AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಕೀಯ ಪಕ್ಷ ಕಟ್ಟುವುದಾಗಿ ಘೋಷಿಸಿದ ನಟ ಚೇತನ್ ಅಹಿಂಸ

Chethan Ahimsa: ಚೇತನ್ ಅಹಿಂಸ, ಸಿನಿಮಾಗಳಿಗಿಂತಲೂ ತಮ್ಮ ರಾಜಕೀಯ ಹೇಳಿಕೆಗಳು, ವಿವಾದಗಳಿಂದಲೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ರಾಜಕೀಯ, ಜಾಗೃತಿ ಕಾರ್ಯಕ್ರಮಗಳು, ಪ್ರತಿಭಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ನಟ ಚೇತನ್ ಅಹಿಂಸ ಇದೀಗ ತಮ್ಮದೇ ಆದ ರಾಜಕೀಯ ಪಕ್ಷ ಕಟ್ಟುವುದಾಗಿ ಘೋಷಿಸಿದ್ದಾರೆ. ತಮ್ಮ ಪಕ್ಷದ ಬಗ್ಗೆ ಹಲವು ವಿವರಗಳನ್ನು ಚೇತನ್ ಅಹಿಂಸ ಹಂಚಿಕೊಂಡಿದ್ದು, ಪಕ್ಷದ ಧ್ಯೇಯ, ಉದ್ದೇಶ, ಗುರಿ, ಸದಸ್ಯತ್ವ ಇನ್ನೂ ಹಲವು ವಿಷಯಗಳ ಕುರಿತಾಗಿ ವಿಡಿಯೋಗಳನ್ನು ಸಹ ಹಂಚಿಕೊಂಡಿದ್ದಾರೆ.

ರಾಜಕೀಯ ಪಕ್ಷ ಕಟ್ಟುವುದಾಗಿ ಘೋಷಿಸಿದ ನಟ ಚೇತನ್ ಅಹಿಂಸ
Chethan Ahimsa
ಮಂಜುನಾಥ ಸಿ.
|

Updated on: Jun 21, 2026 | 7:46 PM

Share

ಚೇತನ್ ಅಹಿಂಸ (Chetan Ahimsa), ಸಿನಿಮಾಗಳಿಗಿಂತಲೂ ತಮ್ಮ ರಾಜಕೀಯ ಹೇಳಿಕೆಗಳು, ವಿವಾದಗಳಿಂದಲೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ರಾಜಕೀಯ, ಜಾಗೃತಿ ಕಾರ್ಯಕ್ರಮಗಳು, ಪ್ರತಿಭಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ನಟ ಚೇತನ್ ಅಹಿಂಸ ಇದೀಗ ತಮ್ಮದೇ ಆದ ರಾಜಕೀಯ ಪಕ್ಷ ಕಟ್ಟುವುದಾಗಿ ಘೋಷಿಸಿದ್ದಾರೆ. ತಮ್ಮ ಪಕ್ಷದ ಬಗ್ಗೆ ಹಲವು ವಿವರಗಳನ್ನು ಚೇತನ್ ಅಹಿಂಸ ಹಂಚಿಕೊಂಡಿದ್ದು, ಪಕ್ಷದ ಧ್ಯೇಯ, ಉದ್ದೇಶ, ಗುರಿ, ಸದಸ್ಯತ್ವ ಇನ್ನೂ ಹಲವು ವಿಷಯಗಳ ಕುರಿತಾಗಿ ವಿಡಿಯೋಗಳನ್ನು ಸಹ ಹಂಚಿಕೊಂಡಿದ್ದಾರೆ.

