Vijay Sethupathi: ವಿಜಯ್ ಸೇತುಪತಿ ಕೈಗೆ ಬೇಡಿ; ಅಚ್ಚರಿ ಮೂಡಿಸಿದ ವೆಟ್ರಿ ಮಾರನ್ ಕೆಲಸ
Viduthalai First Look Poster: ಈ ಚಿತ್ರದ ಚಿತ್ರೀಕರಣವು ಪಶ್ಚಿಮ ಘಟ್ಟದ ದಟ್ಟ ಕಾಡುಗಳಲ್ಲಿ ನಡೆಯಲಿದೆ. ಈಗಾಗಲೇ ಲೊಕೇಷನ್ ಅಂತಿಮಗೊಳಿಸಲಾಗಿದೆ. ವಿದ್ಯುತ್ ಮತ್ತು ಮೊಬೈಲ್ ನೆಟ್ವರ್ಕ್ ಇಲ್ಲದ ಪ್ರದೇಶಗಳಲ್ಲಿ ಇಡೀ ತಂಡ ಕೆಲಸ ಮಾಡಲಿದೆ.
ದಿನದಿಂದ ದಿನಕ್ಕೆ ನಟ ವಿಜಯ್ ಸೇತುಪತಿ ಅವರ ಚಾರ್ಮ್ ಹೆಚ್ಚುತ್ತಿದೆ. ಎಲ್ಲ ಬಗೆಯ ಪಾತ್ರಗಳನ್ನು ಒಪ್ಪಿಕೊಳ್ಳವ ಅವರು ಅಭಿಮಾನಿಗಳಿಗೆ ಹತ್ತಿರವಾಗುತ್ತಾರೆ. ಈಗ ಅವರೊಂದು ಪ್ಯಾನ್ ಇಂಡಿಯಾ ಸಿನಿಮಾಗೆ ನಾಯಕನಾಗಿದ್ದಾರೆ. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ವೆಟ್ರಿ ಮಾರನ್ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ.
ಈ ಚಿತ್ರದ ಹೆಸರು ವಿದುತಲೈ. ವಿದುತಲೈ ಎಂದರೆ ಮಾಸ್ಟರ್ ಅಥವಾ ಶಿಕ್ಷಕ ಎಂಬ ಅರ್ಥವಿದೆ. ತಮಿಳಿನಲ್ಲಿ ನಿರ್ಮಾಣ ಆಗುತ್ತಿರುವ ಈ ಸಿನಿಮಾ ದಕ್ಷಿಣ ಭಾರತದ ಇತರೆ ಭಾಷೆಗಳ ಜೊತೆಗೆ ಹಿಂದಿಯಲ್ಲೂ ಬಿಡುಗಡೆ ಆಗಲಿದೆ. ಆ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ಮೂಡಿಬರಲಿದೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ವೆಟ್ರಿಮಾರನ್ ಅವರು ಈ ಸಿನಿಮಾದಲ್ಲಿ ಯಾವ ಕಥೆ ಹೇಳಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.
ಗುರುವಾರ (ಏ.22) ಈ ಚಿತ್ರದ ಪೋಸ್ಟರ್ ಪೋಸ್ಟರ್ ಬಿಡುಗಡೆಯಾಗಿದೆ. ಅದರಲ್ಲಿ ವಿಜಯ್ ಸೇತುಪತಿ ಕೈಗೆ ಬೇಡಿ ತೊಡಿಸಿರುವುದು ಗಮನ ಸೆಳೆಯುತ್ತಿದೆ! ಎಲ್ರೆಡ್ ಕುಮಾರ್ ಅವರ ಆರ್.ಎಸ್. ಇಂಫೋಟೈನ್ಮೆಂಟ್ ಪ್ರೊಡಕ್ಷನ್ಸ್ ವತಿಯಿಂದ ಈ ಚಿತ್ರ ನಿರ್ಮಾಣವಾಗುತ್ತಿದೆ. ವಿದುತಲೈ ಚಿತ್ರಕ್ಕೆ ಮ್ಯೂಸಿಕ್ ಮಾಂತ್ರಿಕ ಇಳಯರಾಜ ಸಂಗೀತ ನೀಡುತ್ತಿರುವುದು ವಿಶೇಷ. ವೆಟ್ರಿ ಮಾರನ್ ಮತ್ತು ಇಳಯರಾಜಾ ಇದೇ ಮೊದಲ ಬಾರಿಗೆ ಜೊತೆಯಾಗಿ ಸಿನಿಮಾ ಮಾಡುತ್ತಿದ್ದಾರೆ. ಇದು ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ.
ಅಸುರನ್ ಚಿತ್ರದ ಮೂಲಕ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿರುವ ವೆಟ್ರಿ ಮಾರನ್, ಈಗ ವಿದುತಲೈ ಚಿತ್ರದಲ್ಲಿಯೂ ಅಷ್ಟೇ ವಿಶೇಷವಾದ ಕಥೆ ಹೇಳಲಿದ್ದಾರಂತೆ. ಈ ಚಿತ್ರಕ್ಕೆ ವೆಲರಾಜ್ ಛಾಯಾಗ್ರಹಣ, ಆರ್. ರಮರ್ ಸಂಕಲನ, ಪಿಟರ್ ಹೇನ್ ಸಾಹಸ ನಿರ್ದೇಶನ, ಜಾಖಿ ಅವರು ಕಲಾ ನಿರ್ದೇಶನ ಮಾಡಲಿದ್ದಾರೆ. ಥ್ರಿಲ್ಲರ್ ಶೈಲಿಯಲ್ಲಿ ಸಿನಿಮಾ ಮೂಡಿಬರಲಿದೆ.
ಆದಷ್ಟು ನೈಜವಾಗಿ ಈ ಸಿನಿಮಾವನ್ನು ಚಿತ್ರೀಕರಿಸಲು ನಿರ್ಧರಿಸಲಾಗಿದೆ. ಚಿತ್ರದ ಭಾಗಶಃ ದೃಶ್ಯಗಳ ಚಿತ್ರೀಕರಣವು ಪಶ್ಚಿಮ ಘಟ್ಟದ ದಟ್ಟ ಕಾಡುಗಳಲ್ಲಿ ನಡೆಯಲಿದೆ. ಈಗಾಗಲೇ ಲೊಕೇಷನ್ ಅಂತಿಮಗೊಳಿಸಲಾಗಿದೆ. ವಿದ್ಯುತ್ ಮತ್ತು ಮೊಬೈಲ್ ನೆಟ್ವರ್ಕ್ ಇಲ್ಲದ ಪ್ರದೇಶಗಳಲ್ಲಿ ಇಡೀ ತಂಡ ಕೆಲಸ ಮಾಡಲಿದೆ ಎಂಬುದು ಅಚ್ಚರಿಯ ವಿಚಾರ. ರಿಯಲ್ ಲೊಕೇಷನ್ಗಳ ಬುಡಕಟ್ಟು ಸಮುದಾಯದ ಜತೆಗೆ ತಂಡ ಕಾಲ ಬೆರೆಯಲಿದೆ.
ಇದನ್ನೂ ಓದಿ: ಹುಟ್ಟುಹಬ್ಬದಂದು ತಲ್ವಾರ್ನಲ್ಲಿ ಕೇಕ್ ಕತ್ತರಿಸಿ ವಿವಾದ ಸೃಷ್ಟಿಸಿದ ನಟ ವಿಜಯ್ ಸೇತುಪತಿ..
(Vijay Sethupathi first look posters of Vetri Maaran directorial Viduthalai goes viral)