AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆ ಮಾಹಿತಿ ಲೀಕ್: ಸಿಟ್ಟಾದ ರಶ್ಮಿಕಾ-ವಿಜಯ್ ಹೇಳಿದ್ದೇನು?

Rashmika Mandanna: ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಮದುವೆ ವಿಚಾರವನ್ನು ಗುಟ್ಟಾಗಿರಿಸಿದ್ದರು. ಆದರೂ ಸಹ ಮದುವೆಯ ದಿನಾಂಕ, ಸ್ಥಳ, ಸಮಯ ಇನ್ನಿತರೆ ವಿಚಾರಗಳು ಲೀಕ್ ಆಗಿವೆ. ಅದು ಮಾತ್ರವೇ ಅಲ್ಲದೆ, ನಿನ್ನೆ ರಶ್ಮಿಕಾ ಮತ್ತು ವಿಜಯ್ ಅವರ ಮದುವೆ ಆಮಂತ್ರಣ ಪತ್ರಿಕೆಯ ವಿಡಿಯೋ ಸಹ ಲೀಕ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಇದು ರಶ್ಮಿಕಾ ಮತ್ತು ವಿಜಯ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ.

ಮದುವೆ ಮಾಹಿತಿ ಲೀಕ್: ಸಿಟ್ಟಾದ ರಶ್ಮಿಕಾ-ವಿಜಯ್ ಹೇಳಿದ್ದೇನು?
Vijay Rashmika
ಮಂಜುನಾಥ ಸಿ.
|

Updated on:Feb 19, 2026 | 12:51 PM

Share

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ ಅವರು ಕಳೆದ ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಇದೀಗ ಮದುವೆ ಆಗಲಿದ್ದಾರೆ. ಮದುವೆ ವಿಚಾರವನ್ನೂ ಇಬ್ಬರೂ ಸಹ ಬಹಳ ಗುಟ್ಟಾಗಿರಿಸಿದ್ದರು. ಆದರೂ ಸಹ ಮದುವೆಯ ದಿನಾಂಕ, ಸ್ಥಳ, ಸಮಯ ಇನ್ನಿತರೆ ವಿಚಾರಗಳು ಲೀಕ್ ಆಗಿವೆ. ಅದು ಮಾತ್ರವೇ ಅಲ್ಲದೆ, ನಿನ್ನೆ ರಶ್ಮಿಕಾ ಮತ್ತು ವಿಜಯ್ ಅವರ ಮದುವೆ ಆಮಂತ್ರಣ ಪತ್ರಿಕೆಯ ವಿಡಿಯೋ ಸಹ ಲೀಕ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಇದು ರಶ್ಮಿಕಾ ಮತ್ತು ವಿಜಯ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ.

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ಆಮಂತ್ರಣ ಪತ್ರಿಕೆಯ ವಿಡಿಯೋ ಅನ್ನು ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆಮಂತ್ರಣ ಪತ್ರಿಕೆಯಲ್ಲಿ ಇರುವ ವಸ್ತುಗಳನ್ನೆಲ್ಲ ತೋರಿಸಿದ್ದರು. ಆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಅದರ ಬೆನ್ನಲ್ಲೆ ವಿಜಯ್ ಮತ್ತು ರಶ್ಮಿಕಾ ಅವರ ತಂಡವು ಈ ಬಗ್ಗೆ ಪ್ರತಿಕ್ರಿಯೆ ನೀಡಿದೆ.

