‘ಕಿಂಗ್ಡಮ್’ ಟ್ರೇಲರ್ ಮೂಲಕ ಹೊಸ ಸಿನಿಮಾದ ಆ್ಯಕ್ಷನ್ ಝಲಕ್ ತೋರಿಸಿದ ವಿಜಯ್ ದೇವರಕೊಂಡ

ಅದ್ದೂರಿಯಾಗಿ ಮೂಡಿಬಂದಿರುವ ‘ಕಿಂಗ್ಡಮ್’ ಸಿನಿಮಾದ ಝಲಕ್ ತೋರಿಸಲು ಟ್ರೇಲರ್ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ನಟ ವಿಜಯ್ ದೇವರಕೊಂಡ, ನಟಿ ಭಾಗ್ಯಶ್ರೀ ಮುಂತಾದವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಜುಲೈ 31ರಂದು ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ‘ಕಿಂಗ್ಡಮ್’ ತೆರೆಕಾಣಲಿದ್ದು, ಈಗಾಗಲೇ ಬುಕಿಂಗ್ ಶುರುವಾಗಿದೆ.

‘ಕಿಂಗ್ಡಮ್’ ಟ್ರೇಲರ್ ಮೂಲಕ ಹೊಸ ಸಿನಿಮಾದ ಆ್ಯಕ್ಷನ್ ಝಲಕ್ ತೋರಿಸಿದ ವಿಜಯ್ ದೇವರಕೊಂಡ
Vijay Deverakonda
Edited By:

Updated on: Jul 29, 2025 | 10:22 AM

ನಟ ವಿಜಯ್ ದೇವರಕೊಂಡ (Vijay Deverakonda) ಅವರು ‘ಕಿಂಗ್ಡಮ್’ ಸಿನಿಮಾ ಮೇಲೆ ಸಖತ್ ಭರವಸೆ ಇಟ್ಟುಕೊಂಡಿದ್ದಾರೆ. ಅದೇ ರೀತಿ ಅವರ ಅಭಿಮಾನಿಗಳಿಗೆ ಈ ಸಿನಿಮಾದ ಮೇಲೆ ಹೆಚ್ಚು ನಿರೀಕ್ಷೆ ಇದೆ. ಈ ಚಿತ್ರದ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಈಗ ಸಿನಿಮಾ ಮೇಲಿನ ಹೈಪ್ ಹೆಚ್ಚಿಸಲು ಟ್ರೇಲರ್ ಬಿಡುಗಡೆ ಆಗಿದೆ. ‘ಕಿಂಗ್ಡಮ್’ ಸಿನಿಮಾದ ಟ್ರೇಲರ್ (Kingdom Movie Trailer) ನೋಡಿದ ಅಭಿಮಾನಿಗಳು ಮನಸಾರೆ ಇಷ್ಟಪಟ್ಟಿದ್ದಾರೆ. ಯೂಟ್ಯೂಬ್​​ನಲ್ಲಿ ಕಮೆಂಟ್ ಮಾಡಿದ ಪ್ರೇಕ್ಷಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ.  ‘ಕಿಂಗ್ಡಮ್’ (Kingdom) ಸಿನಿಮಾದಲ್ಲಿ ಯಾವ ಪರಿ ಆ್ಯಕ್ಷನ್ ಇದೆ ಎಂಬುದರ ಝಲಕ್ ಈ ಟ್ರೇಲರ್​ನಲ್ಲಿ ಕಾಣಿಸಿದೆ.

‘ಕಿಂಗ್ಡಮ್’ ಸಿನಿಮಾಗೆ ಗೌತಮ್ ತಿನ್ನನುರಿ ಅವರು ನಿರ್ದೇಶನ ಮಾಡಿದ್ದಾರೆ. ನಾಗ ವಂಶಿ ಮತ್ತು ಸಾಯಿ ಸೌಜನ್ಯ ಅವರು ನಿರ್ಮಾಣ ಮಾಡಿದ್ದಾರೆ. ಸಿನಿಮಾ ಸಖತ್ ಅದ್ದೂರಿಯಾಗಿ ಮೂಡಿಬಂದಿದೆ ಎಂಬುದಕ್ಕೆ ಟ್ರೇಲರ್ ಸಾಕ್ಷಿಯಾಗಿದೆ. ಬಹಳ ಕಷ್ಟಪಟ್ಟು ವಿಜಯ್ ದೇವರಕೊಂಡ ಅವರು ಆ್ಯಕ್ಷನ್ ದೃಶ್ಯಗಳಲ್ಲಿ ಅಭಿನಯಿಸಿದ್ದಾರೆ. ದೊಡ್ಡ ಪರದೆಯಲ್ಲಿ ಸಿನಿಮಾ ಕಣ್ತುಂಬಿಕೊಳ್ಳಲು ಫ್ಯಾನ್ಸ್ ರೆಡಿಯಾಗಿದ್ದಾರೆ.

