- Kannada News Photo gallery Naga Chaitanya And Shobhita Dhulipal Honeymoon Photo goes viral cinema News in Kannada
ಪತಿ ನಾಗ ಚೈತನ್ಯ ಜೊತೆ ಹನಿಮೂನ್ ತೆರೆಳಿದ ಶೋಭಿತಾ ಧುಲಿಪಾಲ್
ಶೋಭಿತಾ ಧುಲಿಪಾಲ್ ಹಾಗೂ ನಾಗ ಚೈತನ್ಯ ಇತ್ತೀಚೆಗಷ್ಟೇ ಅದ್ದೂರಿ ವಿವಾಹ ಆದರು. ಇವರ ವಿವಾಹಕ್ಕೆ ಅನೇಕ ಸೆಲೆಬ್ರಿಟಿಗಳು ಆಗಮಿಸಿದ್ದರು. ವಿವಾಹದ ಬಳಿಕ ನಾಗ ಚೈತನ್ಯ ಅವರು ‘ತಂಡೇಲ್’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಇದ್ದರು. ಈಗ ಸಿನಿಮಾ ಗೆದ್ದ ಬಳಿಕ ಅವರು ವಿದೇಶಕ್ಕೆ ತೆರಳಿದ್ದಾರೆ.
Updated on: Mar 07, 2025 | 12:55 PM

ನಾಗ ಚೈತನ್ಯ ಹಾಗೂ ಶೋಭಿತಾ ಧುಲಿಪಾಲ್ ಅವರು ವಿದೇಶಕ್ಕೆ ತೆರಳಿದ್ದಾರೆ. ಹನಿಮೂನ್ ಕ್ಷಣವನ್ನು ಅವರು ಆನಂದಿಸುತ್ತಿದ್ದಾರೆ. ಈ ಫೋಟೋಗಳನ್ನು ಶೋಭಿತಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.

ನಾಗ ಚೈತನ್ಯ ಅವರು ಕಪ್ಪು ಬಣ್ಣದ ಉಡುಗೆಯಲ್ಲಿ ಮಿಂಚಿದ್ದಾರೆ. ಈ ಫೋಟೋದಲ್ಲಿ ಅವರು ಬ್ಯಾಕ್ಲೆಸ್ ಆಗಿ ಕಾಣಿಸಿಕೊಂಡಿದ್ದು, ಫೋಟೋಗಳು ಗಮನ ಸೆಳೆದಿವೆ. ಶೋಭಿತಾ ಅವರ ಗ್ಲಾಮರ್ ಲುಕ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಶೋಭಿತಾ ಅವರ ಇನ್ಸ್ಟಾಗ್ರಾಮ್ ಖಾತೆ ವಿವಿಧ ರೀತಿಯ ಫೋಟೋಗಳಿಂದ ತುಂಬಿ ಹೋಗಿದೆ. ಈಗ ಅವರು ಹನಿಮೂನ್ ಫೋಟೋಗಳನ್ನು ಹಂಚಿಕೊಳ್ಳಲು ಮರೆತಿಲ್ಲ. ಅವರ ಫೋಟೋಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ.

ನಾಗ ಚೈತನ್ಯ ಅವರು ಹಲವು ವರ್ಷಗಳಿಂದ ಒಂದು ದೊಡ್ಡ ಗೆಲುವಿಗಾಗಿ ಕಾಯುತ್ತಾ ಇದ್ದರು. ಈ ಗೆಲುವು ಈಗ ಅವರಿಗೆ ಸಿಕ್ಕಿದೆ. ‘ತಂಡೇಲ್’ ಚಿತ್ರ ಬಾಕ್ಸ್ ಆಫೀಸ್ನಲ್ಲಿ ನೂರಾರು ಕೋಟಿ ರೂಪಾಯಿ ಬಾಚಿಕೊಂಡು ಗಮನ ಸೆಳೆದಿದೆ. ಈ ಚಿತ್ರದ ಒಟಿಟಿ ರಿಲೀಸ್ಗಾಗಿ ಫ್ಯಾನ್ಸ್ ಕಾದಿದ್ದಾರೆ.

‘ತಂಡೇಲ್’ ಚಿತ್ರದಲ್ಲಿ ನಾಗ ಚೈತನ್ಯ ಅವರಿಗೆ ಜೊತೆಯಾಗಿ ಸಾಯಿ ಪಲ್ಲವಿ ಅವರು ನಟಿಸಿದ್ದಾರೆ. ಈ ಸಿನಿಮಾದಲ್ಲಿ ನಾಗ ಚೈತನ್ಯ ಹಾಗೂ ಸಾಯಿ ಪಲ್ಲವಿ ಕೆಮಿಸ್ಟ್ರಿ ಕೆಲಸ ಮಾಡಿದೆ.



















