AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಿಂಗ್ಡಮ್’ ನೋಡುವವರಿಗೆ ಭರ್ಜರಿ ಅವಕಾಶ ಕೊಟ್ಟ ನಿರ್ಮಾಪಕ

Kingdom movie story: ವಿಜಯ್ ದೇವರಕೊಂಡ ನಟನೆಯ ‘ಕಿಂಗ್ಡಮ್’ ಸಿನಿಮಾ ನಿನ್ನೆ ಬಿಡುಗಡೆ ಆಗಿದ್ದು ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡಿದೆ. ಆದರೆ ಕೆಲವು ಯೂಟ್ಯೂಬರ್​ಗಳು ಸಿನಿಮಾದ ಬಗ್ಗೆ ನೆಗೆಟಿವ್ ವಿಮರ್ಶೆ ನೀಡಿದ್ದಾರೆ. ಆದರೆ ನಿರ್ಮಾಪಕ ನಾಗವಂಶಿ, ನಾವು ಒಳ್ಳೆಯ ಸಿನಿಮಾ ಮಾಡಿದ್ದೇವೆ ಎಂದಿದ್ದಾರಲ್ಲದೆ, ಸಿನಿಮಾ ನೋಡಿದವರಿಗೆ ಆಫರ್ ಒಂದನ್ನು ನೀಡಿದ್ದಾರೆ.

‘ಕಿಂಗ್ಡಮ್’ ನೋಡುವವರಿಗೆ ಭರ್ಜರಿ ಅವಕಾಶ ಕೊಟ್ಟ ನಿರ್ಮಾಪಕ
Kingdom Movie
ಮಂಜುನಾಥ ಸಿ.
|

Updated on:Aug 01, 2025 | 11:54 AM

Share

ವಿಜಯ್ ದೇವರಕೊಂಡ (Vijay Deverakonda) ನಟನೆಯ ‘ಕಿಂಗ್ಡಮ್’ ಸಿನಿಮಾ ನಿನ್ನೆ (ಜುಲೈ 31) ಬಿಡುಗಡೆ ಆಗಿದೆ. ಮೊದಲ ದಿನವೇ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಸಿನಿಮಾ ನೋಡಿದ ಮಂದಿ ಮೆಚ್ಚಿಕೊಂಡಿದ್ದಾರೆ. ಆದರೆ ಕೆಲ ಯೂಟ್ಯೂಬ್ ವಿಮರ್ಶಕರು ಸಿನಿಮಾದ ಬಗ್ಗೆ ನೆಗೆಟಿವ್ ಆಗಿ ಕಮೆಂಟ್ ಮಾಡಿದ್ದಾರೆ. ಅದರಲ್ಲೂ ಸಿನಿಮಾದ ಮೊದಲಾರ್ಧ ಚೆನ್ನಾಗಿದೆ, ಎರಡನೇ ಅರ್ಧ ಕೆಟ್ಟದಾಗಿದೆ ಎಂದು ಹಲವರು ಹೇಳಿದ್ದಾರೆ. ಆದರೆ ಇದೀಗ ‘ಕಿಂಗ್ಡಮ್’ ಸಿನಿಮಾ ನಿರ್ಮಾಪಕ ನಾಗವಂಶಿ, ‘ಕಿಂಗ್ಡಮ್’ ಸಿನಿಮಾ ನೋಡುವ ಪ್ರೇಕ್ಷಕರಿಗೆ ಭರ್ಜರಿ ಆಫರ್ ಕೊಟ್ಟಿದ್ದಾರೆ.

ಯೂಟ್ಯೂಬರ್​ಗಳ ನೆಗೆಟಿವ್ ರಿವ್ಯೂ ಬೆನ್ನಲ್ಲೆ ಹೇಳಿಕೆ ನೀಡಿರುವ ನಾಗವಂಶಿ, ‘ಸಿನಿಮಾಗಳ ಮೊದಲಾರ್ಧ ಚೆನ್ನಾಗಿದೆ, ಎರಡನೇ ಅರ್ಧ ಚೆನ್ನಾಗಿಲ್ಲ ಎಂಬೆಲ್ಲ ಮಾತುಗಳು ಸಾಮಾನ್ಯವಾಗಿ ಎಲ್ಲ ಸಿನಿಮಾಗಳಿಗೂ ಹೇಳುತ್ತಿರುತ್ತಾರೆ. ಪ್ರೇಕ್ಷಕರು ಅವುಗಳನ್ನೆಲ್ಲ ನಂಬದೆ ಖುದ್ದಾಗಿ ಸಿನಿಮಾಕ್ಕೆ ಹೋಗಿ ನೋಡಿ. ನಿಮಗೆ ಸಿನಿಮಾ ಇಷ್ಟವಾಗದೇ ಇದ್ದರೆ, ನನಗೆ ಫೋನ್ ಮಾಡಿ ಬೈಯ್ಯಿರಿ’ ಎಂದಿದ್ದಾರೆ.

