AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೂನ್ 1 ರಿಂದ ಮಲಯಾಳಂ ಚಿತ್ರರಂಗ ಬಂದ್, ಸಂಭಾವನೆಯದ್ದೇ ಸಮಸ್ಯೆ

Malayalam Movie Industry: ಮಲಯಾಳಂ ಚಿತ್ರರಂಗ ಪ್ರಸ್ತುತ ಭಾರತದ ಟಾಪ್ ಚಿತ್ರರಂಗ, ಕಳೆದ ವರ್ಷ ಅತಿ ಹೆಚ್ಚು ಹಿಟ್ ಸಿನಿಮಾಗಳನ್ನು ಈ ಚಿತ್ರರಂಗ ನೀಡಿದೆ. ಹಾಗಿದ್ದರೂ ಸಹ ಮಲಯಾಳಂ ಚಿತ್ರರಂಗದ ನಿರ್ಮಾಪಕರು ಕಳೆದ ವರ್ಷ 600-700 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರಂತೆ. ನಟರು, ತಂತ್ರಜ್ಞರ ಸಂಭಾವನೆ ಬಗ್ಗೆ ನಿರ್ಮಾಪಕರಿಗೆ ದೊಡ್ಡ ತಕರಾರಿದ್ದು, ಇದೇ ಕಾರಣಕ್ಕೆ ಜೂನ್ 1 ರಿಂದ ಚಿತ್ರರಂಗವನ್ನು ಬಂದ್ ಮಾಡಲಾಗುತ್ತಿದೆ.

ಜೂನ್ 1 ರಿಂದ ಮಲಯಾಳಂ ಚಿತ್ರರಂಗ ಬಂದ್, ಸಂಭಾವನೆಯದ್ದೇ ಸಮಸ್ಯೆ
Malayalam Movie
ಮಂಜುನಾಥ ಸಿ.
|

Updated on: Feb 16, 2025 | 7:35 PM

Share

ಮಲಯಾಳಂ ಚಿತ್ರರಂಗ ಗುಣಮಟ್ಟದ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಾ ಬಂದಿದೆ. ಕಳೆದ ವರ್ಷವಂತೂ ‘ಮಂಜ್ಞುಮೆಲ್ ಬಾಯ್ಸ್’, ‘ಆವೇಶಂ’, ‘ಪಾಲಂ ಪಳವುಂ’ ಇನ್ನೂ ಕೆಲವು ಒಳ್ಳೆಯ ಸಿನಿಮಾಗಳನ್ನು ನೀಡಿದೆ. 2023 ರಲ್ಲಿ ‘ಇರಟ್ಟ’, ‘ನೇರು’, ‘2018’, ‘ರೋಮಾಂಚನಂ’ ಇನ್ನೂ ಹಲವು ಹಿಟ್ ಸಿನಿಮಾಗಳನ್ನು ನೀಡಿತ್ತು. ಕೋವಿಡ್​ಗೆ ಮುಂಚೆ ಕೇರಳ ಬಿಟ್ಟು ಹೊರಗೆಲ್ಲೂ ಸದ್ದೇ ಮಾಡದಿದ್ದ ಮಲಯಾಳಂ ಚಿತ್ರರಂಗ ಕೋವಿಡ್ ಬಳಿಕ ತನ್ನ ಗುಣಮಟ್ಟದ ಕತೆ ಹೇಳುವಿಕೆಯಿಂದ ಭಾರತದ ಮಾತ್ರವೇ ಅಲ್ಲದೆ ವಿಶ್ವದ ಗಮನ ಸೆಳೆಯುತ್ತಿದೆ. ಆದರೆ ಜೂನ್ 1 ರಿಂದ ಇಡೀ ಮಲಯಾಳಂ ಚಿತ್ರರಂಗ ಬಂದ್ ಆಗುತ್ತಿದೆ.

ಕಳೆದ ವರ್ಷ ಅತಿ ಹೆಚ್ಚು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಚಿತ್ರರಂಗ ಮಲಯಾಳಂ ಚಿತ್ರರಂಗ. ದೊಡ್ಡ ಹಿಟ್​ ಗಳನ್ನು ನೀಡಿದ್ದರೂ ಸಹ ಕಳೆದ ವರ್ಷ ಮಲಯಾಳಂ ನಿರ್ಮಾಪಕರು ಸುಮಾರು 600 ರಿಂದ 700 ಕೋಟಿ ಹಣ ಕಳೆದುಕೊಂಡಿದ್ದಾರಂತೆ. ಇದಕ್ಕೆ ಮುಖ್ಯ ಕಾರಣ, ಸಿನಿಮಾದ ನಟ-ನಟಿಯರು ಮತ್ತು ತಂತ್ರಜ್ಞರು ತಮ್ಮ ಸಂಭಾವನೆಯನ್ನು ಭಾರಿ ಮೊತ್ತದಲ್ಲಿ ಏರಿಕೆ ಮಾಡಿಕೊಂಡಿರುವುದು. ಅದು ಮಾತ್ರವೇ ಅಲ್ಲದೆ ಸರ್ಕಾರದ ತೆರಿಗೆಗಳಿಂದಾಗಿಯೂ ಸಹ ಸಿನಿಮಾದ ಲಾಭದ ಹಣ ನಿರ್ಮಾಪಕರ ಕೈ ಸೇರದಂತಾಗಿದೆ. ಹೀಗಾಗಿ ಸಿನಿಮಾ ನಿರ್ಮಾಪಕರು, ವಿತರಕರು ಎಲ್ಲರೂ ಸೇರಿ ಬಂದ್ ಆಚರಣೆಗೆ ಮುಂದಾಗಿದ್ದಾರೆ.

