AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಶ್ಮಿಕಾಗೆ ಅತ್ಯಂತ ಅಮೂಲ್ಯ ಉಡುಗೊರೆ ಕೊಟ್ಟ ವಿಜಯ್ ತಾಯಿ, ಭಾವುಕರಾದ ನಟಿ

Vijay Deverakonda and Rashmika Mandanna: ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ರಾಜಸ್ಥಾನದ ಉದಯಪುರದ ಅದ್ಧೂರಿ ಅರಮನೆಯಂಥಹ ರೆಸಾರ್ಟ್​​ನಲ್ಲಿ ಆಗುತ್ತಿದೆ. ಈ ಮದುವೆಯಲ್ಲಿ ರಶ್ಮಿಕಾ ಮತ್ತು ವಿಜಯ್ ಅವರ ಕುಟುಂಬ ಸದಸ್ಯರು, ಅತ್ಯಾಪ್ತ ಗೆಳೆಯರು ಮಾತ್ರವೇ ಭಾಗವಹಿಸಿದ್ದಾರೆ. ಎರಡೂ ಕುಟುಂಬದವರು ಪರಸ್ಪರ ಗೇಮ್​​​ಗಳನ್ನು ಆಡಿದ್ದಾರೆ. ಮೆಹಂದಿ, ಹಳದಿ, ಸಂಗೀತ್ ಕಾರ್ಯಕ್ರಮಗಳನ್ನು ಆಯೋಜಿಸಿ ಸಖತ್ ಎಂಜಾಯ್ ಮಾಡಿದ್ದಾರೆ. ಈ ಎಂಜಾಯ್​​ಮೆಂಟ್​​ಗಳ ಮಧ್ಯೆ ರಶ್ಮಿಕಾಗೆ ವಿಜಯ್ ತಾಯಿ ಅತ್ಯಂತ ಅಮೂಲ್ಯವಾದ ಉಡುಗೊರೆಯೊಂದನ್ನು ನೀಡಿದ್ದಾರೆ. ಉಡುಗೊರೆ ಪಡೆದ ರಶ್ಮಿಕಾ ಭಾವುಕರಾಗಿದ್ದಾರೆ.

ರಶ್ಮಿಕಾಗೆ ಅತ್ಯಂತ ಅಮೂಲ್ಯ ಉಡುಗೊರೆ ಕೊಟ್ಟ ವಿಜಯ್ ತಾಯಿ, ಭಾವುಕರಾದ ನಟಿ
Vijay Rash
ಮಂಜುನಾಥ ಸಿ.
|

Updated on: Feb 26, 2026 | 7:21 AM

Share

ರಶ್ಮಿಕಾ ಮಂದಣ್ಣ (Rashmika Mandanna) ಇನ್ನು ಮುಂದೆ ತೆಲಂಗಾಣದ ಸೊಸೆ. ವಿಜಯ್ ದೇವರಕೊಂಡ ಅವರೊಟ್ಟಿಗೆ ಮದುವೆ ಆಗುತ್ತಿರುವ ರಶ್ಮಿಕಾ ತೆಲುಗು ಮನೆ ಸೇರುತ್ತಿದ್ದಾರೆ. ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ರಾಜಸ್ಥಾನದ ಉದಯಪುರದ ಅದ್ಧೂರಿ ಅರಮನೆಯಂಥಹ ರೆಸಾರ್ಟ್​​ನಲ್ಲಿ ಆಗುತ್ತಿದೆ. ಈ ಮದುವೆಯಲ್ಲಿ ರಶ್ಮಿಕಾ ಮತ್ತು ವಿಜಯ್ ಅವರ ಕುಟುಂಬ ಸದಸ್ಯರು, ಅತ್ಯಾಪ್ತ ಗೆಳೆಯರು ಮಾತ್ರವೇ ಭಾಗವಹಿಸಿದ್ದಾರೆ. ಎರಡೂ ಕುಟುಂಬದವರು ಪರಸ್ಪರ ಗೇಮ್​​​ಗಳನ್ನು ಆಡಿದ್ದಾರೆ. ಮೆಹಂದಿ, ಹಳದಿ, ಸಂಗೀತ್ ಕಾರ್ಯಕ್ರಮಗಳನ್ನು ಆಯೋಜಿಸಿ ಸಖತ್ ಎಂಜಾಯ್ ಮಾಡಿದ್ದಾರೆ. ಈ ಎಂಜಾಯ್​​ಮೆಂಟ್​​ಗಳ ಮಧ್ಯೆ ರಶ್ಮಿಕಾಗೆ ವಿಜಯ್ ತಾಯಿ ಅತ್ಯಂತ ಅಮೂಲ್ಯವಾದ ಉಡುಗೊರೆಯೊಂದನ್ನು ನೀಡಿದ್ದಾರೆ. ಉಡುಗೊರೆ ಪಡೆದ ರಶ್ಮಿಕಾ ಭಾವುಕರಾಗಿದ್ದಾರೆ.

