AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ಲಾಕ್ ಬಸ್ಟರ್ ಹಿಟ್ ಕೊಟ್ಟ ನಿರ್ದೇಶಕನಿಗೆ ಐಶಾರಾಮಿ ಕಾರು ಕೊಟ್ಟ ವಿಜಯ್ ಸೇತುಪತಿ

Vijay Sethupathi: ವಿಜಯ್ ಸೇತುಪತಿ ನಟನೆಯ 50ನೇ ಸಿನಿಮಾ ‘ಮಹಾರಾಜ’ ನಿರ್ದೇಶಕನಿಗೆ ಭಾರಿ ದುಬಾರಿ ಹಾಗೂ ಐಶಾರಾಮಿ ಕಾರೊಂದನ್ನು ವಿಜಯ್ ಸೇತುಪತಿ ಉಡುಗೊರೆಯಾಗಿ ನೀಡಿದ್ದಾರೆ.

ಬ್ಲಾಕ್ ಬಸ್ಟರ್ ಹಿಟ್ ಕೊಟ್ಟ ನಿರ್ದೇಶಕನಿಗೆ ಐಶಾರಾಮಿ ಕಾರು ಕೊಟ್ಟ ವಿಜಯ್ ಸೇತುಪತಿ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Oct 17, 2024 | 2:25 PM

ವಿಜಯ್ ಸೇತುಪತಿ ಭಾರತದ ಅತ್ಯಂತ ಬ್ಯುಸಿ ನಟರಲ್ಲಿ ಒಬ್ಬರು. ನಾಯಕ, ವಿಲನ್, ಪೋಷಕ ಪಾತ್ರ, ಕಲಾತ್ಮಕ, ಕಮರ್ಶಿಯಲ್, ಬ್ರಿಜ್ ಎಲ್ಲ ರೀತಿಯ ಸಿನಿಮಾ, ಪಾತ್ರಗಳಲ್ಲಿ ನಟಿಸುವ ವಿಜಯ್ ಸೇತುಪತಿಗೆ ದೊಡ್ಡ ಅಭಿಮಾನಿ ವರ್ಗವೇ ಇದೆ. ಇತ್ತೀಚೆಗಷ್ಟೆ ವಿಜಯ್ ಸೇತುಪತಿ ತಮ್ಮ 50ನೇ ಸಿನಿಮಾದಲ್ಲಿ ನಟಿಸಿದರು. ಸಣ್ಣ ಬಜೆಟ್​ನ ಈ ಸಿನಿಮಾ ದೊಡ್ಡ ಹಿಟ್ ಆಗಿದ್ದು ಮಾತ್ರವೇ ಅಲ್ಲದೆ ವಿಜಯ್ ಸೇತುಪತಿಗೆ ಭಾರಿ ದೊಡ್ಡ ಲಾಭವನ್ನೂ ಮಾಡಿಕೊಟ್ಟಿತು. ವಿಶೇಷ ಏನೆಂದರೆ ಈ ಸಿನಿಮಾಕ್ಕೆ ಸೇತುಪತಿ ಬಂಡವಾಳವೂ ಹಾಕಿರಲಿಲ್ಲ ಆದರೂ ಭಾರಿ ಲಾಭವನ್ನೇ ಈ ಸಿನಿಮಾದಿಂದ ಮಾಡಿಕೊಂಡರು ಅದೇ ಕಾರಣಕ್ಕೆ ಸಿನಿಮಾದ ನಿರ್ದೇಶಕನಿಗೆ ಐಶಾರಾಮಿ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

ವಿಜಯ್ ಸೇತುಪತಿ ‘ಮಹಾರಾಜ’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದರು. ಸಣ್ಣ ಬಜೆಟ್​ನ ಈ ಸಿನಿಮಾದಲ್ಲಿ ನಾಯಕನ ಪಾತ್ರದಲ್ಲಿ ವಿಜಯ್ ನಟಿಸಿದ್ದರು. ಸಿನಿಮಾ ನಿರ್ದೇಶನ ಮಾಡಿದ್ದು ನಿತಿಲನ್ ಸ್ವಾಮಿನಾಥನ್, ಮಗಳ ಮೇಲೆ ಅತ್ಯಾಚಾರ ಮಾಡಿದವನನ್ನು ಹುಡುಕುವ ತಂದೆಯ ಪಾತ್ರದಲ್ಲಿ ವಿಜಯ್ ನಟಿಸಿದ್ದರು. ಸಿನಿಮಾದ ವಿಲನ್ ಪಾತ್ರದಲ್ಲಿ ಹಿಂದಿಯ ಖ್ಯಾತ ನಿರ್ದೇಶನ ಅನುರಾಗ್ ಕಶ್ಯಪ್ ನಟಿಸಿದ್ದರು. ಸಿನಿಮಾ ಬ್ಲಾಕ್ ಬಸ್ಟರ್ ಆಯ್ತು.

