ತಮಿಳು ನಟ ವಿಜಯ್ ಸೇತುಪತಿ ಅವರಿಗೆ ಇಂದು (ಜನವರಿ 16) ಜನ್ಮದಿನ. ಲುಕ್ ಮುಖ್ಯವಲ್ಲ, ನಟನೆ ಮಾತ್ರ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ ಎಂಬುದನ್ನು ಸಾಬೀತು ಮಾಡಿದವರು ಅವರು. ತಮ್ಮಿಷ್ಟದ ಆಹಾರ ಸೇವನೆ ಮಾಡುತ್ತಾ ಅವರು ಹಾಯಾಗಿದ್ದಾರೆ. ಸಿನಿಮಾ ರಂಗಕ್ಕೆ ಬರುವುದಕ್ಕೂ ಮೊದಲು ವಿಜಯ್ ಕಷ್ಟದ ಜೀವನ ನಡೆಸಿದ್ದರು. ಈಗ ಅವರಿಗೆ ಯಶಸ್ಸು ಸಿಕ್ಕ ಬಳಿಕವೂ ಸಿಂಪಲ್ ಜೀವನ ನಡೆಸುತ್ತಾ ಇದ್ದಾರೆ.
ವಿಜಯ್ ಸೇತುಪತಿ ಅವರು ದುಬೈನಲ್ಲಿ ಅಕೌಂಟಂಟ್ ಆಗಿದ್ದರು. ನಂತರ ಥಿಯೇಟರ್ ಕಂಪನಿ ಒಂದಕ್ಕೆ ಅಕೌಂಟಂಟ್ ಆಗಿ ಸೇರಿಕೊಂಡರು. ‘ಅಕೌಂಟಂಟ್ ಆಗಿ ಕೆಲಸ ಮಾಡುವುದರಿಂದ ನಾನು ಪ್ರತಿದಿನ ನಟರನ್ನು ನೋಡಬಹುದು, ಅವರೊಂದಿಗೆ ಇರಬಹುದು, ಅವರೊಂದಿಗೆ ಮಾತನಾಡಬಹುದು ಮತ್ತು ನಟನೆಯ ಕಲೆಯನ್ನು ಅರ್ಥಮಾಡಿಕೊಳ್ಳಬಹುದು ಎಂದು ನಾನು ಭಾವಿಸಿದೆ. ಪ್ರತಿ ಕ್ಷಣ, ಊಟದ ಸಮಯವೂ ನನಗೆ ಕಲಿಕೆಯ ಅನುಭವವಾಗಿತ್ತು. ನಟರ ಸುತ್ತಲೂ ಇರುವುದು ನಿರಂತರ ತರಗತಿಗೆ ಹಾಜರಾದಂತೆ’ ಎಂದಿದ್ದರು ಸೇತುಪತಿ.
ಜೂನಿಯರ್ ಆರ್ಟಿಸ್ಟ್‌ನಿಂದ ಹೀರೋ ತಮ್ಮ ಪ್ರಯಾಣವನ್ನು ಅವರು ನೆನಪಿಸಿಕೊಂಡಿದ್ದರು. ಅವರು ಒಮ್ಮೆ ಹಣಕ್ಕಾಗಿ ಹೆಚ್ಚು ಹೊತ್ತು ಕೆಲಸ ಮಾಡಿದ ಜಾಗದಲ್ಲೇ ತಮ್ಮ ಮೊದಲ ಚಿತ್ರದ ದೃಶ್ಯವನ್ನು ಶೂಟ್ ಮಾಡಿದ್ದರಂತೆ. ‘ಇದೊಂದು ವೃತ್ತ. ಆದರೆ, ಈ ವೃತ್ತ ಈ ರೀತಿ ಪೂರ್ಣಗೊಳ್ಳುತ್ತದೆ ಎಂದುಕೊಂಡಿರಲಿಲ್ಲ. ಈ ರೀತಿಯ ಅನೇಕ ವೃತ್ತಗಳಿವೆ’ ಎಂದಿದ್ದಾರೆ ಅವರು.
2013ರಲ್ಲಿ ಬಂದ ‘ಪಿಜ್ಜಾ’ ಸಿನಿಮಾ ಮೂಲಕ ಹಿರೋ ಆದರು ವಿಜಯ್ ಸೇತುಪತಿ. ಈ ಚಿತ್ರವನ್ನು ಕಾರ್ತಿಕ್ ಸುಬ್ಬರಾಜು ನಿರ್ದೇಶನ ಮಾಡಿದ್ದರು. ಈ ಸಿನಿಮಾ ಅಂದಿನ ಕಾಲಕ್ಕೆ ದೊಡ್ಡ ಮಟ್ಟದ ಹಿಟ್ ಆಯಿತು.
‘ನಾನು ಸಿನಿಮಾ ಶೂಟ್ ಮಾಡಲು ಹೋದಾಗ ಏನಾದರೂ ವಿಶೇಷ ದೃಶ್ಯ ಇದ್ದರೆ, ಆಸಕ್ತಿಕರ ದೃಶ್ಯ ಇದ್ದರೆ ಅದನ್ನು ಮಕ್ಕಳ ಜೊತೆ ಹಂಚಿಕೊಳ್ಳುತ್ತೇನೆ’ ಎಂದಿದ್ದಾರೆ. ನಾನು ತಂದೆಯಾಗಿ ಈ ವಿಚಾರವನ್ನು ಪ್ರೆಸೆಂಟ್ ಮಾಡುವುದಿಲ್ಲ, ನಾನು ಕೂಡ ಮಗು ಆಗುತ್ತೇನೆ’ ಎಂದಿದ್ದಾರೆ ಅವರು.
ಇದನ್ನೂ ಓದಿ: ಚೀನಾದಲ್ಲೂ ‘ಮಹಾರಾಜ’ ಸಿನಿಮಾಗೆ ಜನರು ಫಿದಾ; ವಿಜಯ್ ಸೇತುಪತಿ ಚಿತ್ರಕ್ಕೆ ಭಾರಿ ಕಲೆಕ್ಷನ್
ವಿಜಯ್ ಸೇತುಪತಿ ಅವರ ಆಸ್ತಿ 140 ಕೋಟಿ ರೂಪಾಯಿ ಎನ್ನಲಾಗಿದೆ. ಅವರ ಬಳಿ ಐಷಾರಾಮಿ ಕಾರುಗಳು ಇವೆ. ಇವುಗಳನ್ನು ಅವರು ಕೇವಲ ಓಡಾಟಕ್ಕೆ ಮಾತ್ರ ಬಳಕೆ ಮಾಡುತ್ತಾರೆ. ಅವರು ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್ನಲ್ಲೂ ಅವರು ಹೆಸರು ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:02 am, Thu, 16 January 25