ಐಶಾರಾಮಿ ಕಚೇರಿ ಕಟ್ಟಿಸಿಕೊಳ್ಳುತ್ತಿರುವ ರಿಷಬ್ ಶೆಟ್ಟಿಯ ಸಿನಿಮಾ ನಿರ್ದೇಶಕ, ಕೊಟ್ಯಂತರ ಬಂಡವಾಳ

Prashanth Varma: ರಿಷಬ್ ಶೆಟ್ಟಿಯ ಹೊಸ ಸಿನಿಮಾ ನಿರ್ದೇಶನ ಮಾಡುತ್ತಿರುವ ನಿರ್ದೇಶಕರೊಬ್ಬರು ತಮಗಾಗಿ ಭಾರಿ ದೊಡ್ಡ ಕಚೇರಿಯನ್ನು ನಿರ್ಮಾಣ ಮಾಡಿಸಿಕೊಳ್ಳುತ್ತಿದ್ದಾರೆ. ಈ ಭಾರಿ ದೊಡ್ಡ ಐಶಾರಾಮಿ ಮತ್ತು ಸಕಲ ಸೌಲಭ್ಯ ಹೊಂದಿರುವ ಕಚೇರಿ ನಿರ್ಮಾಣಕ್ಕೆ ಬರೋಬ್ಬರಿ 30 ಕೋಟಿ ರೂಪಾಯಿಗೂ ಹೆಚ್ಚು ಹಣ ಖರ್ಚು ಮಾಡುತ್ತಿದ್ದಾರೆ ಈತ.

ಐಶಾರಾಮಿ ಕಚೇರಿ ಕಟ್ಟಿಸಿಕೊಳ್ಳುತ್ತಿರುವ ರಿಷಬ್ ಶೆಟ್ಟಿಯ ಸಿನಿಮಾ ನಿರ್ದೇಶಕ, ಕೊಟ್ಯಂತರ ಬಂಡವಾಳ
Prashanth Varma
Follow us
ಮಂಜುನಾಥ ಸಿ.
|

Updated on: Jan 08, 2025 | 12:54 PM

ಸಿನಿಮಾ ನಿರ್ದೇಶಕರು ಕಚೇರಿ ಹೊಂದಿರುವುದು ಸಾಮಾನ್ಯ. ಕನ್ನಡದ ಕೆಲ ನಿರ್ದೇಶಕರಿಗೂ ತಮ್ಮದೇ ಆದ ಕಚೇರಿಗಳಿವೆ. ಆದರೆ ಬಹುತೇಕ ನಿರ್ದೇಶಕರು ತಮ್ಮ ಮನೆಯ ಒಂದು ಸಣ್ಣ ಭಾಗವನ್ನೇ ಕಚೇರಿಯನ್ನಾಗಿ ಮಾಡಿಕೊಂಡಿರುತ್ತಾರೆ. ಎಲ್ಲೋ ಕೆಲವು ನಿರ್ದೇಶಕರು ಮಾತ್ರ ಬೇರೆ ಜಾಗದಲ್ಲಿ ಕಚೇರಿ ಹೊಂದಿರುತ್ತಾರೆ. ಆದರೆ ರಿಷಬ್ ಶೆಟ್ಟಿಯ ಮುಂದಿನ ಸಿನಿಮಾ ನಿರ್ದೇಶಿಸುತ್ತಿರುವ ಹೊಸ ನಿರ್ದೇಶಕ ತನಗಾಗಿ ಬಲು ದೊಡ್ಡ ಕಚೇರಿಯೊಂದನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ. ಕಚೇರಿ ನಿರ್ಮಾಣಕ್ಕೆ ಸುಮಾರು 30 ಕೋಟಿ ಹಣ ಖರ್ಚು ಮಾಡುತ್ತಿದ್ದಾರಂತೆ.

ರಿಷಬ್ ಶೆಟ್ಟಿ ನಟಿಸಲಿರುವ ತೆಲುಗು ಸಿನಿಮಾ ‘ಜೈ ಹನುಮಾನ್’ ನಿರ್ದೇಶನ ಮಾಡಲಿರುವ ಪ್ರಶಾಂತ್ ವರ್ಮಾ ಹೈದರಾಬಾದ್​ನಲ್ಲಿ ತಮಗಾಗಿ ಕಚೇರಿಯೊಂದನ್ನು ನಿರ್ಮಾಣ ಮಾಡಿಕೊಳ್ಳುತ್ತಿದ್ದು, ಈ ಕಚೇರಿ ನಿರ್ಮಾಣಕ್ಕೆ ಸುಮಾರು 30 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಲಿದ್ದಾರಂತೆ. ತೆಲುಗಿನ ಯಾವೊಬ್ಬ ನಿರ್ದೇಶಕನಿಗೂ ಇಲ್ಲದಷ್ಟು ಐಶಾರಾಮಿ ಮತ್ತು ಸುಸಜ್ಜಿತ ಕಚೇರಿ ಇದಾಗಿರಲಿದೆ. ಕಚೇರಿಯ ನೀಲನಕ್ಷೆ ಈಗಾಗಲೇ ತಯಾರಾಗಿದೆ.