ಸಣ್ಣ ಬಜೆಟ್​ನ ಸಿನಿಮಾ ಆಗಿದ್ದರೂ ಸಹ ಚಿತ್ರಮಂದಿರದಲ್ಲಿಯೇ 100 ಕೋಟಿಗೂ ಹೆಚ್ಚು ಹಣ ಗಳಿಸಿತು. ನೆಟ್​ಫ್ಲಿಕ್ಸ್​, ಭಾರಿ ದೊಡ್ಡ ಮೊತ್ತ ನೀಡಿ ಸಿನಿಮಾವನ್ನು ಖರೀದಿ ಮಾಡಿತು. ನೆಟ್​ಫ್ಲಿಕ್ಸ್​ನಲ್ಲಿ ಅಂತೂ ಕೆಲವು ವಾರಗಳ ವರೆಗೆ ಈ ಸಿನಿಮಾ ಟಾಪ್​ನಲ್ಲಿತ್ತು. ಉತ್ತರ ಭಾರತದ ಜನರಂತೂ ಸಿನಿಮಾ ನೋಡಿ ದಂಗಾಗಿ ಹೋದರು. ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ಬಗ್ಗೆ ಪ್ರಶಂಸೆಗಳ ಸುರಿಮಳೆಯೇ ಸುರಿಯಿತು.

ಇದನ್ನೂ ಓದಿ:ಕರಣ್ ಜೋಹರ್​ಗೆ ಶುರು ಆಗಿದೆಯಾ ಗಂಭೀರ ಕಾಯಿಲೆ? ಕಳವಳ ವ್ಯಕ್ತಪಡಿಸಿದ ನೆಟ್ಟಿಗರು

ಸಿನಿಮಾದ ನಿರ್ದೇಶಕ ನಿತಿಲನ್ ಸ್ವಾಮಿನಾಥನ್​ಗೆ ವಿಜಯ್ ಸೇತುಪತಿ ಹಾಗೂ ಸಿನಿಮಾದ ನಿರ್ಮಾಪಕರಾದ ಸುಧಾನ್ ಸುಂದರಮ್ ಹಾಗೂ ಜಗದೀಶ್ ಪಳನಿಸ್ವಾಮಿ ಅವರುಗಳು ಒಟ್ಟಾಗಿ ಬಿಎಂಡಬ್ಲು ಕಾರು ನೀಡಿದ್ದಾರೆ. ಈ ಐಶಾರಾಮಿ ಕಾರಿನ ಬೆಲೆ ಸುಮಾರು 1 ಕೋಟಿ ರೂಪಾಯಿಗಳು ಎನ್ನಲಾಗುತ್ತಿದೆ. ಅಂದಹಾಗೆ ‘ಮಹಾರಾಜ’ ನಿತಿಲನ್ ಅವರ ಎರಡನೇ ಸಿನಿಮಾ ಈ ಮೊದಲು 2017 ರಲ್ಲಿ ‘ಕೊರಂಗು ಬೊಮ್ಮೈ’ ಹೆಸರಿನ ಸಿನಿಮಾ ಮಾಡಿದ್ದರು. ಆ ಸಿನಿಮಾ ಸಹ ಹಿಟ್ ಆಗಿತ್ತು. ಅದೇ ಸಿನಿಮಾವನ್ನು ಕನ್ನಡದಲ್ಲಿ ‘ಒಂಬತ್ತನೇ ದಿಕ್ಕು’ ಹೆಸರಿನಲ್ಲಿ ರೀಮೇಕ್ ಆಗಿ, ಲೂಸ್ ಮಾದ ನಾಯಕನಾಗಿ ನಟಿಸಿದ್ದರು.

ಅಂದಹಾಗೆ ಈ ಸಿನಿಮಾಕ್ಕೆ ವಿಜಯ್ ಸೇತುಪತಿ ಬಂಡವಾಳ ಹಾಕಿರಲಿಲ್ಲ, ಬಜೆಟ್ ಕಡಿಮೆ ಇದ್ದು ಸಿನಿಮಾದ ಕತೆ ಇಷ್ಟವಾದ ಕಾರಣ ಲಾಭದಲ್ಲಿ ಇಂತಿಷ್ಟು ಪಾಲು ಪಡೆದುಕೊಳ್ಳುವುದಾಗಿ ಒಪ್ಪಂದ ಮಾಡಿಕೊಂಡಿದ್ದರು. ಇದೀಗ ಅದೇ ವಿಜಯ್ ಸೇತುಪತಿ ಪಾಲಿಗೆ ದೊಡ್ಡ ಲಾಭವಾಗಿ ಪರಿಣಿಮಿಸಿದ್ದು, ಸುಮಾರು 50 ಕೋಟಿ ರೂಪಾಯಿ ಹಣ ವಿಜಯ್ ಸೇತುಪತಿಗೆ ಈ ಸಿನಿಮಾದಿಂದ ಸಿಕ್ಕಿದೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:06 pm, Tue, 8 October 24

