Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ ಬಿ ಶೆಟ್ಟಿಯ ಮತ್ತೊಂದು ಮಲಯಾಳಂ ಸಿನಿಮಾ ಬಿಡುಗಡೆಗೆ ರೆಡಿ

Raj B Shetty: ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಇದೀಗ ಮತ್ತೊಂದು ಮಲಯಾಳಂ ಸಿನಿಮಾದಲ್ಲಿ ನಟಿಸಿದ್ದು, ಸಿನಿಮಾ ಡಿಸೆಂಬರ್ ತಿಂಗಳ ಎರಡನೇ ವಾರದಲ್ಲಿ ಬಿಡುಗಡೆ ಆಗಲಿದೆ.

ರಾಜ್ ಬಿ ಶೆಟ್ಟಿಯ ಮತ್ತೊಂದು ಮಲಯಾಳಂ ಸಿನಿಮಾ ಬಿಡುಗಡೆಗೆ ರೆಡಿ
Follow us
ಮಂಜುನಾಥ ಸಿ.
|

Updated on:Nov 30, 2024 | 9:05 PM

ರಾಜ್ ಬಿ ಶೆಟ್ಟಿ, ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ಮತ್ತು ನಿರ್ದೇಶಕ. ತಮ್ಮ ಅಭಿನಯ ಪ್ರತಿಭೆಯಿಂದ ಈಗ ನೆರೆಯ ಚಿತ್ರರಂಗಗಳಲ್ಲಿಯೂ ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾರೆ. ಮಲಯಾಳಂನ ಸೂಪರ್ ಸ್ಟಾರ್ ಮಮ್ಮುಟಿ ನಟಿಸಿರುವ ‘ಟರ್ಬೊ’ ಸಿನಿಮಾನಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ ರಾಜ್ ಬಿ ಶೆಟ್ಟಿ. ಆ ಸಿನಿಮಾ ಕೆಲ ತಿಂಗಳ ಹಿಂದೆ ಬಿಡುಗಡೆ ಆಗಿ ಹಿಟ್ ಸಹ ಎನಿಸಿಕೊಂಡಿದೆ. ಇದೀಗ ರಾಜ್ ಬಿ ಶೆಟ್ಟಿ ನಟನೆಯ ಮತ್ತೊಂದು ಮಲಯಾಳಂ ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದು, ‘ಟರ್ಬೊ’ ಕಮರ್ಶಿಯಲ್ ಸಿನಿಮಾ ಆಗಿದ್ದರೆ, ಈಗ ಬಿಡುಗಡೆ ಆಗಲಿರುವ ಸಿನಿಮಾ ಥ್ರಿಲ್ಲರ್ ಅಂಶವನ್ನು ಒಳಗೊಂಡಿದೆ.

ರಾಜ್ ಬಿ ಶೆಟ್ಟಿ, ಮಲಯಾಳಂನ ‘ರುಧಿರಂ’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾದ ಪ್ರೋಮೋ ಇದೀಗ ಬಿಡುಗಡೆ ಆಗಿದ್ದು, ಕುತೂಹಲ ಹೆಚ್ಚಿಸುತ್ತಿದೆ. ಟೀಸರ್ ನೋಡಿದವರಿಗೆ ‘ರುಧಿರಂ’ ಸಿನಿಮಾನಲ್ಲಿ ರಾಜ್ ಬಿ ಶೆಟ್ಟಿ ನಾಯಕನೊ? ಅಥವಾ ವಿಲನ್ ಪಾತ್ರವೋ ಎಂಬ ಅನುಮಾನ ಮೂಡುತ್ತಿದೆ. ಟೀಸರ್​ನ ಆರಂಭದಲ್ಲಿ ಜೇನು ಸಾಕಣೆ ಮಾಡುವ ವ್ಯಕ್ತಿಯಾಗಿ ಕಾಣಿಸಿಕೊಳ್ಳುವ ರಾಜ್ ಬಿ ಶೆಟ್ಟಿ ಆ ನಂತರ ಅನುಮೂನ ಮೂಡುವ ಹಲವು ಶೇಡ್​ಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

