ಚೀನಾದಲ್ಲೂ ‘ಮಹಾರಾಜ’ ಸಿನಿಮಾಗೆ ಜನರು ಫಿದಾ; ವಿಜಯ್ ಸೇತುಪತಿ ಚಿತ್ರಕ್ಕೆ ಭಾರಿ ಕಲೆಕ್ಷನ್
ಎರಡು ದಿನಕ್ಕೆ ‘ಮಹಾರಾಜ’ ಚಿತ್ರವು ಚೀನಾದಲ್ಲಿ 19.30 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದರಿಂದ ಚಿತ್ರತಂಡಕ್ಕೆ ಸಖತ್ ಖುಷಿ ಆಗಿದೆ. ಈ ಚಿತ್ರ ನಿರ್ಮಾಣ ಆಗಿರುವುದು ಅಂದಾಜು 20 ಕೋಟಿ ರೂ. ಬಜೆಟ್ನಲ್ಲಿ. ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಲಾಭ ಮಾಡಿದೆ. ವಿಜಯ್ ಸೇತುಪತಿ, ಅನುರಾಗ್ ಕಶ್ಯಪ್ ಮುಂತಾದವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ.
ಈ ವರ್ಷ ಜೂನ್ನಲ್ಲಿ ಭಾರತದಲ್ಲಿ ಬಿಡುಗಡೆ ಆದ ತಮಿಳಿನ ‘ಮಹಾರಾಜ’ ಸಿನಿಮಾ ಸೂಪರ್ ಹಿಟ್ ಆಯಿತು. ಈಗ ಆ ಸಿನಿಮಾ ಚೀನಾದಲ್ಲೂ ಬಿಡುಗಡೆ ಆಗಿ ಧೂಳೆಬ್ಬಿಸುತ್ತಿದೆ. ಭಾರತದ ಕೆಲವು ಸಿನಿಮಾಗಳನ್ನು ಬಿಡುಗಡೆ ಮಾಡಲು ಚೀನಾದಲ್ಲಿ ಅವಕಾಶ ನೀಡಲಾಗುತ್ತಿದೆ. ಇತ್ತೀಚೆಗೆ ‘ಮಹಾರಾಜ’ ಸಿನಿಮಾವನ್ನು ಚೀನಾದಲ್ಲಿ ರಿಲೀಸ್ ಮಾಡಲಾಗಿದ್ದು, ಅಲ್ಲಿನ ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಆಗುತ್ತಿದೆ. ವಿಜಯ್ ಸೇತುಪತಿ ನಟಿಸಿರುವ ಈ ಸಿನಿಮಾಗೆ ಚೀನಾದಲ್ಲಿನ ಪ್ರೇಕ್ಷಕರು ಫಿದಾ ಆಗಿದ್ದಾರೆ.
ವರದಿಗಳ ಪ್ರಕಾರ, ‘ಮಹಾರಾಜ’ ಚಿತ್ರವು ಚೀನಾದಲ್ಲಿ ಬರೋಬ್ಬರಿ 49 ಸಾವಿರ ಪರದೆಗಳಲ್ಲಿ ಬಿಡುಗಡೆ ಆಗಿದೆ. ನವೆಂಬರ್ 29ರಂದು ತೆರೆಕಂಡ ಈ ಚಿತ್ರಕ್ಕೆ ಪ್ರೀಮಿಯರ್ ಶೋನಿಂದಲೇ 5.49 ಕೋಟಿ ರೂಪಾಯಿ ಕಲೆಕ್ಷನ್ ಆಯಿತು. ಮೊದಲ ದಿನ 4.60 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಎರಡನೇ ದಿನ ಕಲೆಕ್ಷನ್ನಲ್ಲಿ ಏರಿಕೆ ಆಗಿದ್ದು, ಬರೋಬ್ಬರಿ 9.30 ಕೋಟಿ ರೂಪಾಯಿ ಗಳಿಸಿತು.
ಎರಡೇ ದಿನದಲ್ಲಿ ‘ಮಹಾರಾಜ’ ಸಿನಿಮಾಗೆ ಚೀನಾದ ಬಾಕ್ಸ್ ಆಫೀಸ್ನಲ್ಲಿ 19.30 ಕೋಟಿ ರೂಪಾಯಿ ಸಂಗ್ರಹ ಆಗಿದೆ. ಇದರಿಂದ ಚಿತ್ರತಂಡಕ್ಕೆ ಖುಷಿ ಆಗಿದೆ. ಈ ಸಿನಿಮಾ ನಿರ್ಮಾಣ ಆಗಿರುವುದು ಅಂದಾಜು 20 ಕೋಟಿ ರೂಪಾಯಿ ಬಜೆಟ್ನಲ್ಲಿ. ಜೂನ್ನಲ್ಲಿ ಬಿಡುಗಡೆ ಆದಾಗ ವಿಶ್ವಾದ್ಯಂತ 125 ಕೋಟಿ ರೂಪಾಯಿಗೂ ಆಧಿಕ ಕಲೆಕ್ಷನ್ ಆಗಿತ್ತು. ಈ ಸಿನಿಮಾದಿಂದ ನಿರ್ಮಾಪಕರಿಗೆ ಭರ್ಜರಿ ಲಾಭ ಆಗಿದೆ. ಒಟಿಟಿಯಲ್ಲೂ ಈ ಸಿನಿಮಾ ದಾಖಲೆ ಪ್ರಮಾಣದಲ್ಲಿ ವೀಕ್ಷಣೆ ಕಂಡಿದೆ.
ಇದನ್ನೂ ಓದಿ: ಬ್ಲಾಕ್ ಬಸ್ಟರ್ ಹಿಟ್ ಕೊಟ್ಟ ನಿರ್ದೇಶಕನಿಗೆ ಐಶಾರಾಮಿ ಕಾರು ಕೊಟ್ಟ ವಿಜಯ್ ಸೇತುಪತಿ
‘ಮಹಾರಾಜ’ ಸಿನಿಮಾದಲ್ಲಿ ತಂದೆ-ಮಗಳ ಕಹಾನಿ ಇದೆ. ಅನುರಾಗ್ ಕಶ್ಯಪ್ ಅವರು ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ನಟರಾಜನ್ ಸುಬ್ರಮಣಿಯಂ, ಅಭಿರಾಮಿ, ದಿವ್ಯಾ ಭಾರತಿ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ನಿಧಿಲನ್ ಸಾಮಿನಾಥನ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಸೆಂಟಿಮೆಂಟ್ ಜೊತೆ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಇರುವ ಈ ಸಿನಿಮಾವನ್ನು ಚೀನಾದ ಪ್ರೇಕ್ಷಕರು ಬಹುವಾಗಿ ಮೆಚ್ಚುಕೊಂಡಿದ್ದಾರೆ. ಈ ಮೊದಲು ಭಾರತದ ‘ದಂಗಲ್’, ‘3 ಈಡಿಯಟ್ಸ್’, ‘ಹಿಂದಿ ಮೀಡಿಯಂ’, ‘ಬಾಹುಬಲಿ 2’ ಮುಂತಾದ ಸಿನಿಮಾಗಳು ಚೀನಾದ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸಿದ್ದವು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.