
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ಅವರು ನಿಶ್ಚಿತಾರ್ಥ ಮಾಡಿಕೊಂಡಿರುವ ಸುದ್ದಿ ಇತ್ತೀಚೆಗೆ ಜೋರಾಗಿದೆ. ಹೋದಲ್ಲೆಲ್ಲ ರಶ್ಮಿಕಾ ಮಂದಣ್ಣ ಅವರಿಗೆ ಈ ಬಗ್ಗೆ ಪ್ರಶ್ನೆಗಳು ಎದುರಾಗುತ್ತಾ ಇವೆ. ಆದರೆ, ರಶ್ಮಿಕಾ ಮಂದಣ್ಣ ಮಾತ್ರ ನಾಚುತ್ತಲೇ, ಪರೋಕ್ಷವಾಗಿ ಈ ವಿಚಾರವನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈಗ ಇವರ ಮಧ್ಯೆ ಅದೆಂಥ ಬಾಂಧವ್ಯ ಇದೆ ಎಂಬುದನ್ನು ತೋರಿಸುವ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ವಿಜಯ್ ಅವರು ರಶ್ಮಿಕಾ ಕೈಗೆ ಮುತ್ತು ಕೊಟ್ಟಿದ್ದಾರೆ.
ರಶ್ಮಿಕಾ ಮಂದಣ್ಣ ನಟನೆಯ ‘ದಿ ಗರ್ಲ್‌ಫ್ರೆಂಡ್’ ಸಿನಿಮಾ ಕಳೆದ ವಾರ ರಿಲೀಸ್ ಆಗಿದೆ. ಈ ಚಿತ್ರಕ್ಕೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಈ ಚಿತ್ರ ತಂಡ ನವೆಂಬರ್ 12ರಂದು ಹೈದರಾಬಾದ್ನಲ್ಲಿ ಸಕ್ಸಸ್ ಮೀಟ್ ಆಯೋಜನೆ ಮಾಡಿತ್ತು. ಇದಕ್ಕೆ ವಿಜಯ್ ದೇವರಕೊಂಡ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅವರು ಬರುತ್ತಿದ್ದಂತೆ ರಶ್ಮಿಕಾನ ಹುಡುಕಾಡಿದ್ದಾರೆ.
ರಶ್ಮಿಕಾ ಕಾಣುತ್ತಿದ್ದಂತೆ ವಿಜಯ್ ದೇವರಕೊಂಡ ಅವರು ಓಡೋಡಿ ಬಂದರು. ಆ ಬಳಿಕ ರಶ್ಮಿಕಾ ಕೈಗೆ ಮುತ್ತಿಟ್ಟರು. ಇದರಿಂದ ರಶ್ಮಿಕಾ ಕೂಡ ಖುಷಿಪಟ್ಟರು. ಈ ವಿಡಿಯೋ ವೈರಲ್ ಆಗಿದ್ದು, ಫ್ಯಾನ್ಸ್ ಖುಷಿಯಿಂದ ಕಮೆಂಟ್ ಮಾಡುತ್ತಿದ್ದಾರೆ. ಇವರದ್ದು ಬೆಸ್ಟ್ ಜೋಡಿ ಎಂದು ಅನೇಕರು ಕರೆದಿದ್ದಾರೆ.
ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಚಿತ್ರಕ್ಕೂ ತಟ್ಟಿದ ದೆಹಲಿ ಬಾಂಬ್ ಬ್ಲಾಸ್ ಪ್ರಕರಣದ ಬಿಸಿ
ಸಾಮಾನ್ಯವಾಗಿ ಸೆಲೆಬ್ರಿಟಿಗಳು ಎದುರು-ಬದುರು ಸಿಕ್ಕಾಗ ಪ್ರೀತಿಯಿಂದ ಹಗ್ ಮಾಡಿಕೊಳ್ಳೋದು ಸಾಮಾನ್ಯ. ಯಾರೂ ಮುತ್ತುಕೊಳ್ಳಲು ಹೋಗೋದಿಲ್ಲ. ಈಗ ವಿಜಯ್ ಹಾಗೂ ರಶ್ಮಿಕಾ ತಮ್ಮ ಸಂಬಂಧವನ್ನು ಅಧಿಕೃತ ಮಾಡಬೇಕು ಎಂಬ ನಿರ್ಧಾರಕ್ಕೆ ಬಂದಂತೆ ಇದೆ. ಈ ಕಾರಣದಿಂದಲೇ ಅವರು ಓಪನ್ ಆಗಿ ಕಿಸ್ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.
ದಿ ಗರ್ಲ್‌ಫ್ರೆಂಡ್ ಸಿನಿಮಾ ಯಾವುದೇ ಸ್ಟಾರ್ಗಳು ಇಲ್ಲದೆ ಸಿದ್ಧವಾದ ಸಿನಿಮಾ ರಶ್ಮಿಕಾ ಜೊತೆ ಕನ್ನಡದ ದೀಕ್ಷಿತ್ ಶೆಟ್ಟಿ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಸುಮಾರು 10 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಚಿತ್ರ ದಿನ ಕಳೆದಂತೆ ಒಳ್ಳೆಯ ಗಳಿಕೆ ಮಾಡುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.