ಕನ್ನಡದಲ್ಲೂ ಬರ್ತಿದೆ ಮಲಯಾಳಂನ ಹಿಟ್ ಸಿನಿಮಾ; ಹಿಂಸಾತ್ಮಕ ದೃಶ್ಯವೇ ಹೈಲೈಟ್

ಉನ್ನಿ ಮುಕುಂದನ್ ನಟನೆಯ ‘ಮಾರ್ಕೊ’ ಚಿತ್ರ ಜನವರಿ 31 ರಂದು ಕನ್ನಡದಲ್ಲಿ ಬಿಡುಗಡೆಯಾಗಲಿದೆ. ಮಲಯಾಳಂನಲ್ಲಿ ಯಶಸ್ವಿಯಾದ ಈ ಚಿತ್ರ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲೂ ಬಿಡುಗಡೆಯಾಗಿದೆ. ಚಿತ್ರದಲ್ಲಿ ಹಿಂಸಾತ್ಮಕ ದೃಶ್ಯಗಳಿರುವುದರಿಂದ ವಿವಾದಕ್ಕೀಡಾಗಿದೆ. ಆದರೂ, 100 ಕೋಟಿಗೂ ಅಧಿಕ ಗಳಿಕೆ ಮಾಡಿದ ಚಿತ್ರದ ಒಟಿಟಿ ಹಕ್ಕುಗಳಿಗೆ ಭಾರಿ ಬೇಡಿಕೆಯಿದೆ.

ಕನ್ನಡದಲ್ಲೂ ಬರ್ತಿದೆ ಮಲಯಾಳಂನ ಹಿಟ್ ಸಿನಿಮಾ; ಹಿಂಸಾತ್ಮಕ ದೃಶ್ಯವೇ ಹೈಲೈಟ್
ಮಾರ್ಕೊ
Follow us
ರಾಜೇಶ್ ದುಗ್ಗುಮನೆ
|

Updated on: Jan 21, 2025 | 2:12 PM

‘ಮಾರ್ಕೊ’ ಸಿನಿಮಾ ಮಲಯಾಳಂ ಚಿತ್ರರಂಗದಲ್ಲಿ ಹೊಸ ಅಲೆಸೃಷ್ಟಿಸಿದ ಸಿನಿಮಾಗಳಲ್ಲಿ ಒಂದು. ಉನ್ನಿ ಮುಕುಂದನ್ ನಟನೆಯ ಈ ಚಿತ್ರ 2024ರ ಡಿಸೆಂಬರ್​ನಲ್ಲಿ ತೆರೆಗೆ ಬಂತು. ಈ ಚಿತ್ರವನ್ನು ನೋಡಿ ಒಂದು ವರ್ಗದ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಈ ಸಿನಿಮಾ ಮೊದಲು ಮೂಲ ಭಾಷೆಯಲ್ಲಿ ರಿಲೀಸ್ ಆಗಿ ಹಿಟ್ ಆಯಿತು. ಆ ಬಳಿಕ ಈ ಚಿತ್ರವನ್ನು ಹಿಂದಿ, ತಮಿಳು ಹಾಗೂ ತೆಲುಗು ಭಾಷೆಯಲ್ಲೂ ರಿಲೀಸ್ ಮಾಡಲಾಯಿತು. ಈಗ ಚಿತ್ರದ ಕನ್ನಡ ವರ್ಷನ್ ರಿಲೀಸ್​ಗೆ ದಿನಾಂಕ ಫಿಕ್ಸ್ ಆಗಿದೆ.

