AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kingdom Movie

Kingdom Movie

‘ಕಿಂಗ್‌ಡಮ್’ ಮುಂಬರುವ ಆ್ಯಕ್ಷನ್ ಚಿತ್ರ. ವಿಜಯ್ ದೇವರಕೊಂಡ ಅವರು ಈ ಚಿತ್ರದಲ್ಲಿ ಪ್ರಬಲ ಪಾತ್ರ ಮಾಡಿದ್ದಾರೆ. ರೆಟ್ರೋ ಶೈಲಿಯಲ್ಲಿ ಸಿನಿಮಾ ಮೂಡಿ ಬಂದಿದೆ. ತನ್ನ ಭೂಮಿ ಮತ್ತು ಜನರನ್ನು ಆಕ್ರಮಣಕಾರರಿಂದ ರಕ್ಷಿಸಲು ಉಗ್ರ ಯೋಧನಾಗಿ ವಿಜಯ್ ಬದಲಾಗುತ್ತಾರೆ. ಭವ್ಯ ದೃಶ್ಯಗಳು, ಯುದ್ಧ ಸನ್ನಿವೇಶಗಳು ಮತ್ತು ಬಿಗಿಯಾದ ಕಥಾಹಂದರದೊಂದಿಗೆ ‘ಕಿಂಗ್‌ಡಮ್’ ಗಮನ ಸೆಳೆದಿದೆ. ದೇಶಭಕ್ತಿ, ನಾಟಕ ಮತ್ತು ಶೌರ್ಯದ ವಿಷಯವನ್ನು ಸಿನಿಮಾ ಹೊಂದಿದೆ. ಗೌತಮ್ ತಿನ್ನನುರಿ ನಿರ್ದೇಶನ ಮಾಡಿದ್ದಾರೆ. ಜುಲೈ 31ರಂದು ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರದ ಬಜೆಟ್ 100 ಕೋಟಿ ರೂಪಾಯಿ. ಈ ಚಿತ್ರವನ್ನು ನಾಗ ವಂಶಿ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ಮೂಲಕ ವಿಜಯ್ ದೇವರಕೊಂಡ ಅವರು ಗೆಲ್ಲುವ ಭರವಸೆಯಲ್ಲಿ ಇದ್ದಾರೆ. ಈ ಸಿನಿಮಾದಲ್ಲಿ ಸತ್ಯದೇವ್, ಭಾಗ್ಯಶ್ರೀ ಬೋರ್ಸೆ, ಬಾಬುರಾಜ್ ಮೊದಲಾದವರು ನಟಿಸಿದ್ದಾರೆ.

ಇನ್ನೂ ಹೆಚ್ಚು ಓದಿ

ವಿಜಯ್ ದೇವರಕೊಂಡ ಫ್ಯಾನ್ಸ್​ಗೆ ಖುಷಿ ಸುದ್ದಿ ಕೊಟ್ಟ ‘ಕಿಂಗ್ಡಮ್’ ನಿರ್ದೇಶಕ; ಬರಲಿದೆ ಎರಡನೇ ಪಾರ್ಟ್

‘ಕಿಂಗ್ಡಮ್’ ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ, ನಿರ್ದೇಶಕ ಗೌತಮ್ ತಿನ್ನನುರಿ ಅವರು ಕಿಂಗ್ಡಮ್ 2 ಮತ್ತು ಒಂದು ಸ್ಪಿನ್ ಆಫ್ ಸಿನಿಮಾಗಳನ್ನು ಮಾಡುವುದಾಗಿ ಘೋಷಿಸಿದ್ದಾರೆ. ಮೊದಲ ಭಾಗದಲ್ಲಿ ಪರಿಚಯಿಸಲಾದ ಸೇತು ಪಾತ್ರವನ್ನು ಕೇಂದ್ರೀಕರಿಸಿ ಒಟಿಟಿಗಾಗಿ ಒಂದು ಪ್ರೀಕ್ವೆಲ್ ಕೂಡ ತಯಾರಾಗಲಿದೆ. ಭವಿಷ್ಯದಲ್ಲಿ ಕಿಂಗ್ಡಮ್ 3 ಕೂಡ ಬರಬಹುದು ಎಂಬ ಸುಳಿವು ನೀಡಿದ್ದಾರೆ.

