ಸೂಪರ್ ಹಿಟ್ ಕ್ರೈಮ್ ಥ್ರಿಲ್ಲರ್ ವೆಬ್ ಸೀರಿಸ್ ಈಗ ಒಟಿಟಿಯಲ್ಲಿ; ಕೊನೆವರೆಗೂ ಗೆಸ್ ಮಾಡ್ತಾನೇ ಇರ್ಬೇಕು
ಕೊವಿಡ್ ನಂತರ ಭಾರತದಲ್ಲಿ ವೆಬ್ ಸರಣಿಗಳ ಜನಪ್ರಿಯತೆ ಹೆಚ್ಚಿದೆ. ತಮಿಳಿನ ವೆಬ್ ಸೀರಿಸ್ಗೆ ಎರಡನೇ ಪಾರ್ಟ್ ಅಮೇಜಾನ್ ಪ್ರೈಮ್ಗೆ ಬಂದಿದೆ. ಕಥಿರ್ ಮತ್ತು ಐಶ್ವರ್ಯಾ ರಾಜೇಶ್ ನಟಿಸಿರುವ ಈ ಸರಣಿಯು ಒಂದು ಕೊಲೆ ಪ್ರಕರಣವನ್ನು ಕೇಂದ್ರೀಕರಿಸಿದೆ. ಮೊದಲ ಸೀಸನ್ ನೋಡಿದವರಿಗೆ ಎರಡನೇ ಸೀಸನ್ ಅರ್ಥ ಮಾಡಿಕೊಳ್ಳಲು ಸುಲಭ.

ಕೊವಿಡ್ ಕಾಣಿಸಿಕೊಂಡ ಬಳಿಕ ಭಾರತದಲ್ಲಿ ವೆಬ್ ಸೀರಿಸ್ಗಳ ನಿರ್ಮಾಣ ಹೆಚ್ಚಾಗಿದೆ. ಕೊರೊನಾ ಸಮಯದಲ್ಲಿ ಒಟಿಟಿ ವ್ಯಾಪ್ತಿ ಹೆಚ್ಚಿದ್ದರಿಂದ ಸಿನಿಮಾ ನಿರ್ಮಾಪಕರು ವೆಬ್ ಸೀರಿಸ್ಗಳ ನಿರ್ಮಾಣಕ್ಕೆ ಆದ್ಯತೆ ಕೊಟ್ಟರು. ಸದ್ಯದ ಮಾರುಕಟ್ಟೆಯಲ್ಲಿ ಕ್ರೈಮ್ ಥ್ರಿಲ್ಲರ್ (Crime Thriller) ವೆಬ್ ಸೀರಿಸ್ಗೆ ಸಖತ್ ಬೇಡಿಕೆ ಇದೆ. ಈಗ ತಮಿಳಿನ ಸೂಪರ್ ಹಿಟ್ ವೆಬ್ ಸರಣಿ ಒಂದು ಒಟಿಟಿಯಲ್ಲಿ ಲಭ್ಯವಾಗಿದೆ. ಇದನ್ನು ನೀವು ಮಿಸ್ ಮಾಡದೇ ನೋಡಬೇಕು. ಆ ಬಗ್ಗೆ ಇಲ್ಲಿದೆ ಮಾಹಿತಿ.
ಸದ್ಯ ರಿಲೀಸ್ ಆಗಿರೋ ತಮಿಳಿನ ವೆಬ್ ಸರಣಿಯ ಹೆಸರು ‘ಸುಳಲ್ 2’. ‘ಸುಳಲ್’ ವೆಬ್ ಸರಣಿ 2022ರ ಜೂನ್ 17ರಂದು ಪ್ರಸಾರ ಆರಂಭಿಸಿತು. ಇದು ಎಂಟು ಎಪಿಸೋಡ್ಗಳನ್ನು ಒಳಗೊಂಡಿತ್ತು. ಕಧಿರ್, ಐಶ್ವರ್ಯಾ ರಾಜೇಶ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸಕ್ಕರೆ (ಕಧಿರ್) ಪೊಲೀಸ್ ಟ್ರೇನಿಂಗ್ ಮುಗಿಸಿ ತನ್ನ ಹುಟ್ಟೂರಿನಲ್ಲೇ ಪೋಸ್ಟಿಂಗ್ ಹಾಕಿಸಿಕೊಳ್ಳುತ್ತಾನೆ. ಈ ರೀತಿ ಪೋಸ್ಟ್ ಹಾಕಿಸಿಕೊಂಡಾಗ ಒಂದು ಪ್ರಕರಣದಲ್ಲಿ ಅವನು ವಿಚಾರಣೆ ನಡೆಸಬೇಕಾಗುತ್ತದೆ. ನಂತರ ಈ ಪ್ರಕರಣ ಹೇಗೆ ಭೇದಿಸುತ್ತಾನೆ ಎಂಬುದು ಚಿತ್ರದ ಕಥೆ.
ಇದನ್ನೂ ಓದಿ: ಮಲಯಾಳಂನ ಈ ಸೂಪರ್ ಹಿಟ್ ಕ್ರೈಮ್ ಥ್ರಿಲ್ಲರ್ ಸಿನಿಮಾ ಒಟಿಟಿಗೆ; ಕನ್ನಡದಲ್ಲೂ ಲಭ್ಯ
ಎರಡನೇ ಸರಣಿ ಇತ್ತೀಚೆಗೆ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರ ಆರಂಭಿಸಿದೆ. ಈ ಸರಣಿ ಕೂಡ ಒಂದು ಕೊಲೆ ಸುತ್ತ ಸಾಗುತ್ತದೆ. ಮೊದಲ ಸೀಸನ್ ರೀತಿಯೇ ಈ ಸೀಸನ್ನಲ್ಲೂ ಅನುಮಾನಗಳು ಎಲ್ಲರ ಮೇಲೂ ಸಾಗುತ್ತವೆ. ಕೊನೆಯಲ್ಲಿ ಕೊಲೆ ಮಾಡಿದ ವ್ಯಕ್ತಿ ಯಾರು? ಕೊಲೆ ಹಿಂದೆ ಯಾರಿದ್ದಾರೆ ಎಂಬುದು ತಿಳಿಯುತ್ತದೆ.
ಮೊದಲ ಸೀಸನ್ ನೋಡಲೇಬೇಕೆ?
‘ಸುಳಲ್’ ಮೊದಲ ಸೀಸನ್ ಹಾಗೂ ಎರಡನೇ ಸೀಸನ್ಗೆ ಆರಂಭದಲ್ಲಿ ಕೆಲವು ಲಿಂಕ್ಗಳು ಇವೆ. ಹೀಗಾಗಿ, ಮೊದಲ ಸೀಸನ್ ವೀಕ್ಷಣೆ ಮಾಡಿದ್ದರೆ ಎರಡನೇ ಸೀಸನ್ ಅರ್ಥ ಮಾಡಿಕೊಳ್ಳೋದು, ಕಥಾ ನಾಯಕ ಯಾವ ರೀತಿಯಲ್ಲಿ ಆಲೋಚನೆ ಮಾಡುತ್ತಾನೆ ಎಂಬುದು ಸುಲಭದವಾಗಿ ಅರ್ಥವಾಗುತ್ತದೆ. ತಮಿಳಿನ ಜೊತೆಗೆ ಕನ್ನಡದಲ್ಲೂ ಈ ಸೀರಿಸ್ ವೀಕ್ಷಣೆಗೆ ಲಭ್ಯವಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:27 pm, Fri, 7 March 25