- Kannada News Photo gallery Duniya Vijay acting in his first Tamil movie with Nayanthara, here is pics
ದುನಿಯಾ ವಿಜಯ್ ತಮಿಳು ಸಿನಿಮಾದ ಮುಹೂರ್ತ: ಇಲ್ಲಿವೆ ಚಿತ್ರಗಳು
Duniya Vijay: ದುನಿಯಾ ವಿಜಯ್ ಮೊದಲ ಬಾರಿಗೆ ತಮಿಳು ಸಿನಿಮಾದಲ್ಲಿ ನಟಿಸಲು ಸಜ್ಜಾಗಿದ್ದಾರೆ. ದುನಿಯಾ ವಿಜಯ್ ನಟಿಸಲಿರುವ ಮೊದಲ ತಮಿಳು ಸಿನಿಮಾದ ಮುಹೂರ್ತ ನಿನ್ನೆಯಷ್ಟೆ ಚೆನ್ನೈನಲ್ಲಿ ಬಲು ಅದ್ಧೂರಿಯಾಗಿ ನಡೆದಿದೆ. ದುನಿಯಾ ವಿಜಯ್ ಸಹ ಮುಹೂರ್ತದಲ್ಲಿ ಹಾಜರಿದ್ದರು. ಇಲ್ಲಿವೆ ನೋಡಿ ಸಿನಿಮಾದ ಮುಹೂರ್ತದ ಚಿತ್ರಗಳು.
Updated on: Mar 07, 2025 | 2:06 PM

ಕನ್ನಡದ ನಟ, ನಿರ್ದೇಶಕ ದುನಿಯಾ ವಿಜಯ್, ಪರಭಾಷೆಗಳಲ್ಲಿಯೂ ಬೇಡಿಕೆ ಹೊಂದಿದ್ದಾರೆ. ಕೆಲ ವರ್ಷಗಳ ಹಿಂದಷ್ಟೆ ಅವರು ತೆಲುಗಿನಲ್ಲಿ ಸ್ಟಾರ್ ನಟ ನಂದಮೂರಿ ಬಾಲಕೃಷ್ಣ ನಟನೆಯ ಸಿನಿಮಾ ಒಂದರಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಆ ಪಾತ್ರಕ್ಕೆ ಅವರಿಗೆ ಮೆಚ್ಚುಗೆ ವ್ಯಕ್ತವಾಗಿತ್ತು.

ಇದೀಗ ದುನಿಯಾ ವಿಜಯ್ ಮೊದಲ ಬಾರಿಗೆ ತಮಿಳು ಸಿನಿಮಾದಲ್ಲಿ ನಟಿಸಲು ಸಜ್ಜಾಗಿದ್ದಾರೆ. ದುನಿಯಾ ವಿಜಯ್ ನಟಿಸಲಿರುವ ಮೊದಲ ತಮಿಳು ಸಿನಿಮಾದ ಮುಹೂರ್ತ ನಿನ್ನೆಯಷ್ಟೆ ಚೆನ್ನೈನಲ್ಲಿ ಬಲು ಅದ್ಧೂರಿಯಾಗಿ ನಡೆದಿದೆ. ದುನಿಯಾ ವಿಜಯ್ ಸಹ ಮುಹೂರ್ತದಲ್ಲಿ ಹಾಜರಿದ್ದರು.

‘ಮೂಕುತ್ತಿ ಅಮ್ಮನ್ 2’ ಸಿನಿಮಾ ಭಾರಿ ಬಜೆಟ್ ಸಿನಿಮಾ ಆಗಿದ್ದು ಸಿನಿಮಾಕ್ಕೆ 100 ಕೋಟಿ ಬಜೆಟ್ ಅನ್ನು ನಿರ್ಮಾಪಕರು ತೊಡಗಿಸಿದ್ದಾರೆ. ಸಿನಿಮಾವು ದೇವರು ಮತ್ತು ರಾಕ್ಷಸರ ನಡುವಿನ ಹೋರಾಟದ ಕತೆಯನ್ನು ಒಳಗೊಂಡಿದೆಯಂತೆ.

ದುನಿಯಾ ವಿಜಯ್ ನಟಿಸುತ್ತಿರುವ ಸಿನಿಮಾದಲ್ಲಿ ನಯನತಾರಾ, ಮೀನಾ, ಖುಷ್ಬು ಸುಂದರ್, ಯೋಗಿ ಬಾಬು, ಅವಂತಿಕಾ ಇನ್ನೂ ಕೆಲವು ಜನಪ್ರಿಯ ನಟ, ನಟಿಯರು ನಟಿಸುತ್ತಿದ್ದಾರೆ. ಸಿನಿಮಾ ನಿರ್ದೇಶನವನ್ನು ಸುಂದರ್ ಸಿ ಅವರು ಮಾಡುತ್ತಿದ್ದಾರೆ.

2020 ರಲ್ಲಿ ಬಿಡುಗಡೆ ಆಗಿದ್ದ ‘ಮೂಕುತಿ ಅಮ್ಮನ್’ ಸಿನಿಮಾದ ಮುಂದುವರೆದ ಭಾಗ ‘ಮೂಕುತ್ತಿ ಅಮ್ಮನ್ 2’ ಸಿನಿಮಾದಲ್ಲಿ ದುನಿಯಾ ವಿಜಯ್ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ದೇವಿಯ ಪಾತ್ರದಲ್ಲಿ ನಯನತಾರಾ ನಟಿಸಲಿದ್ದಾರೆ.

‘ಮೂಕುತ್ತಿ ಅಮ್ಮನ್’ ಸಿನಿಮಾದಲ್ಲಿ ದುನಿಯಾ ವಿಜಯ್ ವಿಲನ್ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸಿನಿಮಾದಲ್ಲಿ ಸಾಕಷ್ಟು ಗ್ರಾಫಿಕ್ಸ್ ಬಳಕೆ ಸಹ ಇರಲಿದ್ದು, ಸಿನಿಮಾದ ಚಿತ್ರೀಕರಣ ಈಗಾಗಲೇ ಪ್ರಾರಂಭ ಆಗಿದೆ.



