ವಿವಿಧ ಸಮಾಜ ಪರ ಕೆಲಸ ಮಾಡುವ ಸಂಘಟನೆಗಳು, ದಲಿತ ಸಂಘಟನೆಗಳು, ಬಹುಜನ ಸಂಘಟನೆಗಳು ಸೇರಿದಂತೆ ಎಲ್ಲ ಸಂಘಟನೆಗಳನ್ನು ಒಗ್ಗಟ್ಟಾಗಿಸಿ ಹೊಸ ಪಕ್ಷ ಕಟ್ಟುತ್ತೇವೆ. ಅದಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇವೆ. 224 ಕ್ಷೇತ್ರದಲ್ಲೂ ಪಕ್ಷ ಸಂಘಟನೆ ಮಾಡುತ್ತೇವೆ. 2027ರ ಜನವರಿ ತಿಂಗಳಲ್ಲಿ ಹುಬ್ಬಳ್ಳಿಯಲ್ಲಿ ಪಕ್ಷದ ಹೆಸರು, ಪಕ್ಷದ ಚಿನ್ಹೆ ಪಕ್ಷದ ಪ್ರಣಾಳಿಕೆ,ಪಕ್ಷದ ಧ್ವಜ ರಾಜ್ಯ ಸಮಿತಿ ರಚನೆ, ಇನ್ನಿತರೆ ವಿಚಾರಗಳ ಘೋಷಣೆ ಮಾಡಲಿದ್ದೇವೆ ಎಂದು ಚೇತನ್ ಅಹಿಂಸ ಹೇಳಿದ್ದಾರೆ.