ಶುಕ್ರವಾರ ಹೇಗಿದೆ ‘ಕಿಂಗ್ಡಮ್’ ಸಿನಿಮಾದ ಗಳಿಕೆ? ಇಲ್ಲಿದೆ ವಿವರ

ವಿಜಯ್ ದೇವರಕೊಂಡ ಅಭಿನಯದ 'ಕಿಂಗ್ಡಮ್' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ಯಶಸ್ಸು ಕಂಡಿದೆ. ಮೊದಲ ದಿನವೇ 33 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದೆ. ಗೌತಮ್ ತಿನ್ನನೂರಿ ನಿರ್ದೇಶನದ ಈ ಚಿತ್ರ ಉತ್ತಮ ವಿಮರ್ಶೆಗಳನ್ನು ಪಡೆದುಕೊಂಡಿದೆ. ಎರಡನೇ ದಿನವೂ ಉತ್ತಮ ಗಳಿಕೆ ಆಗಿದೆ ಶನಿವಾರ ಮತ್ತು ಭಾನುವಾರ ಇನ್ನಷ್ಟು ಗಳಿಕೆ ನಿರೀಕ್ಷಿಸಲಾಗಿದೆ.

‘ಕಿಂಗ್ಡಮ್’ ನೋಡುವವರಿಗೆ ಭರ್ಜರಿ ಅವಕಾಶ ಕೊಟ್ಟ ನಿರ್ಮಾಪಕ

Kingdom movie story: ವಿಜಯ್ ದೇವರಕೊಂಡ ನಟನೆಯ ‘ಕಿಂಗ್ಡಮ್’ ಸಿನಿಮಾ ನಿನ್ನೆ ಬಿಡುಗಡೆ ಆಗಿದ್ದು ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡಿದೆ. ಆದರೆ ಕೆಲವು ಯೂಟ್ಯೂಬರ್​ಗಳು ಸಿನಿಮಾದ ಬಗ್ಗೆ ನೆಗೆಟಿವ್ ವಿಮರ್ಶೆ ನೀಡಿದ್ದಾರೆ. ಆದರೆ ನಿರ್ಮಾಪಕ ನಾಗವಂಶಿ, ನಾವು ಒಳ್ಳೆಯ ಸಿನಿಮಾ ಮಾಡಿದ್ದೇವೆ ಎಂದಿದ್ದಾರಲ್ಲದೆ, ಸಿನಿಮಾ ನೋಡಿದವರಿಗೆ ಆಫರ್ ಒಂದನ್ನು ನೀಡಿದ್ದಾರೆ.

‘ಕಿಂಗ್ಡಮ್’ ಕಲೆಕ್ಷನ್; ಮೊದಲ ದಿನವೇ ಬಾಕ್ಸ್ ಆಫೀಸ್ ಲೂಟಿ ಮಾಡಿದ ವಿಜಯ್ ದೇವರಕೊಂಡ

ವಿಜಯ್ ದೇವರಕೊಂಡ ನಟನೆಯ 'ಕಿಂಗ್ಡಮ್' ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ದೊಡ್ಡ ಯಶಸ್ಸು ಕಂಡಿದೆ. ಮೊದಲ ದಿನವೇ ಭಾರೀ ಗಳಿಕೆ ಮಾಡಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ವಿಜಯ್ ಅವರ ಮಾಸ್ ಅವತಾರ ಪ್ರೇಕ್ಷಕರನ್ನು ರಂಜಿಸಿದೆ. ಚಿತ್ರದ ಗಳಿಕೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

Kingdom movie review: ಪಾಪಿಗಳ ಲೋಕದಲ್ಲಿ ದಮನಿತರ ದೇವರಾಗುವನೇ ಗೂಢಚಾರಿ?

