AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಿಂಗ್ಡಮ್’ ಅಡ್ವಾನ್ಸ್ ಬುಕಿಂಗ್ ಬಲು ಜೋರು, ಈ ವರೆಗೆ ಸೇಲ್ ಆಗಿದ್ದೆಷ್ಟು?

Kingdom movie ticket: ವಿಜಯ್ ದೇವರಕೊಂಡ ನಟನೆಯ ‘ಕಿಂಗ್ಡಮ್’ ಸಿನಿಮಾ ನಾಳೆ (ಜುಲೈ 31) ಬಿಡುಗಡೆ ಆಗಲಿದೆ. ಸಿನಿಮಾದ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿ ಮೂರು ದಿನಗಳಾಗಿದ್ದು, ಈ ಮೂರು ದಿನಗಳಲ್ಲಿ ದಾಖಲೆ ಮೊತ್ತದಲ್ಲಿ ಅಡ್ವಾನ್ಸ್ ಬುಕಿಂಗ್ ನಡೆದಿದೆ. ‘ಕಿಂಗ್ಡಮ್’ ಸ್ಪೈ ಥ್ರಿಲ್ಲರ್ ಸಿನಿಮಾ ಆಗಿದ್ದು, ಭಾಗ್ಯಶ್ರೀ ಬೋರ್ಸೆ ನಾಯಕಿ.

‘ಕಿಂಗ್ಡಮ್’ ಅಡ್ವಾನ್ಸ್ ಬುಕಿಂಗ್ ಬಲು ಜೋರು, ಈ ವರೆಗೆ ಸೇಲ್ ಆಗಿದ್ದೆಷ್ಟು?
Vijay Deverakonda
ಮಂಜುನಾಥ ಸಿ.
|

Updated on: Jul 30, 2025 | 6:10 PM

Share

ವಿಜಯ್ ದೇವರಕೊಂಡ (Vijay Deverakonda) ನಟನೆಯ ‘ಕಿಂಗ್ಡಮ್’ ಸಿನಿಮಾ ಬಿಡುಗಡೆಗೆ ಕೆಲ ಗಂಟೆಗಳಷ್ಟೆ ಬಾಕಿ ಇದೆ. ಆಂಧ್ರ, ತೆಲಂಗಾಣ, ಕರ್ನಾಟಕ, ತಮಿಳುನಾಡು, ಕೇರಳ, ಮುಂಬೈ ಸೇರಿದಂತೆ ಇನ್ನೂ ಹಲವು ಪ್ರಮುಖ ರಾಜ್ಯಗಳು ಮತ್ತು ವಿದೇಶಗಳಲ್ಲಿಯೂ ಸಹ ‘ಕಿಂಗ್ಡಮ್’ ಸಿನಿಮಾ ಬಲು ಅದ್ಧೂರಿಯಾಗಿ ಬಿಡುಗಡೆ ಆಗುತ್ತಿದೆ. ಆಂಧ್ರ, ತೆಲಂಗಾಣದಲ್ಲಿ ಮಾತ್ರವೇ ಅಲ್ಲದೆ, ಬೆಂಗಳೂರಿನಲ್ಲಿಯೂ ಸಹ ಹಲವು ಕಡೆಗಳಲ್ಲಿ ಅರ್ಲಿ ಮಾರ್ನಿಂಗ್ ಶೋಗಳನ್ನು ಪ್ರದರ್ಶಿಸಲಾಗುತ್ತಿದೆ. ಸಿನಿಮಾದ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿ ಮೂರು ದಿನಗಳಾಗಿದ್ದು, ಬುಕಿಂಗ್ ಬಲು ಜೋರಾಗಿ ನಡೆಯುತ್ತಿದೆ.

