AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಳ್ಳೆಯ ರೇಟಿಂಗ್, ಕಾಮಿಡಿ ಜೊತೆ ಸಸ್ಪೆನ್ಸ್; ಈ ಚಿತ್ರವನ್ನು ಒಟಿಟಿಯಲ್ಲಿ ಮಿಸ್ ಮಾಡಿಕೊಳ್ಳಬೇಡಿ

ಬಸಿಲ್ ಜೋಸೆಫ್ ಮತ್ತು ಸೌಬಿನ್ ಶಾಹಿರ್ ನಟಿಸಿರುವ ಮಲಯಾಳಂ ಥ್ರಿಲ್ಲರ್ ಚಿತ್ರ, ಏಪ್ರಿಲ್ 11 ರಿಂದ ಸೋನಿಲಿವ್ ನಲ್ಲಿ ಲಭ್ಯವಾಗಲಿದೆ. ಒಂದು ಅಪರಾಧ ಮಿಸ್ಟರಿಯಾಗಿ, ಈ ಚಿತ್ರವು ಶಾಪ್ ಮಾಲೀಕನ ಸಾವಿನ ರಹಸ್ಯವನ್ನು ಅನ್ವೇಷಿಸುತ್ತದೆ. ಅನ್ವರ್ ರಶೀದ್ ನಿರ್ದೇಶನದ ಈ ಚಿತ್ರವು ಡಾರ್ಕ್ ಹ್ಯೂಮರ್ ಮತ್ತು ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿದೆ.

ಒಳ್ಳೆಯ ರೇಟಿಂಗ್, ಕಾಮಿಡಿ ಜೊತೆ ಸಸ್ಪೆನ್ಸ್; ಈ ಚಿತ್ರವನ್ನು ಒಟಿಟಿಯಲ್ಲಿ ಮಿಸ್ ಮಾಡಿಕೊಳ್ಳಬೇಡಿ
ಒಳ್ಳೆಯ ರೇಟಿಂಗ್, ಕಾಮಿಡಿ ಜೊತೆ ಸಸ್ಪೆನ್ಸ್; ಈ ಚಿತ್ರವನ್ನು ಒಟಿಟಿಯಲ್ಲಿ ಮಿಸ್ ಮಾಡಿಕೊಳ್ಳಬೇಡಿ
ರಾಜೇಶ್ ದುಗ್ಗುಮನೆ
|

Updated on: Mar 15, 2025 | 3:29 PM

Share

ಒಟಿಟಿಯಲ್ಲಿ ಹೊಸ ಹೊಸ ಸಿನಿಮಾಗಳು ಪ್ರತಿ ವಾರ ರಿಲೀಸ್ ಆಗುತ್ತಲೇ ಇರುತ್ತವೆ. ಈ ಪೈಕಿ ಕೆಲವು ಗಮನ ಸೆಳೆದರೆ ಇನ್ನೂ ಕೆಲವು ಗಮನ ಸೆಳೆಯಲು ವಿಫಲವಾಗುತ್ತವೆ. ‘ಪ್ರಾವಿನ್​ಕೂಡು ಶಾಪು’ (Pravinkoodu Shappu) ಚಿತ್ರ ಜನವರಿ 16ರಂದು ಥಿಯೇಟರ್​ನಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. ಈಗ ಚಿತ್ರ ಒಟಿಟಿಯಲ್ಲಿ ಬರಲು ರೆಡಿ ಆಗಿದೆ. ಯಾವಾಗ ಸಿನಿಮಾ ಒಟಿಟಿಯಲ್ಲಿ ಲಭ್ಯ? ಯಾವ ರೀತಿಯ ಚಿತ್ರ ಇದು ಎಂಬಿತ್ಯಾದಿ ವಿಚಾರಗಳನ್ನು ಈ ಸ್ಟೋರಿಯಲ್ಲಿ ವಿವರಿಸುತ್ತಿದ್ದೇವೆ.

‘ಪ್ರಾವಿನ್​ಕೂಡು ಶಾಪು’ ಚಿತ್ರದಲ್ಲಿ ಸೌಬಿನ್ ಶಾಹಿರ್, ಬಸಿಲ್ ಜೊಸೆಫ್ ಮೊದಲಾದವರು ನಟಿಸಿದ್ದಾರೆ. ಇದು ಮಲಯಾಳಂ ಭಾಷೆಯ ಸಿನಿಮಾ. ಇದರಲ್ಲಿ ಬಸಿಲ್ ಜೊಸೆಫ್ ಅವರು ಸಬ್ ಇನ್​ಸ್ಪೆಕ್ಟರ್ ಪಾತ್ರ ಮಾಡಿದರೆ, ಸೌಬಿನ್ ಅವರು ಮಾಜಿ ಮ್ಯಾಜಿಶಿಯನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಡಾರ್ಕ್ ಮಾಮಿಡಿ ರೂಪದಲ್ಲಿ ಮೂಡಿ ಬಂದಿದೆ.  ಜೊತೆಗೆ ಥ್ರಿಲ್ಲರ್ ಅಂಶ ಕೂಡ ಈ ಸಿನಿಮಾದಲ್ಲಿ ಇದೆ.