ಉನ್ನಿ ಮುಕುಂದನ್ ನಟನೆಯ ‘ಮಾರ್ಕೊ’ ಚಿತ್ರತಂಡ ಹೊಸ ಪೋಸ್ಟರ್ ರಿಲೀಸ್ ಮಾಡಿದೆ. ಇದರಲ್ಲಿ ಜನವರಿ 31ರಂದು ಕನ್ನಡದಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ ಎಂಬ ಮಾಹಿತಿ ನೀಡಲಾಗಿದೆ. ಈ ಚಿತ್ರ ಸ್ಯಾಂಡಲ್​ವುಡ್ ಬಾಕ್ಸ್ ಆಫೀಸ್​ನಲ್ಲಿ ಯಾವ ರೀತಿಯಲ್ಲಿ ಗಳಿಕೆ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಈ ಚಿತ್ರ ‘A’ ಸರ್ಟಿಫಿಕೇಟ್ ಪಡೆದುಕೊಂಡಿದ್ದು, ಸಾಕಷ್ಟು ಹಿಂಸಾತ್ಮಕ ದೃಶ್ಯಗಳು ಇವೆ. ಈ ಕಾರಣಕ್ಕೆ ಒಂದು ವರ್ಗದ ಜನರು ಇದನ್ನು ಇಷ್ಟಪಟ್ಟಿಲ್ಲ.

‘ಅನಿಮಲ್’ ಸಿನಿಮಾದಲ್ಲೂ ಸಾಕಷ್ಟು ಹಿಂಸಾತ್ಮಕ ದೃಶ್ಯಗಳು, ಹೆಣ್ಣುಮಕ್ಕಳಿಗೆ ಬೈಯ್ಯುವ ದೃಶ್ಯಗಳು ಇವೆ. ಇದನ್ನು ಒಂದಷ್ಟು ಜನರು ಇಷ್ಟಪಟ್ಟಿದ್ದು, ವಿಜ್ರಂಭಿಸಿದ್ದಾರೆ. ‘ಮಾರ್ಕೊ’ ಚಿತ್ರವನ್ನು ಕೂಡ ಅನೇಕರು ಇದೇ ವರ್ಗಕ್ಕೆ ಹೋಲಿಕೆ ಮಾಡಿದ್ದಾರೆ. ಈ ಚಿತ್ರ ಕೆಲವರಿಗೆ ಇಷ್ಟವಾಗಿಲ್ಲ. ಈ ಸಿನಿಮಾದಲ್ಲಿ ಅತಿಯಾದ ಹಿಂಸೆ ತೋರಿಸಲಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇದನ್ನೂ ಓದಿ: 100 ಕೋಟಿ ಗಳಿಕೆ, ಆದರೂ ಸಿನಿಮಾಕ್ಕೆ ವಿರೋಧ, ಅಂಥದ್ದೇನಿದೆ ‘ಮಾರ್ಕೊ’ನಲ್ಲಿ