ಜುಲೈ 31ರಂದು ‘ಕಿಂಗ್ಡಮ್’ ಸಿನಿಮಾ ಬಿಡುಗಡೆ ಆಗಲಿದೆ. ವಿಜಯ್ ದೇವರಕೊಂಡ ಅವರು ಫ್ಯಾನ್ ಇಂಡಿಯಾ ಸ್ಟಾರ್. ಅವರಿಗೆ ದೇಶಾದ್ಯಂತ ಅಭಿಮಾನಿಗಳು ಇದ್ದಾರೆ. ಹಾಗಾಗಿ ಈ ಸಿನಿಮಾವನ್ನು ತಮಿಳು ಮತ್ತು ತೆಲುಗಿನ ಜೊತೆ ಹಿಂದಿಗೂ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ. ಹಿಂದಿಯಲ್ಲಿ ಈ ಸಿನಿಮಾಗೆ ‘ಸಾಮ್ರಾಜ್ಯ’ ಎಂದು ಶೀರ್ಷಿಕೆ ಇಡಲಾಗಿದೆ.

ಇದನ್ನೂ ಓದಿ
ಸಿನಿಮಾ ರಿಲೀಸ್ ಸಂದರ್ಭದಲ್ಲೇ ಆಸ್ಪತ್ರೆಗೆ ದಾಖಲಾದ ವಿಜಯ್ ದೇವರಕೊಂಡ
ದೊಡ್ಡ ಬಾಲಿವುಡ್ ಅವಕಾಶವನ್ನು ನಿರಾಕರಿಸಿದ ವಿಜಯ್ ದೇವರಕೊಂಡ, ಕಾರಣ?
ನನಗೆ ಮಾತ್ರ ಟೀಕೆ ಬೇರೆ ನಟರಿಗಿಲ್ಲ: ವಿಜಯ್ ದೇವರಕೊಂಡ ಬೇಸರಕ್ಕೆ ಕಾರಣವೇನು?
ವಿಜಯ್ ದೇವರಕೊಂಡ ಅನ್ನು ತುಳಿಯಲು ಯತ್ನಿಸಿದ್ದರೇ ಆ ಸ್ಟಾರ್ ನಟ?

‘ಕಿಂಗ್ಡಮ್’ ಸಿನಿಮಾ ಟ್ರೇಲರ್:

ಈಗಾಗಲೇ ‘ಕಿಂಗ್ಡಮ್’ ಸಿನಿಮಾದ ಬುಕಿಂಗ್ ಶುರು ಆಗಿದೆ. ಬುಕ್ ಮೈ ಶೋನಲ್ಲಿ ಬುಕಿಂಗ್ ಆರಂಭ ಆಗುತ್ತಿದ್ದಂತೆಯೇ ಟಿಕೆಟ್​ಗಳು ಸೋಲ್ಡ್ ಔಟ್ ಆಗಲು ಆರಂಭಿಸಿವೆ. ಬುಕಿಂಗ್ ಶುರುವಾದ ಕೆಲವೇ ಗಂಟೆಗಳಲ್ಲಿ ‘ಬುಕ್ ಮೈ ಶೋ’ನಲ್ಲಿ ಟ್ರೆಂಡಿಂಗ್ ಆಗುತ್ತಿದೆ. ‘ಕಿಂಗ್ಡಮ್’ ಸಿನಿಮಾ ಮೇಲೆ ಅಭಿಮಾನಿಗಳಿಗೆ ಎಷ್ಟು ನಿರೀಕ್ಷೆ ಇದೆ ಎಂಬುದಕ್ಕೆ ಇದೇ ಸಾಕ್ಷಿ.

ಇದನ್ನೂ ಓದಿ: ಕಿಂಗ್ಡಮ್ ಟ್ರೈಲರ್: ನಮ್ಮನ್ಯಾರು ತಡೆಯೋರು ಎಂದ ವಿಜಯ್ ದೇವರಕೊಂಡ

‘ಕಿಂಗ್ಡಮ್’ ಸಿನಿಮಾದ ತೆರೆಹಿಂದೆ ಘಟಾನುಘಟಿ ತಂತ್ರಜ್ಞರು ಕೆಲಸ ಮಾಡಿದ್ದಾರೆ. ಅನಿರುದ್ಧ್ ರವಿಚಂದರ್ ಅವರು ಸಂಗೀತ ನೀಡಿದ್ದಾರೆ. ಗಿರೀಶ್ ಗಂಗಾಧರನ್, ಜೋಮನ್ ಟಿ. ಜಾನ್ ಅವರು ಛಾಯಾಗ್ರಹಣ ಮಾಡಿದ್ದಾರೆ. ನವೀನ್ ನೂಲಿ ಅವರ ಸಂಕಲನ ಈ ಸಿನಿಮಾಗಿದೆ. ವಿಜಯ್ ದೇವರಕೊಂಡ ಅವರಿಗೆ ಜೋಡಿಯಾಗಿ ಭಾಗ್ಯಶ್ರೀ ಅಭಿನಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 1:44 pm, Sun, 27 July 25