‘ಕಿಂಗ್ಡಮ್’ ಸಿನಿಮಾವನ್ನು ನಾವು ಬಹಳ ಶ್ರದ್ಧೆಯಿಂದ ಮಾಡಿದ್ದೇವೆ. ನಮ್ಮ ಸಿನಿಮಾದ ಗುಣಮಟ್ಟ ಹಾಲಿವುಡ್ ಸಿನಿಮಾಗಳ ತಾಂತ್ರಿಕ ಗುಣಮಟ್ಟಕ್ಕೆ ಸಮನಾಗಿದೆ. ಯಾರೋ ವಿಮರ್ಶಕರು ಹೇಳಿದ ಮಾತುಗಳನ್ನು ಕೇಳಬೇಡಿ, ಅವು ಸತ್ಯವಾಗಿರುವುದಿಲ್ಲ. ನೀವು ಸಿನಿಮಾ ನೋಡಿ, ನೀವೇ ತೀರ್ಮಾನ ಮಾಡಿ. ನಾವು ಒಳ್ಳೆಯ ಸಿನಿಮಾ ಅನ್ನೇ ಮಾಡಿದ್ದೇವೆ’ ಎಂದಿದ್ದಾರೆ ನಾಗವಂಶಿ.

ಇದನ್ನೂ ಓದಿ:Kingdom movie review: ಪಾಪಿಗಳ ಲೋಕದಲ್ಲಿ ದಮನಿತರ ದೇವರಾಗುವನೇ ಗೂಢಚಾರಿ?

ನಾಗವಂಶಿ ಮೊದಲಿನಿಂದಲೂ ಯೂಟ್ಯೂಬ್ ರಿವ್ಯೂವರ್​ಗಳ ವಿರುದ್ಧ ಇದ್ದಾರೆ. ಈ ಮೊದಲೂ ಸಹ ಅವರು ಫಸ್ಟ್ ಡೇ ಫಸ್ಟ್ ಶೋ ವಿಮರ್ಶೆಗಳನ್ನು ವಿರೋಧಿಸಿದ್ದರು. ತಮ್ಮ ಸಿನಿಮಾ ಬಗ್ಗೆ ಋಣಾತ್ಮಕವಾಗಿ ಕಮೆಂಟ್ ಮಾಡಿದ ಕೆಲ ವಿಮರ್ಶಕರ ವಿರುದ್ಧ ವಾಗ್ದಾಳಿ ಸಹ ಮಾಡಿದ್ದರು. ಇದೀಗ ಅವರ ಸಿನಿಮಾಕ್ಕೆ ಕೆಲವರು ನೆಗೆಟಿವ್ ವಿಮರ್ಶೆಗಳನ್ನು ನೀಡಿರುವುದು ಅವರಿಗೆ ಬೇಸರ ತರಿಸಿದೆ.

‘ಕಿಂಗ್ಡಮ್’ ವಿಜಯ್ ದೇವರಕೊಂಡ ನಟನೆಯ ಸಿನಿಮಾ ಆಗಿದ್ದು, ಸಿನಿಮಾ ನಿರ್ದೇಶನ ಮಾಡಿರುವುದು ‘ಜೆರ್ಸಿ’ ಖ್ಯಾತಿಯ ಗೌತಮ್ ತಿನ್ನನೂರಿ. ಸಿನಿಮಾನಲ್ಲಿ ಭಾಗ್ಯಶ್ರೀ ಬೋರ್ಸೆ ನಾಯಕಿ. ಸಿನಿಮಾದ ಮತ್ತೊಂದು ಪ್ರಮುಖ ಪಾತ್ರದಲ್ಲಿ ಸತ್ಯದೇವ್ ನಟಿಸಿದ್ದಾರೆ. ಇದೊಂದು ಸ್ಪೈ ಥ್ರಿಲ್ಲರ್ ಸಿನಿಮಾ ಆಗಿದ್ದು, ಸಿನಿಮಾ ನೋಡಿದ ಮಂದಿ ವಿಜಯ್ ದೇವರಕೊಂಡ ನಟನೆಗೆ ಫಿದಾ ಆಗಿದ್ದಾರೆ. ಸಿನಿಮಾಕ್ಕೆ ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:53 am, Fri, 1 August 25