ಪ್ರಶಾಂತ್ ವರ್ಮಾ, ಹೈದರಾಬಾದ್​ನ ಕಾಚಿಗುಡ ಏರಿಯಾನಲ್ಲಿ ಕಚೇರಿ ನಿರ್ಮಾಣ ಮಾಡುತ್ತಿದ್ದು, ಈ ಕಚೇರಿ ಬಲು ಬೃಹತ್ ಆಗಿರಲಿದ್ದು, ಕಚೇರಿಯಲ್ಲಿ ಸಿನಿಮಾದ ಪೋಸ್ಟ್​ ಪ್ರೊಡಕ್ಷನ್​ಗೆ ಬೇಕಾದ ಎಲ್ಲ ವ್ಯವಸ್ಥೆಗಳೂ ಸಹ ಇರಲಿವೆಯಂತೆ. ವಿಎಫ್​ಎಕ್ಸ್ ಯುನಿಟ್, ಡಬ್ಬಿಂಗ್ ಯುನಿಟ್, ದೊಡ್ಡ ಹೋಮ್ ಥಿಯೇಟರ್, ರೈಟರ್ಸ್​ಗೆ ಪ್ರತ್ಯೇಕ ಐಶಾರಾಮಿ ಕೋಣೆ, ಎಡಿಟಿಂಗ್ ಯುನಿಟ್, ಮ್ಯೂಸಿಕ್ ಸ್ಟುಡಿಯೋ ಹೀಗೆ ಸಿನಿಮಾ ನಿರ್ಮಾಣಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನೂ ಸಹ ಈ ಕಚೇರಿ ಒಳಗೊಂಡಿರಲಿದೆ. ಇದನ್ನು ‘ಕಿಂಗ್ ಸೈಜ್ ಆಫೀಸ್’ ಎಂದು ಪ್ರಶಾಂತ್ ವರ್ಮಾ ಕರೆಯಲಿದ್ದಾರೆ.

ಇದನ್ನೂ ಓದಿ:‘ಸಲಾರ್’ ಸಿನಿಮಾ ಬಗ್ಗೆ ಅಸಮಾಧಾನ ಹೊರ ಹಾಕಿದ ಪ್ರಶಾಂತ್ ನೀಲ್

ಈ ಹಿಂದೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಿರ್ಮಿಸಿದ್ದ ಕಚೇರಿ ಬಹಳ ಸುದ್ದಿಯಾಗಿತ್ತು. ‘ಡೆನ್’ ಹೆಸರಿನ ಬಹುಮಹಡಿ ಕಚೇರಿಯನ್ನು ರಾಮ್ ಗೋಪಾಲ್ ವರ್ಮಾ ತಮಗಾಗಿ ನಿರ್ಮಾಣ ಮಾಡಿಕೊಂಡಿದ್ದಾರೆ. ಡೆನ್ ಕಚೇರಿಯನ್ನು ತಮ್ಮ ಸಿನಿಮಾಗಳು, ಅದರ ಪಾತ್ರಗಳ ಆಧಾರದ ಮೇಲೆ ವಿನ್ಯಾಸ ಮಾಡಲಾಗಿದೆ. ಹಲವು ನಟಿಯರ ಬಿಕಿನಿ ಚಿತ್ರಗಳು, ನಟರ ಚಿತ್ರಗಳು ಜೊತೆಗೆ ಒಂದು ರೀತಿಯ ಗುಹೆಯ ವಿನ್ಯಾಸವನ್ನು ಈ ಕಚೇರಿ ಒಳಗೊಂಡಿದೆ. ಈಗ ಪ್ರಶಾಂತ್ ವರ್ಮಾ, ರಾಮ್ ಗೋಪಾಲ್ ವರ್ಮಾ ಅವರ ಕಚೇರಿಯನ್ನೂ ಮೀರಿಸುವ ಕಚೇರಿಯನ್ನು ನಿರ್ಮಿಸುತ್ತಿದ್ದಾರೆ.

ಪ್ರಶಾಂತ್ ವರ್ಮಾ ಈಗಾಗಲೇ ನಾಲ್ಕು ಹೊಸ ಸಿನಿಮಾಗಳನ್ನು ನಿರ್ದೇಶನ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಅದರಲ್ಲಿ ರಿಷಬ್ ಶೆಟ್ಟಿ ನಾಯಕರಾಗಿರುವ ‘ಜೈ ಹನುಮಾನ್’ ಸಹ ಒಂದು. ಹಿಂದಿಯ ಒಂದು ಸಿನಿಮಾದ ಘೋಷಣೆಯನ್ನೂ ಮಾಡಿದ್ದಾರೆ. ಇದರ ಜೊತೆಗೆ ಹೊಸ ನಿರ್ದೇಶಕರ ಸಿನಿಮಾ ನಿರ್ಮಾಣವನ್ನೂ ವರ್ಮಾ ಮಾಡುತ್ತಿದ್ದಾರೆ. ಹಾಗಾಗಿ ಬಲು ದೊಡ್ಡ ಕಚೇರಿಯನ್ನು ನಿರ್ಮಿಸಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