ಒಟಿಟಿಯಲ್ಲಿ ಈ ವಾರ ಹೊಸದಾಗಿ ರಿಲೀಸ್ ಆದ ಈ ಎರಡು ಸಿನಿಮಾಗಳನ್ನು ತಪ್ಪದೇ ನೋಡಿ
ವೀಕೆಂಡ್ನಲ್ಲಿ ಯಾವ ಸಿನಿಮಾ ನೋಡಬೇಕು ಎನ್ನುವ ಪ್ರಶ್ನೆ ಅನೇಕರಲ್ಲಿ ಇರುತ್ತದೆ. ಇದಕ್ಕೆ ಉತ್ತರವನ್ನು ನಾವು ನೀಡುತ್ತಿದ್ದೇವೆ. ಈ ವಾರಾಂತ್ಯದಲ್ಲಿ ಒಟಿಟಿಯಲ್ಲಿ ವೀಕ್ಷಿಸಲು ಎರಡು ಅದ್ಭುತ ಚಿತ್ರಗಳನ್ನು ನಾವು ಶಿಫಾರಸು ಮಾಡುತ್ತಿದ್ದೇವೆ. ಎರಡೂ ಸಿನಿಮಾಗಳು ಹೊಸದಾಗಿ ರಿಲೀಸ್ ಆಗಿವೆ ಅನ್ನೋದು ವಿಶೇಷ .

ವೀಕೆಂಡ್ ಬಂತು ಎಂದರೆ ಕೆಲವರಿಗೆ ಹಾಯಾಗಿ ಸುತ್ತಾಡಿಕೊಂಡು ಬರೋಣ ಎಂದಿರುತ್ತದೆ. ಇನ್ನೂ ಕೆಲವರಿಗೆ ವಾರವಿಡೀ ಕಚೇರಿಗೆ ತೆರಳಿ ಸಾಕಾಗಿರುವುದರಿಂದ ಮನೆಯಲ್ಲೇ ಕುಳಿತು ಹಾಯಾಗಿ ಒಟಿಟಿಯಲ್ಲಿ ಸಿನಿಮಾ ನೋಡೋಣ ಎಂದಿರುತ್ತದೆ. ಆದರೆ, ಯಾವ ಸಿನಿಮಾ ನೋಡೋದೋ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದರಲ್ಲೇ ಅರ್ಧ ದಿನ ಕಳೆದು ಹೋಗಿ ಬಿಡುತ್ತದೆ. ಆದರೆ, ಆ ಬಗ್ಗೆ ಚಿಂತಿಸೋ ಅಗತ್ಯವಿಲ್ಲ. ನಾವು ಈ ವೀಕೆಂಡ್ನ ಕಳೆಯಲು ಒಟಿಟಿಯಲ್ಲಿ (OTT) ಎರಡು ಸಿನಿಮಾಗಳನ್ನು ಸೂಚಿಸುತ್ತಿದ್ದೇವೆ.
ಥಿಯೇಟರ್ನಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆದ ‘ತಂಡೇಲ್’ ಚಿತ್ರ ಈಗ ಒಟಿಟಿ ಮೂಲಕ ಪ್ರಸಾರ ಆರಂಭಿಸಿದೆ. ಈ ಸಿನಿಮಾ ಥಿಯೇಟರ್ನಲ್ಲಿ ಒಳ್ಳೆಯ ಗಳಿಕೆ ಮಾಡಿದೆ. ನಾಗ ಚೈತನ್ಯ ಹಾಗೂ ಸಾಯಿ ಪಲ್ಲವಿ ಅವರು ಈ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇದು ನೈಜ ಘಟನೆ ಆಧಾರಿತ ಸಿನಿಮಾ ಅನ್ನೋದು ವಿಶೇಷ.
ನೆಟ್ಫ್ಲಿಕ್ಸ್ನಲ್ಲಿ ಈ ಚಿತ್ರ ವೀಕ್ಷಣೆಗೆ ಲಭ್ಯವಿದೆ. ಈ ಸಿನಿಮಾದ ಅವಧಿ 2 ಗಂಟೆ 28 ನಿಮಿಷ. ನೈಜ ಘಟನೆ ಆಧಾರಿತ ಸಿನಿಮಾ ಆಗಿರುವುದರಿಂದ ಸಿನಿಮಾ ಕ್ರೇಜ್ ಹೆಚ್ಚಿಸಿಕೊಂಡಿದೆ. ಮೀನುಗಾರನೋರ್ವ ಅಂತಾರಾಷ್ಟ್ರೀಯ ಜಲ ಗಡಿ ದಾಟಿ ಪಾಕಿಸ್ತಾತನಕ್ಕೆ ಹೋಗುವ ಕಥೆಯನ್ನು ಈ ಚಿತ್ರ ಒಳಗೊಂಡಿದೆ.
ಇದನ್ನೂ ಓದಿ: ಸೂಪರ್ ಹಿಟ್ ಕ್ರೈಮ್ ಥ್ರಿಲ್ಲರ್ ವೆಬ್ ಸೀರಿಸ್ ಈಗ ಒಟಿಟಿಯಲ್ಲಿ; ಕೊನೆವರೆಗೂ ಗೆಸ್ ಮಾಡ್ತಾನೇ ಇರ್ಬೇಕು
ಮಲಯಾಳಂನ ‘ರೇಖಾಚಿತ್ರಂ’ ಕೂಡ ಈ ವಾರ ತೆರೆಗೆ ಬಂದಿದೆ. ಸೋನಿಲಿವ್ ಆ್ಯಪ್ ಮೂಲಕ ಈ ಚಿತ್ರವನ್ನು ನೀವು ವೀಕ್ಷಿಸಬಹುದು. ಆಸಿಫ್ ಅಲಿ ಅವರು ಈ ಚಿತ್ರದಲ್ಲಿ ಹೀರೋ ಆಗಿ ನಟಿಸಿದ್ದಾರೆ. ಅನಸ್ವರ ರಂಜನ್ ಅವರು ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 6 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧವಾದ ಈ ಸಿನಿಮಾ 57 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಬೀಗಿದೆ. ಈ ಚಿತ್ರ ಕೂಡ ನಿಮ್ಮ ಲಿಸ್ಟ್ನಲ್ಲಿ ಸೇರಿಸಬಹುದು. ಇದು ಕ್ರೈಮ್ ಥ್ರಿಲ್ಲರ್ ಕಥಾ ಹೊಂದರ ಹೊಂದಿದೆ. ಸಾಲು ಸಾಲು ಕೊಲೆಗಳನ್ನು ಹುಡುಕಿ ಹೋಗುವ ಕಥೆಯನ್ನು ಚಿತ್ರ ಒಳಗೊಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:01 am, Sat, 8 March 25