AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲ್ಯಾಣ್ ಕುಮಾರ್ ಬಗ್ಗೆ ರಾಜ್​ಕುಮಾರ್ ಮಾತನಾಡಿದ ಅಪರೂಪದ ವಿಡಿಯೋ

Rajkumar: 60 ಹಾಗೂ 70ರ ದಶಕದಲ್ಲಿ ಕಲ್ಯಾಣ್ ಕುಮಾರ್ ಹಾಗೂ ರಾಜ್​ಕುಮಾರ್ ಅವರು ಚಿತ್ರರಂಗ ಡಾಮಿನೇಟ್ ಮಾಡಿದ್ದರು. ಕಲ್ಯಾಣ್ ಅವರು ನಟನೆ ಜೊತೆಗೆ ಸಿನಿಮಾ ನಿರ್ದೇಶನ, ನಿರ್ಮಾಣದಲ್ಲೂ ತೊಡಗಿಕೊಂಡಿದ್ದರು. ಅವರು 1999ರಲ್ಲಿ ನಿಧನ ಹೊಂದಿದಾಗ ರಾಜ್​ಕುಮಾರ್ ಅವರು ಕಣ್ಣೀರು ಹಾಕುತ್ತಾ ಮಾತನಾಡಿದ್ದರು.

ಕಲ್ಯಾಣ್ ಕುಮಾರ್ ಬಗ್ಗೆ ರಾಜ್​ಕುಮಾರ್ ಮಾತನಾಡಿದ ಅಪರೂಪದ ವಿಡಿಯೋ
ಕಲ್ಯಾಣ್- ರಾಜ್​ಕುಮಾರ್
 ಶ್ರೀಲಕ್ಷ್ಮೀ ಎಚ್
| Edited By: |

Updated on:Nov 13, 2025 | 7:50 AM

Share

ಕನ್ನಡದ ಚಿತ್ರರಂಗದಲ್ಲಿ ರಾಜ್​ಕುಮಾರ್ ಅವರು ಸಾಕಷ್ಟು ಹೆಸರು ಮಾಡಿದ್ದರು. ಅದೇ ರೀತಿ ನಟ ಕಲ್ಯಾಣ್ ಕುಮಾರ್ ಕೂಡ ಸಾಕಷ್ಟು ಹೆಸರು ಮಾಡಿದ್ದರು. ಅವರು ಕನ್ನಡದಲ್ಲಿ ಹಲವು ಹಿಟ್ ಚಿತ್ರಗಳನ್ನು ನೀಡಿದ್ದರು. 71ನೇ ವಯಸ್ಸಿಗೆ ಕಲ್ಯಾಣ್ ನಿಧನ ಹೊಂದಿದರು. ಅವರ ನಿಧನದ ಬಳಿಕ ರಾಜ್​ಕುಮಾರ್ ಅವರು ಕಲ್ಯಾಣ್ ಬಗ್ಗೆ ಮಾತನಾಡಿದ್ದರು. ಇದರ ಅಪರೂಪದ ವಿಡಿಯೋ ವೈರಲ್ ಆಗಿದೆ. ಈ ವೇಳೆ ರಾಜ್​ಕುಮಾರ್ ಭಾವುಕರಾಗಿದ್ದರು.

60 ಹಾಗೂ 70ರ ದಶಕದಲ್ಲಿ ಕಲ್ಯಾಣ್ ಕುಮಾರ್ ಹಾಗೂ ರಾಜ್​ಕುಮಾರ್ ಅವರು ಚಿತ್ರರಂಗ ಡಾಮಿನೇಟ್ ಮಾಡಿದ್ದರು. ಕಲ್ಯಾಣ್ ಅವರು ನಟನೆ ಜೊತೆಗೆ ಸಿನಿಮಾ ನಿರ್ದೇಶನ, ನಿರ್ಮಾಣದಲ್ಲೂ ತೊಡಗಿಕೊಂಡಿದ್ದರು. ಅವರು 1999ರಲ್ಲಿ ನಿಧನ ಹೊಂದಿದಾಗ ರಾಜ್​ಕುಮಾರ್ ಅವರು ಕಣ್ಣೀರು ಹಾಕುತ್ತಾ ಮಾತನಾಡಿದ್ದರು. ಆ ಅಪರೂಪದ ವಿಡಿಯೋ ಇಲ್ಲಿದೆ.