ಪಾಕ್​ ದಾಳಿಯ ಸಂತ್ರಸ್ತರಿಗೆ ಧೈರ್ಯ ತುಂಬಿದ ಸಿಎಂ ಒಮರ್
ಪಾಕ್​ ದಾಳಿಯ ಸಂತ್ರಸ್ತರಿಗೆ ಧೈರ್ಯ ತುಂಬಿದ ಸಿಎಂ ಒಮರ್
ಹಾರಂಗಿ ಜಲಾಶಯಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧ
ಹಾರಂಗಿ ಜಲಾಶಯಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧ
ಆಪರೇಷನ್ ಸಿಂಧೂರ್​ ಕಾರ್ಯಾಚರಣೆ ಬೆಂಬಲಿಸಿ ಕಾಂಗ್ರೆಸ್​ ತಿರಂಗಾ ಯಾತ್ರೆ
ಆಪರೇಷನ್ ಸಿಂಧೂರ್​ ಕಾರ್ಯಾಚರಣೆ ಬೆಂಬಲಿಸಿ ಕಾಂಗ್ರೆಸ್​ ತಿರಂಗಾ ಯಾತ್ರೆ
"ಮೋದಿ ಹೆಸರು ಹೇಳಲೂ ಹೆದರುವ ಹೇಡಿ ನಮ್ಮ ಪ್ರಧಾನಿ": ಪಾಕ್​ ಸಂಸದ ವ್ಯಂಗ್ಯ
ಸಾಂಬಾಂದಲ್ಲಿ ಗಡಿಯೊಳಗೆ ಉಗ್ರರ ಒಳನುಸುಳುವಿಕೆ ಯತ್ನ ವಿಫಲಗೊಳಿಸಿದ BSF
ಸಾಂಬಾಂದಲ್ಲಿ ಗಡಿಯೊಳಗೆ ಉಗ್ರರ ಒಳನುಸುಳುವಿಕೆ ಯತ್ನ ವಿಫಲಗೊಳಿಸಿದ BSF
ಬಂಕರ್​ಗಳಲ್ಲಿ ಅವಿತುಕೊಂಡಿರುವ ಪಾಕ್ ಪ್ರಧಾನಿ ಶರೀಫ್ ಮತ್ತು ಸೇನಾ ಮುಖ್ಯಸ್ಥ
ಬಂಕರ್​ಗಳಲ್ಲಿ ಅವಿತುಕೊಂಡಿರುವ ಪಾಕ್ ಪ್ರಧಾನಿ ಶರೀಫ್ ಮತ್ತು ಸೇನಾ ಮುಖ್ಯಸ್ಥ
ಸೇನೆಗೆ ಬಲ ತುಂಬಲು ಸಿದ್ಧ: ಹಾಸನದಲ್ಲಿ ನಿವೃತ್ತ ಯೋಧರ ಘೋಷಣೆ
ಸೇನೆಗೆ ಬಲ ತುಂಬಲು ಸಿದ್ಧ: ಹಾಸನದಲ್ಲಿ ನಿವೃತ್ತ ಯೋಧರ ಘೋಷಣೆ
ಸೇನೆಯೊಂದಿಗೆ ನಾವಿದ್ದೇವೆ ಅಂತ ಸೂಚಿಸಲು ತಿರಂಗ ಯಾತ್ರೆ: ದಿನೇಶ್ ಗುಂಡೂರಾವ್
ಸೇನೆಯೊಂದಿಗೆ ನಾವಿದ್ದೇವೆ ಅಂತ ಸೂಚಿಸಲು ತಿರಂಗ ಯಾತ್ರೆ: ದಿನೇಶ್ ಗುಂಡೂರಾವ್
ಸಿದ್ದಿ ಸಮುದಾಯದ ಜೊತೆ ಸರಳತೆಯ ಪಾಠ ಕಲಿತ ‘ಭರ್ಜರಿ ಬ್ಯಾಚುಲರ್ಸ್’
ಸಿದ್ದಿ ಸಮುದಾಯದ ಜೊತೆ ಸರಳತೆಯ ಪಾಠ ಕಲಿತ ‘ಭರ್ಜರಿ ಬ್ಯಾಚುಲರ್ಸ್’
ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ಮತ್ತು ಸೇನಾ ಮುಖ್ಯಸ್ಥ ಮುನೀರ್ ನಾಪತ್ತೆ?
ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ಮತ್ತು ಸೇನಾ ಮುಖ್ಯಸ್ಥ ಮುನೀರ್ ನಾಪತ್ತೆ?