Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಡು ಭಾಗದಲ್ಲಿ ಬರಲಿದೆ ಮಹೇಶ್​ಬಾಬು-ರಾಜಮೌಳಿ ಸಿನಿಮಾ; ಅಭಿಮಾನಿಗಳಿಗೆ ಬೇಸರ

ಮಹೇಶ್ ಬಾಬು ಮತ್ತು ರಾಜಮೌಳಿ ಅವರ ‘SSMB29’ಚಿತ್ರವು ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಬಾಹುಬಲಿ ಯಶಸ್ಸಿನ ನಂತರ ಹಲವು ಚಿತ್ರಗಳು ಎರಡು ಭಾಗಗಳಲ್ಲಿ ನಿರ್ಮಾಣವಾಗುತ್ತಿವೆ. ಆದರೆ, ಎರಡು ಭಾಗಗಳಲ್ಲಿ ಸಿನಿಮಾಗಳು ರಿಲೀಸ್ ಆಗುತ್ತಿರುವ ಬಗ್ಗೆ ಅಭಿಮಾನಿಗಳಲ್ಲಿ ಮಿಶ್ರ ಪ್ರತಿಕ್ರಿಯೆ ಇದೆ.

ಎರಡು ಭಾಗದಲ್ಲಿ ಬರಲಿದೆ ಮಹೇಶ್​ಬಾಬು-ರಾಜಮೌಳಿ ಸಿನಿಮಾ; ಅಭಿಮಾನಿಗಳಿಗೆ ಬೇಸರ
ಮಹೇಶ್ ಬಾಬು-ರಾಜಮೌಳಿ
Follow us
ರಾಜೇಶ್ ದುಗ್ಗುಮನೆ
|

Updated on: Dec 10, 2024 | 2:19 PM

ಯವಾಗ ‘ಬಾಹುಬಲಿ’ ಹಾಗೂ ‘ಬಾಹುಬಲಿ 2’ ಸಿನಿಮಾ ಯಶಸ್ಸು ಕಂಡಿತೋ ಆಗ ಅನೇಕ ಬಿಗ್ ಬಜೆಟ್ ಸಿನಿಮಾ ತಂಡಗಳು ಎರಡು ಭಾಗಗಳಲ್ಲಿ ಸಿನಿಮಾ ಮಾಡುವ ಕೆಲಸಕ್ಕೆ ಕೈ ಹಾಕಿದರು. ಇದರಲ್ಲಿ ಕೆಲವು ಚಿತ್ರ ಯಶಸ್ಸು ಕಂಡರೆ ಇನ್ನೂ ಕೆಲವು ಸಿನಿಮಾಗಳು ಎರಡನೇ ಭಾಗ ಆರಂಭ ಆಗದೆ ಅರ್ಧಕ್ಕೆ ನಿಂತಿದೆ. ಇತ್ತೀಚೆಗೆ ರಿಲೀಸ್ ಆದ ‘ಸಲಾರ್, ‘ದೇವರ’, ‘ಪುಷ್ಪ 2’ ಚಿತ್ರಗಳಿಗೆ ಮುಂದಿನ ಭಾಗ ಬರಲಿದೆ ಎಂದು ಘೋಷಣೆ ಆಗಿದೆ.  ಈಗ ಮಹೇಶ್ ಬಾಬು ಹಾಗೂ ರಾಜಮೌಳಿ ಕಾಂಬಿನೇಷನ್ ಚಿತ್ರಕ್ಕೂ ಎರಡು ಪಾರ್ಟ್​ ಬರಲಿದೆ ಎಂಬ ವಿಚಾರ ರಿವೀಲ್ ಆಗಿದೆ.

