ನಿರ್ದೇಶಕ ಪುರಿ ಜಗನ್ನಾಥ ಅವರು ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿದವರು. ‘ಅಪ್ಪು’ ರೀತಿಯ ಸೂಪರ್ ಹಿಟ್ ಚಿತ್ರಗಳು ಅವರ ಬತ್ತಳಕೆಯಿಂದ ಬಂದಿವೆ. ಆದರೆ, ಇತ್ತೀಚೆಗೆ ಅವರು ಲಯ ತಪ್ಪಿದ್ದಾರೆ. ‘ಲೈಗರ್’ ಸೋತ ಬಳಿಕ ಅವರು ‘ಇಸ್ಮಾರ್ಟ್ ಶಂಕರ್’ ಸಿನಿಮಾ ಮಾಡಿದರು. ಇದು ಕೂಡ ಸೋಲು ಕಂಡಿತು. ಖಾಲಿ ಕುಳಿತಿದ್ದ ಅವರಿಗೆ ತಮಿಳಿನ ಸ್ಟಾರ್ ನಟ ವಿಜಯ್ ಸೇತುಪತಿ ಅವಕಾಶ ಕೊಟ್ಟಿದ್ದಾರೆ. ಒಂದೇ ಸಿಟ್ಟಿಂಗ್ನಲ್ಲಿ ಕಥೆ ಓಕೆ ಮಾಡಿದ್ದಾರೆ. ಈ ವಿಚಾರ ಕೇಳಿ ಪುರಿ ಜಗನ್ನಾಥ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ಪುರಿ ಜಗನ್ನಾಥ್ ಅವರನ್ನು ಹೊಸ ಜನರೇಶನ್ ಅವರು ಇಷ್ಟಪಟ್ಟಿಲ್ಲ. ಅವರು ಬೌನ್ಸ್ ಬ್ಯಾಕ್ ಆಗುತ್ತಾರೆ ಎಂದು ಎಲ್ಲರೂ ಕಾದರು. ‘ಲೈಗರ್’ ಹಾಗೂ ‘ಡಬಲ್ ಇಸ್ಮಾರ್ಟ್’ ಅವರ ವೃತ್ತಿ ಜೀವನಕ್ಕೆ ಭಾರೀ ಹೊಡೆತ ಕೊಟ್ಟಿತ್ತು. ನಾಗಾರ್ಜುನ ರೀತಿಯ ಹೀರೋಗಳಿಗೆ ಅವರು ಕಥೆ ಹೇಳಿದರೂ ಯಾರೂ ಸಿನಿಮಾ ಮಾಡೋಕೆ ಒಪ್ಪಿಲ್ಲ.
ಈಗ ವಿಜಯ್ ಸೇತುಪತಿ ಅವರು ಪುರಿ ಜಗನ್ನಾಥ ಜೊತೆ ಸಿನಿಮಾ ಮಾಡಲು ಓಕೆ ಎಂದಿದ್ದಾರೆ. ಇದರಿಂದ ಖುಷಿ ಆಗಿರೋ ಪುರಿ ಅವರು ಶ್ರದ್ಧೆಯಿಂದ ಸ್ಕ್ರಿಪ್ಟ್ ಮಾಡೋಕೆ ಆರಂಭಿಸಿದ್ದಾರೆ. ವಿಜಯ್ ಅವರ ಮ್ಯಾನರಿಸಂಗೆ ತಕ್ಕಂತೆ ಸಿನಿಮಾ ಮಾಡಲಾಗುತ್ತಿದೆ. ಈ ಚಿತ್ರದಿಂದ ಅವರು ಗೆಲ್ಲುವ ಭರವಸೆಯಲ್ಲಿ ಇದ್ದಾರೆ.
ವಿಜಯ್ ಸೇತುಪತಿ ಅವರು ಹಲವು ನಿರ್ದೇಶಕರ ಜೊತೆ ಪ್ರಯೋಗಾತ್ಮಕ ಸಿನಿಮಾಗಳನ್ನು ಮಾಡಿದ್ದಾರೆ. ಫ್ಲಾಪ್ ನಿರ್ದೇಶಕರ ಜೊತೆ ಅವರು ಕೈ ಜೋಡಿಸಿ ಗೆಲುವಿನ ರುಚಿ ತೋರಿಸಿದ್ದಾರೆ. ಈಗ ಅವರು ಪುರಿ ಜಗನ್ನಾಥ್ಗೆ ಅವಕಾಶ ಕೊಟ್ಟಿದ್ದು, ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ.
ಇದನ್ನೂ ಓದಿ: ಪುರಿ ಜಗನ್ನಾಥ ದೇವಾಲಯಕ್ಕೆ ಪ್ರವೇಶಿಸಲು ನಿರಾಕರಿಸಿದ್ದ ಪುನೀತ್ ರಾಜ್ಕುಮಾರ್, ಕಾರಣ?
ವಿಜಯ್ ಸೇತುಪತಿ ಅವರು ಫ್ಯಾಮಿಲಿ ಡ್ರಾಮಾಗಳಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ಆ್ಯಕ್ಷನ್ ಸಿನಿಮಾಗಳನ್ನೂ ಮಾಡಿದ್ದಾರೆ. ಈಗ ಅವರು ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಈ ಸಿನಿಮಾ ಗೆದ್ದರೆ ಪುರಿ ಜಗನ್ನಾಥ್ ವೃತ್ತಿ ಬದುಕು ಬದಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.