ಪುಷ್ಪ 2: ಒಂದೇ ದಿನದಲ್ಲಿ ಲಕ್ಷಾಂತರ ಟಿಕೆಟ್​ಗಳು ಮುಂಗಡ ಬುಕ್

Pushpa 2: ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಕೆಲವೇ ದಿನಗಳಲ್ಲಿ ತೆರೆಗೆ ಬರಲಿದೆ. ಸಿನಿಮಾದ ಅಡ್ವಾನ್ಸ್ ಬುಕಿಂಗ್ ಆರಂಭವಾಗಿದ್ದು, ಭಾರತ ಮಾತ್ರವಲ್ಲದೆ ಅಮೆರಿಕದಲ್ಲೂ ದಾಖಲೆ ಬರೆಯುತ್ತಿದೆ ಈ ಸಿನಿಮಾ.

ಪುಷ್ಪ 2: ಒಂದೇ ದಿನದಲ್ಲಿ ಲಕ್ಷಾಂತರ ಟಿಕೆಟ್​ಗಳು ಮುಂಗಡ ಬುಕ್
Follow us
ಮಂಜುನಾಥ ಸಿ.
|

Updated on: Dec 01, 2024 | 11:34 AM

ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಬಿಡುಗಡೆಗೆ ಇನ್ನು ನಾಲ್ಕು ದಿನಗಳಷ್ಟೆ ಬಾಕಿ ಉಳಿದಿವೆ. ಹಲವು ರಾಜ್ಯಗಳಲ್ಲಿ ಸಿನಿಮಾದ ಅಡ್ವಾನ್ಸ್ ಬುಕಿಂಗ್ ನಿನ್ನೆ ಓಪನ್ ಆಗಿದೆ. ಕರ್ನಾಟಕ, ಮಹಾರಾಷ್ಟ್ರ, ದೆಹಲಿ, ಅಮೆರಿಕ ಇನ್ನಿತರೆ ಕಡೆಗಳಲ್ಲಿ ನಿನ್ನೆಯೇ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದೆ. ಕೇವಲ ಒಂದೇ ದಿನದಲ್ಲಿ ದಾಖಲೆ ಮೊತ್ತದ ಟಿಕೆಟ್​ಗಳು ಮುಂಗಡವಾಗಿ ಬುಕ್ ಆಗಿವೆ. ಟಿಕೆಟ್ ಬುಕಿಂಗ್ ವೇಗ ನೋಡಿದರೆ ‘ಪುಷ್ಪ 2’ ಸಿನಿಮಾ ‘ಬಾಹುಬಲಿ 2’ ದಾಖಲೆ ಮುರಿಯಲಿದೆಯಾ ಎಂಬ ಅನುಮಾನ ಮೂಡುತ್ತಿದೆ.

ಆಂಧ್ರ, ತೆಲಂಗಾಣ, ಕೇರಳ ಇನ್ನೂ ಕೆಲವು ರಾಜ್ಯಗಳಲ್ಲಿ ನಿನ್ನೆ ಬುಕಿಂಗ್ ಓಪನ್ ಆಗಿರಲಿಲ್ಲ. ಹಾಗಿದ್ದರೂ ಸಹ ಭಾರತ ಒಂದರಲ್ಲೇ ನಿನ್ನೆ ಒಂದೇ ದಿನದಲ್ಲಿ ಕೇವಲ ಮಲ್ಟಿಪ್ಲೆಕ್ಸ್​ಗಳಲ್ಲಿ 55 ಸಾವಿರಕ್ಕೂ ಹೆಚ್ಚು ಟಿಕೆಟ್​ಗಳು ಮುಂಗಡವಾಗಿ ಬುಕಿಂಗ್ ಆಗಿವೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ಸೇರಿಸಿಕೊಂಡರೆ ಮೊದಲ ದಿನವೇ 2.79 ಲಕ್ಷ ಟಿಕೆಟ್​ಗಳು ಮುಂಗಡವಾಗಿ ಬುಕ್ ಆಗಿವೆಯಂತೆ ಅದೂ ಕೇವಲ ಒಂದೇ ಒಂದು ದಿನದಲ್ಲಿ.

ಇಂದು ಕೇರಳದಲ್ಲಿ ಬುಕಿಂಗ್ ಓಪನ್ ಆಗಿದ್ದು, ಓಪನ್ ಆದ ಕೂಡಲೇ ಹಲವು ಪ್ರಮುಖ ಚಿತ್ರಮಂದಿರಗಳಲ್ಲಿ ಟಿಕೆಟ್ ಸೋಲ್ಡ್ ಔಟ್ ಆಗುತ್ತಿವೆ. ಆಂಧ್ರ ಮತ್ತು ತೆಲಂಗಾಣದಲ್ಲಿ ಟಿಕೆಟ್ ಬುಕಿಂಗ್ ಇನ್ನೂ ಓಪನ್ ಆಗಿಲ್ಲ. ಒಂದೊಮ್ಮೆ ಆ ಎರಡು ರಾಜ್ಯಗಳಲ್ಲಿ ಟಿಕೆಟ್ ಬುಕಿಂಗ್ ಓಪನ್ ಆದರೆ ಈ ಸಂಖ್ಯೆ ದುಪ್ಪಟ್ಟಾಗಲಿದೆ. ಕೆಲ ವರದಿಗಳ ಪ್ರಕಾರ ಈ ವರೆಗೆ ಆಗಿರುವ ಕೇವಲ ಒಂದು ದಿನದ ಅಡ್ವಾನ್ಸ್ ಟಿಕೆಟ್ ಬುಕಿಂಗ್​ ನಿಂದಲೇ ಸುಮಾರು 15 ಕೋಟಿಗೂ ಹೆಚ್ಚು ಹಣ ಗಳಿಕೆ ಆಗಲಿದೆಯಂತೆ. ಮುಂದಿನ ನಾಲ್ಕು ದಿನಗಳಲ್ಲಿ ಅಡ್ವಾನ್ಸ್ ಬುಕಿಂಗ್ ಟಿಕೆಟ್​ನಿಂದಲೇ ಸುಮಾರು ನೂರು ಕೋಟಿ ಗಳಿಕೆ ಆದರೆ ಆಶ್ಚರ್ಯ ಪಡುವಂತಿಲ್ಲ.

ಇದನ್ನೂ ಓದಿ:‘ಪುಷ್ಪ 2’ ಸಿನಿಮಾ ಟಿಕೆಟ್ ದರ ಹೆಚ್ಚಳಕ್ಕೆ ಅನುಮತಿ ಕೊಟ್ಟ ತೆಲಂಗಾಣ ಸರ್ಕಾರ, ಷರತ್ತುಗಳು ಏನೇನು?

