‘ಜನ ನಾಯಗನ್’ ಸಿನಿಮಾ ತಂಡದ ವಿರುದ್ಧ ಬೇಸರ ಹೊರಹಾಕಿದ ಯುವನಟಿ
Jana Nayagan movie: ‘ಜನ ನಾಯಗನ್’ ಸಿನಿಮಾ ಮೊದಲ ದಿನ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ನಟಿ ತ್ರಿಷಾ ಕೃಷ್ಣನ್ ಸೇರಿದಂತೆ ವಿಜಯ್ ಅವರ ಪಕ್ಷದ ಶಾಸಕರು, ಸಚಿವರುಗಳು ಸಿನಿಮಾ ನೋಡಿ ಸಂಭ್ರಮಿಸಿದ್ದಾರೆ. ಸಿನಿಮಾನಲ್ಲಿ ನಟಿಸಿರುವ ಕೆಲ ಕಲಾವಿದರು ಸಹ ಮೊದಲ ದಿನ ಸಿನಿಮಾ ನೋಡಿ, ಮಾಧ್ಯಮಗಳೊಟ್ಟಿಗೆ ಶೂಟಿಂಗ್ ಅನುಭವಗಳನ್ನು ಸಹ ಹಂಚಿಕೊಂಡಿದ್ದಾರೆ. ಆದರೆ ಈ ನಡುವೆ ಯುವ ನಟಿಯೊಬ್ಬರು ಕಣ್ಣೀರು ಹಾಕುತ್ತಿರುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಚಿತ್ರತಂಡದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ದಳಪತಿ ವಿಜಯ್ (Thalapathy Vijay) ನಟನೆಯ ‘ಜನ ನಾಯಗನ್’ ಸಿನಿಮಾ ನಿನ್ನೆಯಷ್ಟೆ ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ಋಣಾತ್ಮಕ ಅಭಿಪ್ರಾಯಗಳೇ ಹೆಚ್ಚು ವ್ಯಕ್ತವಾಗಿದೆ. ಆದರೂ ಸಹ ಸಿನಿಮಾ ಮೊದಲ ದಿನ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ನಟಿ ತ್ರಿಷಾ ಕೃಷ್ಣನ್ ಸೇರಿದಂತೆ ವಿಜಯ್ ಅವರ ಪಕ್ಷದ ಶಾಸಕರು, ಸಚಿವರುಗಳು ಸಿನಿಮಾ ನೋಡಿ ಸಂಭ್ರಮಿಸಿದ್ದಾರೆ. ಸಿನಿಮಾನಲ್ಲಿ ನಟಿಸಿರುವ ಕೆಲ ಕಲಾವಿದರು ಸಹ ಮೊದಲ ದಿನ ಸಿನಿಮಾ ನೋಡಿ, ಮಾಧ್ಯಮಗಳೊಟ್ಟಿಗೆ ಶೂಟಿಂಗ್ ಅನುಭವಗಳನ್ನು ಸಹ ಹಂಚಿಕೊಂಡಿದ್ದಾರೆ. ಆದರೆ ಈ ನಡುವೆ ಯುವ ನಟಿಯೊಬ್ಬರು ಕಣ್ಣೀರು ಹಾಕುತ್ತಿರುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಚಿತ್ರತಂಡದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಆನಂದಿ ಅಜಯ್ ಎನ್ನುವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ‘ಜನ ನಾಯಗನ್’ ಸಿನಿಮಾನಲ್ಲಿ ನಾನು ನಟಿಸಿದ್ದು, ಸಿನಿಮಾದಿಂದ ನನ್ನ ದೃಶ್ಯಗಳನ್ನು ಕತ್ತರಿಸಿ ತೆಗೆಯಲಾಗಿದೆ ಎಂದು ಬೇಸರ ಹೊರಹಾಕಿದ್ದಾರೆ. ಕಣ್ಣೀರು ಹಾಕುತ್ತಾ ವಿಡಿಯೋ ಮಾಡಿರುವ ನಟಿ ಆನಂದಿ, ‘ನಾನು ಹಲವು ಸಿನಿಮಾಗಳಲ್ಲಿ ನಟಿಸಿದ್ದೇನೆ. ಎಷ್ಟೋ ದೃಶ್ಯಗಳು ಎಡಿಟ್ನಲ್ಲಿ ಕಟ್ ಆಗಿವೆ. ಆದರೆ ನನಗೆ ಬೇಸರ ಆಗಿರಲಿಲ್ಲ. ಆದರೆ ಈ ಸಿನಿಮಾದ ಬಗ್ಗೆ ನನಗೆ ಬಹಳ ನಿರೀಕ್ಷೆ ಇತ್ತು, ನನ್ನ ಪಾತ್ರ, ನಾನು ನಟಿಸಿದ್ದ ದೃಶ್ಯಗಳ ಬಗ್ಗೆಯೂ ನಂಬಿಕೆ ಇತ್ತು. ಆದರೆ ಇದರಲ್ಲಿ ನನ್ನ ಪಾತ್ರವನ್ನು ಡಿಲೀಟ್ ಮಾಡಿರುವುದು ನನಗೆ ಹೇಳತೀರದ ದುಃಖ ತಂದಿದೆ’ ಎಂದಿದ್ದಾರೆ.
