ವಿಜಯ್-ತ್ರಿಷಾ ಮದುವೆ ಆಗಲಿ ಎಂದು ಹಾರೈಸಿದ ಬಾಲಿವುಡ್ ನಟಿ

ದಳಪತಿ ವಿಜಯ್ ಮತ್ತು ತ್ರಿಷಾ ಕೃಷ್ಣನ್ ಮದುವೆಯಾಗಬೇಕೆಂದು ರಾಖಿ ಸಾವಂತ್ ಸದ್ದು ಮಾಡಿದ್ದಾರೆ. ವಿಜಯ್ ಡಿವೋರ್ಸ್ ವದಂತಿಗಳ ನಡುವೆ ಈ ಹೇಳಿಕೆ ಮಹತ್ವ ಪಡೆದಿದೆ. 'ಲಿಯೋ' ತಾರೆಯರ ಕೆಮಿಸ್ಟ್ರಿ, ರಾಜಕೀಯದಲ್ಲಿ ತ್ರಿಷಾ ಪ್ರವೇಶದ ಸಾಧ್ಯತೆಗಳು ಕೂಡ ಚರ್ಚೆಗೆ ಗ್ರಾಸವಾಗಿವೆ. ವಿಜಯ್ ಪಕ್ಷಕ್ಕೆ ರಾಖಿ ಸೇರುವ ಆಸೆಯನ್ನೂ ವ್ಯಕ್ತಪಡಿಸಿದ್ದಾರೆ.

ವಿಜಯ್-ತ್ರಿಷಾ ಮದುವೆ ಆಗಲಿ ಎಂದು ಹಾರೈಸಿದ ಬಾಲಿವುಡ್ ನಟಿ
ರಾಖಿ- ವಿಜಯ್-ತ್ರಿಷಾ
Edited By:

Updated on: May 09, 2026 | 10:55 AM

ದಳಪತಿ ವಿಜಯ್ ಮತ್ತು ತ್ರಿಷಾ ಕೃಷ್ಣನ್ ನಡುವಿನ ಸ್ನೇಹದ ಬಗ್ಗೆ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ. ಇಬ್ಬರೂ ಮದುವೆ ಆಗಲಿ ಎಂಬುದು ಕೆಲ ಅಭಿಮಾನಿಗಳ ಕೋರಿಕೆ. ಇದೀಗ ಈ ಚರ್ಚೆಗೆ ಬಾಲಿವುಡ್‌ನ ವಿವಾದಾತ್ಮಕ ನಟಿ ರಾಖಿ ಸಾವಂತ್ ಎಂಟ್ರಿಕೊಟ್ಟಿದ್ದಾರೆ ಎಂಬುದು ವಿಶೇಷ. ವಿಜಯ್ ಮತ್ತು ತ್ರಿಷಾ ಮದುವೆಯಾಗಬೇಕು ಎಂದು ಹೇಳುವ ಮೂಲಕ ರಾಖಿ ಸಂಚಲನ ಮೂಡಿಸಿದ್ದಾರೆ.

