AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

100 ಕೋಟಿ ಗಳಿಕೆ, ಆದರೂ ಸಿನಿಮಾಕ್ಕೆ ವಿರೋಧ, ಅಂಥದ್ದೇನಿದೆ ‘ಮಾರ್ಕೊ’ನಲ್ಲಿ

Marco Movie: ಸಿನಿಮಾ ಒಂದು ಬಾಕ್ಸ್ ಆಫೀಸ್​ನಲ್ಲಿ ಭಾರಿ ದೊಡ್ಡ ಕಲೆಕ್ಷನ್ ಮಾಡುತ್ತಿದೆ. ತುಂಬಿದ ಗೃಹಗಳ ಪ್ರದರ್ಶನ ಕಾಣುತ್ತಿದೆ. ಹಾಗಿದ್ದರೂ ಸಹ ಸಿನಿಮಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿರುವುದು ಮಾತ್ರವೇ ಅಲ್ಲದೆ ಸಿನಿಮಾ ಅನ್ನು ನಿಷೇಧ ಮಾಡಬೇಕು ಎಂಬ ಕೂಗು ಸಹ ಕೇಳಿ ಬರುತ್ತಿದೆ. ಅಂಥಹದ್ದೇನಿದೆ ಆ ಸಿನಿಮಾದಲ್ಲಿ?

100 ಕೋಟಿ ಗಳಿಕೆ, ಆದರೂ ಸಿನಿಮಾಕ್ಕೆ ವಿರೋಧ, ಅಂಥದ್ದೇನಿದೆ ‘ಮಾರ್ಕೊ’ನಲ್ಲಿ
Marco Movie
Follow us
ಮಂಜುನಾಥ ಸಿ.
|

Updated on: Jan 08, 2025 | 1:31 PM

ಸಿನಿಮಾ ಒಂದು ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ ಎಂದರೆ ಅದು ಜನಕ್ಕೆ ಇಷ್ಟವಾಗಿದೆ ಎಂದೇ ಅರ್ಥ. ಆದರೆ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಭಾರಿ ಯಶಸ್ಸು ಗಳಿಸಿದ ಮೇಲೂ ಸಹ ಸಿನಿಮಾ ಬಗ್ಗೆ ತೀವ್ರ ವಿರೋಧ, ಸಿನಿಮಾ ನಿಷೇಧಕ್ಕೆ ಒತ್ತಾಯಗಳು ಕೇಳಿ ಬರುತ್ತಿವೆ. ಭಾರತದಲ್ಲೇ ಅತ್ಯುತ್ತಮ ಚಿತ್ರರಂಗ ಎಂದು ಹೆಸರು ಗಳಿಸಿರುವ ಮಲಯಾಳಂ ಚಿತ್ರರಂಗದಿಂದ ಹೊರಬಂದಿರುವ ಸಿನಿಮಾ ಒಂದರ ಮೇಲೆ ಈಗ ನಿಷೇಧಕ್ಕೆ ಬೇಡಿಕೆಗಳು ಅಲ್ಲಲ್ಲಿ ಕೇಳಿ ಬರುತ್ತಿವೆ. ಸಿನಿಮಾದ ಹೆಸರು ‘ಮಾರ್ಕೊ’.

ಡಿಸೆಂಬರ್ 20 ರಂದು ಬಿಡುಗಡೆ ಆದ ‘ಮಾರ್ಕೊ’ ಸಿನಿಮಾ ಇದೀಗ ಬಾಕ್ಸ್ ಆಫೀಸ್​ನಲ್ಲಿ 100 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಹಿಂದಿ ಭಾಗದಲ್ಲಂತೂ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಹಿಂದಿ ಭಾಗದಲ್ಲಿ ಅತಿ ಹೆಚ್ಚು ಹಣ ದೋಚಿದ ಮಲಯಾಳಂ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇಷ್ಟಾದರೂ ಸಿನಿಮಾದ ಬಗ್ಗೆ ಸ್ವತಃ ಕೇರಳ ಮಾತ್ರವಲ್ಲದೆ ಹಲವು ಕಡೆ ವಿರೋಧ ಕೇಳಿ ಬರುತ್ತಿದೆ. ಇದಕ್ಕೆ ಪ್ರಮುಖ ಕಾರಣ ಸಿನಿಮಾದಲ್ಲಿರುವ ಅತಿಯಾದ ಹಿಂಸೆ.