ರಾಜಮೌಳಿ ಒಂದು ಸಿನಿಮಾನ ಕೈಗೆತ್ತಿಕೊಂಡರೆ ಅದಕ್ಕೆ ಅವರು ಹಾಕುವ ಶ್ರಮ ತುಂಬಾನೇ ದೊಡ್ಡದು. ಪ್ರತಿ ಚಿತ್ರಕ್ಕೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ. ಅವರ ಜೊತೆ ಕೆಲಸ ಮಾಡುವಾಗ ಹೀರೋಗಳು ಬೇರೆ ಯಾವುದೇ ಚಿತ್ರಗಳನ್ನು ಕೂಡ ಒಪ್ಪಿಕೊಳ್ಳುವುದಿಲ್ಲ. ಈಗ ಮಹೇಶ್ ಬಾಬು ಅವರು ‘SSMB 29’ ಚಿತ್ರದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರಕ್ಕಾಗಿ ಫ್ಯಾನ್ಸ್ ಕಾದಿರುವಾಗಲೇ ಒಂದು ಬೇಸರದ ವಿಚಾರ ರಿವೀಲ್ ಆಗಿದೆ.

ಸದ್ಯದ ಮಾಹಿತಿಯ ಪ್ರಕಾರ ‘SSMB 29’ ಎರಡು ಪಾರ್ಟ್​ಗಳಲ್ಲಿ ಬರಲಿದೆಯಂತೆ. ಈಗಾಗಲೇ ಎರಡು ಭಾಗಗಳ ಸಿನಿಮಾಗಳನ್ನು ನೋಡಿ ನೋಡಿ ಸಿನಿಪ್ರಿಯರಿಗೆ ಬೇಸರ ಬಂದಿದೆ. ಎರಡು ಪಾರ್ಟ್ ಮಾಡಬೇಕು ಎಂಬ ಕಾರಣಕ್ಕೆ ಮೊದಲ ಭಾಗದಲ್ಲಿ ಇಲ್ಲಸಲ್ಲದ ವಿಚಾರಗಳನ್ನು ತುಂಬಲಾಗುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಕಥೆಯನ್ನು ಪೂರ್ತಿಯಾಗಿ ಹೇಳದೆ ಗೊಂದಲದೊಂದಿಗೆ ಮೊದಲ ಭಾಗ ಪೂರ್ಣಗೊಳಿಸಲಾಗುತ್ತಿದೆ. ಇದು ಅಭಿಮಾನಿಗಳ ಬೇಸರಕ್ಕೆ ಕಾರಣವಾದ ವಿಚಾರ.

ಇದನ್ನೂ ಓದಿ: ‘ಉತ್ತರ ಭಾರತಕ್ಕೆ ಹೋಗಿ ಸಿನಿಮಾ ಪ್ರಚಾರ ಮಾಡಬೇಡಿ’; ಅಲ್ಲು ಅರ್ಜುನ್​ಗೆ ರಾಜಮೌಳಿ ಸಲಹೆ

ಈಗ ‘SSMB 29’ ಕೂಡ ಎರಡು ಭಾಗದಲ್ಲಿ ಬರುತ್ತಿದೆ ಎಂದಾಗ ಸಹಜವಾಗಿಯೇ ಫ್ಯಾನ್ಸ್​ಗೆ ಬೇಸರ ಮೂಡುತ್ತದೆ. ಆದರೆ, ರಾಜಮೌಳಿ ಕೆಲಸದ ಬಗ್ಗೆ ನಂಬಿಕೆ ಇರುವ ಅನೇಕರು ಈ ಬಗ್ಗೆ ಪಾಸಿಟಿವ್ ಆಗಿ ಮಾತನಾಡುತ್ತಿದ್ದಾರೆ. 2025ರ ಜನವರಿಯಲ್ಲಿ ಈ ಚಿತ್ರದ ಶೂಟಿಂಗ್ ಶುರುವಾಗಲಿದೆ. ಮಹೇಶ್ ಬಾಬು ಅವರು ಮುಂದಿನ ಕೆಲ ವರ್ಷ ಈ ಚಿತ್ರಕ್ಕಾಗಿ ಮುಡಿಪಿಡಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್
ಮೋದಿ ತಾತ ಕೊಟ್ಟ ನವಿಲುಗರಿ ಹಿಡಿದು ಕುಣಿದಾಡಿದ ಜೆಡಿ ವ್ಯಾನ್ಸ್ ಮಕ್ಕಳು
ಮೋದಿ ತಾತ ಕೊಟ್ಟ ನವಿಲುಗರಿ ಹಿಡಿದು ಕುಣಿದಾಡಿದ ಜೆಡಿ ವ್ಯಾನ್ಸ್ ಮಕ್ಕಳು
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆ
ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