ವಿಜಯ್ ದೇವರಕೊಂಡ ನಟನೆಯ ‘ಕಿಂಗ್ಡಮ್’ ಸಿನಿಮಾ: ಹೇಗಿದೆ ಫಸ್ಟ್ ಹಾಫ್?
Kingdom First Half review: ವಿಜಯ್ ದೇವರಕೊಂಡ ನಟನೆಯ ‘ಕಿಂಗ್ಡಮ್’ ಸಿನಿಮಾ ಇಂದು (ಜುಲೈ 31) ಬಿಡುಗಡೆ ಆಗಿದೆ. ರಾಷ್ಟ್ರಪ್ರಶಸ್ತಿ ವಿಜೇತ ‘ಜೆರ್ಸಿ’ ಸಿನಿಮಾ ನಿರ್ದೇಶಿಸಿದ್ದ ಗೌತಮ್ ತಿನರೂರಿ ‘ಕಿಂಗ್ಡಮ್’ ಸಿನಿಮಾ ನಿರ್ದೇಶೀಸಿದ್ದು, ಭಾರಿ ನಿರೀಕ್ಷೆಗಳನ್ನು ಹುಟ್ಟಿಸಿ ಈ ಸಿನಿಮಾ ಬಿಡುಗಡೆ ಆಗಿದೆ. ಹಲವೆಡೆ ಸಿನಿಮಾದ ಮೊದಲಾರ್ಧ ಮುಗಿದಿದ್ದು, ಸಿನಿಮಾದ ಫಸ್ಟ್ ಆಫ್ ರಿವ್ಯೂ ಇಲ್ಲಿದೆ.

Kingdom
ವಿಜಯ್ ದೇವರಕೊಂಡ ನಟನೆಯ ‘ಕಿಂಗ್ಡಮ್’ ಸಿನಿಮಾ ಇಂದು (ಜುಲೈ 31) ಬಿಡುಗಡೆ ಆಗಿದೆ. ಈ ಹಿಂದೆ ‘ಜೆರ್ಸಿ’ ಸಿನಿಮಾ ನಿರ್ದೇಶನ ಮಾಡಿದ್ದ ಗೌತಮ್ ತಿನರೂರಿ ‘ಕಿಂಗ್ಡಮ್’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ಭಾಗ್ಯಶ್ರೀ ಬೋರ್ಸೆ ನಾಯಕಿ. ಸಿನಿಮಾಕ್ಕೆ ಸಂಗೀತ ನೀಡಿರುವುದು ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದ್ರನ್. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ನಿರ್ಮಾಪಕ ನಾಗವಂಶಿ. ಭಾರಿ ನಿರೀಕ್ಷೆಗಳನ್ನು ಹುಟ್ಟಿಸಿ ಈ ಸಿನಿಮಾ ಬಿಡುಗಡೆ ಆಗಿದೆ. ಹಲವೆಡೆ ಸಿನಿಮಾದ ಮೊದಲಾರ್ಧ ಮುಗಿದಿದ್ದು, ಸಿನಿಮಾದ ಫಸ್ಟ್ ಆಫ್ ರಿವ್ಯೂ ಇಲ್ಲಿದೆ.
- ಭರ್ಜರಿ ಥ್ರಿಲ್ಲಿಂಗ್ ಮೊದಲಾರ್ಧ, ಆರಂಭದಿಂದಲೂ ಕುತೂಹಲ ಕೆರಳಿಸುವ ಕತೆ
- ವಿಜಯ್ ದೇವರಕೊಂಡ ಎಂಟ್ರಿ ಸರಳ, ಕತೆ ಮುಂದುವರೆದಂತೆ ನಾಯಕನ ವಿರಾಟ್ ರೂಪ ಪ್ರೇಕ್ಷಕರಿಗೆ ಎದುರಾಗುತ್ತದೆ.
- ಪೊಲೀಸ್ ಕಾನ್ಸ್ಟೇಬಲ್ ಆಗಿ ಪ್ರೇಕ್ಷಕರಿಗೆ ಪರಿಚಯವಾಗುವ ನಾಯಕ ನಂತರ ಸ್ಪೈ ಆಗಿ ರೂಪುಗೊಳ್ಳುತ್ತಾನೆ. ಅದರ ಹಿಂದೆ ಬಲವಾದ ಕಾರಣವಿದೆ.
- ಆಕ್ಷನ್ ದೃಶ್ಯಗಳು ಅದ್ಭುತವಾಗಿವೆ, ಆಕ್ಷನ್ ಜೊತೆಗೆ ಭಾವುಕತೆಯೂ ಬೆರೆಸಿದ್ದಾರೆ ನಿರ್ದೇಶಕ.
- ಸಿನಿಮಾಟೊಗ್ರಫಿ ಅದ್ಭುತವಾಗಿದೆ. ಅದ್ಬುತ ಲೊಕೇಶನ್ ಗಳಲ್ಲಿ ಶೂಟಿಂಗ್ ಮಾಡಲಾಗಿದೆ.
- ಅಣ್ಣನ ಹುಡುಕಿಕೊಂಡು ಹೋಗುವ ನಾಯಕ, ಪಾತಕಿಗಳ ಲೋಕದಲ್ಲಿ ಸಿಲುಕಿದ್ದಾನೆ. ಆತ ಅಲ್ಲಿಂದ ಅಣ್ಣನನ್ನು ಹೇಗೆ ಕಾಪಾಡುತ್ತಾನೆ, ಪಾತಕಿಗಳನ್ನು ಹೇಗೆ ಮಟ್ಟ ಹಾಕುತ್ತಾನೆ ಎಬುದು ದ್ವೀತೀಯಾರ್ಧದ ಕತೆ.
- ಸಾಮಾನ್ಯ ಕಮರ್ಶಿಯಲ್ ಸಿನಿಮಾಗಳಿಗಿಂತ ಭಿನ್ನವಾಗಿ ಸಿನಿಮಾ ಕಟ್ಟಲಾಗಿದೆ. ನಾಯಕಿಯ ಪಾತ್ರದ ಎಂಟ್ರಿಯೂ ಸರಳ, ನಾಯಕನ ಸಾಹಸಕ್ಕೆ ನಾಯಕಿಯ ಬೆಂಬಲ ಇದೆ.
- ಮೊದಲಾರ್ಧದಲ್ಲಿ ಬರುವ ಹಾಡುಗಳು ಚೆನ್ನಾಗಿದೆ. ಅನಿರುದ್ಧ ಹಿನ್ನೆಲೆ ಸಂಗೀತ ದೃಶ್ಯಗಳಗೆ ತೀವ್ರತೆ ಒದಗಿಸಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