‘ಮಾರ್ಕೊ’ ಸಿನಿಮಾದಲ್ಲಿ ಹಿಂಸೆಯ ಹೊರತಾಗಿ ಇನ್ನೇನೂ ಇಲ್ಲ. ಹೀರೋ, ವಿಲನ್ ಪೈಪೋಟಿಗೆ ಬಿದ್ಧಂತೆ ಕ್ರೂರವಾಗಿ ವರ್ತಿಸುತ್ತಾರೆ. ಸಿನಿಮಾಕ್ಕೆ ಹಲವು ಕಟ್​ಗಳ ಬಳಿಕ ಸಿಬಿಎಫ್​ಸಿ ‘ಎ’ ಸರ್ಟಿಫಿಕೇಟ್ ನೀಡಿದೆ. ಹಾಗಿದ್ದರೂ ಸಹ ಈ ಸಿನಿಮಾದಲ್ಲಿ ಹಿಂಸೆ ತಾಂಡವವಾಡುತ್ತಿದೆ. ಸಿನಿಮಾದಲ್ಲಿ ಸಾಧ್ಯವಾದಷ್ಟು ಕ್ರೂರವಾಗಿಯೇ ಎಲ್ಲ ಫೈಟ್​ಗಳನ್ನು ತೋರಿಸಲಾಗಿದೆ. ನಾಯಿಯನ್ನು ಅದರ ಬಾಯಿ ಹಿಡಿದು ಹರಿದು ಕೊಲ್ಲುವ ದೃಶ್ಯ, ವೃದ್ಧೆಯೊಬ್ಬಳ ಕಣ್ಣನ್ನು ಕೀಳುವ ದೃಶ್ಯ, ಗರ್ಭಿಣಿಯೊಬ್ಬಳನ್ನು ದಾರುಣವಾಗಿ ಹೊಟ್ಟೆಗೆ ಹೊಡೆದು ಕೊಲ್ಲುವ ದೃಶ್ಯ, ಬೃಣವನ್ನು ಕೈಯಲ್ಲಿ ಹಿಡಿದು ಸಂಭ್ರಮಿಸುವುದು ಇಂಥಹಾ ಅತಿಯಾದ ಕ್ರೌರ್ಯ ತುಂಬಿದ ಹಲವಾರು ದೃಶ್ಯಗಳು ‘ಮಾರ್ಕೊ’ ಸಿನಿಮಾದಲ್ಲಿದೆ. ಇದೇ ಕಾರಣಕ್ಕೆ ಈ ಸಿನಿಮಾ ಅನ್ನು ನಿಷೇಧಿಸಬೇಕು ಎಂದು ಕೆಲವರು ದನಿ ಎತ್ತಿದ್ದಾರೆ.