Vijay Deverakonda: ವಿಜಯ್ ದೇವರಕೊಂಡ ನಟಿಸಿ, ಗೌತಮ್ ತಿನರೂರಿ ನಿರ್ದೇಶನ ಮಾಡಿರುವ ‘ಕಿಂಗ್ಡಮ್’ ಸಿನಿಮಾ ಇಂದು (ಜುಲೈ 31) ಬಿಡುಗಡೆ ಆಗಿದೆ. ಸಿನಿಮಾ ಸ್ಪೈ ಥ್ರಿಲ್ಲರ್ ಕತೆ ಒಳಗೊಂಡಿದ್ದು, ಸಿನಿಮಾನಲ್ಲಿ ಭಾಗ್ಯಶ್ರೀ ಬೋರ್ಸೆ ನಾಯಕಿ. ಸಿನಿಮಾ ಹೇಗಿದೆ? ಇಲ್ಲಿದೆ ಓದಿ ವಿಮರ್ಶೆ...

ವಿಜಯ್ ದೇವರಕೊಂಡ ನಟನೆಯ ‘ಕಿಂಗ್ಡಮ್’ ಸಿನಿಮಾ: ಹೇಗಿದೆ ಫಸ್ಟ್ ಹಾಫ್?

Kingdom First Half review: ವಿಜಯ್ ದೇವರಕೊಂಡ ನಟನೆಯ ‘ಕಿಂಗ್ಡಮ್’ ಸಿನಿಮಾ ಇಂದು (ಜುಲೈ 31) ಬಿಡುಗಡೆ ಆಗಿದೆ. ರಾಷ್ಟ್ರಪ್ರಶಸ್ತಿ ವಿಜೇತ ‘ಜೆರ್ಸಿ’ ಸಿನಿಮಾ ನಿರ್ದೇಶಿಸಿದ್ದ ಗೌತಮ್ ತಿನರೂರಿ ‘ಕಿಂಗ್ಡಮ್’ ಸಿನಿಮಾ ನಿರ್ದೇಶೀಸಿದ್ದು, ಭಾರಿ ನಿರೀಕ್ಷೆಗಳನ್ನು ಹುಟ್ಟಿಸಿ ಈ ಸಿನಿಮಾ ಬಿಡುಗಡೆ ಆಗಿದೆ. ಹಲವೆಡೆ ಸಿನಿಮಾದ ಮೊದಲಾರ್ಧ ಮುಗಿದಿದ್ದು, ಸಿನಿಮಾದ ಫಸ್ಟ್ ಆಫ್ ರಿವ್ಯೂ ಇಲ್ಲಿದೆ.

‘ಬ್ಲಾಕ್​ಬಸ್ಟರ್ ಸಿನಿಮಾ’; ‘ಕಿಂಗ್ಡಮ್’ ನೋಡಿ ವಿಮರ್ಶೆ ತಿಳಿಸಿದ ಅಭಿಮಾನಿಗಳು

Kingdom Movie Twitter Review: ವಿಜಯ್ ದೇವರಕೊಂಡ ಅಭಿನಯದ ‘ಕಿಂಗ್ಡಮ್’ ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿದೆ ಎಂದು ಅಭಿಮಾನಿಗಳು ಘೋಷಿಸಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ವಿಜಯ್ ಅವರ ಅದ್ಭುತ ಅಭಿನಯ, ಬಲವಾದ ಕಥಾವಸ್ತು, ಮತ್ತು ಆ್ಯಕ್ಷನ್ ದೃಶ್ಯಗಳು ಚಿತ್ರಕ್ಕೆ ಹೆಚ್ಚು ಮೆಚ್ಚುಗೆ ತಂದಿವೆ. ಚಿತ್ರದ ಟ್ರೇಲರ್ ನಿಂದಲೇ ನಿರೀಕ್ಷೆ ಹೆಚ್ಚಿಸಿದ್ದ "ಕಿಂಗ್ಡಮ್" ಈಗ ಗೆಲುವಿನ ನಗೆ ಬೀರಿದೆ.