ಇದನ್ನೂ ಓದಿ:ಚೇತನ್ ಅಹಿಂಸ ಭಾರತೀಯನೇ ಅಲ್ಲ: ನಟಿ ಜಯಮಾಲಾ

ಸಮ ಸಮಾಜ ಕಟ್ಟುವುದು ನಮ್ಮ ಮುಖ್ಯ ಉದ್ದೇಶ. ಅದಕ್ಕಾಗಿಯೇ ಪಕ್ಷದ ಹೆಸರಿನಲ್ಲಿ ಸಂವಿಧಾನದ ಪದಗಳಿರಲಿವೆ. ನಾವು ಪಕ್ಷವನ್ನು ರಿಜಿಸ್ಟರ್ ಮಾಡುವ ಪ್ರಕ್ರಿಯೆಯಲ್ಲಿದ್ದೇವೆ‌ ಮತ್ತು ಅದನ್ನು ಮುಂದುವರಿಸುತ್ತೇವೆ ಎಂದ ಚೇತನ್ ಅಹಿಂಸ, ಪಕ್ಷದ ಪ್ರಣಾಳಿಕೆಯ 10 ಅಂಶಗಳನ್ನು ಸಹ ಹೇಳಿದ್ದು, ಅವು ಇಂತಿವೆ; ಲಿಂಗ ಸಮಾನತೆ , ಜಾತಿಯ ಸಮಾನತೆ , ಆರ್ಥಿಕ ಸಮಾನತೆ , ಭದ್ರತೆ , ಧರ್ಮ ನಿರಪೇಕ್ಷತೆ , ಪ್ರಾದೇಶಿಕತೆ ಮತ್ತು ಭಾಷೆ-ಸಾಂಸ್ಕೃತಿಕ ಸಮಾನತೆ , ಪರಿವರ್ತನಾ ಪರಿಸರವಾದ , ಭ್ರಷ್ಟಾಚಾರ ವಿರೋಧಿ , ಅಭಿವ್ಯಕ್ತಿ ಸ್ವಾತಂತ್ರ್ಯ, ಮಾಧ್ಯಮದ ಸ್ವಾತಂತ್ರ್ಯ , ಶಿಕ್ಷಣ ಮತ್ತು ಆರೋಗ್ಯದಲ್ಲಿ ಪರಿವರ್ತನೆ. ಇದರ ಜೊತೆಗೆ ಪೊಲೀಸ್ ಮತ್ತು ಜೈಲು ಸುಧಾರಣೆ, ನ್ಯಾಯ ಮತ್ತು ಮೂಲಸೌಕರ್ಯ, ತಂತ್ರಜ್ಞಾನ ಬಳಕೆ ಇನ್ನಿತರೆಗಳು ನಮ್ಮ ಉದ್ದೇಶ ಎಂದು ಚೇತನ್ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಸರ್ಕಾರಿ ಆಸ್ಪತ್ರೆಯ ಪಾಳುಬಿದ್ದ ಕಟ್ಟಡದಲ್ಲಿ ಲಕ್ಷಾಂತರ ಮೌಲ್ಯದ ಔಷಧ ಪತ್ತೆ!
ಸರ್ಕಾರಿ ಆಸ್ಪತ್ರೆಯ ಪಾಳುಬಿದ್ದ ಕಟ್ಟಡದಲ್ಲಿ ಲಕ್ಷಾಂತರ ಮೌಲ್ಯದ ಔಷಧ ಪತ್ತೆ!
ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಪ್ರತಿಭಟನೆ
ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಪ್ರತಿಭಟನೆ
ಮಡಿಕೇರಿ-ಕೊಡಗು ಭಾಗದಲ್ಲಿ ಕಾಫಿ ಬೆಳೆಗಾರರಿಗೆ ಎದುರಾಯ್ತು ಹೊಸ ತಲೆನೋವು
ಮಡಿಕೇರಿ-ಕೊಡಗು ಭಾಗದಲ್ಲಿ ಕಾಫಿ ಬೆಳೆಗಾರರಿಗೆ ಎದುರಾಯ್ತು ಹೊಸ ತಲೆನೋವು
ಮಂಗಳೂರಿನಲ್ಲಿ ಆಹಾರ ಪರೀಕ್ಷಾ ಲ್ಯಾಬ್‌ನ ಅಗತ್ಯ
ಮಂಗಳೂರಿನಲ್ಲಿ ಆಹಾರ ಪರೀಕ್ಷಾ ಲ್ಯಾಬ್‌ನ ಅಗತ್ಯ
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ
ಹನೂರು ಪ್ರಕರಣ: ಗೃಹ ಪ್ರವೇಶದ ಸಂಭ್ರಮ ತುಂಬಿರಬೇಕಿದ್ದ ಮನೆಯಲ್ಲೀಗ ಸೂತಕ!
ಹನೂರು ಪ್ರಕರಣ: ಗೃಹ ಪ್ರವೇಶದ ಸಂಭ್ರಮ ತುಂಬಿರಬೇಕಿದ್ದ ಮನೆಯಲ್ಲೀಗ ಸೂತಕ!
ನಿಮ್ಮ ಕನಸಿನ ಮನೆ ಅಥವಾ ಆಸ್ತಿಯನ್ನು ಖರೀದಿಸುವ ಸುವರ್ಣಾವಕಾಶ ಈಗ ನಿಮ್ಮದು
ನಿಮ್ಮ ಕನಸಿನ ಮನೆ ಅಥವಾ ಆಸ್ತಿಯನ್ನು ಖರೀದಿಸುವ ಸುವರ್ಣಾವಕಾಶ ಈಗ ನಿಮ್ಮದು
ಬೆಂಗಳೂರಿನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 9 ಕೋಟಿ ರೂ. ನಗದು ಜಪ್ತಿ
ಬೆಂಗಳೂರಿನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 9 ಕೋಟಿ ರೂ. ನಗದು ಜಪ್ತಿ
ಶ್ರೀರಂಗಪಟ್ಟಣದ ಚಾಮುಂಡೇಶ್ವರಿಗೆ 3 ಲಕ್ಷ ರೂಪಾಯಿ ನೋಟುಗಳ ವಿಶೇಷ ಅಲಂಕಾರ
ಶ್ರೀರಂಗಪಟ್ಟಣದ ಚಾಮುಂಡೇಶ್ವರಿಗೆ 3 ಲಕ್ಷ ರೂಪಾಯಿ ನೋಟುಗಳ ವಿಶೇಷ ಅಲಂಕಾರ
ಹುಬ್ಬಳ್ಳಿ ಲಕ್ಷ್ಮೀ ದೇವಸ್ಥಾನದಲ್ಲಿ ಭಕ್ತರ ದಂಡು, ವಿಶೇಷ ಅಲಂಕಾರ
ಹುಬ್ಬಳ್ಳಿ ಲಕ್ಷ್ಮೀ ದೇವಸ್ಥಾನದಲ್ಲಿ ಭಕ್ತರ ದಂಡು, ವಿಶೇಷ ಅಲಂಕಾರ