ಡ್ರಗ್ಸ್ ಹಾಗೂ ಸಸ್ಪೆನ್ಸ್ ಕಥೆ ಇರೋ ಈ ವೆಬ್ ಸೀರಿಸ್ ಕೊಡುತ್ತೆ ಸಖತ್ ಕಿಕ್; ಮಿಸ್ ಮಾಡಲೇಬೇಡಿ
ವೀಕೆಂಡ್ ಬಂತು ಎಂದರೆ ಕೆಲವರಿಗೆ ಹಾಯಾಗಿ ಸುತ್ತಾಡಿಕೊಂಡು ಬರೋಣ ಎಂದಿರುತ್ತದೆ. ಇನ್ನೂ ಕೆಲವರಿಗೆ ವಾರವಿಡೀ ಕಚೇರಿಗೆ ತೆರಳಿ ಸಾಕಾಗಿರುವುದರಿಂದ ಮನೆಯಲ್ಲೇ ಕುಳಿತು ಹಾಯಾಗಿ ಒಟಿಟಿಯಲ್ಲಿ ಸಿನಿಮಾ ಅಥವಾ ಸೀರಿಸ್ ನೋಡೋಣ ಎಂದಿರುತ್ತದೆ. ಆ ರೀತಿಯ ಒಂದು ಸೀರಿಸ್ ನೆಟ್ಫ್ಲಿಕ್ಸ್ ಒಟಿಟಿಯಲ್ಲಿ ಲಭ್ಯವಿದೆ.

ಡ್ರಗ್ಸ್ ಕಥೆ ಇರೋ ಸಾಕಷ್ಟು ವೆಬ್ ಸೀರಿಸ್ ಹಾಗೂ ಸಿನಿಮಾಗಳು ಬಂದು ಹೋಗಿವೆ. ಈ ಪೈಕಿ ಕೆಲವು ಹಿಟ್ ಆದರೆ ಇನ್ನೂ ಕೆಲವು ಸೋತಿವೆ. ಈ ರೀತಿ ಬಂದ ಸಿನಿಮಾ ಹಾಗೂ ಸೀರಿಸ್ಗಳಲ್ಲಿ ಡ್ರಗ್ಸ್ ಮಾರೋದು ಪುರುಷರು. ಆದರೆ, ನೆಟ್ಫ್ಲಿಕ್ಸ್ನಲ್ಲಿ ಒಂದು ಹೊಸ ಸೀರಿಸ್ ಬಂದಿದೆ. ಇದರಲ್ಲಿ ಡ್ರಗ್ಸ್ ಮಾರುವ ಎಲ್ಲರೂ ಮಹಿಳೆಯರೇ! ಗಾಂಜಾದಿಂದ ಆರಂಭ ಆಗುವ ಕಥೆ ನಂತರ ಎಲ್ಲಿಗೆ ಬಂದು ನಿಲ್ಲುತ್ತದೆ ಎಂಬುದೇ ಸಸ್ಪೆನ್ಸ್. ಈ ವೆಬ್ ಸೀರಿಸ್ ಹೆಸರು ‘ಡಬ್ಬಾ ಕಾರ್ಟೆಲ್’ (Dabba Cartel).