‘ನಾನು ನನ್ನ ಕಮ್ ಬ್ಯಾಕ್ ಸಿನಿಮಾ ರೀತಿಯಲ್ಲಿ ಇದನ್ನು ಎಣಿಸಿದ್ದೆ. ಈ ಸಿನಿಮಾಕ್ಕಾಗಿ ನಾನು ಒಂದೂವರೆ ವರ್ಷಗಳ ಕಾಲ ಕಾದಿದ್ದೆ. ವಿಜಯ್ ಅವರ ಜೊತೆ ನಟಿಸಿದ ಬಗ್ಗೆ ನನಗೆ ಅತೀವ ಖುಷಿ, ಸಂತೋಷ ಇತ್ತು. ನಾನು ಚಿತ್ರರಂಗಕ್ಕೆ ಬಂದಿದ್ದೇ, ದಳಪತಿ ವಿಜಯ್ ಅವರ ಜೊತೆಗೆ ನಟಿಸಬೇಕು ಎಂಬ ಆಸೆಯಿಂದ. ಆದರೆ ಅವರ ಕೊನೆಯ ಸಿನಿಮಾನಲ್ಲಿ ನನಗೆ ಅವರ ಜೊತೆ ನಟಿಸುವ ಅವಕಾಶ ಸಿಕ್ಕಿತ್ತು, ಆದರೆ ಅದು ತೆರೆಯ ಮೇಲೆ ಬರಲಿಲ್ಲ’ ಎಂದು ನೋವಿನಿಂದ ನುಡಿದಿದ್ದಾರೆ ನಟಿ.
ಇದನ್ನೂ ಓದಿ:Jana Nayagan First Half Review: ‘ಜನ ನಾಯಗನ್’ ಮೊದಲಾರ್ಧ ಹೇಗಿದೆ?
‘ಜನ ನಾಯಗನ್’ ಸಿನಿಮಾ ತುಂಬಾ ಚೆನ್ನಾಗಿದೆ ಎಂದು ನೋಡಿದವರು ಹೇಳುತ್ತಿದ್ದಾರೆ. ಇದು ಮಹಿಳಾ ಸಬಲೀಕರಣ ಬಗ್ಗೆ ಇರುವಂಥಹಾ ಸಿನಿಮಾ. ನಾನೂ ಕೂಡ ಬಹಳ ಖುಷಿಯಿಂದ ಸಿನಿಮಾಕ್ಕೆ ಹೋದೆ, ನನ್ನ ಪಾತ್ರ ನೋಡಲೆಂದು. ಆದರೆ ನನ್ನ ದೃಶ್ಯಗಳು ಡಿಲೀಟ್ ಆಗಿರುತ್ತವೆ ಎಂದು ನಾನು ಎಣಿಸಿಯೂ ಇರಲಿಲ್ಲ, ಇದು ನನಗೆ ಆಘಾತ ತಂದಿದೆ’ ಎಂದಿದ್ದಾರೆ ನಟಿ. ನಟಿಯ ವಿಡಿಯೋ ನೋಡಿದ ಹಲವರು ನಟಿಯ ಬಗ್ಗೆ ಕರುಣೆ ವ್ಯಕ್ತಪಡಿಸಿದ್ದು, ನಿಮಗೆ ಇನ್ನೂ ದೊಡ್ಡ ಅವಕಾಶಗಳು ಸಿಗುತ್ತವೆ ಎಂದು ಹಾರೈಸಿದ್ದಾರೆ.
ಆನಂದಿ ಅಜಯ್ ಅವರು ತಮಿಳು ಕಿರುತೆರೆ ರಂಗದಲ್ಲಿ ಜನಪ್ರಿಯ ನಟಿಯಾಗಿದ್ದು, ‘ಕಾರ್ತಿಗೈ ಪೆಂಗಳ್’, ‘ಯಮುನಾ’, ‘ಕಣ ಕಾಣುಂ ಕಾಲಂಗಲ್’ ಮುಂತಾದ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇವರು ಉತ್ತಮ ಶಾಸ್ತ್ರೀಯ ನೃತ್ಯಗಾರ್ತಿಯೂ ಆಗಿದ್ದು, ಕೆಲವು ನೃತ್ಯ ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