1. ವಿಜಯ್-ತ್ರಿಷಾ ಮದುವೆಯಾಗಲಿ ಎಂದ ರಾಖಿ ಸಾವಂತ್

2. ವಿಜಯ್ ಮತ್ತು ಸಂಗೀತ ಅವರ ಡಿವೋರ್ಸ್ ವದಂತಿಗಳ ನಡುವೆ ರಾಖಿ ಹೇಳಿಕೆ

3. ವಿಜಯ್ ಅವರ ಪಕ್ಷಕ್ಕೆ ಸೇರ್ತೀನಿ ಎಂದ ವಿವಾದಾತ್ಮಕ ನಟಿ

ಖಾಸಗಿ ಮಾಧ್ಯಮವೊಂದರ ಜೊತೆ ಮಾತನಾಡಿದ ರಾಖಿ, ‘ವಿಜಯ್ ಮತ್ತು ತ್ರಿಷಾ ಮದುವೆಯಾಗಬೇಕು ಎಂದು ನನಗೆ ಅನ್ನಿಸುತ್ತಿದೆ. ಅವರಿಬ್ಬರ ಮದುವೆ ನಡೆದರೆ ನಾನು ಖಂಡಿತವಾಗಿಯೂ ಮೆಹಂದಿ ಕಾರ್ಯಕ್ರಮಕ್ಕೆ ಹೋಗುತ್ತೇನೆ’ ಎಂದಿದ್ದಾರೆ. ಅಲ್ಲದೆ, ವಿಜಯ್ ರಾಜಕೀಯ ಯಶಸ್ಸನ್ನು ಶ್ಲಾಘಿಸಿದ ಅವರು, ‘ವಿಜಯ್ ಅವರ ಪಕ್ಷವನ್ನು ಸೇರಲು ನಾನು ಇಷ್ಟಪಡುತ್ತೇನೆ’ ಎಂದು ತಮ್ಮ ಆಸೆಯನ್ನು ಹೊರಹಾಕಿದ್ದಾರೆ.

ವಿಜಯ್ ಮತ್ತು ತ್ರಿಷಾ ಬಗ್ಗೆ ಇಷ್ಟೊಂದು ಚರ್ಚೆ ನಡೆಯಲು ಕಾರಣ ಅವರ ಆನ್-ಸ್ಕ್ರೀನ್ ಕೆಮಿಸ್ಟ್ರಿ. ‘ಗಿಲ್ಲಿ’ ಚಿತ್ರದಿಂದ ಆರಂಭವಾದ ಇವರ ಜೋಡಿ ‘ಲಿಯೋ’ ಚಿತ್ರದವರೆಗೂ ಒಟ್ಟಾಗಿ ಕೆಲವು ಸಿನಿಮಾಗಳಲ್ಲಿ ನಟಿಸಿದೆ. ಇನ್ನೊಂದೆಡೆ, ವಿಜಯ್ ಮತ್ತು ಅವರ ಪತ್ನಿ ಸಂಗೀತ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂಬ ವದಂತಿಗಳು ಕಳೆದ ಒಂದು ವರ್ಷದಿಂದ ಹರಿದಾಡುತ್ತಿದ್ದವು. ಅದು ನಿಜವಾಗಿದೆ. ಸಂಗೀತಾ ಅವರು ಕೋರ್ಟ್​​​ನಲ್ಲಿ ಡಿವೋರ್ಸ್​​ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ಇದನ್ನೂ ಓದಿ: ‘ವಿಜಯ್ ಆ ಗುಣ ನನಗೆ ಯಾವಾಗಲೂ ಇಷ್ಟ ಆಗಲ್ಲ’; ತ್ರಿಷಾ ಕೃಷ್ಣನ್

ರಾಜಕೀಯ ರಂಗದಲ್ಲಿ ತ್ರಿಷಾ ಎಂಟ್ರಿ?

ತಮಿಳುನಾಡು ಅಸೆಂಬ್ಲಿ ಚುನಾವಣೆಯಲ್ಲಿ ವಿಜಯ್ ಅವರ ‘ಟಿವಿಕೆ’ ಪಕ್ಷ ದೊಡ್ಡ ಮಟ್ಟದ ಗೆಲುವು ಸಾಧಿಸಿದ ಬೆನ್ನಲ್ಲೇ, ತ್ರಿಷಾ ಕೂಡ ರಾಜಕೀಯಕ್ಕೆ ಬರುತ್ತಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ವಿಜಯ್ ಗೆದ್ದಿರುವ ಎರಡು ಕ್ಷೇತ್ರಗಳಲ್ಲಿ ಒಂದನ್ನು ತ್ಯಜಿಸಬೇಕಿದ್ದು, ಆ ಉಪಚುನಾವಣೆಯಲ್ಲಿ ತ್ರಿಷಾ ಸ್ಪರ್ಧಿಸಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us