ಮಲಯಾಳಂ ಸಿನಿಮಾದ ಜನಪ್ರಿಯ ನಿರ್ಮಾಪಕ ಜಿ ಸುರೇಶ್ ಕುಮಾರ್ ಮಾತನಾಡಿ, ‘ನಟರು, ತಂತ್ರಜ್ಞರು ತಮ್ಮ ಸಂಭಾವನೆಯನ್ನು ಹತ್ತು ಪಟ್ಟು ಹೆಚ್ಚು ಮಾಡಿಕೊಂಡಿದ್ದಾರೆ. ಜಿಎಸ್​ಟಿ, ಮನೊರಂಜನಾ ತೆರಿಗೆ ಇನ್ನಿತೆರೆಗಳಿಂದಾಗಿ ನಿರ್ಮಾಪಕರಿಗೆ ಸಿನಿಮಾದ ಲಾಭದ ಹಣ ಸೇರುತ್ತಿಲ್ಲ. ಒಂದೊಮ್ಮೆ ಸಿನಿಮಾ 100 ಕೋಟಿ ಕಲೆಕ್ಷನ್ ಮಾಡಿತೆಂದರೆ ತೆರಿಗೆಗಳೆಲ್ಲ ಹೋಗಿ ನಿರ್ಮಾಪಕನ ಕೈ ಸೇರುವುದು ಕೇವಲ 27 ಕೋಟಿ ಎಂದು ಲೆಕ್ಕ ನೀಡಿದ್ದಾರೆ ಅವರು.‘

ಇದನ್ನೂ ಓದಿ:ಪ್ರೇಮ್ ಜೊತೆಗೆ ಸಿನಿಮಾ, ದರ್ಶನ್ ಹುಟ್ಟುಹಬ್ಬದಂದು ಸಿಕ್ಕಿತು ಸ್ಪಷ್ಟನೆ

ಇ2024ರಲ್ಲಿ 200 ಮಲಯಾಳಂ ಸಿನಿಮಾಗಳು ನಿರ್ಮಾಣವಾಗಿವೆ ಆದರೆ ಅವುಗಳಲ್ಲಿ 24 ಸಿನಿಮಾ ಯಶಸ್ಸು ಕಂಡಿವೆ. ಆ ಮೂಲಕ ನಿರ್ಮಾಪಕರು ಸುಮಾರು 600-700 ಕೋಟಿ ನಷ್ಟ ಅನುಭವಿಸಿದ್ದಾರೆ. ಇದೇ ಕಾರಣಕ್ಕೆ ಮಲಯಾಳಂ ಸಿನಿಮಾ ನಿರ್ಮಾಪಕರು, ವಿತರಕರು, ಪ್ರದರ್ಶಕರು ಇನ್ನೂ ಕೆಲ ಸಂಘಗಳು ಸಭೆ ನಡೆಸಿದ್ದು, ಜೂನ್ 1 ರಿಂದ ಸಂಪೂರ್ಣ ಬಂದ್ ಆಚರಿಸಲು ಮುಂದಾಗಿವೆ. ಆದರೆ ಇದು ಕೆಲ ಸ್ಟಾರ್ ನಟರು, ನಿರ್ಮಾಪಕರ ಸಂಕಷ್ಟಕ್ಕೆ ಕಾರಣವಾಗಿದೆ. ಮೋಹನ್​ಲಾಲ್​ರ ‘ಎಲ್​2’ ಸೇರಿದಂತೆ ಇನ್ನೂ ಕೆಲವು ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿದ್ದು, ಈ ವೇಳೆಯಲ್ಲಿ ಬಂದ್ ಆದರೆ ಸಿನಿಮಾಕ್ಕೆ ಭಾರಿ ಹೊಡೆತ ಬೀಳಲಿದೆ. ಹಾಗಾಗಿ ಕೆಲವು ನಿರ್ಮಾಪಕರು ಬಂದ್ ಅನ್ನು ವಿರೋಧಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