‘ಮಾರ್ಕೊ’ ಚಿತ್ರ ಬಾಕ್ಸ್ ಆಫೀಸ್​ನಲ್ಲಿ 100 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎನ್ನಲಾಗಿದೆ. ಈ ಕಾರಣಕ್ಕೆ ಚಿತ್ರದ ಒಟಿಟಿ ಹಕ್ಕಿಗೆ ಭಾರೀ ಬೇಡಿಕೆ ಸೃಷ್ಟಿ ಆಗಿದೆ. ಈ ಚಿತ್ರದ ಒಟಿಟಿ ರಿಲೀಸ್ ದಿನಾಂಕ ಇನ್ನೂ ರಿವೀಲ್ ಆಗಿಲ್ಲ. ಈ ಚಿತ್ರವನ್ನು ಹನೀಫ್ ಅದೇನಿ ನಿರ್ದೇಶನ ಮಾಡಿದ್ದು, ಶರೀಫ್ ಮೊಹಮದ್ ಅವರು ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕೆ ರವಿ ಬಸ್ರೂರು ಅವರು ಸಂಗೀತ ಸಂಯೋಜನೆ ಮಾಡಿದ್ದು, ಇದು ಅನೇಕರಿಗೆ ಇಷ್ಟ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣ ಬಳಿಕ ಸಖತ್​ ಸ್ಟೆಪ್​​​ ಹಾಕಿದ ಟ್ರಂಪ್
ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣ ಬಳಿಕ ಸಖತ್​ ಸ್ಟೆಪ್​​​ ಹಾಕಿದ ಟ್ರಂಪ್
ಬೆಳಗಾವಿ ಅಧಿವೇಶನ ನಿಸ್ಸಂದೇಹವಾಗಿ ಕಾಂಗ್ರೆಸ್ ಪಕ್ಷದ ಜಾತ್ರೆ: ಶಿವಕುಮಾರ್
ಬೆಳಗಾವಿ ಅಧಿವೇಶನ ನಿಸ್ಸಂದೇಹವಾಗಿ ಕಾಂಗ್ರೆಸ್ ಪಕ್ಷದ ಜಾತ್ರೆ: ಶಿವಕುಮಾರ್
ಕರ್ತವ್ಯನಿರತ ಪೊಲೀಸರ ಮೇಲೆ ಜೋರು ಮಾಡಲು ಮುಂದಾದ ಕಾಂಗ್ರೆಸ್ಸಿಗರು
ಕರ್ತವ್ಯನಿರತ ಪೊಲೀಸರ ಮೇಲೆ ಜೋರು ಮಾಡಲು ಮುಂದಾದ ಕಾಂಗ್ರೆಸ್ಸಿಗರು
ಕಾಂಗ್ರೆಸ್ ಅಧಿವೇಶನದಲ್ಲಿ ಭಾಗಿಯಾಗಲು ಸೋಮಶೇಖರ್ ಬಂದಿರುವರೇ?
ಕಾಂಗ್ರೆಸ್ ಅಧಿವೇಶನದಲ್ಲಿ ಭಾಗಿಯಾಗಲು ಸೋಮಶೇಖರ್ ಬಂದಿರುವರೇ?
Video: ಪ್ರಬಲ ಭೂಕಂಪಕ್ಕೆ ನಲುಗಿದ ತೈವಾನ್
Video: ಪ್ರಬಲ ಭೂಕಂಪಕ್ಕೆ ನಲುಗಿದ ತೈವಾನ್
‘2 ರೆಕ್ಕೆ ಕೊಡು, ದೊಡ್ಡ ಸ್ಟಾರ್ ಆಗಬೇಕು’; ಟ್ರೋಫಿ ನೋಡಿ ತ್ರಿವಿಕ್ರಂ ಮಾತು
‘2 ರೆಕ್ಕೆ ಕೊಡು, ದೊಡ್ಡ ಸ್ಟಾರ್ ಆಗಬೇಕು’; ಟ್ರೋಫಿ ನೋಡಿ ತ್ರಿವಿಕ್ರಂ ಮಾತು
ಕೊಪ್ಪಳ: ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗೆ‌ ಬೋರ್​ವೆಲ್ ಕೊರೆಸಿದ ರೈತ
ಕೊಪ್ಪಳ: ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗೆ‌ ಬೋರ್​ವೆಲ್ ಕೊರೆಸಿದ ರೈತ
ಸತ್ತವರ ಹೆಸರಲ್ಲಿ ಅರ್ಚನೆ! ಸಂಕಲ್ಪ ಮಾಡಿಸಬಹುದಾ? ವಿಡಿಯೋ ನೋಡಿ
ಸತ್ತವರ ಹೆಸರಲ್ಲಿ ಅರ್ಚನೆ! ಸಂಕಲ್ಪ ಮಾಡಿಸಬಹುದಾ? ವಿಡಿಯೋ ನೋಡಿ
ಈ ರಾಶಿಯವರು ಮದುವೆ ಮತ್ತು ಮನೆ ವಿಷಯಗಳಲ್ಲಿ ಇಂದು ಶುಭ ಸುದ್ದಿ ಕೇಳುವರು
ಈ ರಾಶಿಯವರು ಮದುವೆ ಮತ್ತು ಮನೆ ವಿಷಯಗಳಲ್ಲಿ ಇಂದು ಶುಭ ಸುದ್ದಿ ಕೇಳುವರು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು