ಮಲಯಾಳಂನ ಈ ಸೂಪರ್ ಹಿಟ್ ಕ್ರೈಮ್ ಥ್ರಿಲ್ಲರ್ ಸಿನಿಮಾ ಒಟಿಟಿಗೆ; ಕನ್ನಡದಲ್ಲೂ ಲಭ್ಯ
ಜನವರಿ 9ರಂದು ಬಿಡುಗಡೆಯಾದ ಮಲಯಾಳಂ ಕ್ರೈಮ್ ಥ್ರಿಲ್ಲರ್ ಚಿತ್ರವು 8.8 ರೇಟಿಂಗ್‌ನೊಂದಿಗೆ ಭಾರಿ ಯಶಸ್ಸು ಕಂಡಿತು. ಈಗ ಈ ಚಿತ್ರವು ಮಲಯಾಳಂ, ಕನ್ನಡ, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಸೋನಿಲಿವ್‌ನಲ್ಲಿ ಮಾರ್ಚ್ 7 ರಿಂದ ಲಭ್ಯವಾಗಲಿದೆ. ಆಸಿಫ್ ಅಲಿ ಮತ್ತು ಅನಸ್ವರ ರಂಜನ್ ನಟಿಸಿರುವ ಈ ಚಿತ್ರವು ಕೊಲೆಗಳ ಸರಣಿಯ ಮೇಲಿದೆ.

ಮಲಯಾಳಂನಲ್ಲಿ ಇತ್ತೀಚೆಗೆ ಸಾಕಷ್ಟು ಚಿತ್ರಗಳು ರಿಲೀಸ್ ಆಗಿ ಹಿಟ್ ಆಗುತ್ತಾ ಇವೆ. ಅದರಲ್ಲೂ ಕ್ರೈಮ್ ಥ್ರಿಲ್ಲರ್ ಚಿತ್ರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅವರು ನಿರ್ಮಾಣ ಮಾಡುತ್ತಾ ಇದ್ದಾರೆ. ಈಗ ಮಲಯಾಳಂನಲ್ಲಿ ಯಶಸ್ಸು ಕಂಡ ಚಿತ್ರವೊಂದು ಒಟಿಟಿಗೆ ಬರೋಕೆ ರೆಡಿ ಆಗಿದೆ. ಮಿಸ್ ಮಾಡದೇ ಈ ಚಿತ್ರವನ್ನು ಒಟಿಟಿಯಲ್ಲಿ ನೋಡಬೇಕು ಎಂಬುದು ಕೆಲವರ ಸಲಹೆ. ಹಾಗಾದರೆ, ಈ ಚಿತ್ರದಲ್ಲಿ ಏನಿದೆ? ಇದಕ್ಕೆ ಸಿಕ್ಕ ರೇಟಿಂಗ್ ಎಷ್ಟು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
ಈ ವರ್ಷ ಜನವರಿ 9ರಂದು ಮಲಯಾಳಂನಲ್ಲಿ ‘ರೇಖಾಚಿತ್ರಂ’ ಸಿನಮಾ ರಿಲೀಸ್ ಆಯಿತು. ಆಸಿಫ್ ಅಲಿ ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡರೆ, ಅನಸ್ವರ ರಂಜನ್ ನಟಿಯ ಪಾತ್ರದಲ್ಲಿದ್ದಾರೆ. ಮನೋಜ್ ಜಯನ್, ಸಿದ್ದಿಖಿ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಇದು ಪಕ್ಕಾ ಕ್ರೈಮ್ ಥ್ರಿಲ್ಲರ್ ಸಿನಿಮಾ. ಈ ವಿಧದ ಚಿತ್ರಗಳನ್ನು ಇಷ್ಟಪಡುವವರಿಗೆ ಸಿನಿಮಾ ಸಖತ್ ಇಷ್ಟ ಆಗಲಿದೆ.
An anklet that echoes through time. Watch #Rekhachithram from March 7 only on sonyLIV!#Rekhachithram #AsifAli #AneswaraRajan #JofinTChacko #ManojKJayan #ZarinShihab #BhamaArun #MeghaThomas pic.twitter.com/yuD5s2JJRU
— Sony LIV (@SonyLIV) March 3, 2025
ಒಂದು ಊರಿನಲ್ಲಿ ಸಾಲು ಸಾಲು ಕೊಲೆಗಳು ನಡೆಯುತ್ತವೆ. ಅದರ ಬೆನ್ನು ಹತ್ತಿ ಹೋಗುತ್ತಾನೆ ಕಥಾ ನಾಯಕ. ಈ ಕೊಲೆಗಳ ಹಿಂದೆ ಇರೋರು ಯಾರು ಎನ್ನುವುದನ್ನು ಹುಡುಕುವ ಪ್ರಯತ್ನದಲ್ಲಿ ಕಥಾ ನಾಯಕ ತನ್ನ ಜೀವನ ಸವೆಸುತ್ತಾನೆ. ಈ ಚಿತ್ರಕ್ಕೆ ಬುಕ್ ಮೈ ಶೋನಲ್ಲಿ 40 ಸಾವಿರಕ್ಕೂ ಅಧಿಕ ಜನ ವೋಟ್ ಮಾಡಿದ್ದು, 8.8 ರೇಟಿಂಗ್ ಸಿಕ್ಕಿದೆ. ಐಎಂಡಿಬಿಯಲ್ಲೂ ಚಿತ್ರಕ್ಕೆ 8+ ರೇಟಿಂಗ್ ಸಿಕ್ಕಿದೆ.
ಇದನ್ನೂ ಓದಿ: ನಟ ಯಶ್ಗೆ ಅವಮಾನ ಮಾಡಿದ ಮಲಯಾಳಂ ಸಿನಿಮಾ
ಈ ಚಿತ್ರ ಥಿಯೇಟರ್ನಲ್ಲಿ ಮಲಯಾಳಂ ಭಾಷೆಯಲ್ಲಿ ಮಾತ್ರ ರಿಲೀಸ್ ಆಗಿತ್ತು. ಆದರೆ, ಒಟಿಟಿಯಲ್ಲಿ ಬಿಡುಗಡೆ ಆಗುವಾಗ ಈ ಸಿನಿಮಾ ಮಲಯಾಳಂ, ಕನ್ನಡ, ತೆಲುಗು ಹಾಗೂ ಹಿಂದಿ ಭಾಷೆಯಲ್ಲೂ ಲಭ್ಯವಿದೆ. ಸೋನಿ ಲಿವ್ ಆ್ಯಪ್ ಮೂಲಕ ಈ ಚಿತ್ರವನ್ನು ನೀವು ವೀಕ್ಷಿಸಬಹುದು. ಮಾರ್ಚ್ 7ರಿಂದ ಸಿನಿಮಾ ಪ್ರಸಾರ ಆರಂಭಿಸಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.