ನಟ ಚರಿತ್ ಬಾಳಪ್ಪ ವಿರುದ್ಧ ಮತ್ತೊಂದು ದೂರು ದಾಖಲು
Charith Balappa: ಕನ್ನಡದ ‘ಮುದ್ದು ಲಕ್ಷ್ಮಿ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ನಟ ಚರಿತ್ ಬಾಳಪ್ಪ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಲೈಂಗಿಕ ದೌರ್ಜನ್ಯ, ಬೆದರಿಕೆ, ಹಣ ವಸೂಲಿ ಮಾಡಿದ ಆರೋಪಗಳನ್ನು ನಟ ಚರಿತ್ ಬಾಳಪ್ಪ ಎದುರಿಸುತ್ತಿದ್ದಾರೆ. ಚರಿತ್ ಬಾಳಪ್ಪ ವಿರುದ್ಧ ಅಮೃತಹಳ್ಳಿಯಲ್ಲಿ ದಾಖಲಾಗಿದ್ದ ದೂರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ವರ್ಗಾವಣೆ ಆಗಿದೆ.

‘ಮುದ್ದು ಲಕ್ಷ್ಮಿ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ನಟ ಧ್ರುವಂತ್ ಅಲಿಯಾಸ್ ಚರಿತ್ ಬಾಳಪ್ಪ ವಿರುದ್ದ ಈಗಾಗಲೇ ಆರ್ಆರ್ ನಗರ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಇದೀಗ ಅದೇ ನಟನ ವಿರುದ್ಧ ಮತ್ತೊಂದು ದೂರು ದಾಖಲು ದಾಖಲಾಗಿದೆ. ಸೀರಿಯಲ್ ಶೂಟಿಂಗ್ ನೋಡಲು ಹೋಗಿದ್ದ ಮಹಿಳೆಯೊಟ್ಟಿಗೆ ಪರಿಚಯ ಬೆಳೆಸಿಕೊಂಡು ಆಕೆಯನ್ನು ಲೈಂಗಿಕ ತೃಷೆಗಾಗಿ ಚರಿತ್ ಬಾಳಪ್ಪ ಬಳಸಿಕೊಂಡಿದ್ದ ಎನ್ನಲಾಗಿದ್ದು, ಇದೀಗ ಸಂತ್ರಸ್ತೆಯಿಂದ ದೂರು ದಾಖಲಾಗಿದೆ.
ಧಾರಾವಾಹಿ ನೋಡಲು ಬಂದಿದ್ದ ಮಹಿಳೆಯೊಟ್ಟಿಗೆ ಪರಿಚಯ ಮಾಡಿಕೊಂಡು ಪ್ರೀತಿಸುವ ನಾಟಕವಾಡಿ ಆ ನಂತರ ಬೇರೆಯವರೊಂದಿಗೆ ಮದುವೆ ಆಗಿದ್ದನಂತೆ ಧ್ರುವಂತ್ ಅಲಿಯಾಸ್ ಚರಿತ್ ಬಾಳಪ್ಪ. ಅದಾದ ಬಳಿಕ ಯುವತಿ, ಚರಿತ್ನಿಂದ ದೂರವೇ ಉಳಿದಿದ್ದರು. ಆದರೆ ಮದುವೆ ಆದ ಬಳಿಕವೂ ಸಹ ಈ ಯುವತಿಯ ಸಂಪರ್ಕ ಬೆಳೆಸಿ, ದೈಹಿಕ ಸಂಪರ್ಕಕ್ಕೆ ಒತ್ತಾಯ ಮಾಡುತ್ತಿದ್ದನಂತೆ. ಅದಾದ ಬಳಿಕ ಯುವತಿ ಕೆಲಸ ಮಾಡುತ್ತಿದ್ದ ಜಾಗಕ್ಕೆ ಬಂದು ಗಲಾಟೆ ಸಹ ಮಾಡಿದ್ದನಂತೆ.
07/09/2020 ರಂದು ಅಗ್ನೇಯ ವಿಭಾಗದ ಸೆನ್ ಠಾಣೆಯಲಿ ದೂರು ನೀಡಿದ್ದ ಚರಿತ್ ವಿರುದ್ಧ ದೂರು ನೀಡಿದ್ದರು ಸಂತ್ರಸ್ತೆ. ಆಗ ಠಾಣೆಗೆ ಬಂದು ಸಂತ್ರಸ್ತೆ ತಂಟೆಗೆ ಹೋಗಲ್ಲ ಅಂತ ಅಪಾಲಜಿ ಬರೆದುಕೊಟ್ಟಿದ್ದ ಚರಿತ್. ಬಳಿಕ ಎರಡು ವರ್ಷ ಸಂತ್ರಸ್ತ ಮಹಿಳೆ ತಂಟೆಗೆ ಹೋಗಿರಲಿಲ್ಲ, ಆದರೆ 2022ರಲ್ಲಿ ಆತನ ಹೆಂಡತಿಯೊಂದಿಗೆ ಡಿವೋರ್ಸ್ ಪಡೆದ ಬಳಿಕ ಮತ್ತೆ ಸಂತ್ರಸ್ತೆಯನ್ನು ಭೇಟಿ ಮಾಡಿ ಪುನಃ ಪ್ರೀತಿಸುವಂತೆ, ದೈಹಿಕ ಸಂಬಂಧ ಇಟ್ಟುಕೊಳ್ಳುವಂತೆ ಬಲವಂತ ಮಾಡಿದ್ದ. ಆದರೆ ಸಂತ್ರಸ್ತೆ ಒಪ್ಪದ ಕಾರಣ ಆಕೆಯ ಖಾಸಗಿ ಫೋಟೋ ಇಟ್ಟುಕೊಂಡು ಬ್ಲಾಕ್ ಮೇಲ್ ಸಹ ಮಾಡಿದ್ದನಂತೆ.
ಇದನ್ನೂ ಓದಿ:ರಾಯಚೂರಿನಲ್ಲಿ ಮತ್ತೋರ್ವ ಶಾಲಾ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ
ಮರ್ಯಾದೆಗೆ ಹೆದರಿದ ಯುವತಿ ತನ್ನ ಬಳಿ ಇದ್ದ ಹಣ, ಚಿನ್ನ, ಬೆಳ್ಳಿಯ ಆಭರಣ, 23 ಕಂಚಿ ರೇಷ್ಮೆ ಸೀರೆಗಳನ್ನು ಚರಿತ್ಗೆ ನೀಡಿದ್ದರು. ಕೊನೆಗೆ ರೋಸಿ ಹೋಗಿ ಯುವತಿ ಚರಿತ್ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಇದೀಗ ಚರಿತ್ ಬಾಳಪ್ಪ ತಲೆ ಮರೆಸಿಕೊಂಡಿದ್ದಾನೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