ಮದುವೆಗೆ ಸಂಬಂಧಿಸಿದ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳದಂತೆ ವಿಜಯ್ ಮತ್ತು ರಶ್ಮಿಕಾ ಮನವಿ ಮಾಡಿದ್ದಾರೆ. ಮದುವೆ ಮತ್ತು ರಿಸೆಪ್ಷನ್​​ಗೆ ಹಲವಾರು ಮಂದಿ ಗಣ್ಯರು ಆಗಮಿಸಲಿದ್ದು, ಒಂದೊಮ್ಮೆ ಮದುವೆ ನಡೆವ ಸ್ಥಳಕ್ಕೆ ಅಭಿಮಾನಿಗಳು ಬಂದರೆ ಭದ್ರತೆ ಸಮಸ್ಯೆ ಆಗುತ್ತದೆ ಎಂದು ವಿಜಯ್ ಮತ್ತು ರಶ್ಮಿಕಾ ಕಳವಳ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಮದುವೆ ಮತ್ತು ರಿಸೆಪ್ಷನ್ ಮಾಹಿತಿಯನ್ನು ಲೀಕ್ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರು ಫೆಬ್ರವರಿ 26 ರಂದು ವಿವಾಹವಾಗಲಿದ್ದಾರೆ. ಇವರ ವಿವಾಹದಲ್ಲಿ ಕುಟುಂಬದ ಸದಸ್ಯರು ಮತ್ತು ಅತ್ಯಾಪ್ತ ಗೆಳೆಯರುಗಳು ಮಾತ್ರವೇ ಭಾಗಿ ಆಗಲಿದ್ದಾರೆ. ಆ ಬಳಿಕ ಮಾರ್ಚ್ 04 ರಂದು ಹೈದರಾಬಾದ್​​ನ ತಾಜ್ ಕೃಷ್ಣ ನಲ್ಲಿ ಅದ್ಧೂರಿ ರಿಸೆಪ್ಷನ್ ಅನ್ನು ಆಯೋಜಿಸಲಾಗಿದ್ದು, ಆಂಧ್ರ, ತೆಲಂಗಾಣ ಸಿಎಂ ಅವರುಗಳಿಂದ ಹಿಡಿದು ತೆಲುಗು ಹಾಗೂ ಬಾಲಿವುಡ್​​ನ ಹಲವಾರು ಮಂದಿ ಗಣ್ಯರು ಮದುವೆ ಸಮಾರಂಭದಲ್ಲಿ ಭಾಗಿ ಆಗಲಿದ್ದಾರೆ.

ಸಿನಿಮಾ ಸದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:42 pm, Thu, 19 February 26