ಇದನ್ನೂ ಓದಿ:ರಾಜ್ ಬಿ ಶೆಟ್ಟಿಯ ಮತ್ತೊಂದು ಮಲಯಾಳಂ ಸಿನಿಮಾ ಬಿಡುಗಡೆಗೆ ರೆಡಿ

‘ಅನಿಮಲ್’ ಸಿನಿಮಾವನ್ನು ಸಹ ಅದರ ಹಿಂಸೆಯ ವೈಭವೀಕರಣ ಮತ್ತು ಹಳಿ ತಪ್ಪಿದ ಮಾರಲ್ ಕಾರಣಕ್ಕೆ ಟೀಕಿಸಲಾಗಿತ್ತು. ಆದರೆ ‘ಮಾರ್ಕೊ’ ಸಿನಿಮಾದ ಮುಂದೆ ‘ಅನಿಮಲ್’ ಏನೂ ಅಲ್ಲ ಎಂಬಂತಿದೆ. ಸಿನಿಮಾದಲ್ಲಿರುವ ಬಹುತೇಕ ದೃಶ್ಯಗಳಲ್ಲಿ ರಕ್ತವಿದೆ. ಸಿನಿಮಾದ ನಿರ್ದೇಶಕ ಹನೀಫ್ ಅದೇನಿ ಅಂತೂ ಎಷ್ಟು ಕ್ರೂರವಾಗಿ ಪಾತ್ರಗಳನ್ನು ಕೊಲ್ಲಬಹುದು ಎಂದು ಪ್ರಯೋಗ ಮಾಡಿ ಪ್ರತಿ ಪಾತ್ರವನ್ನ ಹಿಂದಿನದ್ದಕ್ಕಿಂತಲೂ ಭೀಕರವಾಗಿ, ಕ್ರೂರವಾಗಿ ಕೊಲ್ಲಿಸಿದ್ದಾರೆ.

‘ಮಾರ್ಕೊ’ ಸಿನಿಮಾದಲ್ಲಿ ನಟಿಸಿರುವ ಕೆಲವರೇ ಸಿನಿಮಾದಲ್ಲಿ ತೋರಿಸಲಾಗಿರುವ ದೃಶ್ಯಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿರುವ ಕಬಿರ್ ದುಹಾನ್, ‘ಆ ಸಿನಿಮಾದ ಚಿತ್ರೀಕರಣ ಮಾಡಿದ ಮೇಲೆ ಆರು ದೇವಸ್ಥಾನಕ್ಕೆ ಹೋದೆ. ನನ್ನ ಮಾನಸಿಕ ನೆಮ್ಮದಿಯೇ ಹಾಳಾಗಿತ್ತು’ ಎಂದಿದ್ದಾರೆ. ‘ಮಾರ್ಕೊ’ ಸಿನಿಮಾ ಪ್ರದರ್ಶಿಸುವಾಗ ತೆರೆಯ ಮೇಲೆ ಹಿಂಸೆ ನೋಡಲಾಗದೆ ಕೆಲ ಮಹಿಳೆಯರು ವಾಂತಿ ಮಾಡಿಕೊಂಡಿದ್ದಾಗಿಯೂ ವರದಿ ಆಗಿವೆ. ಒಟ್ಟಾರೆ ಅತ್ಯಂತ ಕ್ರೂರ ಸಿನಿಮಾ ‘ಮಾರ್ಕೊ’ ಬಾಕ್ಸ್ ಆಫೀಸ್​ನಲ್ಲಿ ಮಾತ್ರ ಒಳ್ಳೆಯ ಕಲೆಕ್ಷನ್ ಮಾಡುತ್ತಿದ್ದು, 100 ಕೋಟಿಗೂ ಹೆಚ್ಚು ಹಣ ಬಾಚಿಕೊಂಡಿದೆ. ಜನರ ಅಭಿರುಚಿ ಬದಲಾಗುತ್ತಿರುವುದಕ್ಕೆ ಇದು ಬಹಳ ಒಳ್ಳೆಯ ಉದಾಹರಣೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ
ಆನೇಕಲ್​ನಲ್ಲಿ ನಿಗೂಢ ಸ್ಫೋಟ: ಕಾಂಕ್ರೀಟ್ ರಸ್ತೆ ಛಿದ್ರ
ಆನೇಕಲ್​ನಲ್ಲಿ ನಿಗೂಢ ಸ್ಫೋಟ: ಕಾಂಕ್ರೀಟ್ ರಸ್ತೆ ಛಿದ್ರ