ಸಿನಿಮಾ ರಿಲೀಸ್​ಗೂ ಮೊದಲೇ ಸೋಲಿನ ಬಗ್ಗೆ ಮಾತನಾಡಿದ ವಿಜಯ್ ದೇವರಕೊಂಡ

ವಿಜಯ್ ದೇವರಕೊಂಡ ಅವರ ‘ಲೈಗರ್’ ಚಿತ್ರದ ವೈಫಲ್ಯದ ಬಗ್ಗೆ ಮಾತನಾಡಿದ್ದು, ಅವರು ಯಾವುದೇ ಬೇಸರ ವ್ಯಕ್ತಪಡಿಸಿಲ್ಲ. ಬದಲಾಗಿ, ಚಿತ್ರದ ಸೋಲು ಅಮೂಲ್ಯವಾದ ಪಾಠಗಳನ್ನು ಕಲಿಸಿದೆ ಎಂದು ಹೇಳಿದ್ದಾರೆ. ‘ಲೈಗರ್’ ಒಂದು ಸವಾಲಿನ ಪಾತ್ರವಾಗಿತ್ತು ಮತ್ತು ಅದನ್ನು ಮಾಡುವ ಪ್ರಕ್ರಿಯೆಯನ್ನು ಆನಂದಿಸಿದ್ದಾರೆ ಎಂದೂ ಹೇಳಿದ್ದಾರೆ.

ಸಿನಿಮಾ ರಿಲೀಸ್​ಗೂ ಮೊದಲೇ ಸೋಲಿನ ಬಗ್ಗೆ ಮಾತನಾಡಿದ ವಿಜಯ್ ದೇವರಕೊಂಡ
ವಿಜಯ್

Updated on: May 19, 2025 | 7:06 AM

ನಟ ವಿಜಯ್ ದೇವರಕೊಂಡ ಅವರು ‘ಲೈಗರ್’ ಸಿನಿಮಾ (Liger Movie) ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಅವರ ವೃತ್ತಿ ಜೀವನದ ದೊಡ್ಡ ಡಿಸಾಸ್ಟರ್ ಸಿನಿಮಾ ಎಂದು ಇದು ಅನಿಸಿಕೊಂಡಿತು. ಈ ಚಿತ್ರವನ್ನು ಪುರಿ ಜಗನ್ನಾಥ್ ಅವರು ನಿರ್ದೇಶನ ಮಾಡಿದ್ದರು. ಇದಾದ ಬಳಿಕ ಈ ಜೋಡಿ ಒಟ್ಟಿಗೆ ಸಿನಿಮಾ ಮಾಡಬೇಕಿತ್ತು. ಆದರೆ, ಈ ಚಿತ್ರದ ಸೋಲಿನ ಬಳಿಕ ಅದು ಕೂಡ ಕ್ಯಾನ್ಸಲ್ ಆಯಿತು. ಈ ಬಗ್ಗೆ ವಿಜಯ್ ಮಾತನಾಡಿದ್ದು, ‘ಲೈಗರ್’ ಸಿನಿಮಾ ಸೋಲಿನ ಬಗ್ಗೆ ಯಾವುದೇ ಬೇಸರ ಇಲ್ಲ ಎಂದಿದ್ದಾರೆ. ಅವರ ನಟನೆಯ ‘ಕಿಂಗ್​ಡಮ್’ ಸಿನಿಮಾ ಇನ್ನೇನು ರಿಲೀಸ್ ಆಗುವ ಹಂತದಲ್ಲಿ ಇದೆ. ಆ ಸಂದರ್ಭದಲ್ಲೇ ಅವರು ಸೋಲಿನ ಬಗ್ಗೆ ಮಾತನಾಡಿದ್ದಾರೆ.

ಕೆಲವು ಸಿನಿಮಾಗಳು ಹಿಟ್ ಆಗಿ ಹಣ ನೀಡುತ್ತವೆ. ಇನ್ನೂ ಕೆಲವು ಸಿನಿಮಾಗಳು ಅನುಭವ ನೀಡುತ್ತವೆ. ಸಿನಿಮಾ ಸೋತರೂ ಕಲಾವಿದರಿಗೆ ಅನುಭವದ ಭಂಡಾರ ಸಿಗುತ್ತದೆ. ವಿಜಯ್ ಅಭಿಪ್ರಾಯ ಕೂಡ ಇದರದ್ದೇ. ‘ಪಾತ್ರ ತುಂಬಾ ಸವಾಲಿನದ್ದಾಗಿತ್ತು. ಅದನ್ನು ಮಾಡುವ ಪ್ರಕ್ರಿಯೆಯನ್ನು ನಾನು ಸಂಪೂರ್ಣವಾಗಿ ಆನಂದಿಸಿದೆ’ ಎಂದು ವಿಜಯ್ ಹೇಳಿದ್ದಾರೆ.