ಶಾಲಿನಿ ಪಾಂಡೆ, ಜ್ಯೋತಿಕಾ, ನಿಮಿಷಾ ಸಂಜಯನ್, ಅಂಜಲಿ ಆನಂದ್, ಶಬಾನಾ ಆಜ್ಮಿ, ಸಾಯಿ ತಮಾಂಕರ್ ಮೊದಲಾದವರು ‘ಡಬ್ಬಾ ಕಾರ್ಟೆಲ್’ನಲ್ಲಿ ನಟಿಸಿದ್ದಾರೆ. ಸೀರಿಸ್ ಉದ್ದಕ್ಕೂ ಮಹಿಳೆಯರ ಪಾತ್ರವೇ ಹೆಚ್ಚು ಹೈಲೈಟ್ ಆಗುತ್ತದೆ. ಸಾಕಷ್ಟು ಟ್ವಿಸ್ಟ್ಗಳೊಂದಿಗೆ ಇಡೀ ಸರಣಿ ಸಾಗುತ್ತದೆ. ವೀಕೆಂಡ್ನಲ್ಲಿ ಟೈಮ್ ಪಾಸ್ ಮಾಡಲು ಇದು ಒಳ್ಳೆಯ ಸೀರಿಸ್. ಐಎಂಡಿಬಿಯಲ್ಲಿ ಈ ಸರಣಿಗೆ 7+ ರೇಟಿಂಗ್ ಸಿಕ್ಕಿದೆ. ಇಲ್ಲಿ ಡ್ರಗ್ಸ್ ತೆಗೆದುಕೊಂಡರೆ ಏನಾಗುತ್ತದೆ ಆ ಬಗ್ಗೆ ಹೆಚ್ಚು ಗಮನ ಹರಿಸಿಲ್ಲ. ಡ್ರಗ್ಸ್ ಮಾರುವ ದಂಧೆಯ ಹಿಂದಿನ ಕರಾಳ ರೂಪವಷ್ಟೇ ಇಲ್ಲಿ ಹೈಲೈಟ್ ಮಾಡಲಾಗಿದೆ.
ಕಥೆ ಏನು?
ಶಾಲಿನಿ ಪಾಂಡೆ ಹಾಗೂ ಅದೇ ಬಿಲ್ಡಿಂಗ್ನಲ್ಲಿ ಮತ್ತೊಂದು ಮಹಿಳೆ ಸೇರಿ ಅಡುಗೆ ಮಾಡಿ ಡಬ್ಬಾ ಕೊಡೋ ಬಿಸ್ನೆಸ್ ಶುರು ಮಾಡುತ್ತಾರೆ. ಡಬ್ಬಾ ಮಾರಾಟ ಮಾಡುವಾಗ ಇವರು ಅಚಾನಕ್ಕಾಗಿ ಗಾಂಜಾನ ಮಾರೋ ಪರಿಸ್ಥಿತಿ ಬರುತ್ತದೆ. ಆ ಬಳಿಕ ಡ್ರಗ್ಸ್ ಸುತ್ತಿಕೊಳ್ಳುತ್ತದೆ. ಅವರ ಪರಿಸ್ಥಿತಿ ಚಕ್ರವ್ಯೂಹದ ರೀತಿಯಲ್ಲೇ ಆಗಿ ಬಿಡುತ್ತದೆ. ಎಷ್ಟೇ ಪ್ರಯತ್ನಿಸಿದರೂ ಹೊರಗೆ ಬರೋಕೆ ಆಗುವುದೇ ಇಲ್ಲ. ಕೊನೆಯಲ್ಲಿ ಏನಾಗುತ್ತದೆ? ಅವರು ಹೊರಕ್ಕೆ ಬರುತ್ತಾರಾ? ಬಂದರೂ ಹೇಗೆ ಬರುತ್ತಾರೆ? ಇದೇ ವೆಬ್ ಸೀರಿಸ್ನ ಕಥೆ.
ಇದನ್ನೂ ಓದಿ: ಒಟಿಟಿಯಲ್ಲಿ ಈ ವಾರ ಹೊಸದಾಗಿ ರಿಲೀಸ್ ಆದ ಈ ಎರಡು ಸಿನಿಮಾಗಳನ್ನು ತಪ್ಪದೇ ನೋಡಿ
ಎಷ್ಟು ಎಪಿಸೋಡ್?
ಒಟ್ಟು ಏಳು ಎಪಿಸೋಡ್ಗಳು ಇವೆ. ಕೊನೆಯ ಎಪಿಸೋಡ್ ಒಂದು ಗಂಟೆ ಇದ್ದರೆ ಉಳಿದ ಎಪಿಸೋಡ್ಗಳು 40-45 ನಿಮಿಷಗಳ ಅವಧಿಯನ್ನು ಹೊಂದಿದೆ. ಶಬಾನಾ ಆಜ್ಮಿ ಅವರು ಒಂದು ಪವರ್ಫುಲ್ ಪಾತ್ರ ಮಾಡಿದ್ದಾರೆ. ಇಲ್ಲಿ ಒಂದು ಮಹಿಳೆಯರಿಬ್ಬರ ಲವ್ ಸ್ಟೋರಿ ಕೂಡ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.