‘ದೊಡ್ಡ ವ್ಯಕ್ತಿ, ಆತ್ಮೀಯರು. ಬೇಡರ ಕಣ್ಣಪ್ಪ ಸಿನಿಮಾ ಸಂದರ್ಭದಲ್ಲಿ ಮೂರು ಕುಮಾರಗಳು ಒಟ್ಟಿಗೆ ಸೇರಿದ್ದೆವು. ಉದಯ್ ಕುಮಾರ್ ಹೊರಟು ಹೋದ್ರು. ಇವರೂ ಎದ್ದುಬಿಟ್ಟರು. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ರಾಜ್​ಕುಮಾರ್ ಹೇಳುವುದನ್ನು ವಿಡಿಯೋದಲ್ಲಿ ಕಾಣಬಹುದು. ‘ಆತ್ಮವನ್ನು ನೋಡಿದವರು ಯಾರೂ ಇಲ್ಲ. ಬದುಕಿರುವಾಗಲೇ ಏನಿದೆ ಅನ್ನೋದು ಗೊತ್ತಾಗುತ್ತಿತ್ತು. ಕರೆಂಟೇ ಹೋದ್ಮೇಲೆ ಏನೇ ಹೇಳಿದ್ರೂ ವೇಸ್ಟ್. ನೆನಪೊಂದೇ ಯಾವಾಗಲೂ ಇರುತ್ತೆ’ ಎಂದಿದ್ದರು ರಾಜ್​ಕುಮಾರ್. ಲಿಂಕ್ ನೋಡಲು ಇಲ್ಲಿ ಕ್ಲಿಕ್ ಮಾಡಿ.

ರಾಜ್​ಕುಮಾರ್ ಅವರಿಗೆ ಎಲ್ಲಾ ಕಲಾವಿದರ ಬಗ್ಗೆ ಒಳ್ಳೆಯ ಭಾವನೆ ಇತ್ತು. ಯಾವುದೇ ಕಲಾವಿದರ ಬಗ್ಗೆ ಅವರು ಕೆಟ್ಟದಾಗಿ ಮಾತನಾಡಿದವರಲ್ಲ. ಎಲ್ಲಾ ಕಲಾವಿದರನ್ನು ಸಮವಾಗಿ ಕಾಣುತ್ತಿದ್ದರು. ಹೊಸ ಕಲಾವಿದರನ್ನು ಕೂಡ ಅವರು ತುಂಬಾನೇ ಗೌರವ ನೀಡುತ್ತಿದ್ದರು.  ರಾಜ್​ಕುಮಾರ್ ಹಾಕಿಕೊಟ್ಟ ಮಾರ್ಗದರ್ಶನ ಅನೇಕರಿಗೆ ಸ್ಫೂರ್ತಿದಾಯಕವಾಗಿದೆ.

ಇದನ್ನೂ ಓದಿ: ಪುನೀತ್ ರಾಜ್​ಕುಮಾರ್ ಪುಣ್ಯಸ್ಮರಣೆ; ನಾಲ್ಕು ವರ್ಷಗಳ ಹಿಂದೆ ನಿಜಕ್ಕೂ ನಡೆದಿದ್ದೇನು?

ರಾಜ್​ಕುಮಾರ್ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಅವರ ಕುಟುಂಬದವರು ಹಾಗೂ ಕುಟುಂಬ ಸಾಗುತ್ತದೆ. ರಾಜ್​ಕುಮಾರ್ ಪುತ್ರ ಪುನೀತ್ ರಾಜ್​ಕುಮಾರ್ ಅವರು ಸರಳತೆಗೆ ಮತ್ತೊಂದು ಹೆಸರಾಗಿದ್ದರು. ಅವರು ಕೂಡ ನಮ್ಮನ್ನು ಬಿಟ್ಟು ಹೋಗಿದ್ದು ಬೇಸರದ ವಿಚಾರ. ಶಿವಣ್ಣ ಅವರು ಸಿನಿಮಾಗಳನ್ನು ಮಾಡುತ್ತಿದ್ದಾರೆ. ರಾಜ್​ಕುಮಾರ್ ಮೊಮ್ಮಕ್ಕಳು ಕೂಡ ಚಿತ್ರರಂಗಕ್ಕೆ ಬಂದು ಹೆಸರು ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:49 am, Thu, 13 November 25

ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು