಮೂಲಕ ಒಳ್ಳೆಯ ರೀತಿಯಲ್ಲಿ ಬಿಗ್ ಬಾಸ್ ಪೂರ್ಣಗೊಂಡಿದೆ.

Kannada Serials TRP: ಕಿಚ್ಚನ ಕೊನೆಯ ಪಂಚಾಯ್ತಿಗೆ ಸಿಕ್ಕ ಟಿಆರ್​ಪಿ ಎಷ್ಟು? ಇಲ್ಲಿದೆ ವಿವರ..
ಸುದೀಪ್
ರಾಜೇಶ್ ದುಗ್ಗುಮನೆ
|

Updated on: Feb 01, 2024 | 12:29 PM

Share

‘ಬಿಗ್ ಬಾಸ್ ಕನ್ನಡ ಸೀಸನ್ 10’ (BBK 10) ಇತ್ತೀಚೆಗೆ ಪೂರ್ಣಗೊಂಡಿದೆ. ಕಳೆದ ಸೀಸನ್​ಗಳಿಗೆ ಹೋಲಿಕೆ ಮಾಡಿದರೆ ಈ ಬಾರಿಯ ಸೀಸನ್ ಹೆಚ್ಚು ಟಿಆರ್​ಪಿ ಪಡೆದಿದೆ. ಈ ಸೀಸನ್​ನ ವೀಕೆಂಡ್ ಎಪಿಸೋಡ್​ಗಳು 9+ ಟಿಆರ್​ಪಿ ಪಡೆದ ಉದಾಹರಣೆ ಇದೆ. ಈಗ ಕೊನೆಯ ಪಂಚಾಯ್ತಿಯ ಟಿಆರ್​ಪಿ ಹೊರ ಬಿದ್ದಿದೆ. ಈ ವೇಳೆಯೂ ಭರ್ಜರಿ ಟಿಆರ್​ಪಿ ಪಡೆದೇ ಬಿಗ್ ಬಾಸ್ ಕೊನೆಗೊಂಡಿದೆ. ಇದು ಕಲರ್ಸ್ ಕನ್ನಡ ವಾಹಿನಿಯ ಖುಷಿ ಹೆಚ್ಚಿಸಿದೆ. ಕೊನೆಯ ವಾರವೂ ಉತ್ತಮ ರೇಟಿಂಗ್ ಪಡೆಯಲು ಬಿಗ್ ಬಾಸ್ ಯಶಸ್ವಿ ಆಗಿದೆ.

ಕಿಚ್ಚನ ಕೊನೆಯ ಪಂಚಾಯ್ತಿಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಶನಿವಾರದ ಎಪಿಸೋಡ್​ಗೆ 8.8 ರೇಟಿಂಗ್ ಹಾಗೂ ಭಾನುವಾರ ಎಪಿಸೋಡ್​ಗೆ 8.7 ರೇಟಿಂಗ್ ಸಿಕ್ಕಿದೆ. ಫಿನಾಲೆ ವಾರಗಳಲ್ಲಿ ಬಿಗ್ ಬಾಸ್ 7.4  ರೇಟಿಂಗ್ ಪಡೆದಿದೆ. ಈ ಮೂಲಕ ಒಳ್ಳೆಯ ರೀತಿಯಲ್ಲಿ ಬಿಗ್ ಬಾಸ್ ಕೊನೆಗೊಂಡಂತೆ ಆಗಿದೆ. ಫಿನಾಲೆ ವಾರದ ಟಿಆರ್​ಪಿ ಮುಂದಿನ ವಾರ ಹೊರ ಬೀಳಲಿದೆ.

ಧಾರಾವಾಹಿಗಳ ಟಿಆರ್​ಪಿ

ನಗರ ಭಾಗದ ಟಿಆರ್​ಪಿಯಲ್ಲಿ ಮೊದಲ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೆ. ‘ಗಟ್ಟಿಮೇಳ’ ಈ ಮೊದಲು ಎರಡನೇ ಸ್ಥಾನ ಕಾಪಾಡಿಕೊಳ್ಳುತ್ತಾ ಬರುತ್ತಿತ್ತು. ಆ ಧಾರಾವಾಹಿ ಪೂರ್ಣಗೊಂಡಿದ್ದು, ‘ಲಕ್ಷ್ಮೀ ನಿವಾಸ’ ಪ್ರಾರಂಭ ಆಗಿದೆ. ಈ ಧಾರಾವಾಹಿಗೆ ಜನಮೆಚ್ಚುಗೆ ಸಿಕ್ಕಿದೆ. ಈ ಮೂಲಕ ಮೊದಲ ಸ್ಥಾನ ಸಿಕ್ಕಿದೆ. ‘ಪುಟ್ಟಕ್ಕನ ಮಕ್ಕಳು’ ಮೊದಲ ಸ್ಥಾನದಲ್ಲಿ ಮುಂದುವರಿಯುತ್ತಾ ಬರುತ್ತಿತ್ತು. ‘ಲಕ್ಷ್ಮೀ ನಿವಾಸ’ ಧಾರಾವಾಹಿ ‘ಗಟ್ಟಿಮೇಳ’ವನ್ನು ಹಿಂದಿಕ್ಕಿದೆ.

ಮೂರನೇ ಸ್ಥಾನದಲ್ಲಿ ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿ ಇದೆ.  ಪ್ರಬುದ್ಧ ಪ್ರೇಮಕಥೆಯನ್ನು ಈ ಧಾರಾವಾಹಿ ಹೊಂದಿದೆ. ನಂತರದ ಸ್ಥಾನದಲ್ಲಿ ಅಂದರೆ ನಾಲ್ಕನೇ ಸ್ಥಾನದಲ್ಲಿ ‘ಸತ್ಯ’ ಧಾರಾವಾಹಿ ಇದೆ. ಐದನೇ ಸ್ಥಾನದಲ್ಲಿ ಕಲರ್ಸ್ ಕನ್ನಡದ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಇದೆ. ಸುದರ್ಶನ್, ಸುಷ್ಮಾ ರಾವ್ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: ಬಾತ್​ರೂಂನಲ್ಲೂ ಇಡಲಾಗಿತ್ತು ಮೈಕ್ರೋಫೋನ್; ‘ಬಿಗ್ ಬಾಸ್’ ಮುಗಿದಮೇಲೆ ಗೊತ್ತಾಯ್ತು ವಿಚಾರ

‘ಸೀತಾ ರಾಮ’ ಹಾಗೂ ‘ಅಮೃತಧಾರೆ’ ಧಾರಾವಾಹಿಗಳ ಟಿಆರ್​ಪಿ ಕಡಿಮೆ ಆಗಿದೆ. ಈ ಧಾರಾವಾಹಿ ಮೊದಲಿನ ಚಾರ್ಮ್ ಉಳಿಸಿಕೊಂಡಿಲ್ಲ. ಮುಂದಿನ ದಿನಗಳಲ್ಲಿ ಈ ಧಾರಾವಾಹಿಗಳು ಹೆಚ್ಚಿನ ಟಿಆರ್​ಪಿ ಪಡೆಯಲಿವೆಯೇ ಎನ್ನುವ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More