ಸೋನಿ ಲಿವ್​ನಲ್ಲಿ ಈ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ಏಪ್ರಿಲ್ 11ರಿಂದ ಈ ಚಿತ್ರ ಲಭ್ಯವಾಗಲಿದೆ. ಈ ಬಗ್ಗೆ ಸೋನಿಲಿವ್ ಕಡೆಯಿಂದ ಅಧಿಕೃತ ಘೋಷಣೆ ಆಗಿದೆ. ‘ನಿಮ್ಮ ತಲೆಯನ್ನು ಹಾಳು ಮಾಡಲು ಈ ಸಿನಿಮಾ ಬರುತ್ತಿದೆ’ ಎಂದು ಸೋನಿ ಲಿವ್​​ನಲ್ಲಿ ಬರೆಯಲಾಗಿದೆ. ಬಸಿಲ್ ಅವರು ಈ ಮೊದಲು ಹಲವು ಪರ್ಫಾರ್ಮೆನ್ಸ್​ಗಳನ್ನು ಮಾಡಿ ಗಮನ ಸೆಳೆದಿದ್ದಾರೆ. ಅವರು ‘ಸೂಕ್ಷ್ಮದರ್ಶಿನಿ’ ಚಿತ್ರದಲ್ಲಿ ಅವರ ನಟನೆ ಮೂಲಕ ಭೇಷ್ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ:  ಒಟಿಟಿಯಲ್ಲಿ ಈ ವಾರ ಹೊಸದಾಗಿ ರಿಲೀಸ್ ಆದ ಈ ಎರಡು ಸಿನಿಮಾಗಳನ್ನು ತಪ್ಪದೇ ನೋಡಿ

ಶಾಪ್ ಒಂದರಲ್ಲಿ ಕೊಲೆ ನಡೆಯುತ್ತದೆ. ಆ ದಿನ 11 ಜನರು ಕುಡಿಯುತ್ತಾ ಕಾರ್ಡ್ಸ್ ಆಡುತ್ತಾ ಇರುತ್ತಾರೆ. ಹವಾಮಾನ ಸರಿ ಇಲ್ಲ ಎಂಬ ಕಾರಣಕ್ಕೆ ಆಟ ನಿಲ್ಲಿಸಲಾಗುತ್ತದೆ. ಆದರೆ, ಮುಂಜಾನೆ ನೋಡಿದಾಗ ಶಾಪ್ ಮಾಲೀಕ ಕೊಂಬಣ್ ಬಾಬು ನೇಣು ಹಾಕಿಕೊಂಡಿರುತ್ತಾರೆ. ಇದನ್ನು ಸಂತೋಶ್ (ಬಸಿಲ್ ಜೋಸೆಫ್) ವಿಚಾರಣೆ ಮಾಡುತ್ತಾರೆ. ಅನ್ವರ್ ರಶೀದ್ ಇದನ್ನು ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
ರೋಗಿ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಕ್ಯಾಂಟರ್​​ಗೆ ಡಿಕ್ಕಿ
ರೋಗಿ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಕ್ಯಾಂಟರ್​​ಗೆ ಡಿಕ್ಕಿ
ವಿದ್ಯಾರ್ಥಿ ಜೀವನದಲ್ಲಿ ಇವುಗಳಿದ್ದರೆ ಉದ್ಧಾರ ಗ್ಯಾರಂಟಿ
ವಿದ್ಯಾರ್ಥಿ ಜೀವನದಲ್ಲಿ ಇವುಗಳಿದ್ದರೆ ಉದ್ಧಾರ ಗ್ಯಾರಂಟಿ
ಸಾಯಿಬಾಬಾ ನೆನೆದರೆ ಕಷ್ಟಗಳೆಲ್ಲಾ ನಿವಾರಣೆ
ಸಾಯಿಬಾಬಾ ನೆನೆದರೆ ಕಷ್ಟಗಳೆಲ್ಲಾ ನಿವಾರಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