‘ಕಿಂಗ್ಡಮ್’ ಅಡ್ವಾನ್ಸ್ ಬುಕಿಂಗ್ ಬಲು ಜೋರು, ಈ ವರೆಗೆ ಸೇಲ್ ಆಗಿದ್ದೆಷ್ಟು?

Kingdom movie ticket: ವಿಜಯ್ ದೇವರಕೊಂಡ ನಟನೆಯ ‘ಕಿಂಗ್ಡಮ್’ ಸಿನಿಮಾ ನಾಳೆ (ಜುಲೈ 31) ಬಿಡುಗಡೆ ಆಗಲಿದೆ. ಸಿನಿಮಾದ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿ ಮೂರು ದಿನಗಳಾಗಿದ್ದು, ಈ ಮೂರು ದಿನಗಳಲ್ಲಿ ದಾಖಲೆ ಮೊತ್ತದಲ್ಲಿ ಅಡ್ವಾನ್ಸ್ ಬುಕಿಂಗ್ ನಡೆದಿದೆ. ‘ಕಿಂಗ್ಡಮ್’ ಸ್ಪೈ ಥ್ರಿಲ್ಲರ್ ಸಿನಿಮಾ ಆಗಿದ್ದು, ಭಾಗ್ಯಶ್ರೀ ಬೋರ್ಸೆ ನಾಯಕಿ.

ಅಭಿಮಾನಿಗಳು ನಿರೀಕ್ಷಿಸುತ್ತಿದ್ದ ಯಶಸ್ಸು ‘ಕಿಂಗ್ಡಮ್​’ನಿಂದ ಸಿಗಲಿದೆ: ವಿಜಯ್ ದೇವರಕೊಂಡ

Kingdom movie pre release: ವಿಜಯ್ ದೇವರಕೊಂಡ ನಟನೆಯ ‘ಕಿಂಗ್ಡಮ್’ ಸಿನಿಮಾ ಜುಲೈ 31 ರಂದು ಬಿಡುಗಡೆ ಆಗಲಿದೆ. ಸಿನಿಮಾದ ಪ್ರೀ ರಿಲೀಸ್​​ನಲ್ಲಿ ಮಾತನಾಡಿದ ವಿಜಯ್ ದೇವರಕೊಂಡ, ಅಭಿಮಾನಿಗಳ ನಿರೀಕ್ಷೆಯಂತೆಯೇ ಈ ಸಿನಿಮಾ ದೊಡ್ಡ ಹಿಟ್ ಆಗಲಿದೆ ಎಂದಿದ್ದಾರೆ. ಇದೊಂದು ಸ್ಪೈ ಥ್ರಿಲ್ಲರ್ ಸಿನಿಮಾ ಆಗಿದ್ದು ಗೌತಮ್ ತಿನರೂರಿ ಸಿನಿಮಾ ನಿರ್ದೇಶನ ಮಾಡಿದ್ದಾರೆ.

‘ಕಿಂಗ್ಡಮ್’ ಟ್ರೇಲರ್ ಮೂಲಕ ಹೊಸ ಸಿನಿಮಾದ ಆ್ಯಕ್ಷನ್ ಝಲಕ್ ತೋರಿಸಿದ ವಿಜಯ್ ದೇವರಕೊಂಡ

ಅದ್ದೂರಿಯಾಗಿ ಮೂಡಿಬಂದಿರುವ ‘ಕಿಂಗ್ಡಮ್’ ಸಿನಿಮಾದ ಝಲಕ್ ತೋರಿಸಲು ಟ್ರೇಲರ್ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ನಟ ವಿಜಯ್ ದೇವರಕೊಂಡ, ನಟಿ ಭಾಗ್ಯಶ್ರೀ ಮುಂತಾದವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಜುಲೈ 31ರಂದು ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ‘ಕಿಂಗ್ಡಮ್’ ತೆರೆಕಾಣಲಿದ್ದು, ಈಗಾಗಲೇ ಬುಕಿಂಗ್ ಶುರುವಾಗಿದೆ.