ರಶ್ಮಿಕಾ ಮಂದಣ್ಣ ಅವರಿಗೆ ವಿಜಯ್ ದೇವರಕೊಂಡ ಅವರ ತಾಯಿ, ತಮ್ಮ ಕುಟುಂಬದಲ್ಲಿ ತಲೆ ತಲೆಮಾರುಗಳಿಂದಲೂ ಬಳುವಳಿಯಾಗಿ ಬಂದಿರುವ ಚಿನ್ನದ ಬಳೆಗಳನ್ನು ನೀಡಿದ್ದಾರೆ. ಈ ಬಳೆಗಳು ಕೆಲವು ತಲೆಮಾರುಗಳಿಂದಲೂ ಕುಟುಂಬದ ಸೊಸೆಯಾಗಿ ಬಂದವರಿಗೆ ಕೊಡಲಾಗುತ್ತಿದೆಯಂತೆ. ಅಂತೆಯೇ ಇದೀಗ ವಿಜಯ್ ದೇವರಕೊಂಡ ಅವರ ತಾಯಿ ಮಾಧವಿ ದೇವರಕೊಂಡ ತಮ್ಮ ಕುಟುಂಬದ ದೊಡ್ಡ ಸೊಸೆ ಆಗುತ್ತಿರುವ ರಶ್ಮಿಕಾ ಮಂದಣ್ಣಗೆ ಬಳೆಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ಸಂಗೀತ್ ಕಾರ್ಯಕ್ರಮದಲ್ಲಿ ಮಾಧವಿ ಅವರು ಸೊಸೆಗೆ ಬಳೆಗಳನ್ನು ಉಡುಗೊರೆಯಾಗಿ ನೀಡಿದ್ದು, ಹಲವು ತಲೆಮಾರುಗಳನ್ನು ಕಂಡಿರುವ, ದೇವರಕೊಂಡ ಕುಟುಂಬದ ಐತಿಹಾಸಿಕ ಮೌಲ್ಯವನ್ನು ಒಳಗೊಂಡಿರುವ ಸುಂದರವಾದ, ಅತ್ಯಂತ ಅಮೂಲ್ಯವೂ ಅಪರೂಪವೂ ಆಗಿರುವ ಬಳೆಗಳನ್ನು ಪಡೆದು ರಶ್ಮಿಕಾ ಅವರು ಭಾವುಕರಾಗಿ, ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ:ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಮದುವೆಗೆ ತೆರಳಿದ ಆಶಿಕಾ ರಂಗನಾಥ್

ಅಂದಹಾಗೆ ವಿಜಯ್ ಅವರ ಪೋಷಕರು ರಶ್ಮಿಕಾಗೆ ಹೊಸಬರೇನೂ ಅಲ್ಲ. ಕಳೆದ ಕೆಲ ವರ್ಷಗಳಿಂದಲೂ ಸಹ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ಅವರ ಕುಟುಂಬದ ನಡುವೆ ಬಹಳ ಆತ್ಮೀಯತೆ ಅನ್ಯೋನ್ಯತೆ ಇದೆ. ಕೆಲ ವರ್ಷಗಳಿಂದಲೂ ಎಲ್ಲ ಹಬ್ಬಗಳನ್ನು ರಶ್ಮಿಕಾ, ವಿಜಯ್ ದೇವರಕೊಂಡ ಮನೆಯಲ್ಲಿಯೇ ಆಚರಿಸುತ್ತಿದ್ದರು. ವಿಜಯ್ ಅವರ ಮನೆಯಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಿಗೂ ರಶ್ಮಿಕಾಗೆ ಆಹ್ವಾನ ಇದ್ದೇ ಇರುತ್ತಿತ್ತು. ಕಳೆದ ವರ್ಷ ವಿಜಯ್ ತಾಯಿಯ ಹುಟ್ಟುಹಬ್ಬಕ್ಕೆ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರಿದ್ದರು. ವಿಜಯ್ ಅವರ ಪೋಷಕರೊಡನೆ ರಶ್ಮಿಕಾಗೆ ಬಹಳ ಆತ್ಮೀಯತೆ ಇದೆ. ಇದು ಮುಂದಿನ ಅವರ ದಾಂಪತ್ಯಕ್ಕೂ ಸಹಕಾರಿ ಆಗಬಹುದು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us