‘ಕಿಂಗ್ಡಮ್’ ಸಿನಿಮಾದ ಅಡ್ವನ್ಸ್ ಬುಕಿಂಗ್ ಓಪನ್ ಆಗಿ ಮೂರು ದಿನಗಳಾಗಿವೆ. ಮೊದಲ ದಿನ ಬುಕಿಂಗ್ ಓಪನ್ ಆದಾಗ ಕೇವಲ ಒಂದು ಗಂಟೆಯಲ್ಲಿ ನಾಲ್ಕು ಸಾವಿರ ಟಿಕೆಟ್ ಮುಂಗಡವಾಗಿ ಬುಕ್ ಆಗಿದ್ದವು. ಆಗಿನಿಂದಲೂ ಬುಕಿಂಗ್ ವೇಗ ಕಡಿಮೆ ಆಗಿಲ್ಲ. ಮೊದಲ ದಿನ 29400 ಟಿಕೆಟ್​ಗಳು ದೇಶದಾದ್ಯಂತ ಮುಂಗಡವಾಗಿ ಬುಕ್ ಆಗಿದ್ದವು. ಎರಡನೇ ದಿನ ಸುಮಾರು 34 ಸಾವಿರ ಟಿಕೆಟ್​ಗಳು ಮುಂಗಡವಾಗಿ ಬುಕ್ ಆದವು. ಬಳಿಕ ಮೂರನೇ ದಿನ 70400 ಟಿಕೆಟ್​ಗಳು ಮುಂಗಡವಾಗಿ ಬುಕ್ ಆಗಿವೆ. ಮೂರು ದಿನಗಳಲ್ಲಿ ಒಟ್ಟು 1.35 ಲಕ್ಷ ಟಿಕೆಟ್​ಗಳು ಬುಕ್ ಆಗಿವೆ.

ವಿಜಯ್ ದೇವರಕೊಂಡ ನಟನೆಯ ಈ ಹಿಂದಿನ ಇನ್ಯಾವ ಸಿನಿಮಾಗಳ ಟಿಕೆಟ್​ಗಳು ಮುಂಗಡವಾಗಿ ಇಷ್ಟು ಲಘು-ಬಗೆಯಲ್ಲಿ ಬಿಕಿರಿ ಆಗಿರಲಿಲ್ಲ. ಸಿನಿಮಾದ ಮುಂಗಡ ಬುಕಿಂಗ್​ನಿಂದಲೇ ಸಾಕಷ್ಟು ಮೊತ್ತ ಗಳಿಸುವ ಭರವಸೆಯನ್ನು ಸಿನಿಮಾ ಮೂಡಿಸಿದೆ. ಸಿನಿಮಾದ ಪ್ರಚಾರವನ್ನು ವಿಜಯ್ ದೇವರಕೊಂಡ ಬಲು ಜೋರಾಗಿ ಮಾಡಿದ್ದು, ಅದರ ಪ್ರತಿಫಲ ಅಡ್ವಾನ್ಸ್ ಬುಕಿಂಗ್​ ಮೂಲಕ ದೊರಕುತ್ತಿದೆ. ಆಂಧ್ರ-ತೆಲಂಗಾಣಗಳಲ್ಲಿ ಭಾರಿ ದೊಡ್ಡ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ. ಮೊದಲ ದಿನವೇ ಎರಡೂ ರಾಜ್ಯಗಳಲ್ಲಿ 1200ಕ್ಕೂ ಹೆಚ್ಚು ಶೋಗಳನ್ನು ಪ್ರದರ್ಶನ ಮಾಡಲಾಗುತ್ತಿದೆ.

ಇದನ್ನೂ ಓದಿ:ಅಭಿಮಾನಿಗಳು ನಿರೀಕ್ಷಿಸುತ್ತಿದ್ದ ಯಶಸ್ಸು ‘ಕಿಂಗ್ಡಮ್​’ನಿಂದ ಸಿಗಲಿದೆ: ವಿಜಯ್ ದೇವರಕೊಂಡ

‘ಕಿಂಗ್ಡಮ್’ ಸ್ಪೈ ಥ್ರಿಲ್ಲರ್ ಸಿನಿಮಾ ಆಗಿದ್ದು, ಸಿನಿಮಾನಲ್ಲಿ ವಿಜಯ್ ದೇವರಕೊಂಡ ಜೊತೆಗೆ ಭಾಗ್ಯಶ್ರೀ ಬೋರ್ಸೆ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಗೌತಮ್ ತಿನರೂರಿ. ಈ ಹಿಂದೆ ಇವರು ‘ಜೆರ್ಸಿ’ ಸಿನಿಮಾ ನಿರ್ದೇಶಿಸಿದ್ದರು. ಸಿನಿಮಾನಲ್ಲಿ ಜನಪ್ರಿಯ ನಟ ಸತ್ಯದೇವ್ ಸಹ ಪ್ರಮುಖವಾದ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾಕ್ಕೆ ಸಂಗೀತವನ್ನು ತಮಿಳಿನ ಸ್ಟಾರ್ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದ್ರನ್ ನೀಡಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ನಿರ್ಮಾಪಕ ನಾಗವಂಶಿ. ಸಿನಿಮಾ ಜುಲೈ31 ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