ಸಿನಿಮಾದಲ್ಲಿ ಮಲಯಾಳಂನ ಖ್ಯಾತ ನಟಿ ಅಪರ್ಣಾ ಬಾಲಮುರಳಿ ಸಹ ಇದ್ದಾರೆ. ಅಪರ್ಣಾ ಬಾಲಮುರಳಿ ಹಾಗೂ ರಾಜ್ ಬಿ ಶೆಟ್ಟಿ ನಡುವೆ ನಡೆವ ದ್ವೇಷದ ಕತೆಯೇ ‘ರುಧಿರಂ’ ಸಿನಿಮಾ ಇರಬಹುದೆಂಬ ಅನುಮಾನ ಟೀಸರ್​ನಿಂದ ಮೂಡುತ್ತದೆ. ಇಡೀ ಟೀಸರ್​ನಲ್ಲಿ ರಾಜ್ ಬಿ ಶೆಟ್ಟಿ, ಅಪರ್ಣಾ ಮತ್ತು ಒಂದು ನಾಯಿ ಮಾತ್ರವೇ ಕಾಣಿಸಿಕೊಳ್ಳುತ್ತದೆ. ಟೀಸರ್​ನಲ್ಲಿ ಅಲ್ಲಲ್ಲಿ ರಕ್ತ, ಕೆಲವು ಆಯುಧಗಳು, ಬಂದೂಕುಗಳು ಸಹ ಕಾಣಿಸಿಕೊಳ್ಳುತ್ತವೆ. ಇದೊಂದು ಪಕ್ಕಾ ಥ್ರಿಲ್ಲರ್ ಸಿನಿಮಾ ಎಂಬುದೇನೋ ಟೀಸರ್​ನಿಂದ ಗೊತ್ತಾಗುತ್ತಿದೆ. ಆದರೆ ಯಾರು ಯಾರ ಹಿಂದೆ ಬಿದ್ದಿದ್ದಾರೆ ಎಂಬುದು ತಿಳಿಯುವುದಿಲ್ಲ. ಅದೆಲ್ಲ ತಿಳಿಯಲಯಲು ಸಿನಿಮಾ ನೋಡಬೇಕಿದೆ.

ಇದನ್ನೂ ಓದಿ:ಶಿವಣ್ಣ-ಉಪೇಂದ್ರ ಮುಂದೆ ಕರಾಟೆ ಪ್ರದರ್ಶಿಸಿದ ರಾಜ್ ಬಿ ಶೆಟ್ಟಿ

ಜಿಶೋ ಲೋನ್ ಆಂಟನಿ ಈ ಸಿನಿಮಾವನ್ನು ಬರೆದು ನಿರ್ದೇಶನ ಮಾಡಿದ್ದಾರೆ. ಸಿನಿಮಾವನ್ನು ವಿಎಸ್ ಲಾಲನ್ ನಿರ್ಮಾಣ ಮಾಡಿದ್ದಾರೆ. ಫೋರ್ ಮ್ಯೂಸಿಕ್ ಸಂಸ್ಥೆ ಈ ಸಿನಿಮಾಕ್ಕೆ ಸಂಗೀತ ನೀಡಿದೆ. ಸಿನಿಮಾದ ಕ್ಯಾಮೆರಾ ಕೆಲಸ ಸಜದ್ ಕಾಕು ಮಾಡಿದ್ದಾರೆ. ಕೆಲ ಅತ್ಯುತ್ತಮ ತಂತ್ರಜ್ಞರು ಸೇರಿ ಈ ಸಿನಿಮಾಕ್ಕೆ ಕೆಲಸ ಮಾಡಿದ್ದು, ಸಿನಿಮಾ ಡಿಸೆಂಬರ್ 13ಕ್ಕೆ ಬಿಡುಗಡೆ ಆಗಲಿದೆ.

ರಾಜ್ ಬಿ ಶೆಟ್ಟಿ, ಪ್ರಸ್ತುತ ಹಿಂದಿ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಅನುರಾಗ್ ಕಶ್ಯಪ್ ನಿರ್ದೇಶನದ ಹೊಸ ಸಿನಿಮಾನಲ್ಲಿ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಾಜ್ ಬಿ ಶೆಟ್ಟಿ ನಿರ್ದೇಶನ ಮಾಡಿರುವ ‘ಗರುಡ ಗಮನ ವೃಷಭ ವಾಹನ’ ಸಿನಿಮಾವನ್ನು ಅನುರಾಗ್ ಕಶ್ಯಪ್ ಬಹಳ ಮೆಚ್ಚಿಕೊಂಡಿದ್ದರು. ಇದೀಗ ತಮ್ಮ ಹೊಸ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿಗೆ ನಟಿಸುವ ಅವಕಾಶ ಕೊಟ್ಟಿದ್ದಾರೆ. ಚಿತ್ರೀಕರಣ ಈಗಾಗಲೇ ಪ್ರಾರಂಭ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:33 pm, Sat, 30 November 24