ಅಮೆರಿಕದಲ್ಲಿ ‘ಪುಷ್ಪ 2’ ಅಡ್ವಾನ್ಸ್ ಬುಕಿಂಗ್ ಬಲು ಜೋರಾಗಿ ನಡೆಯುತ್ತಿದೆ. ಕೇವಲ ನಾರ್ತ್ ಅಮೆರಿಕ ಒಂದರಲ್ಲೇ ಈ ವರೆಗೆ 16 ಕೋಟಿ ರೂಪಾಯಿ ಮೌಲ್ಯದ ಟಿಕೆಟ್​ಗಳು ಮುಂಗಡವಾಗಿ ಬುಕಿಂಗ್ ಆಗಿವೆ. ನಾರ್ತ್ ಅಮೆರಿಕನಲ್ಲಿ ಡಿಸೆಂಬರ್ 04 ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ. ಭಾರತದಲ್ಲಿ ಸಿನಿಮಾ ಡಿಸೆಂಬರ್ 05 ರಂದು ತೆರೆಗೆ ಬರಲಿದೆ. ತೆಲಂಗಾಣದಲ್ಲಿ ಮಾತ್ರ ಡಿಸೆಂಬರ್ 04 ರ ಮಧ್ಯ ರಾತ್ರಿ ಕೆಲ ಶೋ ಪ್ರದರ್ಶನಗೊಳ್ಳಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಚಂಡಮಾರುತ ಎಫೆಕ್ಟ್: ಫ್ಲೈಓವರ್​ ಮೇಲೆ ಕಾರುಗಳ ಪಾರ್ಕಿಂಗ್
ಚಂಡಮಾರುತ ಎಫೆಕ್ಟ್: ಫ್ಲೈಓವರ್​ ಮೇಲೆ ಕಾರುಗಳ ಪಾರ್ಕಿಂಗ್
ಫೆಂಗಲ್ ಚಂಡಮಾರುತ ಎಫೆಕ್ಟ್​​: ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ
ಫೆಂಗಲ್ ಚಂಡಮಾರುತ ಎಫೆಕ್ಟ್​​: ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ
ಎರಡು ಫ್ಲೋರ್​ಗಳ ನಡುವೆ ನಿಂತ ಲಿಫ್ಟ್​, ಜನರ ಪರದಾಟ
ಎರಡು ಫ್ಲೋರ್​ಗಳ ನಡುವೆ ನಿಂತ ಲಿಫ್ಟ್​, ಜನರ ಪರದಾಟ
ತೆಂಗಿನಕಾಯಿಯಲ್ಲಿ ದೀಪ ಹಚ್ಚುವುದರ ಮಹತ್ವವೇನು? ವಿಡಿಯೋ ನೋಡಿ
ತೆಂಗಿನಕಾಯಿಯಲ್ಲಿ ದೀಪ ಹಚ್ಚುವುದರ ಮಹತ್ವವೇನು? ವಿಡಿಯೋ ನೋಡಿ
ವಾರದ ರಾಶಿ ಭವಿಷ್ಯ: ಡಿಸೆಂಬರ್ 2 ರಿಂದ 8ರವರೆಗಿನ 12 ರಾಶಿಗಳ ಭವಿಷ್ಯ
ವಾರದ ರಾಶಿ ಭವಿಷ್ಯ: ಡಿಸೆಂಬರ್ 2 ರಿಂದ 8ರವರೆಗಿನ 12 ರಾಶಿಗಳ ಭವಿಷ್ಯ
Daily Horoscope: ಈ ರಾಶಿಯ ರಾಜಕೀಯದವರು ಇಂದು ಸಿಹಿ ಸುದ್ದಿ ಕೇಳುವರು
Daily Horoscope: ಈ ರಾಶಿಯ ರಾಜಕೀಯದವರು ಇಂದು ಸಿಹಿ ಸುದ್ದಿ ಕೇಳುವರು
ಚಂದ್ರಶೇಖರನಾಥ ಸ್ವಾಮೀಜಿ ಮಾತಾಡಿದ್ದು ತಪ್ಪು ಎಂದ ಡಿಸಿಎಂ ಡಿಕೆ ಶಿವಕುಮಾರ್
ಚಂದ್ರಶೇಖರನಾಥ ಸ್ವಾಮೀಜಿ ಮಾತಾಡಿದ್ದು ತಪ್ಪು ಎಂದ ಡಿಸಿಎಂ ಡಿಕೆ ಶಿವಕುಮಾರ್
ಪಾದಯಾತ್ರೆ ವೇಳೆ ಅರವಿಂದ್ ಕೇಜ್ರಿವಾಲ್ ಮೇಲೆ ದ್ರವ ಪದಾರ್ಥ ಎರಚಿದ ವ್ಯಕ್ತಿ
ಪಾದಯಾತ್ರೆ ವೇಳೆ ಅರವಿಂದ್ ಕೇಜ್ರಿವಾಲ್ ಮೇಲೆ ದ್ರವ ಪದಾರ್ಥ ಎರಚಿದ ವ್ಯಕ್ತಿ
ಕುಮಾರಸ್ವಾಮಿ ಚನ್ನಪಟ್ಟಣದ ಹಾಗೆ ಮಂಡ್ಯ ಬಿಟ್ಟುಕೊಟ್ಟಾರೆಯೇ? ಯೋಗೇಶ್ವರ್
ಕುಮಾರಸ್ವಾಮಿ ಚನ್ನಪಟ್ಟಣದ ಹಾಗೆ ಮಂಡ್ಯ ಬಿಟ್ಟುಕೊಟ್ಟಾರೆಯೇ? ಯೋಗೇಶ್ವರ್
ಬಿಜೆಪಿಯಲ್ಲಿ ಎಲ್ಲರೂ ಕಾರ್ಯಕರ್ತರು, ಬಣಗಳ ಪ್ರಶ್ನೆ ಉದ್ಭವಿಸಲ್ಲ: ಪ್ರತಾಪ್
ಬಿಜೆಪಿಯಲ್ಲಿ ಎಲ್ಲರೂ ಕಾರ್ಯಕರ್ತರು, ಬಣಗಳ ಪ್ರಶ್ನೆ ಉದ್ಭವಿಸಲ್ಲ: ಪ್ರತಾಪ್