Follow Us
ದಾವಣಗೆರೆ ಬೈ ಎಲೆಕ್ಷನ್: ಹೊಸ ಬಾಂಬ್ ಸಿಡಿಸಿದ ಜೆಡಿಎಸ್ ಮುಖಂಡ
ದಾವಣಗೆರೆ ಬೈ ಎಲೆಕ್ಷನ್: ಹೊಸ ಬಾಂಬ್ ಸಿಡಿಸಿದ ಜೆಡಿಎಸ್ ಮುಖಂಡ
ಹೊಟ್ಟೆ ಆಯ್ತು ಈಗ ಬಟ್ಟೆಗೂ ತಟ್ಟಿದ ಯುದ್ಧದ ಎಫೆಕ್ಟ್​​!
ಹೊಟ್ಟೆ ಆಯ್ತು ಈಗ ಬಟ್ಟೆಗೂ ತಟ್ಟಿದ ಯುದ್ಧದ ಎಫೆಕ್ಟ್​​!
ಡೆಡ್ಲಿ ರೋಡ್​ರೇಜ್, ಕಾರು ಬಾನೆಟ್​ನಲ್ಲಿ ನೇತಾಡಿದ ಪೊಲೀಸ್! ವಿಡಿಯೋ ವೈರಲ್
ಡೆಡ್ಲಿ ರೋಡ್​ರೇಜ್, ಕಾರು ಬಾನೆಟ್​ನಲ್ಲಿ ನೇತಾಡಿದ ಪೊಲೀಸ್! ವಿಡಿಯೋ ವೈರಲ್
ಕ್ಯೂ ನೆಟ್, ವಿಹಾನ್ ಬಗ್ಗೆ ಸುಳ್ಳು ಸುದ್ದಿ ಬೇಡ: ಹೈಕೋರ್ಟ್ ತಡೆಯಾಜ್ಞೆ!
ಕ್ಯೂ ನೆಟ್, ವಿಹಾನ್ ಬಗ್ಗೆ ಸುಳ್ಳು ಸುದ್ದಿ ಬೇಡ: ಹೈಕೋರ್ಟ್ ತಡೆಯಾಜ್ಞೆ!
ಸೌದೆ ಒಲೆ ಬಳಸುವ ಮುನ್ನ ಹುಷಾರ್​​: ಕ್ಯಾನ್ಸರ್​​ ಬರಬಹುದು ಎಂದ ಡಾಕ್ಟರ್ಸ್​
ಸೌದೆ ಒಲೆ ಬಳಸುವ ಮುನ್ನ ಹುಷಾರ್​​: ಕ್ಯಾನ್ಸರ್​​ ಬರಬಹುದು ಎಂದ ಡಾಕ್ಟರ್ಸ್​
ಬಾಗಲಕೋಟೆ ಉಪಚುನಾವಣೆ: ಬಿಜೆಪಿ ಟಿಕೆಟ್​​ಗಾಗಿ ಹೈಕಮಾಂಡ್​​ ಮಟ್ಟದಲ್ಲಿ ಲಾಭಿ
ಬಾಗಲಕೋಟೆ ಉಪಚುನಾವಣೆ: ಬಿಜೆಪಿ ಟಿಕೆಟ್​​ಗಾಗಿ ಹೈಕಮಾಂಡ್​​ ಮಟ್ಟದಲ್ಲಿ ಲಾಭಿ
ಬಿರು ಬೇಸಿಗೆಯಲ್ಲೂ ಕಾರವಾರದಲ್ಲಿ ಭರ್ಜರಿ ಆಲಿಕಲ್ಲು ಮಳೆ!
ಬಿರು ಬೇಸಿಗೆಯಲ್ಲೂ ಕಾರವಾರದಲ್ಲಿ ಭರ್ಜರಿ ಆಲಿಕಲ್ಲು ಮಳೆ!
'ಹುಲಿ ಹುಲಿ' ಅಂತಾ ವೀಡಿಯೋ ಮಾಡಿ ಪೊಲೀಸ್ ಕೈಗೆ ತಗಲಾಕ್ಕೊಂಡ ರೀಲ್ಸ್ ಮಂಜು!
'ಹುಲಿ ಹುಲಿ' ಅಂತಾ ವೀಡಿಯೋ ಮಾಡಿ ಪೊಲೀಸ್ ಕೈಗೆ ತಗಲಾಕ್ಕೊಂಡ ರೀಲ್ಸ್ ಮಂಜು!
ಉಡುಪಿ: ಚಾಲಕನ ನಿಯಂತ್ರಣ ತಪ್ಪಿ ಎಲ್​ಪಿಜಿ ಗ್ಯಾಸ್ ಟ್ಯಾಂಕರ್ ಪಲ್ಟಿ
ಉಡುಪಿ: ಚಾಲಕನ ನಿಯಂತ್ರಣ ತಪ್ಪಿ ಎಲ್​ಪಿಜಿ ಗ್ಯಾಸ್ ಟ್ಯಾಂಕರ್ ಪಲ್ಟಿ
ಕಾಳಸಂತೆಯಲ್ಲಿ ಸಿಲಿಂಡರ್ ಸೇಲ್ ! ಗ್ಯಾಸ್​ ದಂಧೆಕೋರರ ವಿರುದ್ಧ 3 ಎಫ್​ಐಆರ್
ಕಾಳಸಂತೆಯಲ್ಲಿ ಸಿಲಿಂಡರ್ ಸೇಲ್ ! ಗ್ಯಾಸ್​ ದಂಧೆಕೋರರ ವಿರುದ್ಧ 3 ಎಫ್​ಐಆರ್