Video: ಗಾಳಿ ಮಳೆಗೆ ಧರೆಗುರಳಿದ ಹುಸ್ಕೂರು ಮದ್ದೂರಮ್ಮ ಜಾತ್ರೆ ತೇರು
Video: ಗಾಳಿ ಮಳೆಗೆ ಧರೆಗುರಳಿದ ಹುಸ್ಕೂರು ಮದ್ದೂರಮ್ಮ ಜಾತ್ರೆ ತೇರು
ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡ ರಸೆಲ್; ವಿಡಿಯೋ
ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡ ರಸೆಲ್; ವಿಡಿಯೋ
ಐಪಿಎಲ್ 2025 ರ ಮೊದಲ ಅರ್ಧಶತಕ ಬಾರಿಸಿದ ರಹಾನೆ
ಐಪಿಎಲ್ 2025 ರ ಮೊದಲ ಅರ್ಧಶತಕ ಬಾರಿಸಿದ ರಹಾನೆ
ಜಮ್ಮು ಕಾಶ್ಮೀರದ ಪೂಂಚ್‌ನಲ್ಲಿ ನಡೆದ ಬಸ್ ಅಪಘಾತದಲ್ಲಿ 14 ಜನರಿಗೆ ಗಾಯ
ಜಮ್ಮು ಕಾಶ್ಮೀರದ ಪೂಂಚ್‌ನಲ್ಲಿ ನಡೆದ ಬಸ್ ಅಪಘಾತದಲ್ಲಿ 14 ಜನರಿಗೆ ಗಾಯ
ದೆಹಲಿಯ ಶಾಹೀನ್ ಬಾಗ್ ಮಾರುಕಟ್ಟೆಯ ಚಪ್ಪಲಿ ಶೋ ರೂಂನಲ್ಲಿ ಬೆಂಕಿ ದುರಂತ
ದೆಹಲಿಯ ಶಾಹೀನ್ ಬಾಗ್ ಮಾರುಕಟ್ಟೆಯ ಚಪ್ಪಲಿ ಶೋ ರೂಂನಲ್ಲಿ ಬೆಂಕಿ ದುರಂತ
ಸಿಎಂ ದೂರು ಸಲ್ಲಿಸಲು ಹೇಳಿದರೆ ಸಲ್ಲಿಸುತ್ತೇನೆ, ಬೇಡವೆಂದರೆ ಇಲ್ಲ:ರಾಜೇಂದ್ರ
ಸಿಎಂ ದೂರು ಸಲ್ಲಿಸಲು ಹೇಳಿದರೆ ಸಲ್ಲಿಸುತ್ತೇನೆ, ಬೇಡವೆಂದರೆ ಇಲ್ಲ:ರಾಜೇಂದ್ರ
ರವಿಶಂಕರ್ ಗುರೂಜಿ ಜೊತೆ ಟಿವಿ9 ನೆಟ್‌ವರ್ಕ್‌ ಎಂಡಿ ಬರುಣ್ ದಾಸ್ ಸಂವಾದ
ರವಿಶಂಕರ್ ಗುರೂಜಿ ಜೊತೆ ಟಿವಿ9 ನೆಟ್‌ವರ್ಕ್‌ ಎಂಡಿ ಬರುಣ್ ದಾಸ್ ಸಂವಾದ
ಮಳೆಗಾಲ ಶುರುವಾಗುವ ಮೊದಲು ರಸ್ತೆಗುಂಡಿಗಳು ಮುಚ್ಚಿದರೆ ಸಾಕಿದೆ!
ಮಳೆಗಾಲ ಶುರುವಾಗುವ ಮೊದಲು ರಸ್ತೆಗುಂಡಿಗಳು ಮುಚ್ಚಿದರೆ ಸಾಕಿದೆ!
ಧರ್ಮಾಧಾರಿತ ಮೀಸಲಾತಿ ಕಾನೂನು ಮತ್ತು ಸಂವಿಧಾನಬಾಹಿರ: ವಿಜಯೇಂದ್ರ
ಧರ್ಮಾಧಾರಿತ ಮೀಸಲಾತಿ ಕಾನೂನು ಮತ್ತು ಸಂವಿಧಾನಬಾಹಿರ: ವಿಜಯೇಂದ್ರ
ಹನಿ ಟ್ರ್ಯಾಪಿಂಗ್ ಸಂಬಂಧಿಸಿದಂತೆ ಹೆಚ್​ಎಂ ಹೇಳಿಕೆ ನೀಡಿದ್ದಾರೆ: ಖಾದರ್
ಹನಿ ಟ್ರ್ಯಾಪಿಂಗ್ ಸಂಬಂಧಿಸಿದಂತೆ ಹೆಚ್​ಎಂ ಹೇಳಿಕೆ ನೀಡಿದ್ದಾರೆ: ಖಾದರ್