
ವಿಜಯ್ ದೇವರಕೊಂಡ (Vijay Deverakonda) ನಟನೆಯ ‘ಕಿಂಗ್ಡಮ್’ ಸಿನಿಮಾ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ನಿನ್ನೆಯಷ್ಟೆ (ಜುಲೈ 26) ತಿರುಪತಿಯಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಗೌತಮ್ ತಿನರೂರಿ ನಿರ್ದೇಶನ ಮಾಡಿರುವ ಈ ಸಿನಿಮಾದ ಈ ವರೆಗೆ ಬಿಡುಗಡೆ ಆಗಿರುವ ಹಾಡುಗಳು ಮತ್ತು ನಿನ್ನೆ ಬಿಡುಗಡೆ ಆಗಿರುವ ಟ್ರೈಲರ್ ಗಮನ ಸೆಳೆದಿದ್ದು, ಸಿನಿಮಾದ ಬಗ್ಗೆ ನಿರೀಕ್ಷೆಗಳನ್ನು ಹೆಚ್ಚಿಸಿದೆ. ಇದೆಲ್ಲದರ ನಡುವೆ ಸಿನಿಮಾದ ನಾಯಕ ವಿಜಯ್ ದೇವರಕೊಂಡ ತಮ್ಮ ರಿಲೇಶನ್ಶಿಪ್ಗಳ ಬಗ್ಗೆ ಆಡಿರುವ ಮಾತುಗಳು ಸಹ ವೈರಲ್ ಆಗಿವೆ.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಕಳೆದ ಕೆಲ ವರ್ಷಗಳಿಂದಲೂ ಪ್ರೀತಿಯಲ್ಲಿದ್ದಾರೆ. ಅದು ಗುಟ್ಟಾಗಿ ಏನೂ ಉಳಿದಿಲ್ಲ. ಹಾಗೆಂದು ಇಬ್ಬರೂ ಸಹ ನೇರವಾಗಿ ಮಾಧ್ಯಮಗಳ ಮುಂದೆ ತಮ್ಮ ಪ್ರೀತಿಯ ಬಗ್ಗೆ ಮಾತನಾಡಿಲ್ಲ. ವಿಜಯ್ ದೇವರಕೊಂಡ ಅವರ ‘ಕಿಂಗ್ಡಮ್’ ಸಿನಿಮಾದ ಟ್ರೈಲರ್ ಬಿಡುಗಡೆ ಆಗುತ್ತಿದ್ದಂತೆ ಟ್ವೀಟ್ ಮಾಡಿರುವ ರಶ್ಮಿಕಾ ಮಂದಣ್ಣ, ‘31ನೇ ತಾರೀಖಿಗೆ ಎದುರು ನೋಡುತ್ತಿದ್ದೇನೆ. ವಿಜಯ್ ದೇವರಕೊಂಡ ಬೆಂಕಿಯಂತೆ ಹೊಳೆಯುತ್ತಿದ್ದಾರೆ. ವಿಜಯ್, ಅನಿರುದ್ಧ್, ಗೌತಮ್ ಮೂವರು ಅದ್ಭುತ ಪ್ರತಿಭಾವಂತರು ಸೇರಿ ಏನು ಮಾಡಿದ್ದೀರಿ ಎಂಬುದನ್ನು ನೋಡುವ ಕಾತರ ನನಗಿದೆ’ ಎಂದಿದ್ದಾರೆ.
ಕೆಲ ದಿನಗಳ ಹಿಂದಷ್ಟೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಜೊತೆಗೆ ಪಾಡ್ಕಾಸ್ಟ್ ನಲ್ಲಿ ಮಾತನಾಡಿದ್ದ ವಿಜಯ್ ದೇವರಕೊಂಡ, ಹೆಸರು ಹೇಳದೆ ರಶ್ಮಿಕಾ ಮಂದಣ್ಣ ಬಗ್ಗೆ ಮಾತನಾಡಿದ್ದರು. ಕಳೆದ ಎರಡು-ಮೂರು ವರ್ಷಗಳಲ್ಲಿ ತಮ್ಮ ವ್ಯಕ್ತಿದಲ್ಲಿ ಆಗಿರುವ ಬದಲಾವಣೆ ಬಗ್ಗೆ ಮಾತನಾಡಿರುವ ವಿಜಯ್ ದೇವರಕೊಂಡ, ‘ಮೊದಲೆಲ್ಲ ನಾನು ಸಂಬಂಧಗಳಿಗೆ ಕೊಡಬೇಕಾದಷ್ಟು ಬೆಲೆ ಕೊಡುತ್ತಿರಲಿಲ್ಲ. ಆದರೆ ಕಳೆದ ಎರಡು-ಮೂರು ವರ್ಷಗಳಲ್ಲಿ ಸಾಕಷ್ಟು ಬದಲಾಗಿದ್ದೇನೆ’ ಎಂದಿದ್ದಾರೆ.
ಇದನ್ನೂ ಓದಿ:ಕಿಂಗ್ಡಮ್ ಟ್ರೈಲರ್: ನಮ್ಮನ್ಯಾರು ತಡೆಯೋರು ಎಂದ ವಿಜಯ್ ದೇವರಕೊಂಡ
‘ಅಪ್ಪ-ಅಮ್ಮನೊಟ್ಟಿಗೆ ಹೆಚ್ಚು ಸಮಯ ಕಳೆಯುತ್ತಿದ್ದೇನೆ. ರಿಲೇಶನ್ಗಳಿಗೆ (ರಶ್ಮಿಕಾ ಮಂದಣ್ಣ) ಸಹ ಹೆಚ್ಚು ಸಮಯ ಕೊಡುತ್ತಿದ್ದೀನಿ. ಅದೆಲ್ಲ ಬಹಳ ಅವಶ್ಯಕ ಎಂದು ನಾನು ತಿಳಿದುಕೊಂಡಿದ್ದೀನಿ’ ಎಂದಿದ್ದಾರೆ ವಿಜಯ್ ದೇವರಕೊಂಡ. ಅಸಲಿಗೆ ಇತ್ತೀಚೆಗೆ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಹೆಚ್ಚು ಸಮಯ ಒಟ್ಟಿಗೆ ಕಳೆಯುತ್ತಿದ್ದಾರೆ. ವಿದೇಶ ಪ್ರವಾಸ ಸಹ ಹೋಗಿ ಬಂದಿದ್ದರು ಈ ಜೋಡಿ. ರಶ್ಮಿಕಾ ಅಂತೂ ಹಬ್ಬಗಳು ಬಂದಾಗಲೆಲ್ಲ ವಿಜಯ್ ದೇವರಕೊಂಡ ಮನೆಯಲ್ಲಿಯೇ ಸಂಭ್ರಮಾಚರಣೆ ಮಾಡುತ್ತಾರೆ.
‘ಕಿಂಗ್ಡಮ್’ ಸಿನಿಮಾ ಜುಲೈ 31 ರಂದು ಬಿಡುಗಡೆ ಆಗಲಿದೆ. ಈ ಸಿನಿಮಾದ ಬಳಿಕ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಇಬ್ಬರೇ ನಟಿಸಿದ್ದ ಸೂಪರ್ ಹಿಟ್ ಸಿನಿಮಾ ‘ಗೀತಾ ಗೋವಿಂದಂ’ ಸಿನಿಮಾದ ಎರಡನೇ ಭಾಗದಲ್ಲಿ ಈ ಜೋಡಿ ಮತ್ತೊಮ್ಮೆ ಒಟ್ಟಿಗೆ ನಟಿಸುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