ವಿಜಯ್-ರಶ್ಮಿಕಾ ಮದುವೆಗೆ ಬರೋ ಅತಿಥಿಗಳಿಗೆ ಇರಲಿದೆ ಕಠಿಣ ನಿಯಮ

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಫೆಬ್ರವರಿ 26ರಂದು ಉದಯಪುರದಲ್ಲಿ ಮದುವೆಯಾಗಲಿದ್ದಾರೆಂದು ವರದಿಯಾಗಿದೆ. ವೈರಲ್ ಆದ ಆಮಂತ್ರಣ ಪತ್ರದಲ್ಲಿ ಮಾರ್ಚ್ 4ಕ್ಕೆ ಹೈದರಾಬಾದ್‌ನಲ್ಲಿ ಆರತಕ್ಷತೆ ಇದೆ. ಈ ವಿವಾಹದಲ್ಲಿ ಅತಿಥಿಗಳಿಗೆ ಮೊಬೈಲ್ ನಿಷೇಧ, ಫೋಟೋ ಲೀಕ್ ತಡೆಯಲು ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ.

ವಿಜಯ್-ರಶ್ಮಿಕಾ ಮದುವೆಗೆ ಬರೋ ಅತಿಥಿಗಳಿಗೆ ಇರಲಿದೆ ಕಠಿಣ ನಿಯಮ
ವಿಜಯ್-ರಶ್ಮಿಕಾ

Updated on: Feb 17, 2026 | 1:01 PM

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ (Rashmika Mandannna) ಫೆಬ್ರವರಿ 26ರಂದು ಮದುವೆ ಆಗೋದು ಬಹುತೇಕ ಖಚಿತವಾಗಿದೆ. ಉದಯಪುರದಲ್ಲಿ ಇವರ ವಿವಾಹ ನಡೆಯುತ್ತಿದೆ. ಈಗಾಗಲೇ ದಂಪತಿಯ ವಿವಾಹ ಆಮಂತ್ರಣದ ಫೋಟೋಗಳು ವೈರಲ್ ಆಗಿವೆ. ಹೀಗಿರುವಾಗಲೇ ಈ ದಂಪತಿ ಮದುವೆ ನಡೆಯೋ ಜಾಗದಲ್ಲಿ ತೆಗೆದುಕೊಂಡು ಬಂದ ನಿಯಮದ ಬಗ್ಗೆ ಸುದ್ದಿ ಹರಿದಾಡಿದೆ. ಆ ಬಗ್ಗೆ ಇಲ್ಲಿದೆ ವಿವರ.

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆಯ ಸುಂದರ ಕ್ಷಣಗಳನ್ನು ಸೆರೆ ಹಿಡಿಯಲು ಟೀಂ ಒಂದನ್ನು ಆಯ್ಕೆ ಮಾಡಿದೆ. ಈ ತಂಡ ತಮ್ಮ ಕ್ಯಾಮೆರಾ ಮೂಲಕ ಫೋಟೋಗ್ರಫಿ ಹಾಗೂ ವಿಡಿಯೋಗ್ರಫಿ ಮಾಡಲಿದೆ. ಈ ಫೋಟೋಗನ್ನು ಎಲ್ಲಿಯೂ ರಿವೀಲ್ ಮಾಡುವುದಿಲ್ಲ ಮತ್ತು ಹಂಚಿಕೊಳ್ಳುವುದಿಲ್ಲ ಎಂದು ಒಪ್ಪಂದ ಮಾಡಿಕೊಂಡು ಸಹಿ ಹಾಕಿಸಿಕೊಳ್ಳಲಾಗಿದೆ.

ಇನ್ನು, ವಿಜಯ್ ಮದುವೆಗೆ ಆಪ್ತರು ಹಾಗೂ ಸ್ನೇಹಿತರು ಮಾತ್ರ ಭಾಗಿ ಆಗಲಿದ್ದಾರೆ ಎಂದು ವರದಿ ಆಗಿದೆ. ಹೀಗಾಗಿ, ಅವರ್ಯಾರು ಮೊಬೈಲ್ ತರದಂತೆ ಕಠಿಣ ನಿಯಮವನ್ನು ಮಾಡಲಾಗಿದೆ. ಮದುವೆಗೆ ಬರೋ ಅತಿಥಿಗಳು ಮೊಬೈಲ್​​​ ಅನ್ನು ತರುವಂತಿಲ್ಲ. ಮೊಬೈಲ್ ಬಳಕೆ ತಡೆಯಲು ಚೆಕಿಂಗ್ ಇರುತ್ತದೆ. ವಿವಾಹ ನಡೆಯೋ ಜಾಗದಲ್ಲಿಯೂ ಈ ಬಗ್ಗೆ ಕಣ್ಣಿಡಲು ಜನರನ್ನು ನೇಮಿಸಲಾಗಿದೆ.

ಈ ರೀತಿಯ ಫೋಟೋ-ವಿಡಿಯೋ ಲೀಕ್ ಆಗದಂತೆ ನೋಡಿಕೊಳ್ಳುವುದು ರಶ್ಮಿಕಾ-ವಿಜಯ್​​ಗೆ ಇರೋ ದೊಡ್ಡ ಚಾಲೆಂಜ್. ಈ ಮೊದಲು ಕತ್ರಿನಾ ಕೈಫ್-ವಿಕ್ಕಿ ಕೌಶಲ್ ದಂಪತಿ, ಕಿಯಾರಾ ಅಡ್ವಾಣಿ ಹಾಗೂ ಸಿದ್ದಾರ್ಥ್ ಮಲ್ಹೋತ್ರಾ ಕೂಡ ಮೊಬೈಲ್ ತರದಂತೆ ನಿಯಮ ತಂದಿದ್ದರು. ಆ ತಂತ್ರ ಕೆಲಸ ಮಾಡಿತ್ತು. ಈಗ ರಶ್ಮಿಕಾ-ವಿಜಯ್ ಕೂಡ ಇದೇ ಪಾಲಿಸಿ ಅಳವಡಿಸಿಕೊಳ್ಳುತ್ತಿದ್ದಾರೆ.

ಚಿತ್ರರಂಗದ ಯಾರನ್ನೂ ಮದುವೆಗೆ ಆಮಂತ್ರಿಸಿಲ್ಲ ಎನ್ನಲಾಗಿದೆ. ರಶ್ಮಿಕಾ ಮಂದಣ್ಣ ಅವರು ಹಲವು ಸೆಲೆಬ್ರಿಟಿಗಳ ಜೊತೆ ಕೆಲಸ ಮಾಡಿದ್ದಾರೆ. ಅವರೆಲ್ಲರನ್ನೂ ಹೈದರಾಬಾದ್​​ನ ಆರತಕ್ಷತೆಗೆ ಆಮಂತ್ರಿಸಲಾಗುತ್ತಿದೆ. ಮದುವೆ ಕೇವಲ ಆಪ್ತರ ಸಮ್ಮುಖದಲ್ಲಿ ನಡೆಯುತ್ತಿದೆ ಎಂಬುದು ವಿಶೇಷ.

ಇದನ್ನೂ ಓದಿ: ಮದುವೆಗೂ ಮುನ್ನ ಮ್ಯಾಚಿಂಗ್ ಡ್ರೆಸ್ ಹಾಕಿ ಮುಂಬೈನಿಂದ ಹಾರಿದ ವಿಜಯ್-ರಶ್ಮಿಕಾ

ವಿಜಯ್ ಹಾಗೂ ರಶ್ಮಿಕಾ ಅವರ ವಿವಾಹ ಆಮಂತ್ರಣ ಪತ್ರ ವೈರಲ್ ಆಗಿದೆ. ಇದರಲ್ಲಿ ವಿವಾಹ ದಿನಾಂಕ ಫೆಬ್ರವರಿ 26 ಎಂದಿದೆ. ಮಾರ್ಚ್​ 4ರಂದು ಹೈದರಾಬಾದ್​​​ನ್ಲಿ ಆರತಕ್ಷತೆ ಇದೆ ಎಂಬ ಮಾಹಿತಿಯೂ ರಿವೀಲ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us