‘ನಾವು ಉತ್ತಮ ಚಿತ್ರ ಮಾಡಲಿಲ್ಲ ಎಂಬ ಬೇಸರ ನನಗೆ ಇದೆ. ಆದರೆ, ನಾವು ಬರೆದ ಕಥೆ ಕಾಗದದ ಮೇಲೆ ಒಳ್ಳೆಯ ಐಡಿಯಾ ಆಗಿತ್ತು. ಆದರೆ ನನಗೆ ಆ ಚಿತ್ರದ ಬಗ್ಗೆ ಯಾವುದೇ ವಿಷಾದವಿಲ್ಲ’ ಎಂದು ಅವರು ಹೇಳಿದ್ದಾರೆ.  ‘ಲೈಗರ್’ ವೈಫಲ್ಯ ಅವರಿಗೆ ಅಮೂಲ್ಯವಾದ ಪಾಠಗಳನ್ನು ಕಲಿಸಿದೆಯಂತೆ. ವ್ಯಕ್ತಿಯಾಗಿ ನನ್ನನ್ನು ಬದಲಾಯಿಸಿತು ಎಂದು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ
ಅಮಿತಾಭ್​ಗೆ 200 ಜನರಿಂದ ರಕ್ತದಾನ; ಅವರ ಜೀವನವನ್ನೇ ನಾಶ ಮಾಡಿತು ಆ ಘಟನೆ
ದಾದಾಸಾಹೇಬ್ ಫಾಲ್ಕೆ ಬಯೋಪಿಕ್ ಮಾಡ ಹೊರಟ ರಾಜಮೌಳಿಗೆ ಹಿನ್ನಡೆ
ಸುಳ್ಳು ಹೇಳಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಚೈತ್ರಾ ಕುಂದಾಪುರ ತಂದೆ
ಸಿನಿಮಾ ರಂಗದ ಹರಿಕಾರ ದಾದಾಸಾಹೇಬ್ ಫಾಲ್ಕೆ ಬಯೋಪಿಕ್​ನಲ್ಲಿ ಜೂ.ಎನ್​ಟಿಆರ್?

‘ಲೈಗರ್’ ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಮಾಡಲಾಯಿತು. ಈ ಚಿತ್ರವನ್ನು ಕರಣ್ ಜೋಹರ್ ಅವರು ನಿರ್ಮಾಣ ಮಾಡಿದ್ದರು. ಅನನ್ಯಾ ಪಾಂಡೆ ಈ ಚಿತ್ರಕ್ಕೆ ನಾಯಕಿ. ಅವರನ್ನು ಟಾಲಿವುಡ್​ಗೆ ಪರಿಚಯಿಸಲಾಯಿತು. ಮೈಕ್ ಟೈಸನ್ ಅವರು ಈ ಚಿತ್ರದಲ್ಲಿ ವಿಶೇಷ ಪಾತ್ರ ಮಾಡಿದ್ದರು. ಈ ಚಿತ್ರಕ್ಕಾಗಿ ಅವರು ಇದಲ್ಲಿಯ್ಯೇ ಹೋಗಿ ಶೂಟ್ ಮಾಡಿ ಬರಲಾಯಿತು. ಆದರೆ, ಯಾವುದೇ ಪ್ರಯೋಜನ ಆಗಲಿಲ್ಲ.

ಇದನ್ನೂ ಓದಿ: ಪತ್ನಿಯ ಗುಣ ಹೇಗಿರಬೇಕು? ಮದುವೆ ಬಗ್ಗೆ ಮೌನ ಮುರಿದ ವಿಜಯ್ ದೇವರಕೊಂಡ 

ವಿಜಯ್ ದೇವರಕೊಂಡ ಅವರು ಸದ್ಯ ‘ಕಿಂಗ್​ಡಮ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಜುಲೈ 4ರಂದು ಚಿತ್ರ ತೆರೆಗೆ ಬರಲಿದೆ. ಗೌತಮ್ ತಿನ್ನನುರಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಮೂಲಕ ದೊಡ್ಡ ಗೆಲುವು ಕಾಣುವು ನಿರೀಕ್ಷೆಯಲ್ಲಿ ಅವರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.